ದೇವಸ್ಥಾನಗಳ ಮೇಲೆ ಕೇಸರಿ ಬಣ್ಣದ ಧ್ವಜ ಇರಿಸುವ ಉದ್ದೇಶವೇನು? ಇದರ ಅರ್ಥ, ಮಹತ್ವ ತಿಳಿಯಿರಿ
Feb 18, 2024 03:19 PM IST
ದೇವಸ್ಥಾನಗಳ ಮೇಲೆ ಧ್ವಜವನ್ನು ಏಕೆ ಹಾಕಲಾಗುತ್ತದೆ?
- Significance of Temple Flag: ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳ ಮೇಲೂ ಕೇಸರಿ ಬಣ್ಣದ ಧ್ವಜ ಹಾರಾಡುವುದನ್ನು ನೋಡಿರುತ್ತೀರಿ. ದೇವಸ್ಥಾನದ ಮೂಲ ಗೋಪುರದ ಮೇಲೆ ಧ್ವಜವನ್ನು ಏಕೆ ಹಾಕುತ್ತಾರೆ? ಅದರ ಹಿಂದಿರುವ ಆಧ್ಯಾತ್ಮಿಕ ಕಾರಣವೇನೆಂಬುದನ್ನು ಇಲ್ಲಿ ವಿವರಿಸಲಾಗಿದೆ.
ದೇವಸ್ಥಾನಕ್ಕೆ ಹೋದಾಗ ಗೋಪುರದ ಮೇಲೆ ಧ್ವಜ ಹಾರಾಡುವುದನ್ನು ನಾವು ನೋಡಿರುತ್ತೇವೆ. ಅದು ಚಿಕ್ಕ ದೇಗುಲವಿರಲಿ ಅಥವಾ ದೊಡ್ಡ ದೇಗುಲವಿರಲಿ ಧ್ವಜ ಇರುವುದನ್ನು ಕಾಣುತ್ತೇವೆ. ಆದರೆ ಧ್ವಜವನ್ನು ಏಕೆ ಹಾಕಲಾಗುತ್ತದೆ ಎಂಬುದು ಅನೇಕರಿಗೆ ಪ್ರಶ್ನೆಯಾಗಿ ಕಾಡುತ್ತದೆ. ಕೆಲವರು ಇದನ್ನು ಧ್ವಜವೆಂದು ಪರಿಗಣಿಸಿದರೆ ಇತರರು ಧಾರ್ಮಿಕ ಪದ್ಧತಿ ಅಥವಾ ನಂಬಿಕೆ ಎಂದು ಪರಿಗಣಿಸುತ್ತಾರೆ. ದೇವಾಲಯದ ಮೇಲ್ಭಾಗದಲ್ಲಿ ಈ ರೀತಿ ಧ್ವಜವನ್ನು ಏಕೆ ಸ್ಥಾಪಿಸಲಾಗುತ್ತದೆ? ಅದರ ಬಗ್ಗೆ ತಿಳಿದುಕೊಳ್ಳೋಣ.
ತಾಜಾ ಫೋಟೊಗಳು
ದೇವರ ಪ್ರಾತಿನಿಧ್ಯ
ದೇವಾಲಯದ ಮೇಲ್ಭಾಗದಲ್ಲಿ ಝಂಡಾ ಅಥವಾ ಧ್ವಜವನ್ನು ಸ್ಥಾಪಿಸಲು ಒಂದು ಪ್ರಮುಖ ಕಾರಣವೆಂದರೆ ನಿರ್ದಿಷ್ಟ ದೇವಾಲಯದಲ್ಲಿ ಪೂಜಿಸುವ ದೇವರ ಉಪಸ್ಥಿತಿಯನ್ನು ಸೂಚಿಸುತ್ತದೆ. ಧ್ವಜವು ದೇವಾಲಯದ ಪವಿತ್ರತೆಯನ್ನು ಸಂಕೇತಿಸುತ್ತದೆ. ಇದು ದೇವಾಲಯದಲ್ಲಿರುವ ದೇವರ ಬಗ್ಗೆ ಭಕ್ತರಿಗೆ ತಿಳಿಸುವುದಲ್ಲದೆ, ದೇವಾಲಯದ ದೈವಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಧ್ವಜದ ಮೇಲಿನ ಬಣ್ಣಗಳು ಮತ್ತು ಚಿಹ್ನೆಗಳು ಗರ್ಭಗುಡಿಯಲ್ಲಿರುವ ದೇವರಂತೆ ಕಾಣುತ್ತದೆ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಆ ಧ್ವಜವನ್ನು ನೋಡಿದಾಗ ಒಳಗಿರುವ ದೈವೀಶಕ್ತಿಯ ನೆನಪಾಗುತ್ತದೆ. ಅರ್ಜುನನು ತನ್ನ ರಥದ ಮೇಲೆ ಕಪಿ ಧ್ವಜವನ್ನು ಹಾಕಿದನು. ಇದು ಹನುಮಂತನ ಶಕ್ತಿ ಮತ್ತು ಆಶೀರ್ವಾದವನ್ನು ಸಂಕೇತಿಸುತ್ತದೆ.
ಇದನ್ನೂ ಓದಿ: Vasant Panchami 2024: ವಿದ್ಯಾಧಿದೇವತೆ ಸರಸ್ವತಿಯನ್ನು ಪೂಜಿಸುವ ದಿನವಿದು; ವಸಂತ ಪಂಚಮಿ ದಿನ, ಸಮಯ ಮತ್ತು ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ
ವಿಜಯದ ಸಂಕೇತ
ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಅನೇಕ ಸಂಸ್ಕೃತಿಗಳಲ್ಲಿ ಕೂಡಾ ಧ್ವಜಾರೋಹಣವನ್ನು ವಿಜಯದ ಸಂಕೇತವೆಂದು ಪರಿಗಣಿಸಲಾಗಿದೆ. ಮೇಲ್ಭಾಗದಲ್ಲಿರುವ ಧ್ವಜವು ಕೇವಲ ಅಲಂಕಾರಕ್ಕೆ ಸೀಮಿತವಾಗದೇ ವಿಜಯದ ಸಂಕೇತವಾಗಿದೆ. ದೇವಸ್ಥಾನದ ಮೇಲಿರುವ ಧ್ವಜವು ಅಜ್ಞಾನ, ಅಹಂಕಾರ, ಅಸೂಯೆ ಮತ್ತು ಕಾಮಗಳ ವಿರುದ್ಧ ಆಧ್ಯಾತ್ಮಿಕ ಯುದ್ಧಗಳನ್ನು ಗೆದ್ದ ಪವಿತ್ರ ಸ್ಥಳವನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಈ ಹಾರಾಡುವ ಧ್ವಜವು ಭಕ್ತರಿಗೆ ಪವಿತ್ರ ಸ್ಥಳಗಳ ಮೇಲೆ ಇರುವ ಗೊಂದಲಗಳನ್ನು ತೊಡೆದು ಹಾಕುತ್ತದೆ. ಇದು ಆಧ್ಯಾತ್ಮಿಕವಾಗಿ ನಮ್ಮ ಮನಸ್ಸನ್ನು ಹೇಗೆ ಜಯಿಸಬೇಕು ಎಂಬುದನ್ನು ತೋರಿಸುತ್ತದೆ.
ಕೇಸರಿ ಬಣ್ಣದ ಧ್ವಜದ ಮಹತ್ವ
ಕಾಷಾಯ ಅಥವಾ ಕೇಸರಿ ಬಣ್ಣದ ಧ್ವಜವು ಅನೇಕ ದೇವಾಲಯಗಳಲ್ಲಿ ಕಂಡುಬರುತ್ತದೆ. ಈ ಬಣ್ಣದ ಧ್ವಜವು ಪರಿತ್ಯಾಗದ ಸಂಕೇತವಾಗಿದೆ. ಸಾಮಾನ್ಯವಾಗಿ ಸಂತರು, ಋಷಿಗಳು ಈ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ನೋಡುತ್ತೇವೆ. ಇದರ ಅರ್ಥ ಅವರು ಪ್ರಾಪಂಚಿಕ ಆಸೆಗಳನ್ನು ತ್ಯಜಿಸಿದ ಜನರು ಎಂಬುದನ್ನು ಈ ಕೇಸರಿ ಬಣ್ಣವು ಸಂಕೇತಿಸುತ್ತದೆ. ಅಹಂಕಾರವನ್ನು ತ್ಯಜಿಸಿದ ಸಂಕೇತವಾಗಿದೆ. ಹಾರುವ ಕೇಸರಿ ಧ್ವಜವು, ಮಾನವರು ತಮ್ಮ ವೈಯಕ್ತಿಕ ಆಸೆಗಳನ್ನು ಮತ್ತು ಅಹಂಕಾರವನ್ನು ಹೋಗಲಾಡಿಸುವ ಅಗತ್ಯವನ್ನು ನೆನಪಿಸುತ್ತದೆ. ಇದು ನಿಸ್ವಾರ್ಥ ಜೀವನದ ಹಾದಿಯಲ್ಲಿ ನಡೆಯಬೇಕು ಎಂಬುದನ್ನು ಸೂಚಿಸುತ್ತದೆ.
ಇದನ್ನೂ ಓದಿ: Shankha: ದಕ್ಷಿಣಾಮೂರ್ತಿ ಶಂಖದ ಮಹತ್ವ, ಇದನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದಾಗುವ ಲಾಭವೇನು? ಇಲ್ಲಿದೆ ಮಾಹಿತಿ
ಭಕ್ತರೊಂದಿಗೆ ಸಂಪರ್ಕ ಸಾಧಿಸುವ ಧ್ವಜ
ದೇವಸ್ಥಾನದ ಮೇಲಿನ ಧ್ವಜ, ಧ್ವಜಸ್ತಂಭದ ಮೇಲಿನ ಧ್ವಜವು ಭೂಮಿ ಮತ್ತು ನಂಬಿಕೆಯ ನಡುವಿನ ಸಂಬಂಧವನ್ನು ಹೇಳುತ್ತದೆ. ಧ್ವಜ ಸ್ಥಂಬವು ದೇವರು ನಿಲೆಸಿರುವುದನ್ನು ಪ್ರತಿನಿಧಿಸುತ್ತದೆ. ಇದು ಭೂಲೋಕಕ್ಕೂ ಮತ್ತು ದೇವಲೋಕದ ವಿವಿಧ ಸ್ಥಳಗಳಿಗೂ ಇರುವ ಕಾಸ್ಮಿಕ್ ಅಕ್ಷವಾಗಿದೆ. ಇದು ಸ್ವರ್ಗದಿಂದ ಭೂಮಿಯ ಮೇಲೆ ವಾಸಿಸುವ ಭಕ್ತರನ್ನು ಆಶೀರ್ವದಿಸುವ ಸಂಪರ್ಕ ಸಾಧನವಾಗಿದೆ. ಇದು ದೈವಿಯ ಶಕ್ತಿಯನ್ನು ನೀಡುತ್ತದೆ.
ದಿಕ್ಕನ್ನು ಸೂಚಿಸುತ್ತದೆ
ಕೆಲವು ಹಿರಿಯರ ಪ್ರಕಾರ ದೇವಸ್ಥಾನದ ಮೇಲಿರುವ ಧ್ವಜಸ್ತಂಭಗಳು ಮುಂಭಾಗದ ದೇವಾಲಯಕ್ಕೆ ಸೂಚಕವಾಗಿ ಕಾರ್ಯನಿರ್ವಹಿಸುತ್ತವೆ. ಪ್ರಾಚೀನ ಕಾಲದಲ್ಲಿ, ಈ ಧ್ವಜವನ್ನು ದೇವಾಲಯದ ಸ್ಥಳವನ್ನು ಮಾರ್ಗದರ್ಶನ ಮಾಡಲು ಬಳಸಲಾಗುತ್ತಿತ್ತು. ದೂರದಲ್ಲಿರುವ ದೇವಾಲಯಗಳನ್ನು ಗುರುತಿಸಲು ಈ ಧ್ವಜಗಳನ್ನು ದೇವಾಲಯದ ಮೇಲೆ ಹಾರಿಸಲಾಗುತ್ತಿತ್ತು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
(This copy first appeared in Hindustan Times Kannada website. To read more like this please logon to kannada.hindustantimes.com)