ಕನ್ನಡ ಸುದ್ದಿ  /  Sports  /  Reply Of Ishan Kishan To Rohit On Double Century Question

Rohit and Kishan: 'ದ್ವಿಶತಕ ಗಳಿಸಿದರೂ ನೀವು ಮೂರು ಪಂದ್ಯ ಆಡಲಿಲ್ಲ'; ರೋಹಿತ್‌ಗೆ ಕಿಶಾನ್ ಕೊಟ್ರು ನೋಡಿ ಉತ್ತರ

ದ್ವಿಶತಕ ಸಿಡಿಸಿದ ಬಳಿಕವೂ ನೀನೇಕೆ ಮುಂದಿನ ಮೂರು ಪಂದ್ಯಗಳಲ್ಲಿ ಆಡಿಲ್ಲ ಎಂದು ಇಶಾನ್‌ ಬಳಿ ರೋಹಿತ್‌ ಪ್ರಶ್ನಿಸಿದ್ದಾರೆ. ಇದಕ್ಕೆ ಕಿಶನ್‌ ಉತ್ತರಿಸಿದ್ದು ಹೀಗೆ…

ಶುಭಮನ್ ಗಿಲ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್
ಶುಭಮನ್ ಗಿಲ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ (BCCI/screengrab)

ರಾಯಪುರದಲ್ಲಿ ಶನಿವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್‌ ಇಂಡಿಯಾ ಕಣಕ್ಕಿಳಿಯಲಿದೆ. ಆ ವೇಳೆಗೆ ಟೀಂ ಇಂಡಿಯಾದಲ್ಲಿ ಮೂವರು ದ್ವಿಶತಕ ಗಳಿಸಿದ ಆಟಗಾರರಿರುತ್ತಾರೆ. ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್. ಮತ್ತೊಂದೆಡೆ ವಿರಾಟ್ ಕೊಹ್ಲಿಯು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಏಕದಿನ ಶತಕಗಳ ದಾಖಲೆಯನ್ನು ಮುರಿಯಲು ಕೇವಲ ನಾಲ್ಕು ಶತಕಗಳಷ್ಟು ದೂರದಲ್ಲಿದ್ದಾರೆ.

ಏಕದಿನದಲ್ಲಿ ದ್ವಿಶತಕ ಸಿಡಿಸಿದ ಭಾರತೀಯ ಪುರುಷ ಕ್ರಿಕೆಟಿಗರ ಪಟ್ಟಿಗೆ, ಗಿಲ್ ನಿನ್ನೆಯಷ್ಟೇ ಸೇರ್ಪಡೆಯಾಗಿದ್ದಾರೆ. ಅಂದರೆ, ಈಗ ಒಟ್ಟು ಐವರು ಭಾರತೀಯರು ದ್ವಿಶತಕ ಗಳಿಸಿದಂತಾಗಿದೆ. ಅದರಲ್ಲಿ ರೋಹಿತ್‌ ಒಬ್ಬರೇ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.

ತಮ್ಮ 23ನೇ ವಯಸ್ಸಿನಲ್ಲಿ, ಬಲಗೈ ಆಟಗಾರ ಗಿಲ್ 50 ಓವರ್ ಕ್ರಿಕೆಟ್‌ನಲ್ಲಿ ದಾಖಲೆ ಬರೆದಿದ್ದಾರೆ. ಕಳೆದ ತಿಂಗಳು ತಮ್ಮ 24ನೇ ವಯಸ್ಸಿನಲ್ಲಿ ಬಾಂಗ್ಲಾದೇಶದ ವಿರುದ್ಧ ದ್ವಿಶತಕ ಸಿಡಿಸಿದ್ದ ಅವರ ಸ್ನೇಹಿತ ಇಶಾನ್ ಕಿಶನ್ ಅವರ ದಾಖಲೆಯನ್ನು ಗಿಲ್‌ ಮುರಿದಿದ್ದಾರೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಗಳಿಸಿದ ತಕ್ಷಣ, ಕಿಶನ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಯಿತು. ಎಡಗೈ ಆಟಗಾರ ಗಿಲ್ ಅವರಿಗೆ ಆದ್ಯತೆ ನೀಡಿದ್ದರಿಂದ, ಸಂಪೂರ್ಣ ಶ್ರೀಲಂಕಾ ಸರಣಿಯಲ್ಲಿ ಭಾರತ ಪರ ಕಿಶನ್ ಆಡಲಿಲ್ಲ. ಕೆ ಎಲ್‌ ರಾಹುಲ್ ವೈಯಕ್ತಿಕ ಕಾರಣಗಳಿಂದ ಮೂರು ಪಂದ್ಯಗಳ ಕಿವೀಸ್‌ ಸರಣಿಗೆ ಅಲಭ್ಯರಾದ ಬಳಿಕ, ಕಿಶನ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಆದರೂ, ಕಿಶನ್‌ ಬೇಗನೆ ವಿಕೆಟ್‌ ಕಳೆದುಕೊಂಡರು.

ಭಾರತವು 8 ವಿಕೆಟ್‌ಗೆ 349 ರನ್ ಗಳಿಸುವಲ್ಲಿ ಗಿಲ್‌ ಕೊಡುಗೆ ಸಿಂಹಪಾಲು. ಒಂದು ಕಡೆಯಲ್ಲಿ ವಿಕೆಟ್‌ಗಳು ಪತನವಾಗುತ್ತಾ ಹೋದರೂ, ಗಿಲ್ ಮಾತ್ರ ಸ್ಫೋಟಕ ಆಟ ಮುಂದುವರೆಸಿದರು. ಕೇವಲ 149 ಎಸೆತಗಳಲ್ಲಿ 208 ರನ್ ಗಳಿಸಿ ಮಿಂಚಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಭರ್ಜರಿ ಸಿಕ್ಸರ್ ಮತ್ತು 19 ಬೌಂಡರಿಗಳು ಸೇರಿವೆ.

ಈ ವೇಳೆ ಇಶಾನ್‌ ಬಳಿ ಪ್ರಶ್ನಿಸಿದ ರೋಹಿತ್‌, ದ್ವಿಶತಕ ಸಿಡಿಸಿದ ಬಳಿಕವೂ ನೀನೇಕೆ ಮುಂದಿನ ಮೂರು ಪಂದ್ಯಗಳಲ್ಲಿ ಆಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕಿಶನ್‌, ಅರೆ, ನಾಯಕ ನೀವೇ ಅಲ್ವಾ ಎಂದು ಮರು ಪ್ರಶ್ನೆ ಕೇಳಿದ್ದಾರೆ. ಇದು ಮೂವರು ಭಾರತೀಯ ಕ್ರಿಕೆಟಿಗರನ್ನು ನಗೆಗಡಲಲ್ಲಿ ತೇಲಿಸಿತು.

ಮೂವರು ಕ್ರಿಕೆಟಿಗರ ಸಂಭಾಷಣೆ ಹೀಗಿದೆ...

ರೋಹಿತ್ : ಇಶಾನ್, ಯಾರ್ ಆಪ್ನೆ 200 ಬನಾಕೆ 3 ಮ್ಯಾಚ್ ನಹೀ ಖೇಲಾ. (ಇಶಾನ್, ನೀವು 200 ರನ್ ಗಳಿಸಿದ್ದರೂ ಮೂರು ಪಂದ್ಯಗಳಲ್ಲಿ ಆಡಲಿಲ್ಲ).

ಇಶಾನ್‌: "ಭೈಯಾ ಕ್ಯಾಪ್ಟನ್ ತೋ ಆಪ್ ಹೋ (ಅಣ್ಣಾ, ನಾಯಕ ನೀವೇ ಅಲ್ವಾ).

(ಗಿಲ್ ಮತ್ತು ರೋಹಿತ್‌ ನಗು)

ಇಶಾನ್‌: "ಬಟ್‌ ಥೀಕ್ ಹೈ ಸಬ್ ಚೀಜ್ ಸೀಖ್‌ ಮಿಲ್ತಿ ಹೈ. (ಪರವಾಗಿಲ್ಲ. ಇವುಗಳಿಂದ ಬಹಳಷ್ಟು ಕಲಿಯಬಹುದು).

ರೋಹಿತ್ : ಆಪ್ಕೋ 4 ನಂಬರ್ ಪೆ ಬ್ಯಾಟಿಂಗ್ ಕರ್ನಾ ಅಚ್ಚಾ ಲಗ್ತಾ ಹೈ? (ನಿಮಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಷ್ಟವಾಗುತ್ತಾ?).

ಇಶಾನ್‌: "ಬಹೂತ್ ಅಚ್ಚಾ ಲಗ್ತಾ ಹೈ, ಐಸಾ ಕುಚ್ ನಹೀ ಹೈ (ಹಾಗೇನೂ ಅಲ್ಲ, ನಾನು ನಿಜವಾಗಿಯೂ ಇಷ್ಟಪಡುತ್ತೇನೆ).