ಕನ್ನಡ ಸುದ್ದಿ  /  Sports  /  Ipl 2023: Will Ms Dhoni Play Or Miss Ipl 2023 Opener Against Gt Csk Ceo Gives Massive Update

IPL 2023: ಗಾಯದಿಂದ ಧೋನಿ ಆಡುವುದು ಅನುಮಾನ; ಬೆನ್​​​​ ಸ್ಟೋಕ್ಸ್​ಗೆ ನಾಯಕತ್ವ?

IPL 2023: ನಾಯಕ MS ಧೋನಿ ಲಭ್ಯತೆಯ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಅಭ್ಯಾಸದ ವೇಳೆ ಎಡ ಮೊಣಕಾಲಿನಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಆಡುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.

ಎಂಎಸ್ ಧೋನಿ
ಎಂಎಸ್ ಧೋನಿ

ಕ್ರಿಕೆಟ್​​ ಲೋಕದ ಅತಿದೊಡ್ಡ ಜಾತ್ರೆಗೆ ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟಾನ್ಸ್ (Chennai Super Kings vs Gujarat Titans) ತಂಡಗಳು ಮುಖಾಮುಖಿ ಆಗುತ್ತಿವೆ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಸಿಎಸ್​​ಕೆ, ಪಾಯಿಂಟ್ಸ್​ ಟೇಬಲ್​​ನಲ್ಲಿ 9ನೇ ತೃಪ್ತಿಪಟ್ಟುಕೊಂಡಿತು. ಆದರೆ ಈ ಬಾರಿ ಪುಟಿದೇಳುವ ಲೆಕ್ಕಾಚಾರದಲ್ಲಿದೆ.

MS ಧೋನಿ (Mahendra Singh Dhoni) ನೇತೃತ್ವದ ತಂಡವು, ಈ ಬಾರಿ ಸ್ಥಿರ ಪ್ರದರ್ಶನ ನೀಡುವ ಮತ್ತು ಪ್ರಶಸ್ತಿಗಾಗಿ ಸವಾಲು ಹಾಕುವ ಗುರಿ ಹೊಂದಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಭಾರಿ ಆಘಾತವಾಗಿದೆ. ನಾಯಕ ಧೋನಿ ಲಭ್ಯತೆಯ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಅಭ್ಯಾಸದ ವೇಳೆ ಎಡ ಮೊಣಕಾಲಿನಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಆಡುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.

ಚೆನ್ನೈನ ಚೆಪಾಕ್​​ ಮೈದಾನದಲ್ಲಿ ಅಭ್ಯಾಸ ನಡೆಸುವಾಗ ಧೋನಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗುರುವಾರ ತಂಡದೊಂದಿಗೆ ಅಹ್ಮದಾಬಾದ್​ನಲ್ಲಿ ಅಭ್ಯಾಸ ನಡೆಸಲು ಹಿಂದೆ ಸರಿದರು. ಜೊತೆಗೆ ಕುಂಟುತ್ತಾ ಓಡಾಡುತ್ತಿರುವುದು ಕಂಡುಬಂದಿದೆ. ತಂಡದೊಂದಿಗೆ ಅಭ್ಯಾಸ ನಡೆಸದ ಕಾರಣ, ಇಂದಿನ ಹೈವೋಲ್ಟೇಜ್​ ಪಂದ್ಯಕ್ಕೆ ಕಣಕ್ಕಿಳಿಯುವುದರ ಬಗ್ಗೆ ಅನುಮಾನ ಸೃಷ್ಟಿಯಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್​​​ ಸಿಇಒ ಕಾಸಿ ವಿಶ್ವನಾಥನ್ ಅವರು ಧೋನಿ ಗಾಯಗೊಂಡಿರುವ ಬಗ್ಗೆ ಅಪ್​ಡೇಟ್​ ನೀಡಿದ್ದಾರೆ. ಅವರು ಪಿಟಿಐಗೆ ಪ್ರತಿಕ್ರಿಯಿಸಿದ್ದು, ಧೋನಿ ಕಣಕ್ಕಿಳಿಯುವ ಸೂಚನೆಯನ್ನೂ ನೀಡಿದ್ದಾರೆ. ನನಗೆ ತಿಳಿದಿರುವ ಮಾಹಿತಿ ಪ್ರಕಾರ, ನಾಯಕ ಧೋನಿ ಶೇಕಡಾ 100ರಷ್ಟು ಆಡಲಿದ್ದಾರೆ. ಆದರೆ ಬೇರೆ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಸ್ಟೋಕ್ಸ್​ಗೆ ನಾಯಕತ್ವ

MS ಧೋನಿ ಒಂದು ವೇಳೆ ಕಣಕ್ಕಿಳಿಯದಿದ್ದರೆ, ಇಂಗ್ಲೆಂಡ್​​ ತಂಡದ ಆಲ್​ರೌಂಡರ್​ ಬೆನ್​ಸ್ಟೋಕ್ಸ್​​ ಅವರು ನಾಯಕತ್ವದ ಹೊಣೆ ಹೊರಲಿದ್ದಾರೆ. ಜೊತೆಗೆ ವಿಕೆಟ್​ ಕೀಪರ್​ ಜವಾಬ್ದಾರಿಯನ್ನು ಡೆವೋನ್​ ಕಾನ್ವೆ ಅಥವಾ ಅಂಬಟಿ ರಾಯಡು ಈ ಜವಾಬ್ದಾರಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಆದರೆ ವರದಿಗಳ ಪ್ರಕಾರ, CSK ನಾಯಕ ಕಣಕ್ಕಿಳಿಯುವುದು ಬಹುತೇಕ ಡೌಟ್​ ಎನ್ನಲಾಗಿದೆ.

ಧೋನಿಗಿದು ಕೊನೆಯ ಐಪಿಎಲ್​?

ಎಂಎಸ್​ ಧೋನಿಗೆ ಇದು ಬಹುತೇಕ ಕೊನೆಯ ಐಪಿಎಲ್​. ಹಾಗಾಗಿ ಚೆನ್ನೈ ಈ ಟೂರ್ನಿಗೆ ಭಾವನಾತ್ಮಕವಾಗಿಯೂ ಮಹತ್ವದ್ದಾಗಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ 9 ಬಾರಿ ಫೈನಲ್​ ಪ್ರವೇಶ ಮಾಡಿದ್ದು, 4 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಹಾಗಾಗಿ ಧೋನಿಗೆ ಗೆಲುವಿನ ವಿದಾಯದ ನಿರೀಕ್ಷೆಯಲ್ಲಿದೆ ಚೆನ್ನೈ. ಸದ್ಯಕ್ಕಂತೂ ಧೋನಿ ತಮ್ಮ ತಂಡಕ್ಕೆ ಐದನೇ ಟ್ರೋಫಿ ಜಯಿಸಿಕೊಡುವತ್ತ ಚಿತ್ತ ನೆಟ್ಟಿದ್ದಾರೆ. ಆದರೆ ಗಾಯದ ಸಮಸ್ಯೆ ಅಭಿಮಾನಿಗಳ ಚಿಂತೆಗೀಡು ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್

MS ಧೋನಿ (ನಾಯಕ/ವಿಕೆಟ್‌ಕೀಪರ್), ಋತುರಾಜ್ ಗಾಯಕ್ವಾಡ್​, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮೋಯಿನ್ ಅಲಿ, ಬೆನ್ ಸ್ಟೋಕ್ಸ್, ಶಿವಂ ದುಬೆ, ರವೀಂದ್ರ ಜಡೇಜಾ, ಡ್ವೇನ್ ಪ್ರಿಟೊರಿಯಸ್, ಮಿಚೆಲ್ ಸ್ಯಾಂಟ್ನರ್​, ಡೆವೊನ್ ಕಾನ್ವೆ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರೇಕರ್, ಸಿಸಾಂದಾ ಮಗಾಲ, ಅಜಯ್ ಮಂಡ್, ಆಕಾಶ್​ ಸಿಂಗ್​, ಮಹೀಷ ತೀಕ್ಷಣ, ಪ್ರಶಾಂತ್ ಸೋಳಂಕಿ, ಸಿಮರಜೀತ್ ಸಿಂಗ್.