ಕನ್ನಡ ಸುದ್ದಿ  /  ಕ್ರೀಡೆ  /  Wrestlers Protest: ಬೇಟಿ ಬಚಾವೋ, ಬೇಟಿ ಪಡಾವೋ ಅಂತೀರಿ; ಇದೇನಾ? ನೆಟ್ಟಿಗರು ಗರಂ, ನಮ್ಮ ಮನ್​​ ಕಿ ಬಾತ್​ ಕೇಳಿ ಎಂದ ಕುಸ್ತಿಪಟುಗಳು

Wrestlers Protest: ಬೇಟಿ ಬಚಾವೋ, ಬೇಟಿ ಪಡಾವೋ ಅಂತೀರಿ; ಇದೇನಾ? ನೆಟ್ಟಿಗರು ಗರಂ, ನಮ್ಮ ಮನ್​​ ಕಿ ಬಾತ್​ ಕೇಳಿ ಎಂದ ಕುಸ್ತಿಪಟುಗಳು

ದೆಹಲಿಯ ಜಂತರ್​ ಮಂತರ್​ನಲ್ಲಿ ಧರಣಿ ಹಮ್ಮಿಕೊಂಡಿರುವ ಕುಸ್ತಿಪಟುಗಳು ಅಹವಾಲು ಸ್ವೀಕರಿಸಲು ಬಾರದಿರುವ ಪ್ರಧಾನಿ ಮೋದಿ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಚುನಾವಣೆ ಪ್ರಚಾರಕ್ಕೆ ಸೈ ಎನ್ನುವವರು, ಹೆಣ್ಣು ಮಕ್ಕಳ ಸಮಸ್ಯೆಗೆ ಯಾಕೆ ಒತ್ತು ಕೊಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ನರೇಂದ್ರ ಮೋದಿ
ನರೇಂದ್ರ ಮೋದಿ

ಲೈಂಗಿಕ ಕಿರುಕುಳ (Sexual Harassment) ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್​​ ಮುಖ್ಯಸ್ಥ ಬ್ರಿಜ್​​ ಭೂಷಣ್​​ ಶರಣ್​ ಸಿಂಗ್ (Wrestling Federation of India (WFI) president Brij Bhushan Singh)​​ ವಿರುದ್ಧ ಜಂತರ್​ ​ಮಂತರ್​​ನಲ್ಲಿ ಕುಸ್ತಿ ಪಟುಗಳು ಪ್ರತಿಭಟನೆ (Wrestlers Protest) ನಡೆಸುತ್ತಿದ್ದಾರೆ. ನ್ಯಾಯಕ್ಕಾಗಿ ಹಗಲಿರುಳು ಹೋರಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಭಾರತದ ಗರಿಮೆ ಹೆಚ್ಚಿಸಿದ್ದ ಹೆಣ್ಣುಮಕ್ಕಳು ಬೀದಿಯಲ್ಲಿ ಧರಣಿ ಹಮ್ಮಿಕೊಂಡಿದ್ದಾರೆ. ಕ್ರೀಡಾ ಸಚಿವ ಅನುರಾಗ್​ ಸಿಂಗ್​ ಠಾಕೂರ್​​ (Anurag Singh Thakur) ಅವರು ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾರತೀಯ ಒಲಿಂಪಿಕ್‌ ಸಂಸ್ಥೆಯ ಮುಖ್ಯಸ್ಥೆ ಪಿಟಿ ಉಷಾ (Indian Olympic Association (IOA) President PT Usha) ಅವರು ಈ ಕುಸ್ತಿಪಟುಗಳ ಪ್ರತಿಷ್ಠೆಯ ಹೋರಾಟವನ್ನು ಟೀಕಿಸಿದ್ದಾರೆ. ಇವರು ಮಾಡುತ್ತಿರುವ ಪ್ರತಿಭಟನೆ ದೇಶಕ್ಕೆ ಕಳಂಕ ತರುತ್ತಿದೆ. ಪ್ರತಿಭಟನೆ ನಡೆಸುವ ನಿರ್ಧಾರಕ್ಕೂ ಮುನ್ನ ನಮ್ಮೊಂದಿಗೆ ಚರ್ಚಿಸಬೇಕಿತ್ತು. ಫೆಡರೇಷನ್​ ಹಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಪಿಟಿ ಉಷಾ ಅವರ ಹೇಳಿಕೆಗೆ ಭಾರಿ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ನಮಗೆ ಮಾದರಿ. ಆದರೆ ಒಬ್ಬ ಹೆಣ್ಣಾಗಿ, ಮತ್ತೊಬ್ಬ ಮಹಿಳಾ ಅಥ್ಲೀಟ್​​ನ ಸಮಸ್ಯೆ ಕೇಳುತ್ತಿಲ್ಲ ಎಂದು ಟೀಕಿಸಿದ್ದರು.

ಇದೇ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದಷ್ಟೇ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟು ಸಾಕ್ಷಿ ಮಲಿಕ್​​, ಪ್ರಧಾನಿ ಮೋದಿ ಸರ್​​​ 'ಬೇಟಿ ಬಚಾವೋ, ಬೇಟಿ ಪಡಾವೋ' ಎಂದು ‘ಮನ್​​ ಕಿ ಬಾತ್’​ ಮೂಲಕ ಹೇಳಿದ್ದಾರೆ. ಪ್ರತಿಯೊಬ್ಬರ ಮಾತನ್ನೂ ಆಲಿಸುತ್ತಾರೆ. ಆದರೆ ಅವರು ನಮ್ಮ ‘ಮನ್​​ ಕಿ ಬಾತ್’​ ಏಕೆ ಕೇಳುತ್ತಿಲ್ಲ. ಏಕೆ ಇದು ಸಾಧ್ಯವಾಗುತ್ತಿಲ್ಲ. ಪದಕ ಗೆದ್ದಾಗ ತುಂಬಾ ಗೌರವಿಸುತ್ತಾರೆ. ಆದರಿಂದು ನಮ್ಮ ಮಾತೇ ಕೇಳುತ್ತಿಲ್ಲ. ಅವರು ನಮ್ಮ ಮನ್​ ಕಿ ಬಾತ್​​​ ಕೇಳಬೇಕೆಂದು ಕೋರುತ್ತೇವೆ ಎಂದು ಹೇಳಿದ್ದಾರೆ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ (Sakshi Malik).

ಪ್ರಧಾನಿ ನಡೆಗೆ ಭಾರಿ ಟೀಕೆ

ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಪ್ರಧಾನಿ ಮೋದಿ ಅವರು ಹಿಂದಿದೆಯೇ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ನಾಳೆ, ನಾಡಿದ್ದು (ಏಪ್ರಿಲ್​ 29, 30) ಕೂಡ ಬಿಜೆಪಿ ಪರ ಮತಯಾಚನೆಗಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಬಾಕಿ ದಿನಗಳು ದೆಹಲಿಯಲ್ಲೇ ಇರುವ ಮೋದಿ ಅವರು, ದೆಹಲಿಯ ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಅಹವಾಲು ಮಾತ್ರ ಸ್ವೀಕರಿಸುತ್ತಿಲ್ಲ. ಇದೆಂಥಾ ಅನ್ಯಾಯ ಎಂದು ಟ್ವೀಟ್​​ಗಳಲ್ಲಿ ಟೀಕೆ ವ್ಯಕ್ತವಾಗಿದೆ. ಇದೇನಾ ಬೇಟಿ ಪಡಾವೋ, ಬೇಟಿ ಬಚಾವೋ ಅಂದರೆ ಎಂದು ಪ್ರಶ್ನಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರೂ ಅದರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡದಿರೋದು ಅಚ್ಚರಿ ಮೂಡಿಸಿದೆ.

ಆರೋಪ ಸುಳ್ಳು ಎಂದ ಬ್ರಿಜ್​ ಭೂಷಣ್​

ತಮ್ಮ ಮೇಲೆ ಕೇಳಿ ಬಂದಿರುವ ಆರೋಪ ಶುದ್ಧ ಸುಳ್ಳು. ನಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ನಾನು ಹೋರಾಟ ನಡೆಸುತ್ತೇನೆ ಎಂದು ಬಿಜೆಪಿ ಸಂಸದರೂ ಆಗಿರುವ ಅವರು ಹೇಳಿದ್ದಾರೆ. ಅಲ್ಲದೆ, ಅವರ ವಿಡಿಯೋ ಸಂದೇಶವೊಂದು ಕೂಡ ಬಿಡುಗಡೆಯಾಗಿದೆ. ನಾನು ಹೋರಾಟ ನಡೆಸಲು ಅಶಕ್ತ ಎನಿಸಿದಾಗ, ಬದುಕಲು ಇಷ್ಟಪಡುವುದಿಲ್ಲ. ಆಗ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದಿದ್ದಾರೆ.

ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿರುವ ಸಂತ್ರಸ್ತ ಕುಟುಂಬಗಳಿಗೆ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಪ್ರತಿಭಟನಾನಿರತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ (Bajrang Punia), ವಿನೇಶ್ ಫೋಗಟ್ (Vinesh Phogat), ಸಾಕ್ಷಿ ಮಲಿಕ್ (Sakshi Malik) ಸೇರಿದಂತೆ ಮತ್ತಿತರರು ಹೇಳಿದ್ದರು. ದೂರು ದಾಖಲಿಸಿದ್ದ ಅಪ್ರಾಪ್ತ ಸಂತ್ರಸ್ತೆಯರ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಮತ್ತು ದೂರನ್ನು ಹಿಂಪಡೆಯುವಂತೆ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಅವರು ಪ್ರತಿಭಟನಾನಿರತರಿಗೆ ಬೆಂಬಲ ನೀಡಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದ ಕುರಿತು ತನಿಖೆ ನಡೆಸಲು ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ (ಐಒಎ) ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು.