t20-cricket News, t20-cricket News in kannada, t20-cricket ಕನ್ನಡದಲ್ಲಿ ಸುದ್ದಿ, t20-cricket Kannada News – HT Kannada

Latest t20 cricket Photos

ರಶೀದ್ ಖಾನ್ ಪ್ರಸ್ತುತ ನಡೆಯುತ್ತಿರುವ ಎಸ್ಎ 20 ನಲ್ಲಿ ಎಂಐ ಕೇಪ್ ಟೌನ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಫೈನಲ್​ಗೆ ಕೊಂಡೊಯ್ದಿದ್ದಾರೆ. 9 ಇನ್ನಿಂಗ್ಸ್​​ಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.

ಟಿ20 ಕ್ರಿಕೆಟ್‌: ಹೊಸ ಚರಿತ್ರೆ ಸೃಷ್ಟಿಸಿದ ರಶೀದ್ ಖಾನ್; ಸಿಎಸ್​ಕೆ ಸ್ಟಾರ್ ಡ್ವೇನ್​ ಬ್ರಾವೋ ವಿಶ್ವದಾಖಲೆ ಧ್ವಂಸ

Wednesday, February 5, 2025

17 ಎಸೆತಗಳಲ್ಲಿ ಅರ್ಧಶತಕ, 37 ಎಸೆತಗಳಲ್ಲಿ 100 ಪೂರೈಸಿದ ಎಡಗೈ ಬ್ಯಾಟರ್​​ ಭಾರತದ ಪರ ವೇಗದ ಸೆಂಚುರಿ ಸಿಡಿಸಿದ ಎರಡನೇ ಆಟಗಾರ. ಈ ಪಟ್ಟಿಯಲ್ಲಿ ರೋಹಿತ್​ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ.

ಟಿ20ಐ ಕ್ರಿಕೆಟ್​ನಲ್ಲಿ ವೇಗದ ಸೆಂಚುರಿ ಸಿಡಿಸಿದರೂ ಅಗ್ರ-5ರಲ್ಲಿಲ್ಲ ಅಭಿಷೇಕ್ ಶರ್ಮಾ; ಇವರಿಗಿಂತ ಮುಂದಿರೋದು ಯಾರು?

Monday, February 3, 2025

2024ರ ಪುರುಷರ ಟಿ20 ವಿಶ್ವಕಪ್‌ನಲ್ಲಿಯೂ ದಕ್ಷಿಣ ಆಫ್ರಿಕಾ ಫೈನಲ್ ತಲುಪಿತ್ತು. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. (ಗೆಟ್ಟಿ ಫೋಟೋ.)

2 ವರ್ಷಗಳಲ್ಲಿ 4 ಐಸಿಸಿ ಈವೆಂಟ್ ಫೈನಲ್‌ಗಳಲ್ಲಿ ಸೋತ ದಕ್ಷಿಣ ಆಫ್ರಿಕಾ; ಐದನೇಯದ್ದಾದರೂ ಗೆಲ್ಲುತ್ತಾರಾ ಹರಿಣಗಳು

Monday, February 3, 2025

ಈ ಹಿಂದೆ ಇದೇ ದಾಖಲೆ ವರುಣ್ ಚಕ್ರವರ್ತಿ ಹೆಸರಿನಲ್ಲೇ. ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳಲ್ಲಿ ಅವರು 12 ವಿಕೆಟ್ ಪಡೆದಿದ್ದರು. ಇದರೊಂದಿಗೆ ದ್ವಿಪಕ್ಷೀಯ ಟಿ20ಐ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ಬರೆದಿದ್ದರು.

Varun Chakravarthy: ಅತಿ ಹೆಚ್ಚು ವಿಕೆಟ್, ಸತತ 2 ಸರಣಿಗಳಲ್ಲಿ ಒಂದೇ ದಾಖಲೆ ಮುರಿದ ವರುಣ್ ಚಕ್ರವರ್ತಿ

Monday, February 3, 2025

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ, 82 ರನ್‌ಗಳಿಗೆ ಆಲೌಟ್‌ ಆಯ್ತು. ಇದಕ್ಕೆ ಪ್ರತಿಯಾಗಿ ಸುಲಭ ಚೇಸಿಂಗ್‌ ನಡೆಸಿದ ಭಾರತ ತಂಡ, ಕೇವಲ 11.2 ಓವರ್‌ಗಳಲ್ಲೇ 1 ವಿಕೆಟ್‌ ಮಾತ್ರ ಕಳೆದುಕೊಂಡು 84 ರನ್‌ ಗಳಿಸಿ ಗುರಿ ತಲುಪಿತು.

ಭಾರತ ಅಂಡರ್‌ 19 ವಿಶ್ವಕಪ್ ಚಾಂಪಿಯನ್: ಅತಿ ಹೆಚ್ಚು ರನ್‌, ವಿಕೆಟ್‌, ಸರಣಿ ಶ್ರೇಷ್ಠ ಪ್ರಶಸ್ತಿ ವಿಜೇತರ ಪಟ್ಟಿ

Sunday, February 2, 2025

ಬದಲಿ ಆಟಗಾರನಾಗಿ ಟಿ20 ಪದಾರ್ಪಣೆ ಮಾಡಿದ ರಾಣಾ ಪಂದ್ಯದ ಮೇಲೆ ಪ್ರಭಾವ ಬೀರಿದರು. ತಮ್ಮ ನಾಲ್ಕು ಓವರ್‌ಗಳಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟು 3 ಪ್ರಮುಖ ವಿಕೆಟ್‌ಗಳನ್ನು ಪಡೆದರು.

ಕನ್ಕಷನ್ ಬದಲಿ ಆಟಗಾರನಾಗಿ ಟಿ20 ಪದಾರ್ಪಣೆ ಮಾಡಿದ ಭಾರತದ ಮೊದಲ ಆಟಗಾರ ಹರ್ಷಿತ್ ರಾಣಾ; ಏನಿದು ನಿಯಮ?

Saturday, February 1, 2025

ರಣಜಿಯಲ್ಲಿ ಈಡನ್ ಗಾರ್ಡರ್ನ್ಸ್​ನಲ್ಲಿ ಇಂದು (ಜನವರಿ 30) ನಡೆಯುತ್ತಿರುವ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್ ಪರ ಕಣಕ್ಕಿಳಿದಿರುವ ವೃದ್ಧಿಮಾನ್ ಸಾಹ ಈ ಪಂದ್ಯದ ನಂತರ ವೃತ್ತಿಪರ ಕ್ರಿಕೆಟ್​ನಿಂದ ನಿವೃತ್ತರಾಗಲಿದ್ದಾರೆ. ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದ ಈ ಆಟಗಾರನಿಗೆ ವಿದಾಯದ ಪಂದ್ಯ; ಹೀಗಿದೆ ಆತನ ಅಂಕಿ-ಅಂಶ

Thursday, January 30, 2025

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 12 ವಿಕೆಟ್‌ ಕಬಳಿಸಿದ್ದ ವರುಣ್‌, ಭಾರತದ ಪರ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಇದೀಗ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 3ನೇ ಟಿ20ಯಲ್ಲಿ 5 ವಿಕೆಟ್ ಕಬಳಿಸಿ ಹಲವು ದಾಖಲೆ ನಿರ್ಮಿಸಿದ ವರುಣ್ ಚಕ್ರವರ್ತಿ

Tuesday, January 28, 2025

ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ 2024ರ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕಳೆದ ವರ್ಷ ಅವರು ಅತಿ ಹೆಚ್ಚು, ಅಂದರೆ 71 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಬುಮ್ರಾ ಈ ಪ್ರಶಸ್ತಿಯನ್ನು ಗೆದ್ದ ಆರನೇ ಭಾರತೀಯ ಆಟಗಾರ. 6 ವರ್ಷಗಳ ಬಳಿಕ ಭಾರತಕ್ಕೆ ಈ ಪ್ರಶಸ್ತಿ ಬಂದಿದ್ದು, ಬುಮ್ರಾ ಬರ ನೀಗಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ; 6 ವರ್ಷಗಳ ಬರ ನೀಗಿಸಿದ ವೇಗಿ, ಈವರೆಗೆ ಐಸಿಸಿ ಗೌರವ ಪಡೆದ ಭಾರತೀಯರಿವರು

Monday, January 27, 2025

ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ಕಮಿಂದು ಮೆಂಡಿಸ್ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಅವರು ಶ್ರೀಲಂಕಾ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಿಶೇಷವಾಗಿ ಟೆಸ್ಟ್‌ನಲ್ಲಿ ಗಮನ ಸೆಳೆದರು. ಹೀಗಾಗಿ ಐಸಿಸಿ ಎಮರ್ಜಿಂಗ್‌ ಪ್ಲೇಯರ್‌ ಪ್ರಶಸ್ತಿ ಲಭಿಸಿದೆ. (ಚಿತ್ರ: X)

ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಶ್ರೀಲಂಕಾದ ಯುವ ಕ್ರಿಕೆಟಿಗನಿಗೆ ಐಸಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿ

Monday, January 27, 2025

ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಸೂಪರ್‌ ಸಿಕ್ಸ್‌ ಹಂತಕ್ಕೆ ಬಂದ ವನಿತೆಯರು, ಬಾಂಗ್ಲಾದೇಶದ ವಿರುದ್ಧವೂ ಅಬ್ಬರಿಸಿದರು. ವೈಷ್ಣವಿ ಶರ್ಮಾ ಹಾಗೂ ಜಿ ತ್ರಿಶಾ ಅಬ್ಬರದಾಟಕ್ಕೆ ಸುಲಭ ಗೆಲುವು ಒಲಿದಿದೆ.

ಅಂಡರ್ 19 ವನಿತೆಯರ ವಿಶ್ವಕಪ್; ಬಾಂಗ್ಲಾದೇಶ ವಿರುದ್ಧವೂ ಭಾರತಕ್ಕೆ 8 ವಿಕೆಟ್‌ ಜಯಭೇರಿ

Sunday, January 26, 2025

ಇಂಗ್ಲೆಂಡ್ ವಿರುದ್ಧ 72 ರನ್‌ಗಳ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದ ತಿಲಕ್ ವರ್ಮಾ ಈಗ ಸತತ 5 ಇನ್ನಿಂಗ್ಸ್‌ಗಳಲ್ಲಿ 338 ರನ್‌ ಗಳಿಸಿದ್ದಾರೆ. ಹೈದರಾಬಾದ್​ನ ಆಟಗಾರ ಈ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ಭಾರತಕ್ಕೆ ಗೆಲುವಿನ ತಿಲಕವನ್ನಿಟ್ಟ ತಿಲಕ್ ವರ್ಮಾ ದಾಖಲೆ; ಕೊಹ್ಲಿ-ಸ್ಯಾಮ್ಸನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಹೈದರಾಬಾದ್ ಆಟಗಾರ

Sunday, January 26, 2025

2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಯುವ ವೇಗಿ ಅರ್ಷದೀಪ್ ಸಿಂಗ್, ಕಳೆದ ವರ್ಷ (2024) ಈ ಸ್ವರೂಪದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ಕಳೆದ ವರ್ಷ ಭಾರತ ತಂಡವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರ್ಷದೀಪ್‌, ಐಸಿಸಿ ಪ್ರಶಸ್ತಿ ಗೆದ್ದಿದ್ದಾರೆ.

ಬಾಬರ್ ಅಜಮ್-ಟ್ರಾವಿಸ್ ಹೆಡ್ ಹಿಂದಿಕ್ಕಿ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಪಡೆದ ಅರ್ಷದೀಪ್ ಸಿಂಗ್

Saturday, January 25, 2025

ICC ವರ್ಷದ ಟಿ20 ತಂಡ 2024: ರೋಹಿತ್ ಶರ್ಮಾ (ನಾಯಕ), ಟ್ರಾವಿಸ್ ಹೆಡ್, ಫಿಲ್ ಸಾಲ್ಟ್, ಬಾಬರ್ ಆಜಮ್, ನಿಕೋಲಸ್ ಪೂರನ್ (ವಿಕೆಟ್‌ ಕೀಪರ್), ಸಿಕಂದರ್ ರಾಜಾ, ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ವನಿಂದು ಹಸರಂಗ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.

ಐಸಿಸಿ ವರ್ಷದ ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕ; ವಿರಾಟ್‌ ಕೊಹ್ಲಿ ಇಲ್ಲ, 11ರ ಪೈಕಿ ಭಾರತದ ನಾಲ್ವರಿಗೆ ಸ್ಥಾನ

Saturday, January 25, 2025

ಪಂದ್ಯದಲ್ಲಿ ಬಟ್ಲರ್ 33 ರನ್ ಗಳಿಸಿದ ವೇಳೆ ಒಟ್ಟಾರೆ ಟಿ20 ಇತಿಹಾಸದಲ್ಲಿ (ದೇಶೀಯ-ಅಂತಾರಾಷ್ಟ್ರೀಯ) ಕ್ರಿಕೆಟ್​​ನಲ್ಲಿ​ 12,000 ರನ್​​ ಪೂರೈಸಿದರು. ಇದರೊಂದಿಗೆ ದಿಗ್ಗಜರ ಎಲೈಟ್ ಪಟ್ಟಿಗೆ ಸೇರಿದ್ದಾರೆ.

Jos Buttler: ಭಾರತದ ವಿರುದ್ಧ ಸೋತರೂ ವಿಶ್ವದಾಖಲೆ ನಿರ್ಮಿಸಿದ ಜೋಸ್ ಬಟ್ಲರ್

Thursday, January 23, 2025

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಎರಡು ವಿಕೆಟ್ ಉರುಳಿಸಿದ ಭಾರತದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ದಾಖಲೆ ನಿರ್ಮಿಸಿದ್ದಾರೆ.

Hardik Pandya: ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಕಿತ್ತು ಭುವನೇಶ್ವರ್, ಬುಮ್ರಾ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ

Thursday, January 23, 2025

ಎರಡು ತಿಂಗಳ ನಂತರ ಚುಟುಕು ಸ್ವರೂಪದಲ್ಲಿ ಭಾರತ ತಂಡ ಕಣಕ್ಕಿಳಿಯುತ್ತಿದೆ. ಜೋಸ್ ಬಟ್ಲರ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಆಂಗ್ಲರ ಬಳಗವು ಈಗಾಗಲೇ ಮೊದಲ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದೆ. ಆದರೆ, ಭಾರತದ ಆಡುವ ಬಳಗ ಪಂದ್ಯದ ಸಮಯದಲ್ಲೇ ತಿಳಿಯಲಿದೆ.

ಭಾರತ vs ಇಂಗ್ಲೆಂಡ್ ಮೊದಲ ಟಿ20: ಸಮಯ, ಆಡುವ ಬಳಗ, ಮುಖಾಮುಖಿ ದಾಖಲೆ ಮತ್ತು ನೇರಪ್ರಸಾರ ವಿವರ

Wednesday, January 22, 2025

18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 23ರಿಂದ ಮೆಗಾ ಟೂರ್ನಿ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಬಹಿರಂಗಪಡಿಸಿದ್ದಾರೆ. ಹಾಗಿದ್ದರೆ ಫೈನಲ್, ಕ್ವಾಲಿಫೈಯರ್​, ಎಲಿಮಿನೇಟರ್​ ಪಂದ್ಯಗಳು ಎಲ್ಲಿ ನಡೆಯಲಿವೆ? ಇಲ್ಲಿದೆ ವಿವರ.

ಮಾರ್ಚ್ 23ರಿಂದ ಐಪಿಎಲ್ ಪ್ರಾರಂಭ; ಕ್ವಾಲಿಫೈಯರ್​, ಎಲಿಮಿನೇಟರ್, ಫೈನಲ್ ಪಂದ್ಯಗಳು ನಡೆಯೋದು ಎಲ್ಲಿ?

Monday, January 13, 2025

ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್‌ ಕಂಡ ಮಹಾಗೋಡೆ. ಟೆಸ್ಟ್‌ನಲ್ಲಿ ಅವರ ಸುದೀರ್ಘ ಇನ್ನಿಂಗ್ಸ್‌ಗಳು ವಿಶೇಷ. ಭಾರತೀಯ ಕ್ರಿಕೆಟ್‌ನಲ್ಲಿ ಕೆಲವೊಂದು ಸೋಲುಗಳಿಂದಾಗಿ ಹಲವು ಬಾರಿ ಸಾಕಷ್ಟು ಟೀಕೆಗಳನ್ನು ಕೂಡಾ ಎದುರಿಸಿದ್ದಾರೆ. ಆಟಗಾರನಾಗಿ ಮಾತ್ರವಲ್ಲದೆ ಭಾರತೀಯ ತಂಡದ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಐತಿಹಾಸಿಕ ವಿಜಯದ ಭಾಗವಾಗಿದ್ದಾರೆ

ರಾಹುಲ್ ದ್ರಾವಿಡ್‌ ಹುಟ್ಟುಹಬ್ಬ: ಐಸಿಸಿ ಟ್ರೋಫಿ ಬರ ನೀಗಿಸಿದ ಟೀಮ್‌ ಇಂಡಿಯಾ ಯಶಸ್ವಿ ಕೋಚ್ ದಾಖಲೆಗಳ ಚಿತ್ರಣ

Saturday, January 11, 2025

ಪ್ರಮುಖ ಟೂರ್ನಿಗೆ ಆಯ್ಕೆಯಾಗಲು ಅರ್ಧ ಡಜನ್‌ನಷ್ಟು ವಿಕೆಟ್ ಕೀಪರ್‌ಗಳು ಕಾಯುತ್ತಿದ್ದಾರೆ. ಅವರಲ್ಲಿ ಇಬ್ಬರು ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಕೆಲವು ವಿಕೆಟ್‌ ಕೀಪರ್‌ಗಳು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗುವ ರೇಸ್‌ನಿಂದ ಹೊರಗುಳಿಯಲಿದ್ದಾರೆ.

ಇಂಗ್ಲೆಂಡ್ ಸರಣಿ, ಚಾಂಪಿಯನ್ಸ್ ಟ್ರೋಫಿ; ಭಾರತ ತಂಡಕ್ಕೆ ಆಯ್ಕೆಯಾಗಲು 6 ವಿಕೆಟ್ ಕೀಪರ್‌ಗಳ ನಡುವೆ ಸ್ಪರ್ಧೆ

Friday, January 10, 2025