ಕನ್ನಡ ಸುದ್ದಿ  /  ಕ್ರೀಡೆ  /  Sunil Gavaskar: ನಾನು ಸಾಯುವಾಗ ಆ ಎರಡು ಕ್ಷಣಗಳನ್ನು ನೋಡಿಯೇ ಸಾಯಬೇಕು; ತನ್ನ ಕೊನೆಯ ಆಸೆಗಳನ್ನು ಬಹಿರಂಗಪಡಿಸಿದ ಸುನಿಲ್ ಗವಾಸ್ಕರ್​

Sunil Gavaskar: ನಾನು ಸಾಯುವಾಗ ಆ ಎರಡು ಕ್ಷಣಗಳನ್ನು ನೋಡಿಯೇ ಸಾಯಬೇಕು; ತನ್ನ ಕೊನೆಯ ಆಸೆಗಳನ್ನು ಬಹಿರಂಗಪಡಿಸಿದ ಸುನಿಲ್ ಗವಾಸ್ಕರ್​

ಭಾರತೀಯ ಕ್ರಿಕೆಟ್‌ನಲ್ಲಿ ಎಂಎಸ್​ ಧೋನಿಯನ್ನು (MS Dhoni) ಇಷ್ಟಪಡದವರೇ ಇಲ್ಲ. ಟೀಮ್​​ ಇಂಡಿಯಾಗಾಗಿ ಆತನು ಏನು ಮಾಡಿಲ್ಲ ನೀವೇ ಹೇಳಿ. ಅವರ ಸಾಧನೆ ಅಪಾರ. ದೇಶದ ಹಲವು ಯುವಕರಿಗೆ ಧೋನಿ ಮಾದರಿ ಎಂದಿರುವ ಸುನಿಲ್​ ಗವಾಸ್ಕರ್ (Sunil Gavaskar)​, ತನ್ನ ಕೊನೆಯ ಎರಡು ಆಸೆಗಳೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಲೆಜೆಂಡರಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​
ಲೆಜೆಂಡರಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​

ಮೇ 14... ಚೆನ್ನೈ ಸೂಪರ್​​ ಕಿಂಗ್ಸ್ (Chennai Super Kings)​ ಅಭಿಮಾನಿಗಳ ವಿಶೇಷವಾದ ದಿನ. ಪ್ರಸಕ್ತ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ (IPL 2023) ಚೆನ್ನೈ ತವರಿನಲ್ಲಿ ಆಡಿದ ಕೊನೆಯ ಪಂದ್ಯ ಇದಾಗಿದೆ. ಅಂದು ಕೋಲ್ಕತ್ತಾ ನೈಟ್​ ರೈಡರ್ಸ್ (Kolkta Knight Riders)​ ವಿರುದ್ಧ ಸೆಣಸಾಟ ನಡೆಸಿತು. ಆದರೆ ಯಲ್ಲೋ ಆರ್ಮಿ ಫ್ಯಾನ್ಸ್​ಗೆ ಭಾರಿ ನಿರಾಸೆಯಾಯಿತು. ಈ ಪಂದ್ಯದಲ್ಲಿ ಧೋನಿ ಪಡೆ ಸೋಲು ಕಂಡಿತು. ಆದರೆ, ನಿರಾಸೆಯಲ್ಲಿದ್ದ ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸುವಂತೆ ಮಾಡಿದರು ಎಂಎಸ್​ ಧೋನಿ.

ಟ್ರೆಂಡಿಂಗ್​ ಸುದ್ದಿ

ತವರಿನ ಮೈದಾನದಲ್ಲಿ ಚೆನ್ನೈ ಕೊನೆಯ ಪಂದ್ಯವನ್ನಾಡಿತು. ಪಂದ್ಯ ಮುಗಿದ ಬೆನ್ನಲ್ಲೇ ಧೋನಿ ಮತ್ತು ಸಹ ಆಟಗಾರರು, ಮೈದಾನದಲ್ಲಿ ಒಂದು ಸುತ್ತು ಹಾಕಿದರು. ಅಭಿಮಾನಿಗಳತ್ತ ಕೈ ಬೀಸಿ, ತವರಿನಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳಿದರು. ಇದೇ ವೇಳೆ ಎದುರಾಳಿ ತಂಡದ ಆಟಗಾರರು, ಧೋನಿ ಆಟೋಗ್ರಾಫ್​ ಪಡೆದು ಖುಷಿ ಪಟ್ಟರು. ಈ ಸಂದರ್ಭದಲ್ಲಿ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar), ಎಂಎಸ್​ ಧೋನಿ (MS Dhoni) ಅವರ ಬಳಿಯೇ ತೆರಳಿ ಆಟೋಗ್ರಾಫ್ ಪಡೆದಿದ್ದು, ವಿಶೇಷವಾಗಿತ್ತು. ಈ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು.

ಸುನಿಲ್​ ಗವಾಸ್ಕರ್ ಈ ಕ್ಷಣದ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಸ್ಟಾರ್​ಸ್ಪೋರ್ಟ್ಸ್‌ನಲ್ಲಿ ಧೋನಿ ಅವರಿಂದ ಆಟೋಗ್ರಾಫ್ ಪಡೆದ ಕುರಿತು ಮಾತನಾಡಿದ ಗವಾಸ್ಕರ್, 'ಎಲ್ಲಾ ಆಟಗಾರರೊಂದಿಗೂ ಧೋನಿ ಬೆರೆಯುತ್ತಾರೆ. ಧೋನಿ ಅವರೊಂದಿಗೆ ಸಹ ಆಟಗಾರರು, ಚೆಪಾಕ್​ ಮೈದಾನದಲ್ಲಿ ಅಭಿಮಾನಿಗಳತ್ತ ಕೈಬೀಸಿ ಅಭಿನಂದನೆ ಸಲ್ಲಿಸುವ ಬಗ್ಗೆ ನನಗೆ ತಿಳಿದಿರಲಿಲ್ಲ. ಅದು ತಿಳಿದ ನಂತರ ನಾನು ವಿಶೇಷವಾಗಿ ಏನಾದರೂ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನಿರೀಕ್ಷೆಯಂತೆ ನಾನು ನಮ್ಮ ಕ್ಯಾಮರಾಮನ್​​ನಿಂದ ಮಾರ್ಕರ್ ಪೆನ್ ತೆಗೆದುಕೊಂಡು ಧೋನಿ ಬಳಿ ಹೋದೆ. ಈ ಸಂದರ್ಭದಲ್ಲಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಪೆನ್ನು ಕೊಟ್ಟ ನಂತರ ಮಾಹಿಯ ಬಳಿ ಹೋಗಿ ನನ್ನ ಅಂಗಿಯ ಮೇಲೆ ಆಟೋಗ್ರಾಫ್ ಕೇಳಿದೆ. ಅವರು ಅದಕ್ಕೆ ಒಪ್ಪಿದ್ದು, ನನಗೆ ತುಂಬಾ ಖುಷಿಯಾಯಿತು. ಆ ಕ್ಷಣ ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿತ್ತು ಎಂದು ಗವಾಸ್ಕರ್​ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಧೋನಿಯನ್ನು ಇಷ್ಟಪಡದವರೇ ಇಲ್ಲ. ಭಾರತ ತಂಡಕ್ಕಾಗಿ ಆತ ಎಲ್ಲವನ್ನೂ ಮಾಡಿದ್ದಾರೆ. ಅವರ ಸಾಧನೆ ಅಪಾರ. ದೇಶದ ಹಲವು ಯುವಕರಿಗೆ ಧೋನಿ ಮಾದರಿ ಎಂದಿರುವ ಗವಾಸ್ಕರ್​, ತನ್ನ ಕೊನೆಯ ಎರಡು ಆಸೆಗಳೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನನ್ನ ಜೀವನದ ಕೊನೆಯ ಕ್ಷಣಗಳಲ್ಲಿ ಎರಡು ನಿಮಿಷಗಳು ಅವಕಾಶ ಸಿಕ್ಕರೆ, ಎರಡು ಪ್ರಮುಖ ಕ್ಷಣಗಳನ್ನು ನೋಡಬೇಕು ಎಂದುಕೊಂಡಿದ್ದೇನೆ. ಒಂದು ಕಪಿಲ್ ದೇವ್ 1983ರಲ್ಲಿ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದದ್ದು, ಎರಡನೇಯದು 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಧೋನಿ ವಾಂಖೆಡೆಯಲ್ಲಿ ಗೆಲುವಿನ ಅಮೋಘ ಸಿಕ್ಸರ್​ ಬಾರಿಸಿದ್ದನ್ನು ನೋಡಬೇಕು.. ಈ ಎರಡು ನನ್ನ ಕೊನೆಯ ಆಸೆಗಳು ಎಂದಿದ್ದಾರೆ.

ಮೈದಾನದ ಹೊರಗೆ ಹಾಗೂ ಮೈದಾನದ ಒಳಗೆ ಸನ್ನಿ, ಇಷ್ಟೊಂದು ಭಾವುಕರಾಗಿರುವುದು ತೀರಾ ಅಪರೂಪ. ಸದಾ ನಗುನಗುತ್ತಾ ಸುತ್ತಲಿನವರನ್ನು ಗವಾಸ್ಕರ್ ನಗಿಸುತ್ತಾರೆ. ಆದರೆ ಈ ವಿಡಿಯೋದಲ್ಲಿ ಆಟೋಗ್ರಾಫ್ ತೆಗೆದುಕೊಳ್ಳುವ ಕ್ಷಣ ಮತ್ತು ತಮ್ಮ ಕೊನೆಯ ಆಸೆ ಏನೆಂದು ವಿವರಿಸಿ ಭಾವುಕರಾದರು. ಅದೇ ಸಮಯದಲ್ಲಿ ಯೂಸುಫ್ ಪಠಾಣ್, ಹರ್ಭಜನ್ ಸಿಂಗ್ ಕೂಡ ಭಾವುಕರಾದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.