logo
ಕನ್ನಡ ಸುದ್ದಿ  /  ಕ್ರಿಕೆಟ್  /  Icc World Cup 2023: ಬಾಬರ್ ಹೈದರಾಬಾದಿ ಬಿರಿಯಾನಿ ಹೇಗಿತ್ತು? ರವಿಶಾಸ್ತ್ರಿ ಪ್ರಶ್ನೆಗೆ ಸಿಡಿದೆದ್ದ ಪಾಕ್ ತಂಡದ ನಾಯಕನ ಉತ್ತರ ಹೀಗಿತ್ತು

ICC World Cup 2023: ಬಾಬರ್ ಹೈದರಾಬಾದಿ ಬಿರಿಯಾನಿ ಹೇಗಿತ್ತು? ರವಿಶಾಸ್ತ್ರಿ ಪ್ರಶ್ನೆಗೆ ಸಿಡಿದೆದ್ದ ಪಾಕ್ ತಂಡದ ನಾಯಕನ ಉತ್ತರ ಹೀಗಿತ್ತು

Raghavendra M Y HT Kannada

Oct 05, 2023 10:06 AM IST

ರವಿಶಾಸ್ತ್ರ ಪ್ರಶ್ನೆಗೆ ಸಿಡಿದೆದ್ದ ಬಾಬರ್ ಅಜಮ್

  • ಬಾಬರ್ ಹೈದರಾಬಾದಿ ಬಿರಿಯಾನಿ ಹೇಗಿತ್ತು ಎಂಬ ರವಿಶಾಸ್ತ್ರಿ ಪ್ರಶ್ನೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಪ್ರತಿಕ್ರಿಯೆ ಹೇಗಿತ್ತು ನೋಡಿ.

ರವಿಶಾಸ್ತ್ರ ಪ್ರಶ್ನೆಗೆ ಸಿಡಿದೆದ್ದ ಬಾಬರ್ ಅಜಮ್
ರವಿಶಾಸ್ತ್ರ ಪ್ರಶ್ನೆಗೆ ಸಿಡಿದೆದ್ದ ಬಾಬರ್ ಅಜಮ್

ಅಹಮದಾಬಾದ್ (ಗುಜರಾತ್): ಐಸಿಸಿ ಏಕದಿನ ವಿಶ್ವಕಪ್‌ನ (ICC ODI World Cup 2023) ಭಾಗವಾಗಿ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ‘ಕ್ಯಾಪ್ಟನ್ಸ್ ಕಾಲ್’ ಕಾರ್ಯಕ್ರಮದಲ್ಲಿ ಟೂರ್ನಿಯಲ್ಲಿ ಭಾಗವಹಿಸಿರುವ 10 ತಂಡಗಳ ಎಲ್ಲಾ ನಾಯಕರು ಉಪಸ್ಥಿತರಿದ್ದರು. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕಾರ್ಯಕ್ರಮದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್‌ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದಕ್ಕೆ ಬಾಬರ್ ಬೆಂಕಿಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ನಿರ್ಣಾಯಕ​ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್​ಕೆ ಬೌಲಿಂಗ್ ಆಯ್ಕೆ; ಆರ್​ಸಿಬಿ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್​ ಟಿಕೆಟ್

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

ನಿನ್ನೆ (ಅಕ್ಟೋಬರ್ 4, ಬುಧವಾರ) ನಡೆದಿದ್ದ ಐಸಿಸಿ ವಿಶ್ವಕಪ್ ‘ಕ್ಯಾಪ್ಟನ್ಸ್ ಕಾಲ್’ ಕಾರ್ಯಕ್ರಮದಲ್ಲಿ ಬಾಬರ್ ಹೈದರಾಬಾದಿ ಬಿರಿಯಾನಿ ಹೇಗಿತ್ತು ಎಂದು ರವಿಶಾಸ್ತ್ರಿ ಪ್ರಶ್ನಿಸಿದ್ದಾರೆ. ಇದಕ್ಕೆ ಖಡಕ್ ಉತ್ತರ ನೀಡಿದ ಬಾಬರ್ ಸೌ ಬಾರಿ ಬಾತಾ ಚುಕೇ ಹೈ ಎಂದಿದ್ದಾರೆ. ಅಂದರೆ 100 ಬಾರಿ ಉತ್ತರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಬಾಬರ್ ಅವರ ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೈದರಾಬಾದ್ ಬಿರಿಯಾನಿಗೆ 10ಕ್ಕೆ 8 ಅಂಕ ನೀಡಿದ ಬಾಬರ್

ಹೈದರಾಬಾದಿ ಬಿರಿಯಾನಿ ಬಗ್ಗೆ ಬಾಬರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇದು ವಿಶೇಷವಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಹೈದರಾಬಾದಿ ಬಿರಿಯಾನಿಗೆ 10 ರಲ್ಲಿ 8 ಅಂಕಗಳನ್ನು ನೀಡುತ್ತೇನೆ. ಆದರೂ ಸ್ವಲ್ಪ ಮಸಾಲೆಯುಕ್ತವಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇಷ್ಟೊಂದು ಆತ್ಮೀಯ ಸ್ವಾಗತ ನಿರೀಕ್ಷೆ ಮಾಡಿರಲಿಲ್ಲ

ಐಸಿಸಿ ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದಿರುವ ಮಾಧ್ಯಮಗೋಷ್ಠಿಯಲ್ಲಿ ಬಾಬರ್ ಅಜಮ್, ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತದಲ್ಲಿ ಇಷ್ಟೊಂದು ಆತ್ಮೀಯ ಸ್ವಾಗತ ಸಿಗುತ್ತದೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ ಎಂದು ಹೇಳಿದ್ದರು. ಆತಿಥ್ಯ ತುಂಬಾ ಚೆನ್ನಾಗಿತ್ತು ಎಂದು ನಾನು ಭಾವಿಸುತ್ತೇನೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೆ ಜನರು ನಮ್ಮ ತಂಡದ ಬಗ್ಗೆ ಪ್ರತಿಕ್ರಿಯಿಸುತ್ತಿರುವುದನ್ನು ಇಡೀ ತಂಡ ಆನಂದಿಸುತ್ತಿದೆ. ನಾವು ಹೈದರಾಬಾದ್‌ನಲ್ಲಿ ಒಂದು ವಾರ ಇದ್ದೇವೆ. ಆದ್ದರಿಂದ ನಾವು ಭಾರತದಲ್ಲಿದ್ದಂತೆ ಅಲ್ಲ, ಅದು ನಮ್ಮಂತೆಯೇ ಇದೆ. ಪ್ರತಿಯೊಬ್ಬರು ತಮ್ಮ 100 ರಷ್ಟು ಆಟ ನೀಡಲು ಮತ್ತು ಆನಂದಿಸಲು ಇದು ಸುವರ್ಣಾವಕಾಶ ಎಂದು ನಾನು ಭಾವಿಸುತ್ತೇನೆ ಎಂದು ಬಾಬರ್ ಹೇಳಿದ್ದಾರೆ.

ಪಾಕಿಸ್ತಾನ ತಂಡ ಐಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು 2016ರಲ್ಲಿ ಕೊನೆಯ ಬಾರಿಗೆ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಗಾಯದಿಂದಾಗಿ ಬಾಬರ್ ಆಗ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಸದ್ಯ ಐಸಿಸಿ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ತಂಡದ ನಾಯಕತ್ವವನ್ನು ಬಾಬರ್ ಅಜಮ್ ವಹಿಸಿಕೊಂಡಿದ್ದಾರೆ. ಪಾಕಿಸ್ತಾನ ತಂಡ ಹೈದರಾಬಾದ್‌ನಲ್ಲಿ ಉಳಿದುಕೊಂಡಿದೆ. ಕಳೆದ 8 ದಿನಗಳಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದಲ್ಲಿನ ಪಾಕಪದ್ಧತಿಯನ್ನು ತುಂಬಾನೇ ಆನಂದಿಸುತ್ತಿದೆ. ಈ ತಂಡಕ್ಕೆ ದೈನಂದಿನ ಪ್ರೋಟೀನ್‌ ಸೇವನೆಗಾಗಿ ಚಿಕನ್, ಮಟನ್ ಮತ್ತು ಮೀನಿನ ಆಹಾರವನ್ನು ನೀಡಲಾಗುತ್ತಿದೆ. ವಿಶೇಷವಾಗಿ ಹೈದರಾಬಾದಿ ಬಿರಿಯಾನಿಗೆ ಪಾಕ್ ಆಟಗಾರರು ಫಿದಾ ಆಗಿದ್ದಾರೆ.

ಮಂಗಳವಾರ (ಅಕ್ಟೋಬರ್ 3) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿತ್ತು. ಆದರೆ ಆ ತಂಡದ ನಾಯಕ ಬಾಬರ್ ಅಜಮ್ ಅದ್ಭುತ ಬ್ಯಾಟಿಂಗ್ ಮೂಲಕ 90 ರನ್ ಬಾರಿಸಿದ್ದರು. ಐಸಿಸಿ ವಿಶ್ವಕಪ್‌ನಲ್ಲಿ ನಾಳೆ (ಅಕ್ಟೋಬರ್ 6, ಶುಕ್ರವಾರ) ಇದೇ ಮೈದಾನದಲ್ಲಿ ಪಾಕಿಸ್ತಾನ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ತನ್ನ ಆರಂಭಿಕ ಪಂದ್ಯವನ್ನು ಆಡಲಿದೆ.

IPL, 2024

Live

RCB

30/0

2.5 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ