nasa News, nasa News in kannada, nasa ಕನ್ನಡದಲ್ಲಿ ಸುದ್ದಿ, nasa Kannada News – HT Kannada

Latest nasa Photos

Asteroid 2023 QH:  ಆಸ್ಟ್ರಾಯ್ಡ್‌ 2023  ಕ್ಯೂಎಚ್‌ ಎಂಬ ಕ್ಷುದ್ರಗ್ರಹವು ಇಂದು ಭೂಮಿಯ ಸನಿಹಕ್ಕೆ ಬರಲಿದೆ ಎಂದು ನಾಸಾದ ಜೆಪಿಎಲ್‌ ಕಂಡುಕೊಂಡಿದೆ. ಇದು ಗಾತ್ರದಲ್ಲಿ ಸುಮಾರು 200ಅಡಿ ಇರಲಿದೆ. ಇದು ಭೂಮಿಯತ್ತ ಗಂಟೆಗೆ 57,259 ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. ಇದು ಭೂಮಿಯ 4.6 ದಶಲಕ್ಷ ಸಮೀಪಕ್ಕೆ ಆಗಮಿಸಲಿದೆ. ಇದರ ಸಣ್ಣ ಗಾತ್ರದಿಂದಾಗಿ ಅತ್ಯಧಿಕ ವೇಗದಲ್ಲಿ ಬರಲಿದೆ. ಇದು ವಿಮಾನದಂತೆ ವೇಗವಾಗಿ ಬರಲಿದ್ದು, ಎಲ್ಲಾದರೂ ಭೂಮಿಗೆ ಅಪ್ಪಳಿಸಿದರೆ ದೊಡ್ಡ ನಗರವೊಂದನ್ನು ನಾಶಪಡಿಸುವ ಸಾಮರ್ಥ್ಯವಿದೆ.

NASA News: ಮುಂದಿನ 48 ಗಂಟೆಗಳಲ್ಲಿ ಭೂಮಿಯತ್ತ 5 ಕ್ಷುದ್ರಗ್ರಹಗಳು, ಅವುಗಳಲ್ಲಿ ಒಂದು ರಾಕ್ಷಸ ಗಾತ್ರದ ಕ್ಷುದ್ರಗ್ರಹ, ನಾಸಾದಿಂದ ಮಾಹಿತಿ

Thursday, August 31, 2023

3D ಸನ್ ಅಪ್ಲಿಕೇಶನ್ (3D Sun app) ನಾಸಾದ ಉಚಿತ ಅಪ್ಲಿಕೇಶನ್ ಆಗಿದ್ದು ಅದು ನಿಮಗೆ 3D ಯಲ್ಲಿ ಸೂರ್ಯನನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ನೀವು ಸೂರ್ಯನ ಸುತ್ತಲೂ ಹಾರಬಹುದು, ಸಕ್ರಿಯ ಪ್ರದೇಶಗಳಲ್ಲಿ ಜೂಮ್ ಇನ್ ಮಾಡಬಹುದು ಮತ್ತು ಸೌರ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು. ಈ ಅಪ್ಲಿಕೇಶನ್ NASA ನ STEREO ಉಪಗ್ರಹಗಳ ಡೇಟಾದಿಂದ ಚಾಲಿತವಾಗಿದೆ, ಇದು ಸೂರ್ಯನನ್ನು ಲಕ್ಷಾಂತರ ಮೈಲುಗಳಷ್ಟು ದೂರದಲ್ಲಿ ಸುತ್ತುತ್ತದೆ.

3D Sun app: ಸೂರ್ಯ ಹೇಗಿದ್ದಾನೆ ಎಂದು ನೋಡುವಾಸೆಯೇ; ನಾಸಾದ 3D ಸನ್ ಅಪ್ಲಿಕೇಶನ್‌ ಓಪನ್‌ ಮಾಡಿ, ಸೂರ್ಯ ಲೋಕದಲ್ಲಿ ವರ್ಚುವಲ್ ಪ್ರವಾಸ ಮಾಡಿ

Saturday, August 12, 2023

ನಾಸಾದ ಸೋಲಾರ್‌ ಡೈನಾಮಿಕ್‌ ಅಬ್ಸರ್ವೇಟರಿ ಮೂಲಕ sunspot AR3386 ಎಂಬ ಪ್ರಬಲ ಸೌರಜ್ವಾಲೆಯ ಚಿತ್ರ ಸೆರೆಹಿಡಿಯಲಾಗಿದೆ ಎಂದು ಸ್ಪೇಸ್‌ವೆದರ್‌.ಕಾಂ ವರದಿ ಮಾಡಿದೆ.

Solar flare: ನಾಸಾದ ಕಣ್ಣಿಗೆ ಬಿದ್ದ ತೀವ್ರ ಸೌರ ಜ್ವಾಲೆಗಳು, ಪ್ರಬಲ ಭೂಕಾಂತೀಯ ಚಂಡಮಾರುತದ ಎಚ್ಚರಿಕೆ, ಇಲ್ಲಿದೆ ಚಿತ್ರ ಮಾಹಿತಿ

Tuesday, August 8, 2023

ಕ್ಷುದ್ರಗ್ರಹ 2020 PP1 (Asteroid 2020 PP1) ಪ್ರಸ್ತುತ ಭೂಮಿಯ ಕಡೆಗೆ ಸಾಗುತ್ತಿದೆ ಮತ್ತು ಜುಲೈ 28 ರಂದು ಭೂಮಿಗೆ ಬಹಳ ಹತ್ತಿರವಾಗಲಿದೆ. ಕ್ಷುದ್ರಗ್ರಹವು ಸುಮಾರು 52 ಅಡಿ ಅಗಲವಿರುವ ಮನೆಯ ಗಾತ್ರವನ್ನು ಹೊಂದಿದೆ. ಇದು ಗಂಟೆಗೆ ಸುಮಾರು 14641 ಕಿಲೋಮೀಟರ್‌ಗಳಲ್ಲಿ ಪ್ರಯಾಣಿಸುತ್ತಿದೆ ಮತ್ತು 6.5 ಮಿಲಿಯನ್ ಕಿಲೋಮೀಟರ್‌ಗಳಲ್ಲಿ ಅದರ ಹತ್ತಿರದ ಮಾರ್ಗವನ್ನು ಮಾಡುತ್ತದೆ.

5 Asteroids: ಭೂಮಿ ಕಡೆಗೆ ಮುನ್ನುಗ್ಗುತ್ತಿವೆ ಭಾರಿ ಗಾತ್ರದ 5 ಕ್ಷುದ್ರಗ್ರಹಗಳು; ನಾಸಾ ಟ್ರ್ಯಾಕ್‌ ಮಾಡುತ್ತಿರುವ ಇವುಗಳ ವಿವರ ಹೀಗಿದೆ ನೋಡಿ

Friday, July 28, 2023

ನಾಸಾ ತನ್ನ ಇತ್ತೀಚಿನ ಉಪಗ್ರಹವಾದ XRISM (ಎಕ್ಸ್-ರೇ ಇಮೇಜಿಂಗ್ ಮತ್ತು ಸ್ಪೆಕ್ಟ್ರೋಸ್ಕೋಪಿ ಮಿಷನ್, "ಕ್ರಿಸ್ಮ್" (Crism) ಎಂದು ಉಚ್ಚರಿಸಲಾಗುತ್ತದೆ) ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಎಕ್ಸ್-ರೇ ಮಳೆಬಿಲ್ಲುಗೆ ಸಮಾನವಾದ ಹೆಚ್ಚಿನ ಶಕ್ತಿಯ ಬೆಳಕನ್ನು ಗಮನಿಸುವುದು ಇದರ ಗುರಿ.

Rainbow of X-rays: ಎಕ್ಸ್‌ ರೇಗಳ ಕಾಮನಬಿಲ್ಲು; ನಾಸಾದ ಕ್ರಿಸ್ಮ್‌ ಮಿಷನ್‌ ಕುರಿತು ತಿಳಿದುಕೊಂಡಿರಬೇಕಾದ ವಿಚಾರಗಳಿವು

Tuesday, July 18, 2023

Asteroid 2023 HO6: ಈ ಕ್ಷುದ್ರಗ್ರಹ ಇಂದು ಭೂಮಿಯ ತುಂಬಾ ಹತ್ತಿರಕ್ಕೆ ಬರಲಿದೆ. ಇದು ಸುಮಾರು 570 ಅಡಿ ಗಾತ್ರದ ಕ್ಷುದ್ರಗ್ರಹ. ಇದು ಗಂಟೆಗೆ  27969  ಕಿ.ಮೀ. ವೇಗದಲ್ಲಿ ಬರುತ್ತಿದ್ದು, ಭೂಮಿಯಿಂದ ಸುಮಾರು 2 ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ. ಇವುಗಳ ವೇಗಕ್ಕೆ ಹೋಲಿಸಿದರೆ ಇಷ್ಟು ಕಿ.ಮೀ.  ಅಂದುಕೊಂಡಷ್ಟು ದೂರವಲ್ಲ.

Asteroids: ಇಂದಿನಿಂದ ಜುಲೈ 10ರವರೆಗೆ ಭೂಮಿಯತ್ತ 5 ಕ್ಷುದ್ರಗ್ರಹ, 31ರಿಂದ 880 ಅಡಿ ಗಾತ್ರ, ಒಂದಕ್ಕಿಂತ ಒಂದು ಸ್ಪೀಡು, ನಾಸಾದಿಂದ ಮಾಹಿತಿ

Wednesday, July 5, 2023

Asteroid 2020 NC - ಕ್ಷುದ್ರಗ್ರಹ 2020 NC ಮತ್ತೊಂದು ಬಾಹ್ಯಾಕಾಶ ಶಿಲೆಯಾಗಿದ್ದು ಅದು ಪ್ರಸ್ತುತ ಭೂಮಿಯ ಕಡೆಗೆ ಧಾವಿಸುತ್ತಿದೆ ಮತ್ತು ಜುಲೈ 2 ರಂದು ಭೂಮಿಗೆ ಸಮೀಪ ಹಾದುಹೋಗುತ್ತದೆ. ಕ್ಷುದ್ರಗ್ರಹವು ಸುಮಾರು 600 ಅಡಿ ಅಗಲವಿದೆ, ಗಂಟೆಗೆ 27873 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಮತ್ತು 5.3 ಮಿಲಿಯನ್ ಕಿಲೋಮೀಟರ್‌ ಅಂತರದಲ್ಲಿರಲಿದೆ.

900 ft wide asteroid: ಭೂಮಿ ಕಡೆಗೆ ಮುನ್ನುಗ್ಗುತ್ತಿದೆ 900 ಅಡಿ ಅಗಲದ ಕ್ಷುದ್ರಗ್ರಹ; ಇತರೆ 4 ಆಸ್ಟೆರಾಯ್ಡ್‌ಗಳನ್ನೂ ಗುರುತಿಸಿದೆ ನಾಸಾ

Friday, June 30, 2023

ಕ್ಷುದ್ರಗ್ರಹ ಕೆಎಸ್ 2023: ನಾಸಾದ ದೂರದರ್ಶಕಗಳಿಂದ ಈ ಸಣ್ಣ ಮತ್ತುಅಪಾಯಕಾರಿ ಕ್ಷುದ್ರಗ್ರಹವನ್ನು ಪತ್ತೆಹಚ್ಚಿವೆ. ಇದು ಕೇವಲ 36 ಅಡಿ ಗ್ರಾತ್ರವಿದೆ. ಕ್ಷುದ್ರಗ್ರಹ ಕೆಎಸ್ ಮೇ 22 ಅಂದರೆ ಇಂದು ಭೂಮಿಯ ಸಮೀಪದಲ್ಲೇ ಕೇವಲ 1,46,000 ಮೈಲುಗಳಷ್ಟು ದೂರದಲ್ಲಿ ಸಾಗುತ್ತದೆ. ಇದು ಚಂದ್ರನಿಗಿಂತ ಹತ್ತಿರದಲ್ಲಿದೆ ಎಂದು ನಾಸಾ ಹೇಳಿದೆ.

Asteroid 2023 KS: 300 ಅಡಿ ಗಾತ್ರದ ಬೃಹತ್ ಕ್ಷುದ್ರಗ್ರಹ ಇಂದು ಭೂಮಿಯ ಅತಿ ಸಮೀಪಕ್ಕೆ; ನಾಸಾ ಎಚ್ಚರಿಕೆ

Monday, May 22, 2023

ಮೆಡುಲ್ಲಾ ನೀಹಾರಿಕೆ ಸೂಪರ್ನೋವಾ ರೆಮಿನೆಂಟ್ (Medulla Nebula Supernova Remnant): ಇದಕ್ಕೆ ಸಿಟಿಬಿ 1 ಎಂದು ಹೆಸರು. ಇದನ್ನು ಮೆಡುಲ್ಲಾ ನೆಬ್ಯುಲಾ ಸೂಪರ್ನೋವಾ ರೆಮಿನೆಂಟ್ ಎಂದೂ ಕರೆಯುತ್ತಾರೆ. ಇದು ಅಪರೂಪದ ಕಾಸ್ಮಿಕ್ ಗುಳ್ಳೆ.  ನಾಸಾದ ಪ್ರಕಾರ, ಇದು ಸುಮಾರು ಒಂದು ಲಕ್ಷ ವರ್ಷದ ಹಿಂದೆ ಸಂಭವಿಸಿದ ಸೂಪರ್ನೊವ ಸ್ಪೋಟದ ಅವಶೇಷ. ಇದು ಮಿದುಳಿನ ಆಕಾರ ಹೊಂದಿರುವ ಕಾರಣದಿಂದ ಈ ಹೆಸರು ನೀಡಲಾಗಿದೆ. ಇದು ಕ್ಯಾಸಿಯೋಪಿಯಾ ನಕ್ಷತ್ರಪುಂಜದಾಚೆಗಿದೆ.

NASA Astronomy Pictures: ನಾಸಾದ ಅತ್ಯುತ್ತಮ ಖಗೋಳ ಚಿತ್ರಗಳು, ಅಂತರಿಕ್ಷದಲ್ಲಿ ನಿಹಾರಿಕೆಗಳ ಮಾಯಾಲೋಕ, ನಕ್ಷತ್ರಗಳ ಚಿತ್ತಾರ

Friday, April 28, 2023

ಆಕರ್ಷಕ ಹ್ಯಾಂಬರ್ಗರ್ ಗ್ಯಾಲಕ್ಸಿ (ಏಪ್ರಿಲ್ 14): ಇದು NGC 3628ರ ಆಕರ್ಷಕ ಚಿತ್ರ. ಇದನ್ನು ಹ್ಯಾಂಬರ್ಗರ್ ಗ್ಯಾಲಕ್ಸಿ ಎಂದೂ ಕರೆಯುತ್ತಾರೆ. ಇದು ಸಿಂಹ ರಾಶಿಯ (constellation of Leo) ಕಡೆಗೆ ಸುಮಾರು 35 ಮಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿರುವ ಒಂದು ಸುರುಳಿಯಾಕಾರದ ನಕ್ಷತ್ರಪುಂಜವಾಗಿದೆ.  ಸುಮಾರು 100,000 ಜ್ಯೋತಿರ್ವರ್ಷಗಳಷ್ಟು ವ್ಯಾಪಿಸಿದೆ.

NASA Astronomy Pictures: ಅಂತರಿಕ್ಷದಲ್ಲಿ ಓಡುವ ಕೋಳಿ, ಧ್ರುವನಕ್ಷತ್ರ, ನಾಸಾದ ಅತ್ಯುತ್ತಮ ಖಗೋಳಚಿತ್ರಗಳನ್ನು ಕಣ್ತುಂಬಿಕೊಳ್ಳಿ

Friday, April 14, 2023

ಭೂಕಾಂತೀಯ ಚಂಡಮಾರುತವು ಅರೋರಾಗಳನ್ನು ಹುಟ್ಟುಹಾಕುತ್ತದೆ. ಅದೇ ರೀತಿ ಮಾರ್ಚ್ 27ರಂದು ಪ್ರಬಲ ಭೂಕಾಂತೀಯ ಚಂಡಮಾರುತದಿಂದ ಪ್ರಚೋದಿಸಲ್ಪಟ್ಟ ಭವ್ಯವಾದ, ಅರೋರಾ ಅಮೆರಿಕದಲ್ಲಿ ಕಂಡುಬಂದಿತು. ಮಾರ್ಚ್ 27ರಂದು ನಾಸಾದ ಈ ಖಗೋಳಶಾಸ್ತ್ರೀಯ ಚಿತ್ರವು, ಲಕ್ಷಾಂತರ ಲೈಕ್ಸ್‌ಗಳನ್ನು ಪಡೆದಿದೆ.

NASA Astronomy Pictures: ವಾರದ ಅತ್ಯುತ್ತಮ ನಾಸಾ ಖಗೋಳೀಯ ಚಿತ್ರಗಳು: ಬನ್ನಿ ಬ್ರಹ್ಮಾಂಡದ ಭಾಗವಾಗಿ..

Friday, March 31, 2023

NASA ಮತ್ತು ESA ನಂತಹ ಬಾಹ್ಯಾಕಾಶ ಸಂಸ್ಥೆಗಳು, ಭೂಮಿಗೆ ಡಿಕ್ಕಿ ಹೊಡೆಯಬಹುದಾದ ಯಾವುದೇ ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತವೆ. (ಸಾಂದರ್ಭಿಕ ಚಿತ್ರ)

Asteroid: ಗಂಟೆಗೆ ಒಂದು ಲಕ್ಷ ಕಿ.ಮೀ. ವೇಗದಲ್ಲಿ ಭೂಮಿಯತ್ತ ನುಗ್ಗಿ ಬರುತ್ತಿದೆ ಕ್ಷುದ್ರಗ್ರಹ: ನಾಸಾ ಎಚ್ಚರಿಕೆ ಏನು?

Sunday, March 26, 2023

ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತವು, ಟಗ್ ಅನ್ನು ನಿರ್ಮಿಸುತ್ತಿದೆ, ಇದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಯ ವಾತಾವರಣದಲ್ಲಿ ನಿಯಂತ್ರಿತ ವಿನಾಶಕ್ಕೆ ಕರೆದೊಯ್ಯುತ್ತದೆ. (ಸಂಗ್ರಹ ಚಿತ್ರ)

Space tug: ಸಿದ್ಧವಾಗುತ್ತಿದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಉರುಳಿಸುವ ಯೋಜನೆ: ನಾಸಾ ತಲೆಯಲ್ಲೇನಿದೆ?

Friday, March 17, 2023

ಶುಕ್ರ-ಗುರು ಸಂಯೋಗ (ಫೆಬ್ರವರಿ 27) - ಶುಕ್ರ ಮತ್ತು ಗುರುಗ್ರಹದ  ವಿಹಂಗಮ ನೋಟವನ್ನು ಇದು ಒಳಗೊಂಢಿದೆ. ಸೌರವ್ಯೂಹದ ಒಳಭಾಗದಿಂದ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಧೂಳಿನ ಬ್ಯಾಂಡ್‌ನ್ನು ಇಲ್ಲಿ ಗಮನಿಸಬಹುದಾಗಿದೆ,

NASA Astronomy Pictures: ಒಂದು ವಾರದಲ್ಲಿ ಬ್ರಹ್ಮಾಂಡದಲ್ಲಿ ಏನೆಲ್ಲಾ ಆಗಿದೆ?: ನಾಸಾದಿಂದ 'ವಿಶ್ವ' ದರ್ಶನ..

Friday, March 3, 2023

ಹಿಂದೊಮ್ಮೆ ಮಂಗಳ ಗ್ರಹದಲ್ಲಿ ನೀರು ಇತ್ತು ಎಂಬುದಕ್ಕೆ, ನಾಸಾದ ಕ್ಯೂರಿಯಾಸಿಟಿ ರೀವರ್‌ ಕಳುಹಿಸಿರುವ ಚಿತ್ರಗಳು ಪುರಾವೆ ಒದಗಿಸಿವೆ. ಕಾಲಾನಂತರದಲ್ಲಿ ಈ ಗ್ರಹದಲ್ಲಿ ನೀರು ಬತ್ತಿಹೋಗಿದೆಯಾದರೂ, ನೀರಿನ ಅಲೆಗಳು ಮಂಗಳ ಗ್ರಹದ ಕೆಂಪು ಮಣ್ಣಿನಲ್ಲಿ ಕುರುಹುಗಳನ್ನು ಬಿಟ್ಟಿವೆ. ಮಂಗಳ ಗ್ರಹದಿಂದ ಕಳುಹಿಸಲಾದ ಕ್ಯೂರಿಯಾಸಿಟಿ ರೋವರ್ ಚಿತ್ರಗಳು, ಈ ಕುರಿತು ಸಾಕಷ್ಟು ಮಾಹಿತಿಯನ್ನು ಒದಿಗಿಸಿವೆ.

Planet Mars: ಮಂಗಳ ಗ್ರಹದಲ್ಲಿ ನೀರಿನ ಕುರುಹು ಪತ್ತೆ ಹಚ್ಚಿದ ನಾಸಾದ ಕ್ಯೂರಿಯಾಸಿಟಿ ರೋವರ್..‌ ಮುಂದೆ?

Saturday, February 11, 2023

ರೋಸೆಟ್ಟೆ ನೀಹಾರಿಕೆ (ಫೆಬ್ರವರಿ 6) - ಭೂಮಿಯಿಂದ ಸುಮಾರು 5200 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ನಿಹಾರಿಕೆಯ ಚಿತ್ರವನ್ನು, ಕಳೆದ ಫೆಬ್ರವರಿ 6 ರಂದು ನಾಸಾ ಬಿಡುಗಡೆ ಮಾಡಿದೆ. ರೊಸೆಟ್ಟೆ ನೀಹಾರಿಕೆಯು ನಕ್ಷತ್ರಗಳ ಪ್ರಕಾಶಮಾನವಾದ ಸಮೂಹವಾಗಿದ್ದು, NGC 2244 ಎಂತಲೂ ಇದನ್ನು ಕರೆಯಲಾಗುತ್ತದೆ. ಇಲ್ಲಿನ ನಕ್ಷತ್ರಗಳು ಕೆಲವು ಮಿಲಿಯನ್ ವರ್ಷಗಳ ಹಿಂದೆ ಸುತ್ತಮುತ್ತಲಿನ ಅನಿಲದಿಂದ ರೂಪುಗೊಂಡವು. ಮೊನೊಸೆರೊಸ್ ಸಮೂಹದಲ್ಲಿ ಬೈನಾಕ್ಯುಲರ್‌ಗಳ ಮೂಲಕ ಗೋಚರಿಸುವ ರೋಸೆಟ್ಟೆ ನೀಹಾರಿಕೆಯ ಕೇಂದ್ರವು, ಸುಮಾರು 50 ಜ್ಯೋತೀರ್ವರ್ಷ ವ್ಯಾಸವನ್ನು ಹೊಂದಿದೆ.

NASA Astronomy Pictures: ನಾಸಾದಿಂದ 'ಬ್ರಹ್ಮಾಂಡ ದರ್ಶನ': ವಿಶ್ವದ ಸೌಂದರ್ಯಕ್ಕೆ ಈ ಫೋಟೋಗಳೇ ನಿದರ್ಶನ..

Friday, February 10, 2023

ಸದೀರ್ಘ 38 ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ ಕಾರ್ಯಾಚರಣೆ ನಡೆಸಿರುವ ನಾಸಾದ ಕೃತಕ ಉಪಗ್ರಹ ERBS, ಅಂತಿಮವಾಗಿ ಭೂಮಿಯ ಕಕ್ಷೆಯನ್ನು ಮರುಪ್ರವೇಶಿಸಲಿದ್ದು, ಸಂಪೂರ್ಣವಾಗಿ ಸುಟ್ಟು ಅದರ ಅಳಿದುಳಿದ ಅವಶೇಷಗಳು ಭೂಮಿಯ ಮೇಲೆ ಬೀಳಲಿವೆ. ನಾಸಾ ಪ್ರಕಾರ ವಾತಾವರಣಕ್ಕೆ ಮರು-ಪ್ರವೇಶದ ಸಮಯದಲ್ಲಿ, ಈ ಕೃತಕ ಉಪಗ್ರಹ ಪೂರ್ಣವಾಗಿ ಸುಟ್ಟು ಕರಕಲಾಗಲಿದೆ. ಆದರೆ ಕೆಲವು ತುಣುಕುಗಳು ಭೂಮಿಯ ನೆಲಕ್ಕೆ ಅಪ್ಪಳಿಸಲಿದ್ದು, ಆತಂಕಪಡುವ ಅವಶ್ಯಕತೆಯಿಲ್ಲ ಎಂದು ನಾಸಾ ಭರವಸೆ ನೀಡಿದೆ. ಈ ಕೃತಕ ಉಪಗ್ರಹ ಸುಮಾರು 2,450 ಕೆ.ಜಿ ಭಾರವಿದೆ.

NASA Satellite: ಭೂಮಿಗೆ ಅಪ್ಪಳಿಸಲಿದೆ 38 ವರ್ಷಗಳಷ್ಟು ಹಳೆಯ ನಾಸಾದ ಉಪಗ್ರಹ: ಕಾದಿದೆಯಾ ಅಪಾಯ?

Saturday, January 7, 2023

ನೀವು ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿದ್ದರೆ, ವಿವಿಧ ಬಾಹ್ಯಾಕಾಶ ದೂರದರ್ಶಕಗಳು ಹಂಚಿಕೊಳ್ಳುವ ಎಲ್ಲಾ ಚಿತ್ರಗಳ ಬಗ್ಗೆ ನೀವು ಉತ್ಸುಕರಾಗಬೇಕು. 2022ರಲ್ಲಿ, ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರವು, ಹಲವಾರು ಸುಂದರವಾದ ಚಿತ್ರಗಳನ್ನು ಸೆರೆಹಿಡಿದಿದೆ. 2022ರಲ್ಲಿ ಹಬಲ್‌ ಸೆರೆಹಿಡಿದ ಚಿತ್ರಗಳ ಪೈಕಿ ನಿಮ್ಮ ನೆಚ್ಚಿನ ಚಿತ್ರ ಯಾವುದು ಎಂದು ನಾಸಾ ಕೇಳಿದೆ. ತನ್ನ ಇತ್ತೀಚಿನ ಟ್ವಿಟ್ಟರ್ ಪೋಸ್ಟ್‌ನಲ್ಲಿ, ನಾಸಾದ ಹಬಲ್ ಟೆಲಿಸ್ಕೋಪ್ 2022ರಲ್ಲಿ ಕ್ಲಿಕ್ಕಿಸಿ 4 ಚಿತ್ರಗಳನ್ನು ನಾಸಾ ಹಂಚಿಕೊಂಡಿದೆ. ಈ ನಿಮ್ಮ ನೆಚ್ಚಿನ ಚಿತ್ರಕ್ಕೆ ಮತ ಹಾಕುವಂತೆ ಕೇಳಿದೆ. ಹಬಲ್ ಬಾಹ್ಯಾಕಾಶ ದೂರದರ್ಶಕವು ಹಂಚಿಕೊಂಡಿರುವ ನಾಲ್ಕು ಚಿತ್ರಗಳು DEM L 190, NGC 976, HCG 40 ಮತ್ತು ಟೆರ್ಜಾನ್ 2 ಆಗಿದೆ.

Hubble Images 2022: ನಿಮ್ಮ ನೆಚ್ಚಿನ ಹಬಲ್‌ ಟೆಲಿಸ್ಕೋಪ್‌ ಚಿತ್ರ ಯಾವುದು ಎಂದು ತಿಳಿಯಲು ಬಯಸಿದೆ ನಾಸಾ: ತಿಳಿಸುವಿರಾ?

Friday, December 30, 2022

ಕ್ಷುದ್ರಗ್ರಹ 2021 AE: ನಾಸಾದ ಗ್ರಹಗಳ ರಕ್ಷಣಾ ಸಮನ್ವಯ ಕಚೇರಿಯು, ಗ್ರಹಕ್ಕೆ ಅತ್ಯಂತ ಸಮೀಪವಿರುವ ಕಾರಣದಿಂದ ಕ್ಷುದ್ರಗ್ರಹ 2021 AE ಎಂಬ ಕ್ಷುದ್ರಗ್ರಹದ ಬಗ್ಗೆ ಎಚ್ಚರಿಕೆ ನೀಡಿದೆ. ಕ್ಷುದ್ರಗ್ರಹವು 55-127 ಅಡಿ ಅಗಲವಿದ್ದು, ಇಂದು (ಡಿಸೆಂಬರ್ 28-ಬುಧವಾರ) ಭೂಮಿಯಿಂದ ಸುಮಾರು 6.3 ಮಿಲಿಯನ್ ಕಿ.ಮೀ. ದೂರದಿಂದ ಹಾದು ಹೋಗಲಿದೆ. ಈ ಕ್ಷುದ್ರಗ್ರಹ ಗಂಟೆಗೆ ಸುಮಾರು 53,830 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿದೆ. (ಸಾಂದರ್ಭಿಕ ಚಿತ್ರ)

NASA Asteroid Alert: ಭೂಮಿಯತ್ತ ನುಗ್ಗಿ ಬರುತ್ತಿವೆ ಐದು ಬೃಹತ್‌ ಕ್ಷುದ್ರಗ್ರಹಗಳು: ವರ್ಷಾಂತ್ಯಕ್ಕೆ ನಾಸಾದಿಂದ 'ರಿಸ್ಕ್ ಅಲರ್ಟ್‌'!

Wednesday, December 28, 2022

ಕ್ಷುದ್ರಗ್ರಹ 2022 YG2: 22 ಅಡಿ ವ್ಯಾಸದ ಈ ಕ್ಷುದ್ರಗ್ರಹವು ಗಂಟೆಗೆ 22,968 ಕಿ.ಮೀ. ವೇಗದಲ್ಲಿ ಭೂಮಿಯ ಕಡೆಗೆ ಪ್ರಯಾಣಿಸುತ್ತಿದೆ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಎಚ್ಚರಿಸಿದೆ. ಬಸ್ ಗಾತ್ರದ ಈ ಕ್ಷುದ್ರಗ್ರಹವು ನಿನ್ನೆ(ಡಿಸೆಂಬರ್ 22-ಗುರುವಾರ)  ಭೂಮಿಯಿಂದ ಸುಮಾರು 3,64,000 ಕಿ.ಮೀ. ದೂರದಲ್ಲಿ ಗಹಾದು ಹೋಗಿದೆ. ಭೂಮಿಯಿಂದ ಚಂದ್ರನ ದೂರವು 3,84,400 ಕಿ.ಮೀ. ಎಂಬುದು ವಿಶೇಷ. (ಸಾಂದರ್ಭಿಕ ಚಿತ್ರ)

Asteroids: ಭೂಮಿಯತ್ತ ನುಗ್ಗಿ ಬರುತ್ತಿವೆ 5 ಕ್ಷುದ್ರಗ್ರಹಗಳು: ಚಂದ್ರನಿಗಿಂತ ಸಮೀಪ ಬಂದ ಆಗಂತುಕ ಯಾರು?

Friday, December 23, 2022