logo
ಕನ್ನಡ ಸುದ್ದಿ  /  ಕ್ರಿಕೆಟ್  /  Salman Butt: ಅಕ್ಷರ್ ಪಟೇಲ್ ಬೌಲಿಂಗ್ ಜಡೇಜಾ-ಅಶ್ವಿನ್​ಗೆ ಸಮವಲ್ಲ; ಪಾಕ್ ಕ್ರಿಕೆಟಿಗ ಟೀಕೆ

Salman Butt: ಅಕ್ಷರ್ ಪಟೇಲ್ ಬೌಲಿಂಗ್ ಜಡೇಜಾ-ಅಶ್ವಿನ್​ಗೆ ಸಮವಲ್ಲ; ಪಾಕ್ ಕ್ರಿಕೆಟಿಗ ಟೀಕೆ

Prasanna Kumar P N HT Kannada

Sep 14, 2023 05:37 PM IST

ಅಕ್ಷರ್ ಪಟೇಲ್ ಕುರಿತು ಸಲ್ಮಾನ್ ಬಟ್ ಹೇಳಿಕೆ.

    • Salman Butt on Axar Patel: ಅಕ್ಷರ್ ಪಟೇಲ್​ರನ್ನು ಜಡೇಜಾ-ಅಶ್ವಿನ್‌ಗೆ ಸರಿಸಮ ಎನ್ನುತ್ತಾರೆ. ಆದರೆ ಅಕ್ಷರ್​ ಬೌಲಿಂಗ್​ ನೋಡಿದಾಗ, ಅದು ತಪ್ಪು ಎನಿಸುತ್ತದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ (Salman Butt) ಅಭಿಪ್ರಾಯಪಟ್ಟಿದ್ದಾರೆ.
ಅಕ್ಷರ್ ಪಟೇಲ್ ಕುರಿತು ಸಲ್ಮಾನ್ ಬಟ್ ಹೇಳಿಕೆ.
ಅಕ್ಷರ್ ಪಟೇಲ್ ಕುರಿತು ಸಲ್ಮಾನ್ ಬಟ್ ಹೇಳಿಕೆ.

ಭಾರತ ತಂಡದ ಸ್ಪಿನ್​ ಆಲ್​ರೌಂಡರ್​ ಅಕ್ಷರ್​ ಪಟೇಲ್ (Axar Patel)​ ಅವರ ಬೌಲಿಂಗ್​ ರವೀಂದ್ರ ಜಡೇಜಾ (Ravindra Jadeja) ಅಥವಾ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರ ಬೌಲಿಂಗ್​ಗೆ ಸರಿಸಮಾನವಾಗಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ (Salman Butt) ಅಭಿಪ್ರಾಯಪಟ್ಟಿದ್ದಾರೆ. ಸೆಪ್ಟೆಂಬರ್ 12ರಂದು ನಡೆದ ಶ್ರೀಲಂಕಾ ಎದುರು ಅಕ್ಷರ್​ ಪಟೇಲ್, ವಿಕೆಟ್ ಪಡೆಯಲಿಲ್ಲ. ಇದರ ಬೆನ್ನಲ್ಲೇ ಸಲ್ಮಾನ್ ಬಟ್ ಟೀಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫಿಲ್‌ ಸಾಲ್ಟ್‌ ಔಟ್‌, ರಹಮಾನುಲ್ಲಾ ಗುರ್ಬಾಜ್ ಇನ್‌; ಎಸ್‌ಆರ್‌ಎಚ್ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಕೆಕೆಆರ್‌ ಸಂಭಾವ್ಯ ತಂಡ

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಕೊಲಂಬೊದಲ್ಲಿ ನಡೆದ 2023ರ ಏಷ್ಯಾಕಪ್‌ ಸೂಪರ್​-4 ಹಂತದ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾ ವಿರುದ್ಧ ಗೆದ್ದು ಫೈನಲ್‌ಗೆ ಅರ್ಹತೆ ಪಡೆಯಿತು. ಎದುರಾಳಿಯನ್ನು 41 ರನ್​ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರು ವಿಕೆಟ್​ ಪಡೆದರು. ಆದರೆ, ಶಾರ್ದೂಲ್ ಠಾಕೂರ್ ಸ್ಥಾನದಲ್ಲಿ ಅವಕಾಶ ಪಡೆದ ಅಕ್ಷರ್​, ತನ್ನ ಮ್ಯಾಜಿಕ್ ನಡೆಸಲು ವಿಫಲರಾದರು.

ಅತ್ಯಂತ ಕಳವಳಕಾರಿ ಎಂದ ಬಟ್

ಈ ಬಗ್ಗೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಬಟ್, ಅಕ್ಷರ್​ ಅವರ ಬೌಲಿಂಗ್ ಜಡೇಜಾ ಮತ್ತು ಅಶ್ವಿನ್‌ಗೆ ಸಮನಾಗಿಲ್ಲ. ಕೊಲಂಬೊದಲ್ಲಿ ಬೌಲಿಂಗ್ ಮಾಡುವಾಗ ಚೆಂಡನ್ನು ತಿರುಗಿಸಲು ಅವರಿಗೆ ಸಾಧ್ಯವಾಗದಿರುವುದು ಕಳವಳಕಾರಿ ಎಂದರು. ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಕ್ಷರ್ 5 ಓವರ್‌ಗಳಲ್ಲಿ ವಿಕೆಟ್ ಪಡೆಯದೆ 29 ರನ್ ನೀಡಿದರು.

ಅಕ್ಷರ್ ಪಟೇಲ್​ರನ್ನು ಜಡೇಜಾ-ಅಶ್ವಿನ್‌ಗೆ ಸರಿಸಮ ಎನ್ನುತ್ತಾರೆ. ಆದರೆ ಅಕ್ಷರ್​ ಬೌಲಿಂಗ್​ ನೋಡಿದಾಗ, ಅದು ತಪ್ಪು ಎನಿಸುತ್ತದೆ. ಅವರ ಬ್ಯಾಟಿಂಗ್​ ಉತ್ತಮವಾಗಿದೆ. ಆದರೆ ಅವರ ಬೌಲಿಂಗ್​​​ನಲ್ಲಿ ಅಷ್ಟು ಉತ್ತಮ ಎನಿಸಲಿಲ್ಲ. ಚೆಂಡನ್ನು ಟರ್ನ್​ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಪಿಚ್​ನಲ್ಲಿ ಚೆಂಡು ಟರ್ನ್​ ಆಗುತ್ತಿದ್ದರೂ ಅಕ್ಷರ್ ಕೈಲಿ ಸಾಧ್ಯವಾಗದೇ ಇದ್ದದ್ದು ಅಚ್ಚರಿ ಮೂಡಿಸಿತು ಎಂದು ಹೇಳಿದ್ದಾರೆ.

ರೋಹಿತ್​ರನ್ನು ಹೊಗಳಿದ ಸಲ್ಮಾನ್

ಮತ್ತೊಂದು ವಿಶೇಷ ಅಂದರೆ ಈ ಟರ್ನಿಂಗ್ ಟ್ರ್ಯಾಕ್​ನಲ್ಲಿ ಚರಿತ್ ಅಸಲಂಕಾ ಕೂಡ 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಅಕ್ಷರ್​ಗೆ ಏನಾಗಿತ್ತು ಎಂಬುದೇ ಕಳವಳದ ಸಂಗತಿ ಎಂದ ಅವರು, ರೋಹಿತ್ ಶರ್ಮಾ ನಾಯಕತ್ವವನ್ನು ಹಾಡಿಹೊಗಳಿದರು. ಫೀಲ್ಡ್​ ಪ್ಲೇಸ್​ಮೆಂಟ್​​ ಅನ್ನು ಅದ್ಭುತವಾಗಿ ಹೊಂದಿಸಿದ್ದರು. ತುಂಬಾ ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಂಡರು ಎಂದು ಹೇಳಿದರು.

ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ರೋಹಿತ್ ಶರ್ಮಾ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಲಂಕಾ ಸ್ಪಿನ್ ದಾಳಿಗೆ ತತ್ತರಿಸಿದ ಭಾರತ 213 ರನ್‌ ಗಳಿಸಿತು. ಆದರೆ, ಭಾರತದ ಪರ ಕುಲ್ದೀಪ್ ಯಾದವ್ ಅವರ ಅದ್ಭುತ ಪ್ರದರ್ಶನದ ಹಿನ್ನೆಲೆ 41 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಅಲ್ಲದೆ, 11ನೇ ಬಾರಿಗೆ ಫೈನಲ್ ಪ್ರವೇಶಿಸಿತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ