ಕನ್ನಡ ಸುದ್ದಿ  /  Sports  /  Sophia Dunkley Hits Fastest Fifty In Wpl Against Royal Challengers Bangalore Women

Women's Premier League: ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಗುಜರಾತ್ ಆಟಗಾರ್ತಿ; ಆರ್‌ಸಿಬಿ ಮುಂದೆ ಬೃಹತ್ ಗುರಿ

ಕೇವಲ 18 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ಡಂಕ್ಲಿ ಅಂತಿಮವಾಗಿ 28 ಎಸೆತಗಳಲ್ಲಿ 65 ರನ್‌ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ಬಲ್ಲಿ 11 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ ಸೇರಿತ್ತು.

ಸೋಫಿಯ ಡಂಕ್ಲಿ
ಸೋಫಿಯ ಡಂಕ್ಲಿ (WPL twitter)

ಮುಂಬೈ: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಇಂದಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಗುಜರಾತ್‌ ಜೈಂಟ್ಸ್‌ ದೊಡ್ಡ ಮೊತ್ತದ ಸವಾಲು ನೀಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ತಂಡವು ಆರ್‌ಸಿಬಿಗೆ 202 ರನ್‌ಗಳ ಗುರಿ ನೀಡಿದೆ. ಈ ನಡುವೆ, ಗುಜರಾತ್‌ ಆಟಗಾರ್ತಿ ಸೋಫಿಯ ಡಂಕ್ಲಿ ಡಬ್ಲ್ಯೂಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.

ಕೇವಲ 18 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ಡಂಕ್ಲಿ ಅಂತಿಮವಾಗಿ 28 ಎಸೆತಗಳಲ್ಲಿ 65 ರನ್‌ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ ಸೇರಿತ್ತು. ಕಡಿಮೆ ಎಸೆತಗಳಲ್ಲಿ ವೇಗವಾಗಿ ಅರ್ಧಶತಕ ಪೂರೈಸುವ ಮೂಲಕ, ಡಬ್ಲ್ಯೂಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಗೆ ಡಂಕ್ಲಿ ಪಾತ್ರರಾದರು.

ಮತ್ತೊಂದೆಡೆ ಗುಜರಾತ್‌ ತಂಡವು ದೊಡ್ಡ ಮೊತ್ತ ಗಳಿಸುವಲ್ಲಿ ಭಾರತದ ಆಟಗಾರ್ತಿ ಹರ್ಲೀನ್‌ ಡಿಯೋಲ್‌ ಕೂಡಾ ಕಾರಣರಾದರು. 45 ಎಸೆತಗಳನ್ನು ಎದುರಿಸಿದ ಆಟಗಾರ್ತಿ 9 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 67 ರನ್‌ ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಆರಂಭದಿದಂಲೂ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಗುಜರಾತ್‌, ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿದೆ. ಆ ಮೂಲಕ ಆರ್‌ಸಿಬಿ ತಂಡಕ್ಕೆ ಭರ್ಜರಿ 202 ರನ್‌ಗಳ ಗುರಿ ನೀಡಿದೆ.

ಮೊದಲೆರಡು ಪಂದ್ಯಗಳನ್ನು ಸೋತಿರುವ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೂ ಈ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಟೂರ್ನಿಯಲ್ಲಿ ಜೀವಂತವಾಗಿ ಉಳಿಯಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಎರಡೂ ತಂಡಗಳು ಸಿಲುಕಿವೆ. ಅದರಂತೆಯೇ ಗುಜರಾತ್‌ ತಂಎವು ಈಗಾಗಲೇ ಬೃಹತ್‌ ಮೊತ್ತ ದಾಖಲಿಸಿದೆ. ಹೀಗಾಗಿ ಬೆಂಗಳೂರು ತಂಡವು ತನ್ನ ಸಾಮರ್ಥ್ಯ ಪ್ರದರ್ಶಿಸಬೇಕಿದೆ.

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಇಂದಿನ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಎರಡು ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಸತತ ಎರಡು ಪಂದ್ಯಗಳಲ್ಲೂ ಭಾರಿ ಅಂತರದಿಂದ ಸೋತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಅದೇ ರೀತಿಯ ಫಲಿತಾಂಶ ಕಂಡಿರುವ ಗುಜರಾತ್‌ ಜೈಂಟ್ಸ್‌ ಸವಾಲೆಸೆಯಲಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ