Latest sri lanka Photos

ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲೂ ಗೆದ್ದ ಶ್ರೀಲಂಕಾ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ ಕಂಡಿದೆ, ಇದರೊಂದಿಗೆ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಸೋಲು, ಗೆಲುವು ದಾಖಲಿಸಿದೆ. ಅಲ್ಲದೆ, ಈ ಸರಣಿಗೂ ಮುನ್ನ ಅಂಕಪಟ್ಟಿಯಲ್ಲಿ ಕೊನೆಯಲ್ಲಿದ್ದ ದ್ವೀಪರಾಷ್ಟ್ರ ಇದೀಗ ನಾಲ್ಕನೇ ಸ್ಥಾನಕ್ಕೇರಿದೆ. ಗೆಲುವಿನ ಶೇಕಡವಾರು 50ರಷ್ಟು ಹೊಂದಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​; ಗೆದ್ದ ಶ್ರೀಲಂಕಾ ಭಾರಿ ಏರಿಕೆ, ಸೋತ ಬಾಂಗ್ಲಾದೇಶ ಭಾರಿ ಕುಸಿತ, ಭಾರತ ಎಷ್ಟು ಸುರಕ್ಷಿತ?

Wednesday, April 3, 2024

ರಾಜಕೀಯ ಹಸ್ತಕ್ಷೇಪವನ್ನು ಉಲ್ಲೇಖಿಸಿ ಐಸಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಶ್ರೀಲಂಕಾ ಮಂಡಳಿಯನ್ನು ಅಮಾನತುಗೊಳಿಸಿತು.

ಶ್ರೀಲಂಕಾ ಕ್ರಿಕೆಟ್‌ ಮೇಲಿನ ಅಮಾನತು ಶಿಕ್ಷೆ ತೆರವುಗೊಳಿಸಿದ ಐಸಿಸಿ

Monday, January 29, 2024

ಶ್ರೀಲಂಕಾ: ನವೆಂಬರ್ 2 ರಂದು ಟೀಂ ಇಂಡಿಯಾ ವಿರುದ್ಧ ಆಡಿದ್ದ ಶ್ರೀಲಂಕಾ ಅತಿ ಕಳಪೆ ಪ್ರದರ್ಶನ ನೀಡಿತ್ತು. ಕೇವಲ 55 ರನ್​​ ಗಳಿಸಿ ತನ್ನೆಲ್ಲಾ ವಿಕೆಟ್​​ಗಳನ್ನು ಭಾರತದ ಬೌಲರ್​ಗಳಿಗೆ ಒಪ್ಪಿಸಿತ್ತು.

Lowest Score: ಈ ಬಾರಿಯ ವಿಶ್ವಕಪ್​ನಲ್ಲಿ ಅತಿ ಕಡಿಮೆ ರನ್‌ ಗಳಿಸಿದ ಟಾಪ್‌ 5 ತಂಡಗಳು; 55 ರನ್​​ಗೆ ಆಲೌಟ್​ ಆಗಿದ್ದ ಶ್ರೀಲಂಕಾ

Sunday, November 19, 2023

ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿಶ್ವದಾಖಲೆಯ ಬೌಲಿಂಗ್ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ 57 ರನ್ ನೀಡಿ 7 ವಿಕೆಟ್ ಪಡೆದಿದ್ದರು. 2023ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಮಿ ನಂಬರ್ 1 ಸ್ಥಾನದಲ್ಲಿದ್ದಾರೆ. ಕೇವಲ 6 ಪಂದ್ಯಗಳಿಂದ 5.01 ಎಕಾನಮಿಯಲ್ಲಿ 23 ವಿಕೆಟ್ ಪಡೆದಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಯನ್ನ ಮೀರಿಸಿದವರಿಲ್ಲ; ಅತಿ ಹೆಚ್ಚು ವಿಕೆಟ್‌ಗಳಲ್ಲಿ ವೇಗಿಯೇ ನಂಬರ್ 1

Friday, November 17, 2023

ಈ ಬಾರಿಯ ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಫ್ಘಾನಿಸ್ತಾನ ತಂಡ ಪ್ರದರ್ಶನ ನೀಡಿದೆ. ಆದರಲ್ಲೂ ಯುವ ಆಟಗಾರ ಇಬ್ರಾಹಿಂ ಜದ್ರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತ ಪ್ರದರ್ಶನ ನೀಡಿದ್ದಾರೆ. 21 ವರ್ಷದ ಜದ್ರಾನ್ 9 ಲೀಗ್ ಪಂದ್ಯಗಳಿಂದ 1 ಶತಕ 1 ಅರ್ಧ ಶತಕ ಸೇರಿ 395 ರನ್ ಕಲೆಹಾಕಿದ್ದಾರೆ.

ರಚಿನ್‌ರಿಂದ ಕೊಯೆಟ್ಜಿವರೆಗೆ; ವಿಶ್ವಕಪ್‌ನಲ್ಲಿ ಅಬ್ಬರಿಸಿದ ಟಾಪ್ ಐವರು ಯುವ ಆಟಗಾರರು ಇವರೇ

Wednesday, November 15, 2023

ನಿರೀಕ್ಷೆಯಂತೆ ವಿಶ್ವಕಪ್ ಕೊನೆಯ ಲೀಗ್​ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ಜಯಿಸಿದೆ. ಇದರೊಂದಿಗೆ ಲೀಗ್​ನ 9 ಪಂದ್ಯಗಳನ್ನೂ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಜೇಯವಾಗಿ ಸೆಮೀಸ್​​ನಲ್ಲಿ ನ್ಯೂಜಿಲೆಂಡ್​​ ಅನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಭಾರತ. ನೆಟ್​ ರನ್-ರೇಟ್ +2.570.

ಏಕದಿನ ವಿಶ್ವಕಪ್ ಲೀಗ್ ಮುಕ್ತಾಯ, ಅಜೇಯ ತಂಡವಾಗಿ ಸೆಮಿಫೈನಲ್​ಗೆ ಭಾರತ; ಇಲ್ಲಿದೆ ಅಂತಿಮ ಅಂಕಪಟ್ಟಿ

Monday, November 13, 2023

ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾದ ಆರಂಭಿಕ ಬ್ಯಾಟರ್ ಕುಸಾಲ್ ಪೆರೆರಾ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

Kusal Perera: ಏಕದಿನ ವಿಶ್ವಕಪ್‌ನಲ್ಲಿ ಕುಸಾಲ್ ಪೆರೆರಾ ವೇಗದ ಅರ್ಧ ಶತಕ; ಮೆಂಡಿಸ್, ಟ್ರಾವಿಸ್ ಹೆಡ್ ದಾಖಲೆಗಳು ಛಿದ್ರ; ಫೋಟೊಸ್

Friday, November 10, 2023

ಆದರೆ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ತಂಡದೊಂದಿಗೆ ನವೆಂಬರ್​ 15ರಂದು ಕಾದಾಟ ನಡೆಸಲಿದೆ. ಆದರೆ 4ನೇ ಸ್ಥಾನಕ್ಕೆ ಆಸೀಸ್ ಎದುರು ಸೋತ ಅಫ್ಘನ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ 3 ತಂಡಗಳು ತಲಾ 8 ಅಂಕಗಳಿಸಿವೆ.

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಸೆಮಿಫೈನಲ್ ಫಿಕ್ಸ್; ಭಾರತದ ಎದುರಿನ ನಾಕೌಟ್ ಪಂದ್ಯಕ್ಕೆ 3 ತಂಡಗಳ ನಡುವೆ ಬಿಗ್ ಫೈಟ್

Wednesday, November 8, 2023

ಏಕದಿನ ವಿಶ್ವಕಪ್​​ನ 38ನೇ ಪಂದ್ಯದಲ್ಲಿ ಗೆದ್ದ ಬಾಂಗ್ಲಾದೇಶ,  ಶ್ರೀಲಂಕಾ ತಂಡವನ್ನೂ ಟೂರ್ನಿಯಿಂದ ಹೊರ ದಬ್ಬಿತು. ಶಕೀಬ್ ಪಡೆ ಸತತ 6 ಸೋಲುಗಳ ನಂತರ ಜಯ ಸಾಧಿಸಿ, 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ನೇರ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ. ಆದರೆ ಲಂಕಾಗೆ ಈ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ. ಆದರೆ 2025ರ ಚಾಂಪಿಯನ್ಸ್​ ಟ್ರೋಫಿಗೆ ಅಫ್ಘನಿಸ್ತಾನ ಅರ್ಹತೆ ಪಡೆದಿದೆ.

ಸೋತು ಗೆದ್ದದ್ದು ಲಂಕಾ-ಬಾಂಗ್ಲಾ; 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿದ್ದು ಮಾತ್ರ ಅಫ್ಘಾನಿಸ್ತಾನ!

Tuesday, November 7, 2023

ಭಾರತ ವಿರುದ್ಧದ ಸೋಲಿನ ಹೊರತಾಗಿಯೂ ದಕ್ಷಿಣ ಆಫ್ರಿಕಾ ಪ್ರಸ್ತುತ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ, ಅವರು 2ನೇ ಸ್ಥಾನದಲ್ಲೇ ಉಳಿಯುತ್ತಾರೆ ಎಂಬುದು ಅನಿಶ್ಚಿತ. ಇದೀಗ ಆಸ್ಟ್ರೇಲಿಯಾ ತಂಡಕ್ಕೂ ಅವಕಾಶ ಇದೆ. ದಕ್ಷಿಣ ಆಫ್ರಿಕಾ 8 ಪಂದ್ಯಗಳಲ್ಲಿ 12 ಅಂಕ ಕಲೆಹಾಕಿದೆ. ಅವರ ನೆಟ್​​ ರನ್-ರೇಟ್ +1.376.

ಗೆದ್ದ ಭಾರತ ಟೇಬಲ್ ಟಾಪರ್, ಸೋತ ಸೌತ್​ ಆಫ್ರಿಕಾ 2ನೇ ಸ್ಥಾನಕ್ಕೆ ಕುತ್ತು; ರೇಸ್​​ನಲ್ಲಿ ಆಸೀಸ್, ಹೀಗಿದೆ ಅಂಕಪಟ್ಟಿ

Monday, November 6, 2023

ಪ್ರಸಕ್ತ ವಿಶ್ವಕಪ್‌ಗೂ ಮುನ್ನ ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಆಲೌಟ್ ಆಗಿತ್ತು. ಅದು ಕೂಡಾ 15.2 ಓವರ್‌ಗಳಲ್ಲಿ. ಆ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಐದು ಓವರ್‌ಗಳಲ್ಲಿ 23 ರನ್ ನೀಡಿ ಒಂದು ವಿಕೆಟ್ ಪಡೆದರು. ಇದೇ ವೇಳೆ ಏಳು ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟ ಮೊಹಮ್ಮದ್‌ ಸಿರಾಜ್‌ ಆರು ವಿಕೆಟ್ ಕಬಳಿಸಿದ್ದರು. ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರು.

105 ರನ್‌ಗೆ 20 ವಿಕೆಟ್; ಕೊನೆಯ 2 ಪಂದ್ಯಗಳಲ್ಲಿ ಲಂಕಾಗೆ ಲಗಾಮು ಹಾಕಿದ ಭಾರತ ವೇಗಿಗಳು

Friday, November 3, 2023

ವಿಶ್ವಕಪ್ ಅಂಕಗಳ ಪಟ್ಟಿಯಲ್ಲಿ ಭಾರತ ಮತ್ತೆ ಅಗ್ರಸ್ಥಾನಕ್ಕೆ ಏರಿದೆ. ಶ್ರೀಲಂಕಾವನ್ನು 302 ರನ್‌ಗಳಿಂದ ಮಣಿಸಿರುವ ಟೀಮ್ ಇಂಡಿಯಾ ಏಳರಲ್ಲಿ ಏಳು ಪಂದ್ಯಗಳನ್ನು ಗೆದ್ದು 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಆದರೆ, ನೆಟ್ ರನ್ ರೇಟ್​ನಲ್ಲಿ ಭಾರತ (2.102) ದಕ್ಷಿಣ ಆಫ್ರಿಕಾಕ್ಕಿಂತ ಸ್ವಲ್ಪ ಹಿಂದಿದೆ.

ಶ್ರೀಲಂಕಾ ವಿರುದ್ಧ ಗೆದ್ದು ಪಾಕ್ ಸೆಮೀಸ್ ಆಸೆ ಹೆಚ್ಚಿಸಿದ ಭಾರತ; ಹೇಗೆಂಬುದಕ್ಕೆ ಇಲ್ಲಿದೆ ಉತ್ತರ

Friday, November 3, 2023

ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮೊಹಮ್ಮದ್ ಶಮಿ 5 ವಿಕೆಟ್‌ಗಳ ಸಾಧನೆ ಮಾಡಿದರು. ಅಲ್ಲದೆ, ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಬರೆದಿರು. ಏಕದಿನ ವಿಶ್ವಕಪ್‌ನಲ್ಲಿ 45 ವಿಕೆಟ್ ಪಡೆದಂತಾಗಿದೆ. ಜಾಹೀರ್ ಖಾನ್ 44 ವಿಕೆಟ್ ಈವರೆಗಿನ ದಾಖಲೆಯಾಗಿತ್ತು.

IND vs SL: ಶ್ರೀಲಂಕಾವನ್ನ 302 ರನ್‌ಗಳಿಂದ ಸೋಲಿಸಿ ಮೊದಲ ತಂಡವಾಗಿ ವಿಶ್ವಕಪ್ ಸೆಮಿ ಫೈನಲ್ ತಲುಪಿದ ಟೀಂ ಇಂಡಿಯಾ; ಪೋಟೊಸ್

Thursday, November 2, 2023

ಅಫ್ಘಾನಿಸ್ತಾನ ತಂಡದ ಪರ ಫಜಲ್ಹಕ್ ಫಾರೂಕಿ 10 ಓವರ್‌ಗಳಿಗೆ 34 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಮುಜೀಬ್ ಉರ್ ರಹಮಾನ್ ಇಬ್ಬರನ್ನು ಔಟ್ ಮಾಡಿದ್ರು.

AFG vs SL: ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಮತ್ತೊಂದು ದಾಖಲೆ; ಶ್ರೀಲಂಕಾ ಮೇಲೆ ಹಶ್ಮತುಲ್ಲಾ ಪಡೆ ಸೂಪರ್ ಸವಾರಿ; ಫೋಟೊಸ್

Tuesday, October 31, 2023

ಇಂಗ್ಲೆಂಡ್-ಪಾಕಿಸ್ತಾನ ತಂಡವನ್ನು ಸೋಲಿಸಿದ ಅಫ್ಘಾನಿಸ್ತಾನ ಶ್ರೀಲಂಕಾ ತಂಡವನ್ನು ಮಣಿಸಿತು. ಇದರೊಂದಿಗೆ ಸೆಮಿಫೈನಲ್​ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. 2019ರ ವಿಶ್ವಕಪ್​​​ನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಅಫ್ಘನ್ ಪ್ರಸಕ್ತ ಟೂರ್ನಿಯಲ್ಲಿ 3ನೇ ಜಯ ಸಾಧಿಸಿದೆ. ಆ ಮೂಲ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಗೆದ್ದದ್ದು ಅಫ್ಘಾನಿಸ್ತಾನ-ಸೋತದ್ದು ಶ್ರೀಲಂಕಾ; ಆದರೆ ಕುಸಿದಿದ್ದು ಪಾಕಿಸ್ತಾನ; ಹೀಗಿದೆ ಅಂಕಪಟ್ಟಿ

Tuesday, October 31, 2023

ಇಂಗ್ಲೆಂಡ್ ವಿರುದ್ಧ 15 ರನ್​ ಗಳಿಸಿದ ಸಂದರ್ಭದಲ್ಲಿ ಈ ಸಾಧನೆ ತಲುಪಿದರು. ಈ ಪಂದ್ಯದಲ್ಲಿ ನಿಸ್ಸಾಂಕ 83 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ ಅಜೇಯ 77 ರನ್ ಗಳಿಸಿದರು. 2023ರಲ್ಲಿ 25 ಏಕದಿನ ಇನ್ನಿಂಗ್ಸ್​​ಗಳಲ್ಲಿ ನಿಸ್ಸಾಂಕ ಈವರೆಗೂ 2 ಶತಕ, 9 ಅರ್ಧಶತಕ ಸಹಿತ 1062 ರನ್ ಸಿಡಿಸಿದ್ದಾರೆ.

ಶುಭ್ಮನ್ ಬಳಿಕ ಈ ಸಾಧನೆಗೈದ ವಿಶ್ವದ 2ನೇ ಆಟಗಾರ ನಿಸ್ಸಾಂಕ; ಈ ದಾಖಲೆಯ ಹೊಸ್ತಿಲಲ್ಲಿ ರೋಹಿತ್-ಕೊಹ್ಲಿ

Thursday, October 26, 2023

ಇಂಗ್ಲೆಂಡ್​ ವಿರುದ್ಧ ಶ್ರೀಲಂಕಾ ಭರ್ಜರಿ ಜಯ ಸಾಧಿಸಿದ್ದು, ಏಕದಿನ ವಿಶ್ವಕಪ್ 2023 ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಆದರೆ ಪಾಕಿಸ್ತಾನ 6ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಉಭಯ ತಂಡಗಳು 5 ಪಂದ್ಯಗಳಿಂದ 2 ಗೆಲುವಿನೊಂದಿಗೆ 4 ಅಂಕ ಪಡೆದಿವೆ. ಆದರೆ ನೆಟ್​ ರನ್​ ರೇಟ್ ಪಾಕಿಸ್ತಾನಕ್ಕಿಂತ (-0.400) ಶ್ರೀಲಂಕಾದ್ದು (-0.205) ಉತ್ತಮವಾಗಿದೆ.

ಗೆದ್ದು ಮೇಲೆದ್ದು ಪಾಕಿಸ್ತಾನ ತಂಡವನ್ನು ಕೆಳಕ್ಕೆ ತಳ್ಳಿದ ಶ್ರೀಲಂಕಾ; ಅಂಕಪಟ್ಟಿ ಹೀಗಿದೆ ನೋಡಿ

Thursday, October 26, 2023

ಐಸಿಸಿ ವಿಶ್ವಕಪ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿ ಇನ್ನೂ ಖಾತೆಯನ್ನೇ ತೆರೆದಿಲ್ಲ. ಶ್ರೀಲಂಕಾ, ಅಫ್ಘಾನಿಸ್ತಾನ ಕೂಡ ಇದೇ ಹಾದಿಯಲ್ಲಿವೆ. ಈವರೆಗೆ ಯಾವ ಯಾವ ತಂಡಗಳು ಗೆಲುವಿನ ಖಾತೆ ತೆರೆದಿಲ್ಲ ಅನ್ನೋದರ ಮಾಹಿತಿ ಇಲ್ಲಿದೆ.

ICC ODI World Cup Teams: 5 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಸೇರಿ ವಿಶ್ವಕಪ್‌ನಲ್ಲಿ ಇನ್ನ ಗೆಲುವಿನ ಖಾತೆಯನ್ನೇ ತೆರೆಯದ ತಂಡಗಳು ಇವೇ

Sunday, October 15, 2023

ನಿನ್ನೆಯಷ್ಟೇ (ಅಕ್ಟೋಬರ್ 10, ಮಂಗಳವಾರ) ಹೈದರಾಬಾದ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಬೃಹತ್ ಮೊತ್ತವನ್ನು ಚೇಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾ ನೀಡಿದ್ದ 345 ರನ್‌ಗಳ ಗುರಿಯನ್ನು ಇನ್ನೂ 10 ಎಸೆತಗಳು ಬಾಕಿ ಇರುವಂತೆ ಮುಟ್ಟಿದೆ. ಆ ಮೂಲಕ ಐಸಿಸಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಈ ಪಂದ್ಯದಲ್ಲಿ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ 121 ಎಸೆತಗಳಲ್ಲಿ 131 ರನ್ ಬಾರಿಸಿದರು. ಈ ಪಟ್ಟಿಯಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ.

World Cup Records: ಐಸಿಸಿ ವಿಶ್ವಕಪ್‌ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ಚೇಸ್ ಮಾಡಿ ಗೆದ್ದ ಅಗ್ರ 5 ತಂಡಗಳು ಇವೇ; ಫೋಟೊಸ್

Wednesday, October 11, 2023

ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಬರೆದಿದೆ. ಶ್ರೀಲಂಕಾ ನೀಡಿದ್ದ 345 ರನ್‌ಗಳ ಬೃಹತ್ ಮೂತ್ತವನ್ನು ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿದೆ. ಪಾಕ್ ಪರ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ತಲಾ ಶತಕಗಳ ನೆರವಿನಿಂದ ಈ ಸಾಧನೆ ಮಾಡಿದೆ.

Pakistan vs Sri Lanka: ಶ್ರೀಲಂಕಾದ 345 ರನ್‌ಗಳ ಬೃಹತ್ ಮೊತ್ತ ಚೇಸ್ ಮಾಡಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹೊಸ ದಾಖಲೆ; ಫೋಟೊಸ್

Wednesday, October 11, 2023