ಕನ್ನಡ ಸುದ್ದಿ  /  ಕ್ರೀಡೆ  /  Faf Du Plessis: ನಮ್ಮದು ಅದ್ಭುತ ತಂಡವಾಗಿರಲಿಲ್ಲ; ಪ್ಲೇ ಆಫ್ ತಲುಪುವ ಅರ್ಹತೆ ನಮಗಿರಲಿಲ್ಲ; ಫಾಫ್​ ಡು ಪ್ಲೆಸಿಸ್​ ಬೇಸರದ ಮಾತು

Faf Du Plessis: ನಮ್ಮದು ಅದ್ಭುತ ತಂಡವಾಗಿರಲಿಲ್ಲ; ಪ್ಲೇ ಆಫ್ ತಲುಪುವ ಅರ್ಹತೆ ನಮಗಿರಲಿಲ್ಲ; ಫಾಫ್​ ಡು ಪ್ಲೆಸಿಸ್​ ಬೇಸರದ ಮಾತು

16ನೇ ಆವೃತ್ತಿಯ ಐಪಿಎಲ್​ನಲ್ಲಿ ಪ್ಲೇ ಆಫ್‌ ಪ್ರವೇಶಿಸಲು ವಿಫಲವಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಲೀಗ್ ಹಂತದಲ್ಲೇ ಹೊರಬಿದ್ದಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಫಾಫ್ ಡು ಪ್ಲೆಸಿಸ್ ನಿರೀಕ್ಷಿತ ಆಟವಾಡಲಿಲ್ಲ ಎಂದಿದ್ದಾರೆ.

ಆರ್​​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​
ಆರ್​​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ (IPL 2023) ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತನ್ನ ಅಭಿಯಾನ ಮುಗಿಸಿದೆ. ಟ್ರೋಫಿ ಗೆಲ್ಲುವ ಭರವಸೆ ಹೊಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಸಲ ಕಪ್​​ ನಮ್ದೇ ಎಂಬ ಘೋಷಣೆಯನ್ನು ಮುಂದಿನ ಬಾರಿಕೆ ಮುಂದೂಡಿಕೆಯಾಗಿದೆ. ಪ್ಲೇ ಆಫ್​ಗೇರುವ ತನ್ನ ಕೈಯಲಿದ್ದರೂ, ಅದನ್ನು ದಕ್ಕಿಸಿಕೊಳ್ಳಲಾಗದೆ ಸೋಲನುಭವಿಸಿತು.

ಟ್ರೆಂಡಿಂಗ್​ ಸುದ್ದಿ

ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans)​ ತಂಡವನ್ನು ಎದುರಿಸಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರ್​ಸಿಬಿ 5 ವಿಕೆಟ್​ ನಷ್ಟಕ್ಕೆ 197 ರನ್​ ಗಳಿಸಿತು. ವಿರಾಟ್​ ಕೊಹ್ಲಿ (Virat Kohli) ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಈ ಗುರಿ ಬೆನ್ನತ್ತಿದ ಗುಜರಾತ್​ 19.1 ಓವರ್​ಗಳಲ್ಲ ಗೆಲುವಿನ ಗೆರೆ ದಾಟಿತು. ಶುಭ್ಮನ್ ಗಿಲ್ (Shubman Gill)​ ಶತಕ ಸಿಡಿಸಿ ರೂವಾರಿಯಾದರು. ಇದರೊಂದಿಗೆ 6 ವಿಕೆಟ್​ಗಳ ಗೆಲುವು ದಾಖಲಿಸಿತು.

ಈ ಪಂದ್ಯದಲ್ಲಿ ಆರ್​ಸಿಬಿ ಪ್ಲೇ ಆಫ್​ಗೆ (Playoff) ನೇರವಾಗಿ ಅರ್ಹತೆ ಪಡೆಯುವ ಅವಕಾಶ ಇತ್ತು. ಪ್ರಸಕ್ತ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಏಳು ಗೆಲುವು, 7 ಸೋಲು ಕಂಡಿದೆ. 14 ಅಂಕ ಪಡೆದಿತ್ತು. ಅಂಕಪಟ್ಟಿಯಲ್ಲಿ 6 ಸ್ಥಾನದೊಂದಿಗೆ ಐಪಿಎಲ್​ ಅಭಿಯಾನ ಅಂತ್ಯಗೊಳಿಸಿದೆ. ಈ ಸೋಲಿನ ಬಗ್ಗೆ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ (RCB Captain Faf Du Plessis) ಮಾತನಾಡಿದ್ದು, ಬೇಸರದ ನುಡಿಗಳನ್ನಾಡಿದ್ದಾರೆ. ನಮ್ಮ ತಂಡ ಉತ್ತಮವಾಗಿರಲಿಲ್ಲ ಎಂದಿದ್ದಾರೆ.

ತಮ್ಮ ತಂಡಕ್ಕೆ ಪ್ಲೇ ಆಫ್ ತಲುಪುವ ಅರ್ಹತೆಯೇ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಈ ಟೂರ್ನಿಯಲ್ಲಿ ಅತ್ಯುತ್ತಮ ತಂಡಗಳ ಪೈಕಿ ನಮ್ಮ ತಂಡವು ಉತ್ತಮ ತಂಡವೇ ಆಗಿರಲಿಲ್ಲ. ಇದೇ ಕಾರಣಕ್ಕೆ ಪ್ಲೇ ಆಫ್​​ ಹಂತಕ್ಕೇರುವ ಅರ್ಹತೆ ಹೊಂದಲಿಲ್ಲ. ಲೀಗ್​​​​​​​​ ಹಂತದಲ್ಲೇ ನಮ್ಮ ತಂಡದ ಹೋರಾಟ ಕೊನೆಗೊಂಡಿರುವುದು ಬೇಸರ ತರಿಸಿದೆ. ಒಟ್ಟಾರೆ ಪ್ರದರ್ಶನ ಗಮನಿಸಿದರೆ, ನಮ್ಮ ತಂಡ ಉತ್ತಮವಾಗಿರಲಿಲ್ಲ ಎಂಬುದು ಸತ್ಯ ಎಂದು ಹೇಳಿದ್ದಾರೆ.

ಅದೃಷ್ಟದ ಮೇಲೆ ನಾವು ಅದ್ಭುತ ಪ್ರದರ್ಶನ ನೀಡಿದ್ದೇವೆ. ಇದು ನಿಜ. ಈ ಋತುವಿನಲ್ಲಿ ಕೆಲವು ಉತ್ತಮ ವೈಯಕ್ತಿಕ ಪ್ರದರ್ಶನಗಳು ಬಂದಿವೆ. ತಂಡದಲ್ಲಿ ಕೆಲವು ನ್ಯೂನತೆಗಳಿವೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಂಡರೆ, ಇದೀಗ ಪ್ಲೇ ಆಫ್‌ನಲ್ಲಿರುವ ತಂಡಗಳಂತೆ ನಾವು ಅತ್ಯುತ್ತಮ ತಂಡಗಳಲ್ಲಿ ಒಂದಲ್ಲ. ನಾವು ಪ್ಲೇ ಆಫ್‌ಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಈ ಆವೃತ್ತಿಯಲ್ಲಿ ತಮ್ಮ ತಂಡದ ಅತ್ಯುತ್ತಮ ಪ್ರದರ್ಶನ ನೀಡಿದ ಸಿರಾಜ್ ಅವರನ್ನು ಶ್ಲಾಘಿಸಿದ್ದಾರೆ. ತಮ್ಮ ಋತುವನ್ನು ನಿರಾಶೆಯಲ್ಲಿ ಕೊನೆಗೊಳಿಸುವುದು ದುಃಖಕರವಾಗಿದೆ. ಆದರೆ ಈ ಬಾರಿ ಅವರಲ್ಲಿ ಕೆಲವೊಂದು ಪಾಸಿಟಿವ್​ ಅಂಶಗಳು ಕಂಡು ಬಂದಿರುವುದು ವಿಶೇಷ. ನನ್ನ, ವಿರಾಟ್​ ಕೊಹ್ಲಿ (Virat Kohli) ಹಾಗೂ ಗ್ಲೇನ್ (Glenn Maxwell)​ ಮ್ಯಾಕ್ಸ್​ವೆಲ್​ ಅವರ ಜೊತೆ ಜೊತೆಯಾಟಗಳು ಬಂದಿವೆ. ಬೌಲಿಂಗ್​ನಲ್ಲಿ ಮೊಹಮ್ಮದ್​ ಸಿರಾಜ್​ (Mohammed Siraj) ಅಬ್ಬರಿಸಿದರು ಎಂದಿದ್ದಾರೆ. ಕೆಲವು ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಹಲವು ಕಾರಣಗಳಿಂದ ಪ್ಲೇ ಆಫ್​ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ನಾಯಕ ಫಾಫ್​ ಡು ಪ್ಲೆಸಿಸ್​ ಬೇಸರ ವ್ಯಕ್ತಪಡಿಸಿದ್ದಾರೆ.

16ನೇ ಆವೃತ್ತಿಯಲ್ಲಿ ಆರ್​ಸಿಬಿ ತಂಡದಲ್ಲಿ ನಾಲ್ವರು ಆಟಗಾರರು ಮಾತ್ರ ಉತ್ತಮ ಪ್ರದರ್ಶನ ತೋರಿದ್ದಾರೆ. ಫಾಫ್​ ಡು ಪ್ಲೆಸಿಸ್​ 730 ರನ್​, ವಿರಾಟ್​ ಕೊಹ್ಲಿ 639 ರನ್​​, ಗ್ಲೇನ್​ ಮ್ಯಾಕ್ಸ್​ವೆಲ್​ 400 ರನ್​ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ ಬೌಲಿಂಗ್​​ನಲ್ಲಿ 19 ವಿಕೆಟ್​ ಪಡೆದಿದ್ದಾರೆ. ಈ ನಾಲ್ವರು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತ ಪ್ರದರ್ಶನ ಬಂದಿಲ್ಲ ಎಂಬುದು ಅಚ್ಚರಿಯ ಸಂಗತಿ.