ಕನ್ನಡ ಸುದ್ದಿ  /  ಕ್ರೀಡೆ  /  Sa Vs Wi: 2,625 ದಿನ, 7 ವರ್ಷಗಳ ಬಳಿಕ ಬವುಮಾ ಶತಕ.! ಮಗನಿಗೆ ಸೆಲ್ಯೂಟ್​​​​​ ಹೊಡೆದ ತಂದೆ.!

SA vs WI: 2,625 ದಿನ, 7 ವರ್ಷಗಳ ಬಳಿಕ ಬವುಮಾ ಶತಕ.! ಮಗನಿಗೆ ಸೆಲ್ಯೂಟ್​​​​​ ಹೊಡೆದ ತಂದೆ.!

Temba Bavuma: ಸೌತ್​ ಆಫ್ರಿಕಾದ ನಾಯಕ ಟೆಂಬಾ ಬವುಮಾ ನಿನ್ನೆ ನೂರರ ಗಡಿ ದಾಟಿ ಬ್ಯಾಟ್​​​ ಮೇಲೆತ್ತಿ ಸಂಭ್ರಮಿಸಿದ್ದು, ಬರೋಬ್ಬರಿ 7 ವರ್ಷ 2 ತಿಂಗಳ ನಂತರ ಎಂಬುದು ವಿಶೇಷ. 2016ರಲ್ಲಿ ಕೊನೆಯ ಬಾರಿಗೆ ಟೆಸ್ಟ್​ ಶತಕ ಸಿಡಿಸಿದ್ದ ಕ್ಯಾಪ್ಟನ್​​, ಆ ಬಳಿಕ ಇದೇ ಮೊದಲ ಬಾರಿಗೆ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ.

ಬವುಮಾ ಶತಕ ಸಂಭ್ರಮಿಸಿದ ತಂದೆ
ಬವುಮಾ ಶತಕ ಸಂಭ್ರಮಿಸಿದ ತಂದೆ

32 ರನ್​​ಗಳಿಗೆ 3 ವಿಕೆಟ್​.. ಇದು ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ದ್ವಿತೀಯ ಇನ್ನಿಂಗ್ಸ್​​ನಲ್ಲಿ ಸೌತ್​ ಆಫ್ರಿಕಾ ಸಂಕಷ್ಟದ ಪರಿಸ್ಥಿತಿ. ಹರಿಣಗಳ ಪಾಲಿಗೂ ಈ ಟೆಸ್ಟ್​​ ಸೋಲುತ್ತೇವೆ ಎಂಬ ಭೀತಿ ಅದಾಗಲೇ ಮೂಡಿತ್ತು. ಆದರೆ, ನಾಯಕ ಟೆಂಬಾ ಬವುಮಾ ಈ ಆತಂಕ ದೂರ ಮಾಡಿದರು. ಅಜೇಯ ಅಮೋಘ ಶತಕ ಸಿಡಿಸಿ, ಭರ್ಜರಿ ಮುನ್ನಡೆ ತಂದುಕೊಟ್ಟರು. ಅಷ್ಟೇ ಅಲ್ಲ, ಸೌತ್​ ಆಫ್ರಿಕಾ ಪರ ಅಪರೂಪದ ದಾಖಲೆಯೊಂದನ್ನೂ ಬರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಜೊಹಾನ್ಸ್​​ಬರ್ಗ್​ನಲ್ಲಿ ವೆಸ್ಟ್​ ಇಂಡೀಸ್​ ಎದುರು ನಡೆಯುತ್ತಿರುವ 2ನೇ ಟೆಸ್ಟ್​​ ಪಂದ್ಯದಲ್ಲಿ ಸೌತ್​ ಆಫ್ರಿಕಾ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿತು. ಮೊದಲ ಇನ್ನಿಂಗ್ಸ್​​ನಲ್ಲಿ ಏಡನ್​ ಮಾರ್ಕರಮ್​ (96) ಮತ್ತು ಟೋನಿ ಡಿ ಜೊರ್ಜಿ (85) ಅದ್ಭುತ ಅರ್ಧಶತಕಗಳ ನೆರವಿನಿಂದ 320 ರನ್ ​ಗಳಿಸಿ ಆಲೌಟ್​ ಆಯಿತು. ಅಲ್ಜಾರಿ ಜೋಸೆಫ್​​, ಕೈಲ್​ ಮೇಯರ್ಸ್​​ ಮತ್ತು ಗುಡಕೇಶ್​ ಮೋಟಿ ತಲಾ 3 ವಿಕೆಟ್​ ಪಡೆದು ಮಿಂಚಿದರು.

ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್​​, ಜೇಸನ್​ ಹೋಲ್ಡರ್​​ (81 *) ಅಬ್ಬರದ ನಡುವೆಯೂ 251 ಕ್ಕೆ ಕುಸಿತ ಕಂಡಿತು. 69 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಸೌತ್​ ಆಫ್ರಿಕಾ ಆರಂಭಿಕ ಸಂಕಷ್ಟಕ್ಕೆ ಸಿಲುಕಿತು. 32 ರನ್​ಗಳಿಗೆ ಪ್ರಮುಖ 3 ವಿಕೆಟ್​ಗಳು ಕಳೆದುಹೋದವು. ಆದರೆ ಆಗ ನಾಯಕ ಟೆಂಬಾ ಬವುಮಾ, ವಾರಿಯರ್​​​ನಂತೆ ತಂಡದ ನೆರವಿಗೆ ನಿಂತರು. ಸತತ ವಿಕೆಟ್​ಗಳ ನಡುವೆಯೂ ಏಕಾಂಕಿಯಾಗಿ ತಂಡವನ್ನು ಮುನ್ನಡೆಸಿದ ಬವುಮಾ, ಶತಕ ಸಿಡಿಸಿ ಮಿಂಚಿದರು.

7 ವರ್ಷಗಳ ನಂತರ ಶತಕ ಸಿಡಿಸಿದ ಬವುಮಾ.!

ಹೌದು.! ಸೌತ್​ ಆಫ್ರಿಕಾದ ನಾಯಕ ಟೆಂಬಾ ಬವುಮಾ ನಿನ್ನೆ ನೂರರ ಗಡಿ ದಾಟಿ ಬ್ಯಾಟ್​​​ ಮೇಲೆತ್ತಿ ಸಂಭ್ರಮಿಸಿದ್ದು, ಬರೋಬ್ಬರಿ 7 ವರ್ಷ 2 ತಿಂಗಳ ನಂತರ ಎಂಬುದು ವಿಶೇಷ. 2016ರಲ್ಲಿ ಕೊನೆಯ ಬಾರಿಗೆ ಟೆಸ್ಟ್​ ಶತಕ ಸಿಡಿಸಿದ್ದ ಕ್ಯಾಪ್ಟನ್​​, ಆ ಬಳಿಕ ಇದೇ ಮೊದಲ ಬಾರಿಗೆ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಜೀವ ತುಂಬಿದ ಬವುಮಾ, 356 ರನ್​ಗಳ ಮುನ್ನಡೆ ತಂದು ಕೊಟ್ಟಿದ್ದಾರೆ.

ಬವುಮಾ ಅಜೇಯ 171 ರನ್​​​​​​​..!

ಬಾಹುಬಲಿಯಂತೆ ಏಕಾಂಗಿಯಾಗಿ ತಂಡಕ್ಕೆ ನೆರವಾದ ಬವುಮಾ, ತಂಡಕ್ಕೆ ಅದ್ಭುತ ಮುನ್ನಡೆ ತಂದುಕೊಟ್ಟಿದ್ದಲ್ಲದೆ, ತಾನು ಕೂಡ ಕ್ರೀಸ್​​​​ನಲ್ಲಿ ಉಳಿದುಕೊಂಡಿದ್ದಾರೆ. 275 ಎಸೆತಗಳನ್ನು ಎದುರಿಸಿರುವ ಬಲಗೈ ಆಟಗಾರ, 20 ಬೌಂಡರಿಗಳಿಂದ ಅಜೇಯ 171 ರನ್​ ಸಿಡಿಸಿದ್ದಾರೆ. ಚೊಚ್ಚಲ ದ್ವಿಶತಕದ ಕನಸಿನಲ್ಲಿರುವ ಬವುಮಾ, ಇಂದು ಎಷ್ಟು ರನ್​ ಕಲೆ ಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

2016ರಲ್ಲಿ ಇಂಗ್ಲೆಂಡ್​ ವಿರುದ್ಧ ಶತಕ..!

7 ವರ್ಷ 2 ತಿಂಗಳ ಹಿಂದೆ ಅಂದರೆ, ಜನವರಿ 2, 2016ರಲ್ಲಿ ಟೆಂಬಾ ಬವುಮಾ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಕೊನೆಯ ಶತಕ ಸಿಡಿಸಿದ್ದರು. ಅದಾದ ಬಳಿಕ 50, 60, 70, 80, 90ರ ಗಡಿ ದಾಟಿದರೂ, 100 ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಅಂತೂ ಇಂತೂ 7 ವರ್ಷಗಳ ಶತಕದ ಬರ ನೀಗಿಸಿಕೊಂಡಿದ್ದಾರೆ. ಅಂದು ಇಂಗ್ಲೆಂಡ್​ ವಿರುದ್ಧ ಅಜೇಯ 102 ರನ್​ ಬಾರಿಸಿದ್ದರು. ಈ ಪಂದ್ಯ ಕೇಪ್​ಟೌನ್​​ನಲ್ಲಿ ನಡೆದಿತ್ತು.

ನಾಯಕನಾಗಿ ಮೊದಲ ಶತಕ;

ಸೆಲ್ಯೂಟ್​ ಮಾಡಿದ ತಂದೆ!

ಇದೇ ವರ್ಷ ಟೆಸ್ಟ್​ ಕ್ಯಾಪ್ಟನ್​ ಆಗಿ ನೇಮಕಗೊಂಡರು. ಡೀನ್​ ಎಲ್ಗರ್​ ಅವರಿಂದ ನಾಯಕತ್ವ ವಹಿಸಿಕೊಂಡ ಬವುಮಾ, ತನ್ನ ಮೊದಲ ಟೆಸ್ಟ್​ ಸರಣಿಯ ಮೊದಲ ಟಾಸ್ಕ್​​ನಲ್ಲೇ ಗೆದ್ದ ಬವುಮಾ ತನ್ನ 2ನೇ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ. ನಾಯಕನಾಗಿ ಶತಕ ಸಿಡಿಸಿದ ನಂತರ ಸ್ಟೇಡಿಯಂಗೆ ಹಾಜರಾಗಿದ್ದ ಬವುಮಾರ ತಂದೆ ಎದ್ದು ನಿಂತು ಸೆಲ್ಯೂಟ್​ ಮಾಡಿದರು. ಇದು ತುಂಬಾ ವಿಶೇಷವಾಗಿತ್ತು.