logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಪೂಜೆಗೆ ಸ್ಟೀಲ್ ಪಾತ್ರೆಗಳನ್ನು ಬಳಸುವುದು ಶುಭವೋ ಅಶುಭವೋ? ವಾಸ್ತು ನಿಯಮ ಏನು ಹೇಳುತ್ತೆ ನೋಡಿ

Vastu Tips: ಪೂಜೆಗೆ ಸ್ಟೀಲ್ ಪಾತ್ರೆಗಳನ್ನು ಬಳಸುವುದು ಶುಭವೋ ಅಶುಭವೋ? ವಾಸ್ತು ನಿಯಮ ಏನು ಹೇಳುತ್ತೆ ನೋಡಿ

HT Kannada Desk HT Kannada

Feb 13, 2024 05:30 AM IST

Vastu Tips: ಪೂಜೆಗೆ ಸ್ಟೀಲ್ ಪಾತ್ರೆಗಳನ್ನು ಬಳಸುವುದು ಶುಭವೋ? ಅಶುಭವೋ?

    • Vastu Tips: ಹಿಂದೂ ಧರ್ಮದಲ್ಲಿ ಪೂಜೆಗೆ ಸಂಬಂಧಿಸಿದ ಪ್ರತಿಯೊಂದು ವಸ್ತುಗಳ ಬಗ್ಗೆ ವಿಶೇಷ ನಿಯಮಗಳನ್ನು ಹೇಳಲಾಗಿದೆ. ಪೂಜೆ ಮಾಡುವ ಸಮಯದಲ್ಲಿ ಮಾಡುವ ಚಿಕ್ಕ ಪುಟ್ಟ ತಪ್ಪುಗಳ ಕಾರಣದಿಂದ ವ್ಯಕ್ತಿಯು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
Vastu Tips: ಪೂಜೆಗೆ ಸ್ಟೀಲ್ ಪಾತ್ರೆಗಳನ್ನು ಬಳಸುವುದು ಶುಭವೋ? ಅಶುಭವೋ?
Vastu Tips: ಪೂಜೆಗೆ ಸ್ಟೀಲ್ ಪಾತ್ರೆಗಳನ್ನು ಬಳಸುವುದು ಶುಭವೋ? ಅಶುಭವೋ? (PC: Freepik)

ಹಿಂದೂ ಧರ್ಮದಲ್ಲಿ ಮನೆಯ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪೂಜೆಗೆ ಸಂಬಂಧಿಸಿದ ಪ್ರತಿಯೊಂದು ವಸ್ತುಗಳ ಬಗ್ಗೆ ವಿಶೇಷ ನಿಯಮಗಳನ್ನು ಹೇಳಲಾಗಿದೆ. ಶಾಸ್ತ್ರದ ಪ್ರಕಾರ ಮಾಡುವು ಪೂಜೆಯಿಂದ ಮನೆಗೆ ಒಳ್ಳೆಯದಾಗುತ್ತದೆ ಎಂದು ನಂಬಲಾಗಿದೆ. ವ್ಯಕ್ತಿಯು ಸರಿಯಾದ ವಿಧಿ–ವಿಧಾನಗಳಿಂದ ದೇವರ ಪೂಜೆಯನ್ನು ಮಾಡಿದ್ದರೂ, ಅವನು ಮಾಡುವು ಚಿಕ್ಕ–ಪುಟ್ಟ ತಪ್ಪುಗಳಿಂದ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪೂಜೆಯ ಸಮಯದಲ್ಲಿ ಬಳಕೆಯಾಗುವ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಮಹತ್ವವಿದೆ. ಎಲ್ಲಾ ವಸ್ತುಗಳ ಕಡೆಯ ಅದೇ ರೀತಿ ಪೂಜೆಯ ಸಮಯದಲ್ಲಿ ಸ್ಟೀಲ್‌ನ ಪಾತ್ರೆಗಳನ್ನು ಬಳಸುವುದು ಸರಿಯಲ್ಲ ಎಂದು ಪರಿಗಣಿಸಲಾಗಿದೆ. ಹಾಗಾದರೆ ಪೂಜೆಗೆ ಸ್ಟೀಲ್‌ ಪಾತ್ರೆಗಳನ್ನು ಬಳಸುವುದು ಶುಭವೋ ಅಥವಾ ಅಶುಭವೋ ಎಂದು ತಿಳಿಯೋಣ ಬನ್ನಿ.

ತಾಜಾ ಫೋಟೊಗಳು

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಪೂಜೆಗೆ ಈ ಲೋಹದ ಪಾತ್ರೆಗಳನ್ನು ಬಳಸಬೇಡಿ

ವಾಸ್ತುಶಾಸ್ತ್ರದ ಪ್ರಕಾರ ಪೂಜೆ ಮಾಡಲು ಸ್ಟೀಲ್‌, ಕಬ್ಬಿಣ ಮತ್ತು ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸುವುದು ಶುಭವಲ್ಲ ಎಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಧಾರ್ಮಿಕ ಕಾರ್ಯಗಳಿಗೆ ಚಿನ್ನ, ಬೆಳ್ಳಿ, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಉಪಯೋಗ ಮಾಡುವುದು ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Chanakya Niti: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ ಐದು ರೀತಿಯ ಸ್ನೇಹಿತರಿಂದ ದೂರವಿರಿ; ಚಾಣಕ್ಯ ನೀತಿ

ಪೂಜೆಗೆ ಸ್ಟೀಲ್‌ ಪಾತ್ರೆಗಳನ್ನು ಏಕೆ ಉಪಯೋಗಿಸಬಾರದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೂಜೆ– ಅನುಷ್ಠಾನ ಮುಂತಾದ ಸಮಯದಲ್ಲಿ ಬಳಸುವ ವಸ್ತುಗಳ ಶುದ್ಧತೆ ಮತ್ತು ಪಾವಿತ್ರ್ಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಸ್ಟೀಲ್‌, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಪಾತ್ರೆಗಳನ್ನು ಶುದ್ಧ ಲೋಹಗಳೆಂದು ವರ್ಗೀಕರಿಸಲಾಗಿಲ್ಲ. ಇಷ್ಟೇ ಅಲ್ಲದೇ ಪೂಜೆಗಳಲ್ಲಿ ನೈಸರ್ಗಿಕ ಲೋಹಗಳನ್ನು ಬಳಸಬೇಕೆಂಬ ನಂಬಿಕೆಯೂ ಇದೆ. ಸ್ಟೀಲ್‌ ಇದು ಮಾನವ ನಿರ್ಮಿತ ಲೋಹವಾಗಿದೆ. ಇದನ್ನು ಕಬ್ಬಿಣದಿಂದ ತಯಾರಿಸಲಾಗುತ್ತದೆ. ಕಬ್ಬಿಣವು ತುಕ್ಕು ಹಿಡಿಯುತ್ತದೆ. ಹಾಗಾಗಿಯೇ ಈ ಲೋಹಗಳಿಂದ ಮೂರ್ತಿಗಳನ್ನು ಸಹ ತಯಾರಿಸಲಾಗುವುದಿಲ್ಲ. ಆದ್ದರಿಂದ ಪೂಜೆಯ ಸಮಯದಲ್ಲಿ ಈ ಲೋಹಗಳನ್ನು ಉಪಯೋಗಿಸಿ ತಯಾರಿಸಲಾದ ಪಾತ್ರೆಗಳ ಬಳಕೆಯನ್ನು ಅಶುಭ ಎಂದು ಹೇಳಲಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ