ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yadnya Kasada Festival: ಇಂಡೋನೇಷ್ಯಾದ ಜಾವಾದಲ್ಲಿ ಯಾದ್ನ್ಯಾ ಕಸದ ಹಬ್ಬ; ವಿಚಿತ್ರ ಆಚರಣೆಯ ಆಯ್ದ ಸಚಿತ್ರ ವಿವರಣೆ

Yadnya Kasada festival: ಇಂಡೋನೇಷ್ಯಾದ ಜಾವಾದಲ್ಲಿ ಯಾದ್ನ್ಯಾ ಕಸದ ಹಬ್ಬ; ವಿಚಿತ್ರ ಆಚರಣೆಯ ಆಯ್ದ ಸಚಿತ್ರ ವಿವರಣೆ

Yadnya Kasada festival: ಯಾದ್ನ್ಯಾ ಕಸದ ಹಬ್ಬವು ಇಂಡೋನೇಷ್ಯಾದ ಹಿಂದುಗಳ ಪೈಕಿ ತೆಂಗರ್‌ ಉಪ ಸಮುದಾಯದವರ ಆಚರಣೆ. ಹಿಂದು ಲೂನಾರ್‌ ಕ್ಯಾಲೆಂಡರ್‌ನ ಕಸದ ತಿಂಗಳ ಪ್ರತಿ 14 ನೇ ದಿನ ನಡೆಯುವ ಹಬ್ಬ. ಇಂಗ್ಲಿಷ್‌ ಕ್ಯಾಲೆಂಡರ್‌ ಪ್ರಕಾರ ಜೂನ್‌ 5ಕ್ಕೆ ಈ ಆಚರಣೆ ನಡೆಯಿತು. ಅದರ ಕೆಲವು ಆಕರ್ಷಕ ಫೋಟೋಸ್‌ ಮತ್ತು ವಿವರಣೆ ಇಲ್ಲಿದೆ.

ಪೂರ್ವ ಜಾವಾ ಪ್ರಾಂತ್ಯದ ಪ್ರೊಬೋಲಿಂಗ್ಗೊದಲ್ಲಿ ತೆಂಗರ್‌ ಉಪ ಸಮುದಾಯದವರು ಅಚರಿಸುವ ಹಬ್ಬ ಈ ಯಾದ್ನ್ಯಾ ಕಸದ ಹಬ್ಬ. ಯಾದ್ನ್ಯಾ ಕಸದ ಹಬ್ಬವು ಸರ್ವಶಕ್ತ ದೇವರಾದ ಸಾಂಗ್ ಹಯಾಂಗ್ವಿಧಿ, ರಾಜ ಮಜಾಪಹಿತ್‌ನ ಮಗಳು ರೋರೊ ಆಂಟೆಂಗ್ ಮತ್ತು ಬ್ರಾಹ್ಮಣನ ಮಗ ಜೋಕೊ ಸೆಗರ್ ಅವರನ್ನು ಗೌರವಿಸುವ ಸಲುವಾಗಿ ನಡೆಯುವ ಆಚರಣೆ. ತೆಂಗರ್ ಉಪ-ಜನಾಂಗೀಯ ಗುಂಪಿನ ಸದಸ್ಯರು ಜಾವಾದಲ್ಲಿ ಯದ್ನ್ಯಾ ಕಸದ ಹಬ್ಬವನ್ನು ಆಚರಿಸುತ್ತಾರೆ 
icon

(1 / 7)

ಪೂರ್ವ ಜಾವಾ ಪ್ರಾಂತ್ಯದ ಪ್ರೊಬೋಲಿಂಗ್ಗೊದಲ್ಲಿ ತೆಂಗರ್‌ ಉಪ ಸಮುದಾಯದವರು ಅಚರಿಸುವ ಹಬ್ಬ ಈ ಯಾದ್ನ್ಯಾ ಕಸದ ಹಬ್ಬ. ಯಾದ್ನ್ಯಾ ಕಸದ ಹಬ್ಬವು ಸರ್ವಶಕ್ತ ದೇವರಾದ ಸಾಂಗ್ ಹಯಾಂಗ್ವಿಧಿ, ರಾಜ ಮಜಾಪಹಿತ್‌ನ ಮಗಳು ರೋರೊ ಆಂಟೆಂಗ್ ಮತ್ತು ಬ್ರಾಹ್ಮಣನ ಮಗ ಜೋಕೊ ಸೆಗರ್ ಅವರನ್ನು ಗೌರವಿಸುವ ಸಲುವಾಗಿ ನಡೆಯುವ ಆಚರಣೆ. ತೆಂಗರ್ ಉಪ-ಜನಾಂಗೀಯ ಗುಂಪಿನ ಸದಸ್ಯರು ಜಾವಾದಲ್ಲಿ ಯದ್ನ್ಯಾ ಕಸದ ಹಬ್ಬವನ್ನು ಆಚರಿಸುತ್ತಾರೆ (AFP / Juni Kriswanto)

ಪೂರ್ವ ಜಾವಾ ಪ್ರಾಂತ್ಯದ ಪ್ರೊಬೋಲಿಂಗ್ಗೊದಲ್ಲಿರುವ ಮೌಂಟ್ ಬ್ರೋಮೋ ಜ್ವಾಲಾಮುಖಿಯ ಕುಳಿಯ ಅಂಚಿನಲ್ಲಿ ಟೆಂಗರ್ ಉಪ-ಜನಾಂಗದವರು ಜೂನ್‌ 5ರಂದು ಯಾದ್ನ್ಯಾ ಕಸದ ಉತ್ಸವ ಆಚರಿಸಲು ಸೇರಿದ್ದರು. ಅದರ ವೈಮಾನಿಕ ಚಿತ್ರ ಇದು. ಅಂದಾಜು 7,000 ಅಡಿ ಎತ್ತರದಲ್ಲಿ ಈ ಪ್ರದೇಶ.
icon

(2 / 7)

ಪೂರ್ವ ಜಾವಾ ಪ್ರಾಂತ್ಯದ ಪ್ರೊಬೋಲಿಂಗ್ಗೊದಲ್ಲಿರುವ ಮೌಂಟ್ ಬ್ರೋಮೋ ಜ್ವಾಲಾಮುಖಿಯ ಕುಳಿಯ ಅಂಚಿನಲ್ಲಿ ಟೆಂಗರ್ ಉಪ-ಜನಾಂಗದವರು ಜೂನ್‌ 5ರಂದು ಯಾದ್ನ್ಯಾ ಕಸದ ಉತ್ಸವ ಆಚರಿಸಲು ಸೇರಿದ್ದರು. ಅದರ ವೈಮಾನಿಕ ಚಿತ್ರ ಇದು. ಅಂದಾಜು 7,000 ಅಡಿ ಎತ್ತರದಲ್ಲಿ ಈ ಪ್ರದೇಶ.(AFP / BAGUS SARAGIH )

ತೆಂಗರ್‌ ಉಪಸಮುದಾಯದ ಜನ ಮೌಂಟ್‌ ಬ್ರೋಮೋ ಪರ್ವತ ಏರುತ್ತಿರುವ ದೃಶ್ಯ
icon

(3 / 7)

ತೆಂಗರ್‌ ಉಪಸಮುದಾಯದ ಜನ ಮೌಂಟ್‌ ಬ್ರೋಮೋ ಪರ್ವತ ಏರುತ್ತಿರುವ ದೃಶ್ಯ(AFP / Juni Kriswanto)

ಮೌಂಟ್ ಬ್ರೋಮೊದ ಎತ್ತರದ ಪ್ರದೇಶಗಳಲ್ಲಿ ವಾಸಿಸುವ ತೆಂಗರ್‌ ಉಪ ಸಮುದಾಯದವರು 13ನೇ ಶತಮಾನದ ಮಜಾಪಹಿತ್ ಸಾಮ್ರಾಜ್ಯದ ರಾಜಕುಮಾರರ ವಂಶಸ್ಥರು. ಮೌಂಟ್‌ ಬ್ರೋಮೊ ಪರ್ವತದ ತುದಿಯಲ್ಲಿ ಬ್ರಹ್ಮ ದೇವರ ಗುಡಿ ಇದೆ. ಅಲ್ಲಿ ಅವರು ಅಕ್ಕಿ, ಹಣ್ಣು ಹಂಪಲು, ಕುರಿ, ಮೇಕೆ, ಕೋಳಿ ಮುಂತಾದವನ್ನು ಅರ್ಪಿಸಿ ಬಳಿಕ ಜ್ವಾಲಾಮುಖಿಯ ಕುಳಿಗೆ ಹಾಕುತ್ತಾರೆ. ಅದರಿಂದ ಒಳಿತಾಗುವುದು ಎಂಬ ನಂಬಿಕೆ ಅವರದ್ದು.
icon

(4 / 7)

ಮೌಂಟ್ ಬ್ರೋಮೊದ ಎತ್ತರದ ಪ್ರದೇಶಗಳಲ್ಲಿ ವಾಸಿಸುವ ತೆಂಗರ್‌ ಉಪ ಸಮುದಾಯದವರು 13ನೇ ಶತಮಾನದ ಮಜಾಪಹಿತ್ ಸಾಮ್ರಾಜ್ಯದ ರಾಜಕುಮಾರರ ವಂಶಸ್ಥರು. ಮೌಂಟ್‌ ಬ್ರೋಮೊ ಪರ್ವತದ ತುದಿಯಲ್ಲಿ ಬ್ರಹ್ಮ ದೇವರ ಗುಡಿ ಇದೆ. ಅಲ್ಲಿ ಅವರು ಅಕ್ಕಿ, ಹಣ್ಣು ಹಂಪಲು, ಕುರಿ, ಮೇಕೆ, ಕೋಳಿ ಮುಂತಾದವನ್ನು ಅರ್ಪಿಸಿ ಬಳಿಕ ಜ್ವಾಲಾಮುಖಿಯ ಕುಳಿಗೆ ಹಾಕುತ್ತಾರೆ. ಅದರಿಂದ ಒಳಿತಾಗುವುದು ಎಂಬ ನಂಬಿಕೆ ಅವರದ್ದು.(AFP / Juni Kriswanto)

ಯಾದ್ನ್ಯಾ ಕಸದ ಉತ್ಸವ ಆಚರಣೆ ವೇಳೆ ಹಿಂದು ಆರಾಧಕರು ತಾವು ತಂದ ಅರ್ಪಣೆಗಳನ್ನು ಜ್ವಾಲಾಮುಖಿಯ ಕುಳಿಗೆ ಎಸೆಯಲು ಕಾಯುತ್ತಿರುವಾಗ ಅಲ್ಲಿಂದ  ಜ್ವಾಲಾಮುಖಿಯಿಂದ ಹೊಗೆ ಮತ್ತು ಬೂದಿ ಮೇಲೇಳುತ್ತಿತ್ತು. ಗ್ರಾಮಸ್ಥರು ಮೌಂಟ್ ಬ್ರೋಮೊದ ಕುಳಿಯ ಬಳಿ ಇಳಿಜಾರುಗಳಲ್ಲಿ ನಿಂತು ಈ ಅರ್ಪಣೆಯನ್ನು ಮಾಡುತ್ತಾರೆ.
icon

(5 / 7)

ಯಾದ್ನ್ಯಾ ಕಸದ ಉತ್ಸವ ಆಚರಣೆ ವೇಳೆ ಹಿಂದು ಆರಾಧಕರು ತಾವು ತಂದ ಅರ್ಪಣೆಗಳನ್ನು ಜ್ವಾಲಾಮುಖಿಯ ಕುಳಿಗೆ ಎಸೆಯಲು ಕಾಯುತ್ತಿರುವಾಗ ಅಲ್ಲಿಂದ  ಜ್ವಾಲಾಮುಖಿಯಿಂದ ಹೊಗೆ ಮತ್ತು ಬೂದಿ ಮೇಲೇಳುತ್ತಿತ್ತು. ಗ್ರಾಮಸ್ಥರು ಮೌಂಟ್ ಬ್ರೋಮೊದ ಕುಳಿಯ ಬಳಿ ಇಳಿಜಾರುಗಳಲ್ಲಿ ನಿಂತು ಈ ಅರ್ಪಣೆಯನ್ನು ಮಾಡುತ್ತಾರೆ.(via REUTERS)

ಅಕ್ಕಿ, ಹಣ್ಣು, ಜಾನುವಾರು ಮತ್ತು ಇತರ ವಸ್ತುಗಳನ್ನು ಬ್ರಹ್ಮದೇವರಿಗೆ ಅರ್ಪಿಸಲು ಟೆಂಗರ್ ಉಪ-ಜನಾಂಗೀಯ ಗುಂಪಿನ ಸದಸ್ಯರು ಸಕ್ರಿಯ ಮೌಂಟ್ ಬ್ರೋಮೊ ಜ್ವಾಲಾಮುಖಿ ಪರ್ವತವನ್ನು ಏರಿದ ದೃಶ್ಯ.
icon

(6 / 7)

ಅಕ್ಕಿ, ಹಣ್ಣು, ಜಾನುವಾರು ಮತ್ತು ಇತರ ವಸ್ತುಗಳನ್ನು ಬ್ರಹ್ಮದೇವರಿಗೆ ಅರ್ಪಿಸಲು ಟೆಂಗರ್ ಉಪ-ಜನಾಂಗೀಯ ಗುಂಪಿನ ಸದಸ್ಯರು ಸಕ್ರಿಯ ಮೌಂಟ್ ಬ್ರೋಮೊ ಜ್ವಾಲಾಮುಖಿ ಪರ್ವತವನ್ನು ಏರಿದ ದೃಶ್ಯ.(AFP / Juni Kriswanto)

ಯಾದ್ನ್ಯಾ ಕಸದಾ ಸಮಾರಂಭದಲ್ಲಿ ಆರಾಧಕರು ಎಸೆದ ಹರಕೆ ವಸ್ತುಗಳನ್ನು ಹಿಡಿಯಲು ಹಳ್ಳಿಗರು ಮೌಂಟ್ ಬ್ರೋಮೊದ ಕುಳಿಯ ಬಳಿ ಇಳಿಜಾರುಗಳಲ್ಲಿ ನಿಂತ ದೃಶ್ಯ.
icon

(7 / 7)

ಯಾದ್ನ್ಯಾ ಕಸದಾ ಸಮಾರಂಭದಲ್ಲಿ ಆರಾಧಕರು ಎಸೆದ ಹರಕೆ ವಸ್ತುಗಳನ್ನು ಹಿಡಿಯಲು ಹಳ್ಳಿಗರು ಮೌಂಟ್ ಬ್ರೋಮೊದ ಕುಳಿಯ ಬಳಿ ಇಳಿಜಾರುಗಳಲ್ಲಿ ನಿಂತ ದೃಶ್ಯ.(via REUTERS)


IPL_Entry_Point

ಇತರ ಗ್ಯಾಲರಿಗಳು