ಕನ್ನಡ ಸುದ್ದಿ  /  ಕ್ರೀಡೆ  /  Gavaskar On Archer: ಒಂದೇ ಒಂದು ರೂಪಾಯಿ ಕೊಡಬೇಡಿ, ಕೊಟ್ಟು ಮೂರ್ಖರಾಗಬೇಡಿ; ಐಪಿಎಲ್​ ಅರ್ಧಕ್ಕೆ ತೊರೆದ ಆರ್ಚರ್ ವಿರುದ್ಧ ಗವಾಸ್ಕರ್ ಗರಂ​

Gavaskar on Archer: ಒಂದೇ ಒಂದು ರೂಪಾಯಿ ಕೊಡಬೇಡಿ, ಕೊಟ್ಟು ಮೂರ್ಖರಾಗಬೇಡಿ; ಐಪಿಎಲ್​ ಅರ್ಧಕ್ಕೆ ತೊರೆದ ಆರ್ಚರ್ ವಿರುದ್ಧ ಗವಾಸ್ಕರ್ ಗರಂ​

Gavaskar on Archer: 16ನೇ ಆವೃತ್ತಿಯ ಐಪಿಎಲ್​ನ ಅರ್ಧಕ್ಕೆ ತೊರೆದ ಜೋಫ್ರಾ ಆರ್ಚರ್​ ಅವರಿಗೆ ಒಂದೇ ಒಂದು ರೂಪಾಯಿ ಕೊಡಬೇಡಿ, ಕೊಟ್ಟು ಮೂರ್ಖರಾಗಬೇಡಿ ಎಂದು ಮುಂಬೈ ಇಂಡಿಯನ್ಸ್​ ತಂಡಕ್ಕೆ ಸುನಿಲ್​ ಗವಾಸ್ಕರ್​ ಹೇಳಿದ್ದಾರೆ.

ಜೋಫ್ರಾ ಆರ್ಚರ್​ ವಿರುದ್ಧ ಸುನಿಲ್​ ಗವಾಸ್ಕರ್​ ವಾಗ್ದಾಳಿ
ಜೋಫ್ರಾ ಆರ್ಚರ್​ ವಿರುದ್ಧ ಸುನಿಲ್​ ಗವಾಸ್ಕರ್​ ವಾಗ್ದಾಳಿ

ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ವೇಗಿ ಜೋಫ್ರಾ ಆರ್ಚರ್‌ ಅವರು ಗಾಯದ ಸಮಸ್ಯೆಯ ಕಾರಣ 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ 5 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆರ್ಚರ್​, ಮೊಣಕೈ ಗಾಯದ ಕಾರಣ ಮುಂಬೈ ತನ್ನ ಅಭಿಯಾನ ಮುಗಿಸುವ ಮೊದಲೇ ಮೇ 9ರಂದು ಟೂರ್ನಿ ತೊರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್​ನ ಮಧ್ಯದಲ್ಲಿ ಮುಂಬೈ ಇಂಡಿಯನ್ಸ್​ ಕ್ಯಾಂಪ್​ ತೊರೆದಿರುವ ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್​ ವಿರುದ್ಧ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಿಡಿಕಾರಿದ ಸುನಿಲ್​ ಗವಾಸ್ಕರ್​, ಮುಂಬೈ ತಂಡವು ಒಂದೇ ಒಂದು ರೂಪಾಯಿ ಕೂಡ ಅವರಿಗೆ ನೀಡಬಾರದು ಎಂದು ಸೂಚಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ 8 ಕೋಟಿಗೆ ಮುಂಬೈ ಖರೀದಿಸಿತ್ತು.

ಟೂರ್ನಿಯ ಆರಂಭದಿಂದಲೂ ಇಂಜುರಿಯಿಂದ ಆಗಾಗ್ಗೆ ತಂಡದಲ್ಲಿ ಅವಕಾಶ ಪಡೆಯುತ್ತಿದ್ದರು. ಸದ್ಯ ಹೊರ ನಡೆದ ಜೋಫ್ರಾ ಆರ್ಚರ್ ಅವರ ಬದಲಿಗೆ ವೇಗಿ ಕ್ರಿಸ್‌ ಜೋರ್ಡನ್​ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದ್ದಾರೆ. ಜೋಫ್ರಾ ಆರ್ಚರ್ ಆಡಿದ್ದ 5 ಪಂದ್ಯಗಳಲ್ಲೂ ದುಬಾರಿ ಬೌಲರ್​​ ಎನಿಸಿದ್ದಾರೆ. 9.50ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಡುವ ಜೊತೆಗೆ ಕೇವಲ 2 ವಿಕೆಟ್‌ ಪಡೆದಿದ್ದಾರೆ.

ಜೋಪ್ರಾ ಆರ್ಚರ್​ ಅವರಿಂದ ಮುಂಬೈ ತಂಡಕ್ಕೆ ಆದ ಲಾಭವೇನು? ಯಾವ ರೀತಿಯ ಅನುಭವ ಪಡೆಯಿತು. ಗಾಯಗೊಂಡಿದ್ದಾರೆ ಎಂದು ತಿಳಿದರೂ, ಈ ಆವೃತ್ತಿಯಲ್ಲಿ ಆಡಿಲು ಖರೀದಿಸಿದ್ದು ಯಾಕೆ? ನೀವು 8 ಕೋಟಿ ನೀಡಿ ಖರೀದಿಸಿದರೆ, ಅವರು ದೊಡ್ಡ ಮೊತ್ತದ ಹಣ ಪಡೆದು ನಿಮಗೆ ಕೊಟ್ಟಿದ್ದೇನು? 100 ಪರ್ಸೆಂಟ್​ ಫಿಟ್​ ಆದ ನಂತರವೇ ಫ್ರಾಂಚೈಸಿಗೆ ತಿಳಿಸಬೇಕಿತ್ತು ಎಂದು ಗುಡುಗಿದ್ದಾರೆ.

ತಮ್ಮ ಎಂದಿನ ವೇಗದಲ್ಲಿ ಬೌಲಿಂಗ್ ಮಾಡಲು ಶಕ್ತರಾಗಿರಲಿಲ್ಲ. ಟೂರ್ನಿ ನಡುವೆ ಆರ್ಚರ್​ ಚಿಕಿತ್ಸೆಗಾಗಿ ವಿದೇಶಕ್ಕೆ ಹೋದರು. ಇಂಗ್ಲೆಂಡ್​ ಕ್ರಿಕೆಟ್ ಮಂಡಳಿಯು ಸ್ಪಷ್ಟವಾಗಿ ಹೇಳಿತ್ತು. ಪೂರ್ಣ ಪ್ರಮಾಣದಲ್ಲಿ ಇನ್ನೂ ಫಿಟ್ ಆಗಿಲ್ಲ ಎಂದಿತ್ತು. ಆದರೂ ಐಪಿಎಲ್​ಗೆ ಬಂದರು. ಮುಂಬೈ ತಂಡವು ಬಹುಶಃ ಇಸಿಬಿಗಿಂತ ಹೆಚ್ಚು ಪಾವತಿಸುತ್ತದೆ. ಫ್ರಾಂಚೈಸಿಗೆ ಬದ್ಧರಾಗಿದ್ದರೆ ಕೊನೆಯವರೆಗೂ ಇರಬೇಕಿತ್ತು ಎಂದು ಗವಾಸ್ಕರ್ ಅವರು ತಮ್ಮ ಮಿಡ್-ಡೇ ಅಂಕಣದಲ್ಲಿ ಬರೆದಿದ್ದಾರೆ.

ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ 5 ಟೆಸ್ಟ್‌ ಪಂದ್ಯಗಳ ಸರಣಿಗೂ ಆರ್ಚರ್​ ಅಲಭ್ಯರಾಗಲಿದ್ದಾರೆ. ತನ್ನ ಪುನರ್ವಸತಿ ಮೇಲೆ ಕೇಂದ್ರೀಕರಿಸಲು ಅಧಿಕೃತವಾಗಿ ಮನೆಗೆ ಮರಳಿದ್ದಾರೆ. ಮುಂಬೈ ತಂಡಕ್ಕೆ ಸಲಹೆಯೊಂದನ್ನು ನೀಡಿರುವ ಗವಾಸ್ಕರ್​, ಪೂರ್ಣ ಪ್ರಮಾಣದ ಹಣವನ್ನು ಮೂರ್ಖರಾಗಬೇಡಿ ಎಂದು ಹೇಳಿದ್ದಾರೆ.

ಎಷ್ಟೇ ದೊಡ್ಡ ಹೆಸರಾಗಿದ್ದರೂ ಅವರು ಇಡೀ ಪಂದ್ಯಾವಳಿಗೆ ಲಭ್ಯವಾಗದಿದ್ದರೆ, ಒಂದು ರೂಪಾಯಿ ಸಹ ಕೊಡಬಾರದು. ಐಪಿಎಲ್‌ಗಿಂತ ದೇಶವನ್ನು ಮೊದಲ ಆದ್ಯತೆ ನೀಡುವುದು ಉತ್ತಮ. ಆದರೆ ಅವರು ಐಪಿಎಲ್​​ಗೂ ಬರುವುದಕ್ಕೂ ಮುನ್ನ ಯೋಚಿಸಬೇಕು. ಐಪಿಎಲ್​ ಆಡಿದರೆ, ತಮ್ಮ ಬದ್ಧತೆಯನ್ನು ಸಂಪೂರ್ಣವಾಗಿ ಪೂರೈಸಬೇಕು. ವಿಶೇಷವಾಗಿ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯುವುದು ನಿರ್ಣಾಯಕ ಸಮಯದಲ್ಲಿ ಹೊರ ನಡೆಯುವುದು ಎಷ್ಟು ಸರಿ ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.

ಆರ್ಚರ್​ ಅದೃಷ್ಟವಂತರು ಐಪಿಎಲ್‌ ಆಡದಿದ್ದರೂ ತನ್ನ ಸಂಪೂರ್ಣ ವೇತನ ಪಡೆಯುತ್ತಾರೆ. ಆದರೆ ಅವರು ತನ್ನ ನೆಚ್ಚಿನ ಚಾರಿಟಿಗೆ ಅರ್ಧ ವೇತನವನ್ನು ನೀಡುವುದು ಒಳ್ಳೆಯದು ಎಂದಿದ್ದಾರೆ. ಮತ್ತೊಮ್ಮೆ ಹೇಳುತ್ತೇನೆ. ದೇಶಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಉತ್ತಮ. ಆದರೆ ಅರ್ಧಕ್ಕೆ ತೊರೆಯುವುದು ಎಷ್ಟು ಸರಿ? ಒಂದು ವೇಳೆ ಆಡಿದರೆ ಸಂಪೂರ್ಣ ಐಪಿಎಲ್​ ಆಡಿಯೇ ಹೋಗಬೇಕು. ಒಂದು ವೇಳೆ ತಂಡವು ಪ್ಲೇ ಆಫ್​ಗೆ ಪ್ರವೇಶಿಸಲು ವಿಫಲರಾದರೆ, ಒಂದು ವಾರ ಮುಂಚಿತವಾಗಿಯೇ ಹೋಗಬಹುದು ಎಂದಿದ್ದಾರೆ.