ಕನ್ನಡ ಸುದ್ದಿ  /  ಕ್ರೀಡೆ  /  Wrestlers Protest: ಗೂಂಡಾಗಿರಿ ಬಿಜೆಪಿಯನ್ನು ಓಡಿಸುವ ಸಮಯ ಬಂದಿದೆ; ಕುಸ್ತಿಪಟುಗಳ ಮೇಲೆ ಹಲ್ಲೆ ಬಳಿಕ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

Wrestlers Protest: ಗೂಂಡಾಗಿರಿ ಬಿಜೆಪಿಯನ್ನು ಓಡಿಸುವ ಸಮಯ ಬಂದಿದೆ; ಕುಸ್ತಿಪಟುಗಳ ಮೇಲೆ ಹಲ್ಲೆ ಬಳಿಕ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

Wrestlers Protest : ಕುಸ್ತಿಪಟುಗಳ ಮೇಲೆ ಪೊಲೀಸರು ಕುಡಿದು ಹಲ್ಲೆ ನಡೆಸಿದ ಬಳಿಕ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (Delhi CM Arvind Kejriwal)​​, ಬಿಜೆಪಿಯನ್ನು ಕಿತ್ತೊಗೆದು ಓಡಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ ಅರವಿಂದ್​ ಕೇಜ್ರಿವಾಲ್​
ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ ಅರವಿಂದ್​ ಕೇಜ್ರಿವಾಲ್​

ಭಾರತೀಯ ಕುಸ್ತಿ ಫೆಡರೇಷನ್​​ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಜಂತರ್​ ​ಮಂತರ್​ನಲ್ಲಿ ಪ್ರತಿಭಟನೆ ((Protest against Wrestling Federation of India chief Brij Bhushan Sharan Singh)) ನಡೆಸುತ್ತಿದ್ದರೆ, ದೆಹಲಿ ಪೊಲೀಸರು ಕುಡಿದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮನ್ನು ನಿಂದಿಸಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಗುರುವಾರ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ (Central Government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಹಂಕಾರಿ ಭಾರತೀಯ ಜನತಾ ಪಕ್ಷವು (Bharatiya Janata Party) ಗೂಂಡಾಗಿರಿ ಪ್ರಯೋಗ ಮಾಡುತ್ತಿದೆ. ಅದೇ ರೀತಿ ಇಡೀ ವ್ಯವಸ್ಥೆಯನ್ನೇ ತನ್ನ ಕಪಿಮುಷ್ಠಿಗೆ ಹಾಕಿಕೊಳ್ಳಲು ಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. ಬಿಜೆಪಿಯನ್ನು ಬೇರುಸಹಿತ ಕಿತ್ತೊಗೆಯುವುದು ಮಾತ್ರವಲ್ಲ, ಅವರನ್ನು ಓಡಿಸುವ ಸಮಯ ಬಂದಿದೆ. ನಾಗರಿಕರೇ ಎಚ್ಚೆತ್ತುಕೊಳ್ಳಿ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು (Aam Aadmi Party) ಸೂಚಿಸಿದ್ದಾರೆ.

Wrestlers Protest: ಗೂಂಡಾಗಿರಿ ಬಿಜೆಪಿಯನ್ನು ಓಡಿಸುವ ಸಮಯ ಬಂದಿದೆ; ಕುಸ್ತಿಪಟುಗಳ ಮೇಲೆ ಹಲ್ಲೆ ಬಳಿಕ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

ಇದನ್ನೂ ಓದಿ: Vinesh Phogat: ಪೊಲೀಸರು ಕುಡಿದು ಹಲ್ಲೆ ಮಾಡಿ ನಿಂದಿಸಿದ್ದಾರೆ; ಇದಕ್ಕೇನಾ ನಾವು ದೇಶಕ್ಕೆ ಪದಕ ಗೆದ್ದಿದ್ದು: ವಿನೇಶ್​ ಫೋಗಟ್​ ಕಣ್ಣೀರು

ಬುಧವಾರ ಸಂಜೆ ಪ್ರತಿಭಟನಾ ನಿರತ ಕುಸ್ತಿಪಟುಗಳು ಬಗ್ಗೆ ದೆಹಲಿ ಪೊಲೀಸರ ಅವಿವೇಕಿ ವರ್ತನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಆಘಾತಕ್ಕೊಳಗಾದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ನಾವು ಅಪರಾಧಿಗಳಲ್ಲ. ಅಂತಹ ಅಗೌರವಕ್ಕೆ ಅರ್ಹರಲ್ಲ. ನೀವು ನಮ್ಮನ್ನು ಕೊಲ್ಲಲು ಬಯಸಿದರೆ, ನಮ್ಮನ್ನು ಕೊಂದು ಬಿಡಿ ಎಂದು ಅಳುತ್ತಲೇ ಮಾಧ್ಯಮಗಳಿಗೆ ಹೇಳಿದ್ದರು.

ಇದೇ ಕಾರಣಕ್ಕಾಗಿಯೇ ನಾವು ದೇಶಕ್ಕಾಗಿ ಪದಕ ಗೆದ್ದಿರುವುದು? ನಾವು ಊಟವನ್ನೂ ಸರಿಯಾಗಿ ಮಾಡುತ್ತಿಲ್ಲ. ಪುರುಷನಿಗೆ ಮಹಿಳೆಯನ್ನು ನಿಂದಿಸುವ ಹಕ್ಕು ಇದೆಯೇ? ಈ ಪೊಲೀಸರು ಬಂದೂಕು ಹಿಡಿದಿದ್ದಾರೆ. ಅವರನ್ನು ನೋಡುತ್ತಿದ್ದರೆ ನಮ್ಮನ್ನು ಕೊಂದರೂ ಅಚ್ಚರಿ ಇಲ್ಲ. ಕೊಲ್ಲಬೇಕೆಂದರೆ ಕೊಂದುಬಿಡಿ. ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಎಲ್ಲಿ? ಪುರುಷ ಪೊಲೀಸರು ನಮ್ಮನ್ನು ಹೇಗೆ ತಳ್ಳುತ್ತಾರೆ. ನಾವು ಅಪರಾಧಿಗಳಲ್ಲ ಎಂದು ಪ್ರಶ್ನಿಸಿದರು.

ಫೋಗಟ್ ಅವರ ವಿಡಿಯೋಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ದೇಶದ ಚಾಂಪಿಯನ್ ಆಟಗಾರರೊಂದಿಗೆ ಹೀಗೆ ಅನುಚಿತ ವರ್ತನೆ ಮಾಡುತ್ತಿರುವುದು ತುಂಬಾ ದುಃಖ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿ ಇಡೀ ವ್ಯವಸ್ಥೆಯನ್ನು ಗೂಂಡಾಗಿರಿಯಿಂದ ನಡೆಸಲು ಬಯಸುತ್ತಿದೆ. ಇಡೀ ವ್ಯವಸ್ಥೆಯನ್ನೇ ಅಣಕಿಸಿದ್ದಾರೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ದೇಶದ ಎಲ್ಲ ಜನರಿಗೆ ನಾನು ಮನವಿ ಮಾಡುತ್ತೇನೆ. ಇನ್ನು ಬಿಜೆಪಿಯ ಗೂಂಡಾಗಿರಿಯನ್ನು ಸಹಿಸಬೇಡಿ. ಬಿಜೆಪಿಯನ್ನು ಬೇರು ಸಮೇತ ಕಿತ್ತೊಗೆದು ಓಡಿಸುವ ಸಮಯ ಬಂದಿದೆ ಎಂದು ಕೇಜ್ರಿವಾಲ್​ ಆಕ್ರೋಶ ಹೊರ ಹಾಕಿದ್ದಾರೆ.

ನೊಂದ ಕುಸ್ತಿಪಟುಗಳಿಗೆ ಬೆಂಬಲ ನೀಡಲು ಗುರುವಾರ ಬೆಳಗ್ಗೆ ಜಂತರ್ ಮಂತರ್‌ಗೆ ಆಗಮಿಸಿದ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು, ತನಗೆ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಪೊಲೀಸರು ಕುಡಿದು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಮಗೆ ಹೇಳಿದ್ದಾರೆ. ಅವರ ಸುರಕ್ಷತೆಯ ಬಗ್ಗೆ ನನಗೆ ಕಾಳಜಿ ಇದೆ. ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಅವರನ್ನು ಏಕೆ ರಕ್ಷಿಸುತ್ತಿದ್ದಾರೆ? ದೆಹಲಿ ಪೊಲೀಸರು ಅವರನ್ನು ಏಕೆ ಬಂಧಿಸುತ್ತಿಲ್ಲ? ಎಂದು ಸ್ವಾತಿ ಮಲಿವಾಲ್ ಪ್ರಶ್ನಿಸಿದ್ದಾರೆ.