ಕನ್ನಡ ಸುದ್ದಿ  /  Sports  /  Cricket News Rr Star Yashasvi Jaiswal Replaces Ruturaj Gaikwad As Stand By Player For Wtc Final Vs Australia Reports Prs

Yashasvi Jaiswal: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಿಂದ ಋತುರಾಜ್ ಗಾಯಕ್ವಾಡ್​ ಔಟ್​; ಯಶಸ್ವಿ ಜೈಸ್ವಾಲ್​ಗೆ ಲಕ್ಕಿ ಚಾನ್ಸ್

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (WTC final 2023)​ ಪಂದ್ಯದಿಂದ ಋತುರಾಜ್​ ಗಾಯಕ್ವಾಡ್​ (Ruturaj Gaikwad) ಹಿಂದೆ ಸರಿದ ಕಾರಣ ರಾಜಸ್ಥಾನ್ ರಾಯಲ್ಸ್​ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal)​ ಅವರನ್ನು ಬದಲಿಯಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಋತುರಾಜ್​ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್
ಋತುರಾಜ್​ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (WTC Final 2023)​ ಪಂದ್ಯಕ್ಕೆ ಕೆಲವೇ ದಿನಗಳಿರುವಾಗ, ಭಾರತ ತಂಡದಲ್ಲಿ (Team India) ಮಹತ್ವದ ಬದಲಾವಣೆಯಾಗಿದೆ. ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ (Rohit Sharma) ಮತ್ತು ಶುಭ್ಮನ್​ ಗಿಲ್​ (Shubman Gill) ಅವರಿಗೆ ಮೀಸಲು ಆಟಗಾರನಾಗಿ​ ತಂಡದಲ್ಲಿ ಸ್ಥಾನ ಪಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್​ ಆರಂಭಿಕ ಆಟಗಾರ ಋತುರಾಜ್​ ಗಾಯಕ್ವಾಡ್ (Ruturaj Gaikwad), ಈಗ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದಾರೆ.

ಹಾಗಾಗಿ ಐಪಿಎಲ್​ನಲ್ಲಿ ಅಬ್ಬರಿಸಿದ ರಾಜಸ್ಥಾನ್ ರಾಯಲ್ಸ್​ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal)​ ಅವರನ್ನು ಬದಲಿಯಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಡಬ್ಲ್ಯುಟಿಸಿ ಫೈನಲ್​​ ಪಂದ್ಯಕ್ಕೆ ಸ್ಟ್ಯಾಂಡ್​​ ಬೈ ಆಟಗಾರರಾಗಿ ಋತುರಾಜ್ ಗಾಯಕ್ವಾಡ್​ ಜೊತೆಗೆ ಸೂರ್ಯಕುಮಾರ್ (Suryakumar Yadav)​, ಮುಖೇಶ್​​ ಕುಮಾರ್ (Mukesh Kumar) ಅವರು ಪ್ರಮುಖ ತಂಡದೊಂದಿಗೆ ಆಯ್ಕೆಯಾಗಿದ್ದರು. ಆದರೆ ಗಾಯಕ್ವಾಡ್​, ತನ್ನ ಮದುವೆ ಕಾರಣದಿಂದ ಪ್ರಮುಖ ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ಜೂನ್​ 2ರಂದು ಮದುವೆ

26 ವರ್ಷದ ಋತುರಾಜ್​ ಗಾಯಕ್ವಾಡ್ ವೈವಾಹಿಕ ಜೀವನಕ್ಕೆ (Ruturaj Gaikwad MarriageWorld Test Championship (WTC) fina) ಕಾಲಿಡಲು ಸಜ್ಜಾಗಿದ್ದಾರೆ. ಜೂನ್​ 2 ಮತ್ತು 3ರಂದು ಮದುವೆ ಸಮಾರಂಭ ನಡೆಯಲಿರುವ ಕಾರಣದಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಜೂನ್​ 7ರಂದು ಇಂಗ್ಲೆಂಡ್​ನ ಲಂಡನ್​ನ ದಿ ಓವಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಚಾಂಪಿಯನ್​ ಪಟ್ಟಕ್ಕಾಗಿ ಭಾರತ - ಆಸ್ಟ್ರೇಲಿಯಾ ಸೆಣಸಾಟ ನಡೆಸಲಿವೆ.

ಋತುರಾಜ್​ ಪ್ರಮುಖ ಪಂದ್ಯದಲ್ಲಿ ಹಿಂದಡಿ ಹಾಕಿದ ಕಾರಣ ಬದಲಿ ಆಟಗಾರನಾಗಿ ಮುಂಬೈ ರಣಜಿ ತಂಡದ ಯಂಗ್​ ಸೆನ್​ಸೇಷನ್​​ ಯಶಸ್ವಿ ಜೈಸ್ವಾಲ್​ಗೆ ಮಣೆ ಹಾಕಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. 16ನೇ ಆವೃತ್ತಿಯ ಐಪಿಎಲ್​ನಲ್ಲೂ ಜೈಸ್ವಾಲ್, ಅದ್ಭುತ ಪ್ರದರ್ಶನ ನೀಡಿದರು. ರಾಜಸ್ಥಾನ್ ರಾಯಲ್ಸ್​ ಪರ ಶತಕವನ್ನೂ ಸಿಡಿಸಿ ಗಮನ ಸೆಳೆದಿದ್ದರು. 14 ಪಂದ್ಯಗಳಲ್ಲಿ48.08ರ ಸರಾಸರಿ, 163.61ರ ಸ್ಟ್ರೈಕ್​ರೇಟ್​​ನಲ್ಲಿ 625 ರನ್​ ಗಳಿಸಿದ್ದಾರೆ.

ರಣಜಿಯಲ್ಲಿ ಅದ್ಭುತ ಆಟ

ರಣಜಿ ಕ್ರಿಕೆಟ್​ನಲ್ಲೂಲ್ಲೂ ಅಮೋಘ ಬ್ಯಾಟಿಂಗ್​ ನಡೆಸಿದ್ದಾರೆ. ಮಾಜಿ - ಹಾಲಿ ಕ್ರಿಕೆಟರ್​ಗಳೇ ಈತನ ಆಟಕ್ಕೆ ಸಲಾಂ ಎಂದಿದ್ದಾರೆ. ಹಲವು ಶತಕ ಮತ್ತು ದ್ವಿಶತಕ ಬಾರಿಸಿ ಅಬ್ಬರಿಸಿದ ಜೈಸ್ವಾಲ್​ಗೆ ರಾಷ್ಟ್ರೀಯ ತಂಡದಿಂದ ಮೊದಲ ಬಾರಿಗೆ ಕರೆ ಬಂದಿದೆ. ಈವರೆಗೂ 15 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 9 ಶತಕ, 2 ಅರ್ಧಶತಕಗಳ ನೆರವಿನಿಂದ ಬರೋಬ್ಬರಿ 1845 ರನ್​ ಗಳಿಸಿದ್ದಾರೆ. ಅದು ಕೂಡ 80.21ರ ಸರಾಸರಿಯಲ್ಲಿ. 265 ರನ್ ಅವರ ಬೆಸ್ಟ್​ ಸ್ಕೋರ್.

ಲಂಡನ್​ನಲ್ಲಿ ಮೊದಲ ಬ್ಯಾಚ್​ ಅಭ್ಯಾಸ

ಈಗಾಗಲೇ ಟೀಮ್​ ಇಂಡಿಯಾದ ಮೊದಲ ಬ್ಯಾಚ್​ ಲಂಡನ್​​ನಲ್ಲಿದೆ. ವಿರಾಟ್​ ಕೊಹ್ಲಿ, ಮೊಹಮ್ಮದ್​ ಸಿರಾಜ್​, ಆರ್​. ಅಶ್ವಿನ್, ಅಕ್ಷರ್ ಪಟೇಲ್​, ಶಾರ್ದೂಲ್​ ಠಾಕೂರ್, ಉಮೇಶ್​ ಯಾದವ್​, ಜಯದೇವ್​ ಉನಾದ್ಕತ್ ಮತ್ತು ಚೇತೇಶ್ವರ್​ ಪೂಜಾರ ಸದ್ಯ ತಂಡವನ್ನು ಕೂಡಿಕೊಂಡಿದ್ದಾರೆ. ಟೀಮ್​ ಇಂಡಿಯಾ ರೋಹಿತ್​ ಶರ್ಮಾ, ಇಶಾನ್​ ಕಿಶನ್​, ಸೂರ್ಯಕುಮಾರ್ ಯಾದವ್​ ಅವರು ಇಂದು ತೆರಳಿದ್ದಾರೆ. ಐಪಿಎಲ್​ ಫೈನಲ್​ ಬಳಿಕ ಶುಭ್ಮನ್​ ಗಿಲ್​, ರವೀಂದ್ರ ಜಡೇಜಾ, ಕೆಎಸ್​ ಭರತ್​, ಅಜಿಂಕ್ಯ ರಹಾನೆ ಮತ್ತು ಮೊಹಮ್ಮದ್​ ಶಮಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಇವರೊಂದಿಗೆ ಯಶಸ್ವಿ ಜೈಸ್ವಾಲ್​ ಕೂಡ ಇರಲಿದ್ದಾರೆ.

ಡಬ್ಲ್ಯಟಿಸಿ ಫೈನಲ್ ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್​ ಕಿಶನ್​ (ವಿಕೆಟ್​ ಕೀಪರ್), ಕೆಎಸ್ ಭರತ್ (ವಿಕೆಟ್​ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್, ಜಯದೇವ್ ಉನದ್ಕತ್.