logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shami Plant: ಶಮೀ ವೃಕ್ಷ ಪೂಜಿಸಿದರೆ ಶನಿಯ ಆಶೀರ್ವಾದ ಪಡೆದಂತೆ; ಮನೆಯಲ್ಲಿ ಬೆಳೆಸಿದರೆ ಏನೆಲ್ಲಾ ಪ್ರಯೋಜನ? -ಇಲ್ಲಿದೆ ಮಾಹಿತಿ

Shami Plant: ಶಮೀ ವೃಕ್ಷ ಪೂಜಿಸಿದರೆ ಶನಿಯ ಆಶೀರ್ವಾದ ಪಡೆದಂತೆ; ಮನೆಯಲ್ಲಿ ಬೆಳೆಸಿದರೆ ಏನೆಲ್ಲಾ ಪ್ರಯೋಜನ? -ಇಲ್ಲಿದೆ ಮಾಹಿತಿ

Rakshitha Sowmya HT Kannada

Feb 02, 2024 03:05 PM IST

google News

ಶಮೀ ವೃಕ್ಷ ಪೂಜಿಸಿದರೆ ಶನಿಯ ಆಶೀರ್ವಾದ ಪಡೆದಂತೆ; ಮನೆಯಲ್ಲಿ ಬೆಳೆಸಿದರೆ ಏನೆಲ್ಲಾ ಪ್ರಯೋಜನ

  • Shami Plant: ಶಮೀ ವೃಕ್ಷವನ್ನು ಬನ್ನಿ ಮರ ಎಂದೂ ಕರೆಯುತ್ತಾರೆ. ಇದು ದೈವಿಕವಾಗಿ ಮಾತ್ರವಲ್ಲದೆ ತನ್ನ ಆಯುರ್ವೇದ ಗುಣಗಳಿಂದ ಕೂಡಾ ಹೆಸರುವಾಸಿಯಾಗಿದೆ. ಶಮೀ ವೃಕ್ಷ ಮನೆಯಲ್ಲಿದ್ದರೆ ಶನಿದೇವನ ಆಶೀರ್ವಾದ ಪಡೆದಂತೆ. ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಶಮೀ ವೃಕ್ಷ ಪೂಜಿಸಿದರೆ ಶನಿಯ ಆಶೀರ್ವಾದ ಪಡೆದಂತೆ; ಮನೆಯಲ್ಲಿ ಬೆಳೆಸಿದರೆ ಏನೆಲ್ಲಾ ಪ್ರಯೋಜನ
ಶಮೀ ವೃಕ್ಷ ಪೂಜಿಸಿದರೆ ಶನಿಯ ಆಶೀರ್ವಾದ ಪಡೆದಂತೆ; ಮನೆಯಲ್ಲಿ ಬೆಳೆಸಿದರೆ ಏನೆಲ್ಲಾ ಪ್ರಯೋಜನ (PC: @Jayalko1)

ಶಮೀ ವೃಕ್ಷದ ಉಪಯೋಗಗಳು: ಹಿಂದೂಗಳು ಶಮೀ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ. ಶಮೀ ವೃಕ್ಷದ ಪೂಜೆ ಮಾಡಿದರೆ ಶನಿದೇವನ ಕೋಪದಿಂದ ಪಾರಾಗಬಹುದು ಎಂದು ಹಿಂದೂ ಸಂಸ್ಕೃತಿಯಲ್ಲಿ ನಂಬಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ರಾಮಾಯಣ ಮತ್ತು ಮಹಾಭಾರತ ಎರಡರಲ್ಲೂ ಶಮೀ ಮರವನ್ನು ಉಲ್ಲೇಖಿಸಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ರಾಮಾಯಣದಲ್ಲಿ, ಲಂಕೆಯಲ್ಲಿ ಯುದ್ಧಕ್ಕೆ ಹೋಗುವ ಮೊದಲು ರಾಮನು ಶಮೀ ಗಿಡವನ್ನು ಪೂಜಿಸುತ್ತಾನೆ ಎಂದು ಹೇಳಲಾಗುತ್ತದೆ. ಮಹಾಭಾರತದಲ್ಲಿ ಅರ್ಜುನನು ತನ್ನ ಗಾಂಡೀವ ಧನುಸ್ಸನ್ನು ಶಮೀ ವೃಕ್ಷದ ಕೊಂಬೆಗಳಲ್ಲಿ ಬಚ್ಚಿಡುತ್ತಾನೆ. ಪಾಂಡವರು ತಮ್ಮ ವನವಾಸವನ್ನು ಮುಗಿಸಿದ ನಂತರ ಶಮೀ ಮರವನ್ನು ಪೂಜಿಸಿ ಕುರುಕ್ಷೇತ್ರ ಯುದ್ಧವನ್ನು ಗೆದ್ದರು ಎಂದು ಪುರಾಣಗಳು ಹೇಳುತ್ತವೆ.

ಮನೆಯಲ್ಲಿ ಶಮೀ ವೃಕ್ಷ ಏಕೆ ಇರಬೇಕು?

ಭಾರತೀಯ ದಂತಕಥೆಗಳ ಪ್ರಕಾರ, ರಾಮ ಮತ್ತು ಅರ್ಜುನರು ಶಮೀ ವೃಕ್ಷವನ್ನು ಪೂಜಿಸಿ ಆಶೀರ್ವಾದ ಪಡೆದರು. ಆದ್ದರಿಂದ ಅಂತಹ ಮಹಾನ್‌ ಪುರುಷರು ಪೂಜಿಸಿದ ಶಮೀ ದೇವರ ಸಮಾನ, ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶಮೀ ವೃಕ್ಷ ಮನೆಯಲ್ಲಿ ಇರಬೇಕೆಂದು ಹೇಳಲಾಗುತ್ತದೆ. ಶಮೀ ವೃಕ್ಷ ನಿಮ್ಮ ಮನೆಯಲ್ಲಿದ್ದರೆ, ಶನಿಯ ಕೃಪೆ ನಿಮ್ಮ ಮೇಲಿದ್ದಂತೆ. ಪೂಜೆ, ಯಜ್ಞ ಅಥವಾ ಹವನದ ಸಮಯದಲ್ಲಿ ದೇವತೆಗಳಿಗೆ ಶಮೀ ಎಲೆಗಳನ್ನು ಅರ್ಪಿಸುವುದರಿಂದ ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ದೇವರ ಆಶೀರ್ವಾದ ದೊರೆಯಲಿದೆ.

ಗಾಳಿಯನ್ನು ಶುದ್ಧೀಕರಿಸುತ್ತದೆ

ಶಮೀ ಮರವು ಗಾಳಿಯನ್ನು ಶುದ್ಧೀಕರಿಸುತ್ತದೆ. ಇತರ ಸಸ್ಯಗಳಂತೆ ಇದು ಹಾನಿಕಾರಕ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುತ್ತದೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮಗೆ ಸ್ವಚ್ಛ, ಆಹ್ಲಾದಕರ ವಾತಾವರಣವನ್ನು ನೀಡುತ್ತದೆ.

ಶಾಂತಿ ನೀಡುತ್ತದೆ

ಮನೆಯ ಸುತ್ತ ಹಸಿರು ಗಿಡಗಳಿದ್ದರೆ ಸುಂದರವಾಗಿರುತ್ತದೆ. ಶಮಿ ಸಸ್ಯದ ಉಪಸ್ಥಿತಿಯು ಮನಸ್ಸನ್ನು ಶಾಂತಗೊಳಿಸುತ್ತದೆ. ಮನಸ್ಸಿಗೆ ಸಮಾಧಾನ ನೀಡುತ್ತದೆ. ಇದರ ಹಸಿರು ಎಲೆಗಳು, ಗುಲಾಬಿ ಮತ್ತು ಹಳದಿ ಹೂವುಗಳು ವಿಶ್ರಾಂತಿಯ ಭಾವವನ್ನು ನೀಡುತ್ತವೆ. ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ.

ಆಯುರ್ವೇದದಲ್ಲಿ ಬಳಕೆ

ಆಯುರ್ವೇದದಲ್ಲಿ ಕೂಡಾ ಶಮೀ ವೃಕ್ಷದ ಎಲೆಗಳನ್ನು ಬಳಸಲಾಗುತ್ತದೆ. ಸಾಂಪ್ರದಾಯಿಕ ಭಾರತೀಯ ಔಷಧ ಪದ್ಧತಿ, ಶಮೀ ಸಸ್ಯದ ವಿವಿಧ ಭಾಗಗಳಾದ ಎಲೆಗಳು ಮತ್ತು ತೊಗಟೆಗಳು ಔಷಧೀಯ ಗುಣಗಳನ್ನು ಹೊಂದಿವೆ. ಶಮೀಯ ಎಲೆಗಳ ಪೇಸ್ಟನ್ನು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದನ್ನು ಮುಖದ ಮೇಲೆ ಉಜ್ಜುವುದರಿಂದ ದದ್ದುಗಳಿಂದ ಉಂಟಾಗುವ ಕಿರಿಕಿರಿ ಮತ್ತು ತುರಿಕೆ ನಿವಾರಣೆಯಾಗುತ್ತದೆ. ಮರದ ತೊಗಟೆಯಿಂದ ಮಾಡಿದ ಪುಡಿಯನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಶಮೀ ಮರವನ್ನು ಚರ್ಮ ರೋಗಗಳು ಮತ್ತು ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಶನಿ ದೇವನ ಆಶೀರ್ವಾದ ದೊರೆತಂತೆ

ವೈದಿಕ ಜ್ಯೋತಿಷ್ಯವು ಶಮಿ ಮರವನ್ನು ಶನಿ ಗ್ರಹದೊಂದಿಗೆ ಸಂಯೋಜಿಸುತ್ತದೆ. ಶನಿದೇವನ ದುಷ್ಪರಿಣಾಮಗಳಿಂದ ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆ ಉಂಟಾಗುತ್ತವೆ. ಕೆಲವೊಮ್ಮೆ ಹಣ, ಆರೋಗ್ಯ ಮತ್ತು ಆಯುಷ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಶನಿ ದೋಷವನ್ನು ಹೋಗಲಾಡಿಸಲು ಮತ್ತು ಅದರ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಶಮೀ ಗಿಡವನ್ನು ಮನೆಯಲ್ಲಿ ಇಡುವುದು ಒಳ್ಳೆಯದು. ಶಮಿ ವೃಕ್ಷವು ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಆರೈಕೆ ಬಹಳ ಮುಖ್ಯ

ಶಮೀ ಸಸ್ಯವು ಬೆಳವಣಿಗೆಯ ಸಂಕೇತ ಮಾತ್ರವಲ್ಲದೆ ಪವಿತ್ರವೂ ಆಗಿದೆ. ಅದಕ್ಕಾಗಿಯೇ ಶಮಿ ಸಸ್ಯದ ಆರೈಕೆಯು ಬಹಳ ಮುಖ್ಯವಾಗಿದೆ. ಸಸ್ಯಕ್ಕೆ ಸಾಕಷ್ಟು ಸೂರ್ಯನ ಬೆಳಕು ದೊರೆಯುವಂತೆ ಬೆಳೆಸಬೇಕು. ಶಮೀ ಗಿಡದ ಸುತ್ತ ಸ್ವಚ್ಛವಾಗಿರಬೇಕು. ಶನಿವಾರದಂದು ಶಮಿ ವೃಕ್ಷದ ಬಳಿ ದೀಪವನ್ನು ಹಚ್ಚಿದರೆ ಶನಿದೇವನ ಅನುಗ್ರಹ ದೊರೆಯುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ