badminton News, badminton News in kannada, badminton ಕನ್ನಡದಲ್ಲಿ ಸುದ್ದಿ, badminton Kannada News – HT Kannada

Latest badminton Photos

78 ನಿಮಿಷಗಳ ಕಾಲ ನಡೆದ ಸುದೀರ್ಘ ಹೋರಾಟದಲ್ಲಿ ಮೊದಲ ಗೇಮ್ ಅನ್ನು ನಿತೀಶ್ 31ನೇ ನಿಮಿಷದಲ್ಲಿ 21-14ರಿಂದ ಗೆದ್ದುಕೊಂಡರು. ಆದರೆ ಎರಡನೇ ಗೇಮ್ ಅನ್ನು 18-21 ಅಂತರದಿಂದ ಕಳೆದುಕೊಂಡರು. ಮೂರನೇ ಹಾಗೂ ನಿರ್ಣಾಯಕ ಗೇಮ್ ಅನ್ನು 23-21 ಅಂತರದಿಂದ ರೋಚಕವಾಗಿ ಗೆದ್ದುಕೊಂಡರು.

ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ನಿತೇಶ್ ಕುಮಾರ್; ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಬಂಗಾರ

Monday, September 2, 2024

ಲಕ್ಷ್ಯ ಸೇನ್ ಸೆಮಿಫೈನಲ್‌ ಪಂದ್ಯದಲ್ಲಿ ಸೋತರೂ ಇತಿಹಾಸ ನಿರ್ಮಿಸುವ ಅವಕಾಶ ಹೊಂದಿದ್ದಾರೆ. ಸೋಮವಾರ ಮಲೇಷ್ಯಾದ ಲಿ ಜಿಯಾ ವಿರುದ್ಧ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಅವರು ಸೆಣಸಲಿದ್ದಾರೆ. ಒಂದು ವೇಳೆ ಅಲ್ಲಿ ಗೆದ್ದರೆ, ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಒಲಿಂಪಿಕ್ಸ್:‌ ಸೆಮೀಸ್‌ನಲ್ಲಿ ಲಕ್ಷ್ಯ ಸೇನ್‌ಗೆ ಸೋಲು, ಕಂಚಿನ ಪದಕದ ಆಸೆ ಜೀವಂತ; ಲವ್ಲಿನಾ ಬೊರ್ಗೊಹೈನ್‌ಗೆ ನಿರಾಶೆ

Sunday, August 4, 2024

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್‌ ಆಟಗಾರ ಲಕ್ಷ್ಯ ಸೇನ್‌ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧದ ರೋಚಕ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಪಾತ್ರರಾದರು.

ಇತಿಹಾಸ ಬರೆದ ಲಕ್ಷ್ಯ ಸೇನ್; ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಭಾರತದ ಮೊದಲ ಆಟಗಾರ

Saturday, August 3, 2024

ಟೇಬಲ್‌ ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಅವರು ವಿಶ್ವದ 18ನೇ ಶ್ರೇಯಾಂಕಿತ ಫ್ರಾನ್ಸ್‌ನ ಆಟಗಾರ್ತಿ ಪ್ರಿತಿಕಾ ಪವಾಡೆ ವಿರುದ್ಧ 4-0 ಅಂತರದಲ್ಲಿ ನಿರಾಯಾಸ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಒಲಿಂಪಿಕ್ ಗೇಮ್ಸ್‌ನ ಸಿಂಗಲ್ಸ್ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ನಡುವೆ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರ ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದೆ,

ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಮಣಿಕಾ ಬಾತ್ರಾ; 3ನೇ ದಿನದಾಟದಲ್ಲಿ ಭಾರತದ ಫಲಿತಾಂಶಗಳ ಚಿತ್ರನೋಟ

Tuesday, July 30, 2024

ಮಹಿಳೆಯರ 100 ಮೀಟರ್ ಹರ್ಡಲ್ಸ್ ಹೀಟ್ 1ರಲ್ಲಿ ಮೊದಲ ಸ್ಥಾನ ಗಳಿಸಿದ ಚೀನಾದ ಲಿನ್ ಯುವೇಯ್ ಅವರನ್ನು ಎರಡನೇ ಸ್ಥಾನ ಪಡೆದ ಭಾರತದ ಜ್ಯೋತಿ ಯರ್ರಾಜಿ ಅಭಿನಂದಿಸಿ ತಬ್ಬಿಕೊಂಡರು.

ಏಷ್ಯನ್‌ ಗೇಮ್ಸ್ 7ನೇ ದಿನದಾಟದಲ್ಲಿ ಭಾರತದ ಪ್ರದರ್ಶನ ಹೇಗಿತ್ತು; ಗೆದ್ದ ಪದಕಗಳೆಷ್ಟು

Saturday, September 30, 2023

ತನ್ನ ಬ್ಯಾಡ್ಮಿಂಟನ್​ ಕರಿಯರ್​ನಲ್ಲಿ ಕೆರೊಲಿನಾ ಮರಿನ್, ಅದ್ಭುತ ಯಶಸ್ಸು ಕಂಡಿದ್ದಾರೆ. ಸಾಕಷ್ಟು ಪದಕಗಳನ್ನು ಗೆದ್ದಿದ್ದಾರೆ. ಹಲವು ಪ್ರತಿಷ್ಠಿತ ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್​ ಕೂಡ ಆಗಿದ್ದಾರೆ. ಮರಿನ್ ಆಸ್ತಿ ಮೌಲ್ಯವು, 3.5 ಮಿಲಿಯನ್​ ಡಾಲರ್​. ಅಂದರೆ ಅಂದಾಜು 28 ಕೋಟಿ ಇದೆ.

Carolina Marin; ಬಿಕಿನಿಯಲ್ಲಿ ಕೆರೊಲಿನಾ ಮರಿನ್ ಬರ್ತ್​ಡೇ ಸೆಲೆಬ್ರೆಟ್; ಪಿವಿ ಸಿಂಧು ಸೋಲಿಸಿ ಚಿನ್ನ ಗೆದ್ದಿದ್ದ ಆಟಗಾರ್ತಿಯ ಫೋಟೋ ಗ್ಯಾಲರಿ

Friday, July 7, 2023

1995ರಲ್ಲಿ ಸಿಂಧು ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಜನಿಸಿದರು. ಅವರು 2011ರಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದರು. ಅಂದಿನಿಂದ, ಸಿಂಧು ದೇಶದ ಪ್ರಮುಖ ಮಹಿಳಾ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಬ್ಯಾಡ್ಮಿಂಟನ್‌ನ ಬಹುತೇಕ ಎಲ್ಲಾ ಪ್ರಮುಖ ಟೂರ್ನಿಗಳಲ್ಲೂ ಸಿಂಧು ಪದಕಗಳನ್ನು ಗೆದ್ದಿದ್ದಾರೆ.

PV Sindhu: 28ನೇ ವರ್ಷಕ್ಕೆ ಕಾಲಿಟ್ಟ ಚಿನ್ನದ ಹುಡುಗಿ; ಪಿವಿ ಸಿಂಧು ದಾಖಲೆಗಳು ಒಂದೆರಡಲ್ಲ

Thursday, July 6, 2023

ಭಾರತದ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು (PV Sindhu), ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ 2023ರ ( Madrid Spain Masters 2023) ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್​​ನಲ್ಲಿ ಸೋಲು ಅನುಭವಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ ಭಾರತದ ಷಟ್ಲರ್ ನೇರ ಗೇಮ್‌ಗಳಿಂದ ಸೋತು ರನ್ನರ್​​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡರು.

Madrid Spain Masters 2023 Final: ರನ್ನರ್​​​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪಿವಿ ಸಿಂಧು

Sunday, April 2, 2023

ಇದಲ್ಲದೇ 2010ರಲ್ಲಿ ಸಿಂಗಾಪುರ ಓಪನ್, ಇಂಡಿಯಾ ಓಪನ್ ಗ್ರ್ಯಾಂಡ್ ಪ್ರಿ ಗೋಲ್ಡ್, ಹಾಂಕಾಂಗ್ ಸೂಪರ್ ಸಿರೀಸ್ ನಂತಹ ಪ್ರಮುಖ ಟೂರ್ನಿಗಳನ್ನು ಸೈನಾ ಗೆದ್ದಿದ್ದಾರೆ.

Saina Nehwal Photos: ಬ್ಯಾಡ್ಮಿಂಟನ್ ತಾರೆ ಸೈನಾ ಹೆಸರಲ್ಲಿರುವ ಈ ವಿಶೇಷ ದಾಖಲೆಗಳ ಬಗ್ಗೆ ನೀವೂ ತಿಳ್ಕೊಳಿ

Wednesday, March 29, 2023

ಫೈನಲ್‌ನಲ್ಲಿ ಭಾರತವು 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಮಣಿಸಿ ಥಾಮಸ್ ಕಪ್ ಮುಡಿಗೇರಿಸಿಕೊಂಡಿತು. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿತು. ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಮತ್ತು ಕಿಡಂಬಿ ಶ್ರೀಕಾಂತ್ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದರು. ಈ ಮೂಲಕ ಭಾರತ ಇನ್ನೂ ಎರಡು ಪಂದ್ಯ ಬಾಕಿ ಇರುವಂತೆಯೇ ಕಪ್‌ ಎತ್ತಿಕೊಂಡಿತು.

ಚೊಚ್ಚಲ ಥಾಮಸ್‌ ಕಪ್‌ ಗೆದ್ದ ಭಾರತದ ಬ್ಯಾಡ್ಮಿಂಟನ್‌ ಪಯಣ ಹೀಗಿತ್ತು…

Tuesday, May 17, 2022