logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vasant Panchami 2024: ವಿದ್ಯಾಧಿದೇವತೆ ಸರಸ್ವತಿಯನ್ನು ಪೂಜಿಸುವ ದಿನವಿದು; ವಸಂತ ಪಂಚಮಿ ದಿನ, ಸಮಯ ಮತ್ತು ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ

Vasant Panchami 2024: ವಿದ್ಯಾಧಿದೇವತೆ ಸರಸ್ವತಿಯನ್ನು ಪೂಜಿಸುವ ದಿನವಿದು; ವಸಂತ ಪಂಚಮಿ ದಿನ, ಸಮಯ ಮತ್ತು ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ

HT Kannada Desk HT Kannada

Jan 29, 2024 05:38 PM IST

google News

ವಸಂತ ಪಂಚಮಿ

    • Sarswati Puja: ಸರಸ್ವತಿ ದೇವಿಯನ್ನು ವಸಂತ ಪಂಚಮಿಯಂದು ಪೂಜಿಸಲಾಗುತ್ತದೆ. ಈ ಮಂಗಳಕರ ದಿನದಂದು ದೇವಿಯನ್ನು ಪೂಜಿಸುವುದರಿಂದ ಎಲ್ಲಾ ಆಲಸ್ಯಗಳು ದೂರವಾಗಿ, ಜೀವನದಲ್ಲಿ ಯಶಸ್ಸುಗಳಿಸಬಹುದಾಗಿದೆ ಎಂಬುದು ಹಲವರ ನಂಬಿಕೆ.
ವಸಂತ ಪಂಚಮಿ
ವಸಂತ ಪಂಚಮಿ (HT File Photo)

ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಪ್ರತಿ ಹಬ್ಬದಲ್ಲೂ ನಿರ್ದಿಷ್ಟ ದೇವರನ್ನು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಮಾಸದಲ್ಲೂ ಒಂದೊಂದು ದೇವರನ್ನು ಆರಾಧಿಸಲಾಗುತ್ತದೆ. ಶಿವರಾತ್ರಿಯಲ್ಲಿ ಶಿವ, ಗಣೇಶ ಚತುರ್ಥಿಯಲ್ಲಿ ಗಣಪತಿ, ನವರಾತ್ರಿಯಲ್ಲಿ ದುರ್ಗಾದೇವಿ ಹೀಗೆ ದೇವರನ್ನು ಆರಾಧಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಲಾಗುತ್ತದೆ. ಪ್ರತಿ ವರ್ಷ ದೇಶಾದ್ಯಂತ ವಸಂತ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಭಾರತದ ಕೆಲವು ರಾಜ್ಯಗಳಲ್ಲಿ ವಸಂತ ಪಂಚಮಿಯಂದು ದೇವಿ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಸರಸ್ವತಿಯು ವಿದ್ಯಾಧಿದೇವತೆಯಾಗಿದ್ದು, ವಿದ್ಯೆ, ಬುದ್ದಿ ನೀಡುವ ದೇವರೆಂದು ಪೂಜಿಸುತ್ತಾರೆ. ಸರಸ್ವತಿಯನ್ನು ಶ್ರದ್ಧಾ–ಭಕ್ತಿಯಿಂದ ಪೂಜಿಸುವುದರಿಂದ ತನ್ನ ಭಕ್ತರಿಗೆ ಜ್ಞಾನದ ಬೆಳಕನ್ನು ನೀಡುತ್ತಾಳೆ ಎಂದು ನಂಬಲಾಗಿದೆ. ದೇವಿ ಸರಸ್ವತಿಯು ಕಲೆ, ಸಂಗೀತ, ನೃತ್ಯ ಮತ್ತು ತಾಂತ್ರಜ್ಞಾನಗಳ ದೇವತೆಯೂ ಆಗಿದ್ದಾಳೆ. ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಬಯಸುವವರು ದೇವಿಯನ್ನು ಪೂಜಿಸಿ, ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಸರಸ್ವತಿ ದೇವಿಯನ್ನು ವಸಂತ ಪಂಚಮಿಯಂದು ಪೂಜಿಸಲಾಗುತ್ತದೆ. ಈ ಮಂಗಳಕರ ದಿನದಂದು ದೇವಿಯನ್ನು ಪೂಜಿಸುವುದರಿಂದ ಎಲ್ಲಾ ಆಲಸ್ಯಗಳು ದೂರವಾಗಿ, ಜೀವನದಲ್ಲಿ ಯಶಸ್ಸುಗಳಿಸಬಹುದಾಗಿದೆ ಎಂಬುದು ಹಲವರ ನಂಬಿಕೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿಯೂ ಸರಸ್ವತಿ ಪೂಜೆಯನ್ನು ಮಾಡಲಾಗುತ್ತದೆ. ಈ ವರ್ಷ ಸರಸ್ವತಿ ಪೂಜೆಯನ್ನು ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುತ್ತಿದೆ. ಹಾಗಾದ್ರೆ ಸರಸ್ವತಿ ಪೂಜೆಯನ್ನು ಯಾವ ದಿನದಂದು ಮಾಡಲಾಗುತ್ತದೆ ಮತ್ತು ಯಾವ ರೀತಿಯಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ?

ಇದನ್ನೂ ಓದಿ: Shankha: ದಕ್ಷಿಣಾಮೂರ್ತಿ ಶಂಖದ ಮಹತ್ವ, ಇದನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದಾಗುವ ಲಾಭವೇನು? ಇಲ್ಲಿದೆ ಮಾಹಿತಿ

ವಸಂತ ಪಂಚಮಿ ಯಾವಾಗ?

ಧೃಕ್‌ ಪಂಚಾಂಗದ ಪ್ರಕಾರ ಈ ವರ್ಷ ವಸಂತ ಪಂಚಮಿಯನ್ನು ಫೆಬ್ರವರಿ 14 ರಂದು ಆಚರಿಸಲಾಗುತ್ತಿದೆ. ಫೆಬ್ರವರಿ 13 ರ ಮಧ್ಯಾಹ್ನ 14:41 (2:41) ಕ್ಕೆ ಪಂಚಮಿ ತಿಥಿಯು ಪ್ರಾರಂಭವಾಗುತ್ತದೆ. ಮತ್ತು ಫೆಬ್ರವರಿ 14 ರ ಮಧ್ಯಾಹ್ನ 12:09 ಕ್ಕೆ ಕೊನೆಗೊಳ್ಳುತ್ತದೆ.

ವಸಂತ ಪಂಚಮಿಯ ಆಚರಣೆ ಹೇಗೆ?

ಈ ದಿನದಂದು ಭಕ್ತರು ಬೇಗ ಎದ್ದು ಸ್ನಾನ ಮಾಡಬೇಕು. ದಿನ ಪೂರ್ತಿ ಉಪವಾಸ ಇರಬೇಕು. ನಂತರ ಸರಸ್ವತಿ ದೇವಿಯ ವಿಗ್ರಹವನ್ನು ಹೂವು, ಮಾಲೆಗಳಿಂದ ಅಲಂಕರಿಸಬೇಕು. ದೇವಿಗೆ ಹಣ್ಣು, ಸಿಹಿತಿಂಡಿಗಳ ನೈವ್ಯೇದ್ಯ ಮಾಡಬೇಕು. ದೇವಿಯ ಆಶೀರ್ವಾದ ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ತಮ್ಮ ಪುಸ್ತಕ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟ ವಸ್ತುಗಳನ್ನಿಟ್ಟು ಪೂಜೆ ಮಾಡಬೇಕು. ಸರಸ್ವತಿ ದೇವಿಯ ಪೂಜೆ ಮುಗಿದ ನಂತರ ಭಕ್ತರು ತಮ್ಮ ಉಪವಾಸ ವ್ರತವನ್ನು ಮುಗಿಸಲು ದೇವರಿಗೆ ಪೂಜೆಗೆಂದು ಇಟ್ಟ ನೈವ್ಯೇದ್ಯವನ್ನು ಪ್ರಸಾದ ರೂಪದಲ್ಲಿ ಸ್ವಿಕರಿಸಲಾಗುತ್ತದೆ. ಈ ದಿನದಂದು ಪಾಲಕರು ತಮ್ಮ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸನ್ನು ಮಾಡಿಸುತ್ತಾರೆ. ಈ ದಿನದಿಂದ ಶಿಕ್ಷಣವನ್ನು ಪ್ರಾರಂಭಿಸಿದರೆ ಸರಸ್ವತಿ ದೇವಿಯ ಕೃಪಾಕಟಾಕ್ಷ ನಮ್ಮ ಮೇಲಿರಲಿದೆ ಎಂಬುದು ಹಲವಾರು ಭಕ್ತರ ನಂಬಿಕೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ