ಕನ್ನಡ ಸುದ್ದಿ  /  Sports  /  Cricket News Ipl 2023 Viral Video Of Virat Kohli Reply To Wife Anushka Sharma After Being Sledged Rcb Virushka Jra

Virat Anushka: ಇವತ್ತಾದ್ರೂ ರನ್ ಗಳಿಸು ಕೊಹ್ಲಿ ಎಂದ ಪತ್ನಿ ಅನುಷ್ಕಾಗೆ ತಕ್ಕ ಉತ್ತರ ಕೊಟ್ಟ ವಿರಾಟ್; ವೈರಲ್ ವಿಡಿಯೋ ನೋಡಿ

Virat Kohli Anushka Sharma: ಅನುಷ್ಕಾ ಶರಮಾ ಅವರು ತಮ್ಮ ಪತಿ ವಿರಾಟ್‌ ಕೊಹ್ಲಿ ಕಾಲೆಳೆದ ವಿಡಿಯೋವೊಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್‌ ಆಗಿದೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ. ಇತ್ತೀಚೆಗಷ್ಟೇ, ಇನ್ಸ್ಟಾಗ್ರಾಮ್‌ನಲ್ಲಿ 250 ಮಿಲಿಯನ್ ಫಾಲೋವರ್‌ಗಳನ್ನು ಸಂಪಾದಿಸಿದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಮೈದಾನದಲ್ಲಿ ಮಾತ್ರವಲ್ಲದೆ, ಮೈದಾನದ ಹೊರಗಿದ್ದರೂ ಅಭಿಮಾನಿಗಳ ಕೇಂದ್ರಬಿಂದುವಾಗಿ ವಿರಾಟ್ ಉಳಿದಿರುತ್ತಾರೆ. ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರನ್ನು ಅತ್ಯಂತ ಪ್ರೀತಿಯಿಂದ ಕಾಣುವ ಕಿಂಗ್‌ ಕೊಹ್ಲಿ, ಅವರೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತಾರೆ.

ಟ್ರೆಂಡಿಂಗ್​ ಸುದ್ದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಕರ್ಷಣೆಯಾಗಿರುವ ವಿರಾಟ್‌ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ಇವರ ಬಗ್ಗೆ ತಿಳಿದುಕೊಳ್ಳಲು ಜನರಿಗೂ ಅತೀವ ಆಸಕ್ತಿ ಇರುತ್ತದೆ. ಅದರಂತೆಯೇ ಇವರಿಬ್ಬರೂ ಪರಸ್ಪರ ಹರಟೆಯ ಮಾರುಗಳನ್ನಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇದು ಜನರ ಕುತೂಹಲ ಹೆಚ್ಚಿಸಿದೆ.

ಕಳೆದ ತಿಂಗಳು ಪೂಮಾದ 'ಲೆಟ್ ದೇರ್ ಬಿ ಸ್ಪೋರ್ಟ್ಸ್' ಅಭಿಯಾನದಲ್ಲಿ ಪತಿ-ಪತ್ನಿ ಇಬ್ಬರೂ ಕಾಣಿಸಿಕೊಂಡಿದ್ದರು. ಈ ವೇಳೆ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಜೊತೆಗೆ ಕೆಲವೊಂದು ಫನ್ನಿ ಆಟಗಳಲ್ಲಿ ತೊಡಗಿದ್ದರು. ಇದರ ಕೆಲವು ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಸೃಷ್ಟಿಸಿವೆ. ಅಭಿಮಾನಿಗಳು ಅವುಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಇದರ ಒಂದು ವಿಡಿಯೋದಲ್ಲಿ, ವಿರಾಟ್‌ ಮೈದಾನದಲ್ಲಿ ಮಾಡುವ ಸಂಭ್ರಮಾಚರಣೆಯನ್ನು ಅನುಕರಿಸುವ ಮೂಲಕ ಅನುಷ್ಕಾ ಅವರು ವಿರಾಟ್‌ ಕಾಲೆಳೆಯುತ್ತಾರೆ. ಕೆಲವೊಮ್ಮೆ ವಿಕೆಟ್‌ಗಳು ಉರುಳಿದಾಗ ಬೌಲರ್‌ಗಿಂತಲೂ ಹೆಚ್ಚಾಗಿ ವಿರಾಟ್ ಸಂಭ್ರಮಿಸುತ್ತಾರೆ ಎಂದು ಹೇಳುವ ಮೂಲಕ ಅನುಷ್ಕಾ ತಮಾಷೆ ಮಾಡುತ್ತಾರೆ.

ಕಳೆದ ಏಪ್ರಿಲ್ 23ರಂದು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಪಂದ್ಯದಲ್ಲಿ ವಿರಾಟ್ ಗೋಲ್ಡನ್ ಡಕ್‌ಗೆ ಬಲಿಯಾಗುತ್ತಾರೆ. ಇದರ ಬಗ್ಗೆರಯೂ ಅನುಷ್ಕಾ ತಮಾಷೆ ಮಾತುಗಳನ್ನಾಡುತ್ತಾರೆ.

"ಆಜ್ ಏಪ್ರಿಲ್ 24 ಹೈ, ಆಜ್ ತೋ ರನ್ ಬನಾ ಲೆ ಕೊಹ್ಲಿ (ಇಂದು ಏಪ್ರಿಲ್ 24, ಇಂದಾದರೂ ಕನಿಷ್ಠ ರನ್ ಗಳಿಸು ಕೊಹ್ಲಿ)," ಎಂದು ಅನುಷ್ಕಾ ಹೇಳುವುದನ್ನು ಕೇಳಬಹುದು. ಈ ವೇಳೆ ಅಲ್ಲಿ ಸೇರಿದ್ದವರು ಜೋರಾಗಿ ನಗುತ್ತಾರೆ. ಇದಾದ ಬೆನ್ನಲ್ಲೇ, ಅನುಷ್ಕಾಗೆ ಕೊಹ್ಲಿ ತಕ್ಕ ಉತ್ತರ ನೀಡಿದ್ದಾರೆ. ಅದು ಪ್ರೇಕ್ಷಕರ ಶಿಳ್ಳೆ ಚಪ್ಪಾಳೆಗೆ ಕಾರಣವಾಗುತ್ತದೆ.

“ನಿನ್ನ ಸಂಪೂರ್ಣ ತಂಡ ಏಪ್ರಿಲ್, ಮೇ, ಜೂನ್ ಜುಲೈ ತಿಂಗಳಲ್ಲಿ ಗಳಿಸಿದ ರನ್‌ಗಳಿಗಿಂತ ಹೆಚ್ಚು ನಾನು ಆಡಿದ ಪಂದ್ಯಗಳ ಸಂಖ್ಯೆ ಇವೆ” ಎಂದು ವಿರಾಟ್‌ ಹೇಳಿದ್ದಾರೆ. ಇದಕ್ಕೆ ಪ್ರೇಕ್ಷಕರು ಮತ್ತೆ ಬಿದ್ದು ಬಿದ್ದು ನಕ್ಕಿದ್ದಾರೆ.

ಈ ಹಿಂದೆ ಏಪ್ರಿಲ್ 23ರಂದು ಆಡಿದ ಮೂರು ಪಂದ್ಯಗಳಲ್ಲಿ, ಕೊಹ್ಲಿ ಗೋಲ್ಡನ್ ಡಕ್‌ಗೆ ಔಟಾಗಿದ್ದರು. 2017ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಕಳೆದ ವರ್ಷ, ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಮತ್ತು ಈ ಬಾರಿ ರಾಜಸ್ಥಾನ ವಿರುದ್ಧ ಇದೇ ಪ್ರಸಂಗ ಸಂಭವಿಸಿತ್ತು. ಇದಕ್ಕೆ ಅನುಷ್ಕಾ ತಮಾಷೆಯ ರೂಪದಲ್ಲಿ ಟೀಕಿಸಿದ್ದಾರೆ.

ಸದ್ಯ ಜೂನ್ 7ರಂದು ಲಂಡನ್‌ನ ಓವಲ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ತಯಾರಿ ನಡೆಸಲು ವಿರಾಟ್ ಕೊಹ್ಲಿ ಈಗ ಲಂಡನ್‌ಗೆ ಪ್ರಯಾಣಿಸಿದ್ದಾರೆ.