ಕನ್ನಡ ಸುದ್ದಿ  /  Sports  /  Cricket News Gautam Gambhir Files Defamation Case Against Punjab Kesari Newspaper Seeks <Span Class='webrupee'>₹</span>2 Crore Damages Prs

Gautam Gambhir: ಗೌತಮ್ ಗಂಭೀರ್​​ರನ್ನು ಭಸ್ಮಾಸುರ ಎಂದು ಪ್ರಕಟಿಸಿದ ಪತ್ರಿಕೆ; 2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಲಕ್ನೋ ಮೆಂಟರ್

ಕ್ರೀಡಾ​ ಸುದ್ದಿಗಳನ್ನು ಪ್ರಕಟಿಸಿದ ಪುಟದಲ್ಲಿ ಪಂಜಾಬಿ ಕೇಸರಿ ಎಂಬ ನಿಯತಕಾಲಿಕೆ ಗೌತಮ್​ ಗಂಭೀರ್ ಅವರನ್ನು ಭಸ್ಮಾಸುರ ಎಂದು ಕರೆಯುವ ಲೇಖನ ಪ್ರಕಟಿಸಿದೆ. ಇದೀಗ ಈ ಮ್ಯಾಗಜೀನ್​ ವಿರುದ್ಧ ಗಂಭೀರ್ 2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಗೌತಮ್​ ಗಂಭೀರ್​​​
ಗೌತಮ್​ ಗಂಭೀರ್​​​

ಗೌತಮ್ ಗಂಭೀರ್ (Gautam Gambhir) ಐಪಿಎಲ್‌ನ (IPL) ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅಂದಿನ ಡೆಲ್ಲಿ ಡೇರ್​ಡೆವಿಲ್ಸ್ (Delhi Daredevils)​​ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ವಿಫಲರಾದ ಗಂಭೀರ್, ಕೋಲ್ಕತ್ತಾ ನೈಟ್​ ರೈಡರ್ಸ್ (Kolkata Knight Riders)​ ತಂಡಕ್ಕೆ 2 ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್‌ (Lucknow Super Giants) ಮೆಂಟರ್​​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಆಟಗಾರನಾಗಿ ಅಲ್ಲದೆ ಕೋಚಿಂಗ್​ ಸಿಬ್ಬಂದಿಯಾದರೂ ಅವರ ಆಕ್ರೋಶ, ಆವೇಶ ಕೊಂಚವೂ ಕಡಿಮೆಯಾಗಿಲ್ಲ. ಅವರ ಕೋಪ ಇನ್ನಷ್ಟು ಏರಿದೆ ಎಂಬುದು ವಿಶೇಷ.

ಗಂಭೀರ್​ ಒಬ್ಬ ಅಗ್ರೆಸ್ಸಿವ್​ ಆಟಗಾರ. ಪ್ರತಿ ಪಂದ್ಯದ ಗೆಲುವಿನ ನಂತರ ಕೇಕೆ ಹಾಕಿ ಸಂಭ್ರಮಿಸುತ್ತಾರೆ. ತಂಡದ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಆ ಮೂಲಕ ತಂಡದ ಆಟಗಾರರಿಗೆ ಚೈತನ್ಯ ತುಂಬುತ್ತಾರೆ. ಆದರೆ ಅವರ ಆಕ್ರಮಣಕಾರಿ ವರ್ತನೆ ಟ್ರೋಲರ್​ಗಳ ಆಹಾರಕ್ಕೆ ಕಾರಣವಾಗಿದೆ.

ಏಪ್ರಿಲ್​ 10ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಗೆದ್ದಿತ್ತು. ಸೋಲುವ ಪಂದ್ಯದಲ್ಲೂ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಬೆಂಗಳೂರು ಅಭಿಮಾನಿಗಳಿಗೆ ಗಂಭೀರ್ ಬೆರಳಿನ ಮೂಲಕ ‘ಶ್​’ ಎಂದು ತೋರಿಸಿದ್ದರು. ಇದು ವಿರಾಟ್ ಕೊಹ್ಲಿ (Virat Kohli) ಮತ್ತು ಅಭಿಮಾನಿಗಳನ್ನು ಕೆರಳಿಸಿತ್ತು. ಆವೇಶ್​ ಖಾನ್​​ ಹೆಲ್ಮೆಟ್​ ಬಿಸಾಡಿ ಉದ್ಧಟತನ ತೋರಿದ್ದರು.

ಈ ಘಟನೆ ನಂತರ ಮೇ 1ರಂದು ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೇಡು ತೀರಿಸಿಕೊಂಡಿತ್ತು. ಪಂದ್ಯದ ಬಳಿಕ ಕೊಹ್ಲಿ ಮತ್ತು​ ಗಂಭೀರ್ ನಡುವೆ ದೊಡ್ಡ ಗಲಾಟೆ ಕೂಡ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಇದಕ್ಕೂ ಗಂಭೀರ್​ ಅವರೇ ಕಾರಣ ಎಂಬಂತೆ ಬಿಂಬಿಸಿ ಮೀಮ್ಸ್​​ಗಳು ವೈರಲ್ ಆಗಿದ್ದವು. ಕೊಹ್ಲಿ ಅವರೊಂದಿಗೆ ಗಲಾಟೆ ಮಾಡಿಕೊಳ್ಳದಿದ್ದರೆ ಬಿಜೆಪಿ ಸೋಲುತ್ತಿರಲಿಲ್ಲ ಎಂದು ಟ್ರೋಲ್​​ ಮಾಡಲಾಗಿತ್ತು.

ಕ್ರೀಡಾ​ ಸುದ್ದಿಗಳನ್ನು ಪ್ರಕಟಿಸಿದ ಪುಟದಲ್ಲಿ ಪಂಜಾಬಿ ಕೇಸರಿ ಎಂಬ ನಿಯತಕಾಲಿಕೆ ಗೌತಮ್​ ಗಂಭೀರ್ ಅವರನ್ನು ಭಸ್ಮಾಸುರ ಎಂದು ಕರೆಯುವ ಲೇಖನ ಪ್ರಕಟಿಸಿದೆ. 'ಸಂಸದ ಗೌತಮ್ ಗಂಭೀರ್ ನಾಪತ್ತೆಯಾಗಿದ್ದಾರೆ' ಎಂಬ ಪೋಸ್ಟರ್‌ಗಳು ದೆಹಲಿಯ ಬೀದಿಗಳಲ್ಲಿ ಕಾಣಿಸಿಕೊಂಡಿವೆ ಎಂದು ಪಂಜಾಬಿ ಕೇಸರಿ ಲೇಖನ ಪ್ರಕಟಿಸಿದೆ. ಇದೀಗ ಈ ಮ್ಯಾಗಜೀನ್​ ವಿರುದ್ಧ ಗಂಭೀರ್ 2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸಂಸತ್ ಸದಸ್ಯರಾಗಿ ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುವಂತಹ ಲೇಖನಗಳನ್ನು ಪತ್ರಿಕೆ ಪ್ರಕಟಿಸಿದೆ. ಸತ್ಯಾಂಶ ತಿಳಿದುಕೊಳ್ಳಲು, ಕನಿಷ್ಠ ಜ್ಞಾನವೂ ಇಲ್ಲದೆ ಪ್ರಕಾಶಕರು ದುಷ್ಕೃತ್ಯ ಎಸಗಿದ್ದಾರೆ. ಇದು ತನ್ನ ಪ್ರತಿಷ್ಠೆಗೆ ಧಕ್ಕೆ ತರುವಂಥ ಕೆಲಸ. ಇದೊಂದು ಷಡ್ಯಂತ್ರ ಎಂದು ಪ್ರಕರಣ ದಾಖಲಿಸಿರುವ ಗಂಭೀರ್​ ಹೇಳಿದ್ದಾರೆ.

ಗೌತಮ್ ಗಂಭೀರ್ ಮಾನನಷ್ಟಕ್ಕಾಗಿ 2 ಕೋಟಿ ರೂಪಾಯಿ ದಂಡ ಮತ್ತು ಪಂಜಾಬ್ ಕೇಸರಿ ಪ್ರಕಟಿಸುವ ಎಲ್ಲಾ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಭಸ್ಮಾಸುರ ಎಂದು ರಾಕ್ಷಸನಿಗೆ ಹೋಲಿಸಿ ಲೇಖನಗಳನ್ನು ಬರೆದಿದ್ದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಮೇ 1ರಂದು ನಡೆದ ಪಂದ್ಯದಲ್ಲಿ ಹೆಚ್ಚು ಸ್ಲೆಡ್ಜಿಂಗ್​ ನಡೆದಿತ್ತು. ನವೀನ್​ ಉಲ್​ ಹಕ್​ ವರ್ಸಸ್​ ಕೊಹ್ಲಿ, ಕೈಲ್​ ಮೇಯರ್ಸ್​ ವರ್ಸಸ್​ ಕೊಹ್ಲಿ ಮತ್ತು ಗೌತಮ್​ ಗಂಭೀರ್ ವರ್ಸಸ್​ ಕೊಹ್ಲಿ.. ಹೀಗೆ ಮೂರು ಜಗಳಗಳು ನಡೆದಿದ್ದವು.