logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Debt Remedies Astrology: ಸಾಲದ ಹೊರೆಯಿಂದ ಮುಕ್ತಿ ಪಡೆಯುವುದು ಹೇಗೆ? ಗಂಗಾ ಜಲದಲ್ಲಿರುವ ಶಕ್ತಿ ಏನು?

Debt remedies astrology: ಸಾಲದ ಹೊರೆಯಿಂದ ಮುಕ್ತಿ ಪಡೆಯುವುದು ಹೇಗೆ? ಗಂಗಾ ಜಲದಲ್ಲಿರುವ ಶಕ್ತಿ ಏನು?

Nov 29, 2022 08:47 AM IST

Debt remedies astrology: ಸಾಲದ ಹೊರೆಯಿಂದ ಮುಕ್ತಿ ಬೇಕು, ಮನೆಯ ಋಣಾತ್ಮಕ ಶಕ್ತಿ ದೂರಾಗಬೇಕು, ಪರಿಹಾರ ಏನು? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು? ಗಂಗಾಜಲದ ಶಕ್ತಿ ಏನು? ಇಲ್ಲಿದೆ ವಿವರ.

  • Debt remedies astrology: ಸಾಲದ ಹೊರೆಯಿಂದ ಮುಕ್ತಿ ಬೇಕು, ಮನೆಯ ಋಣಾತ್ಮಕ ಶಕ್ತಿ ದೂರಾಗಬೇಕು, ಪರಿಹಾರ ಏನು? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು? ಗಂಗಾಜಲದ ಶಕ್ತಿ ಏನು? ಇಲ್ಲಿದೆ ವಿವರ.
ಗಂಗಾ ಭಾರತದ ಅತ್ಯಂತ ಪವಿತ್ರ ನದಿ ಎಂದು ಪರಿಗಣಿಸಲ್ಪಟ್ಟಿದೆ. ಗಂಗೋತ್ರಿ ಹಿಮನದಿಯೇ ಇದರ ಉಗಮ ಸ್ಥಾನ. ಮಾನವ ಜೀವನದಲ್ಲಿ ಪರಿಶುದ್ಧತೆಯನ್ನು ತರುವ ನದಿ ಗಂಗಾ ಎಂಬುದು ನಂಬಿಕೆ. ಅದರ ಪವಿತ್ರ ನೀರಿನಲ್ಲಿ ಸ್ನಾನ ಮಾಡುವ ಮೂಲಕ ವ್ಯಕ್ತಿಯು ಶುದ್ಧನಾಗುತ್ತಾನೆ. ಈ ನದಿಯು ಸ್ವರ್ಗದಲ್ಲಿ ಹರಿಯಿತು ಮತ್ತು ಭೂಮಿಯನ್ನು ಶುದ್ಧೀಕರಿಸಲು ಭೂಮಿಗೆ ಕರೆ ತರಲಾಯಿತು ಎಂಬುದು ಹಿಂದೂಗಳ ನಂಬಿಕೆ. ಭಗವಾನ್ ಪರಶಿವನು ತಾಯಿ ಗಂಗೆಯನ್ನು ತನ್ನ ತಲೆಯ ಮೇಲೆ ಹರಿಯಬಿಟ್ಟು ಅಲ್ಲಿಂದ ಏಳು ಉಪನದಿಗಳಾಗಿ ಹರಿಯುವಂತೆ ಮಾಡಿದನು. ಪ್ರಾಚೀನ ರೂಢಿ ಪ್ರಕಾರ, ಗಂಗಾಜಲವನ್ನು ಧಾರ್ಮಿಕ ಮತ್ತು ಮಂಗಳಕರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಮಗುವಿನ ಜನನವಾಗಲಿ ಅಥವಾ ಯಾರೊಬ್ಬರ ಮರಣವಾಗಲಿ, ಗಂಗಾಜಲದಿಂದ ಎಲ್ಲರೂ ಪುನೀತರಾಗುತ್ತಾರೆ. ಜ್ಯೋತಿಷ್ಯ ಶಾಸ್ತ್ರವು ಈ ನಿಟ್ಟಿನಲ್ಲಿ ಹಲವು ರೀತಿಯ ಉಪಕ್ರಮಗಳನ್ನು ನೀಡಿದೆ. ಅವುಗಳ ಬಗ್ಗೆ ತಿಳಿಯೋಣ.
(1 / 5)

ನಿಮಗೆ ಬಹಳಷ್ಟು ಸಾಲಗಳಿದ್ದರೆ, ಹಿತ್ತಾಳೆಯ ಪಾತ್ರೆಯಲ್ಲಿ ಗಂಗಾಜಲವನ್ನು ತೆಗೆದುಕೊಂಡು ಮನೆಯ ಈಶಾನ್ಯ ಮೂಲೆಯಲ್ಲಿ ಗಂಗಾಜಲವನ್ನು ಇರಿಸಿ. ಕಲಶದ ಬಾಯಿಯನ್ನು ಕೆಂಪು ಬಟ್ಟೆಯಿಂದ ಮುಚ್ಚಿ. ಈ ಪರಿಹಾರ ಕ್ರಮ ಮಾಡುವುದರಿಂದ ಕ್ರಮೇಣ ಸಾಲ ಮುಕ್ತವಾಗುತ್ತದೆ. (ಸಾಲ ಮರುಪಾವತಿಯನ್ನು ಕೂಡ ಕ್ರಮದಂತೆ ತಪ್ಪದೇ ಮಾಡಬೇಕು)
(2 / 5)

ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ಗಂಗಾಜಲದ ಈ ಪರಿಹಾರವು ಸೂಕ್ತ. ಸತತ 40 ದಿನಗಳ ಕಾಲ ಹಿತ್ತಾಳೆಯ ಪಾತ್ರೆಯಲ್ಲಿ ಸರಳ ನೀರನ್ನು ತುಂಬಿಸಿ, 11 ಹನಿ ಗಂಗಾಜಲವನ್ನು ಸೇರಿಸಿ ಮತ್ತು 5 ಗಂಟೆಗಳ ಬಳಿಕ ಶಿವಲಿಂಗಕ್ಕೆ ಅರ್ಪಿಸಿ. ಈ ಪರಿಹಾರವು ಕೆಲಸದ ಅಡೆತಡೆಗಳನ್ನು ನಿವಾರಿಸುತ್ತದೆ.
(3 / 5)

ಮನೆಯಲ್ಲಿ ಯಾರದ್ದಾದರೂ ಮದುವೆಗೆ ಅಡ್ಡಿ ಉಂಟಾದರೆ ಗಂಗಾಜಲ ಮತ್ತು ಚಿಟಿಕೆ ಅರಿಶಿನವನ್ನು ಸ್ನಾನದ ನೀರಿನಲ್ಲಿ ಸೇರಿಸಿ ನಿರಂತರ 21 ದಿನಗಳ ಕಾಲ ಅದೇ ನೀರಿನಲ್ಲಿ ಸ್ನಾನ ಮಾಡಿ. ಈ ಪರಿಹಾರವು ವೈವಾಹಿಕ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.
(4 / 5)

ಗಂಗಾಜಲವನ್ನು ಅತ್ಯಂತ ಪವಿತ್ರ ಜಲವೆಂದು ಪರಿಗಣಿಸಲಾಗಿದೆ, ಇದು ಅನೇಕ ಅದ್ಭುತ ಗುಣಗಳನ್ನು ಹೊಂದಿದೆ. ಮನೆಯಲ್ಲಿ ಗಂಗಾಜಲವನ್ನು ಇಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ. ಭೋಲೆನಾಥ ದೇವರಿಗೆ ಪ್ರತಿದಿನ ಗಂಗಾಜಲವನ್ನು ಅರ್ಪಿಸಿದರೆ ಆತನ ಆಶೀರ್ವಾದ ನಿಮ್ಮ ಮೇಲಿರುತ್ತದೆ. (ಇದು ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದ್ದು, ಇದನ್ನು HTಕನ್ನಡ ದೃಢೀಕರಿಸುವುದಿಲ್ಲ. ಪ್ರಾಥಮಿಕ ಮಾಹಿತಿಗಾಗಿ ಮಾತ್ರವೇ ಇದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಷಯವಾಗಿ ಜ್ಯೋತಿಷ್ಯ ಶಾಸ್ತ್ರದ ಪರಿಣತರನ್ನು, ಧರ್ಮಕರ್ಮ ವಿಭಾಗದ ಪರಿಣತರ ಮಾರ್ಗದರ್ಶನ ಪಡೆಯುವುದು ಒಳಿತು.)
(5 / 5)

    ಹಂಚಿಕೊಳ್ಳಲು ಲೇಖನಗಳು