logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅತ್ಯಂತ ಕೆಟ್ಟ ಅಂಪೈರಿಂಗ್, ಡಿಆರ್​ಎಸ್​ ನಿಯಮದಿಂದ ಪಾಕಿಸ್ತಾನಕ್ಕೆ ಸೋಲು; ಹರ್ಭಜನ್ ಸಿಂಗ್ ಕಿಡಿ

ಅತ್ಯಂತ ಕೆಟ್ಟ ಅಂಪೈರಿಂಗ್, ಡಿಆರ್​ಎಸ್​ ನಿಯಮದಿಂದ ಪಾಕಿಸ್ತಾನಕ್ಕೆ ಸೋಲು; ಹರ್ಭಜನ್ ಸಿಂಗ್ ಕಿಡಿ

Prasanna Kumar P N HT Kannada

Oct 28, 2023 12:34 PM IST

ಹರ್ಭಜನ್ ಸಿಂಗ್.

    • Harbhajan Singh: ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅತ್ಯಂತ ಕೆಟ್ಟ ಅಂಪೈರಿಂಗ್‌, ಡಿಆರ್‌ಎಸ್​ನಿಂದ ಪಾಕಿಸ್ತಾನ ಸೋತಿದೆ ಎಂದು ಐಸಿಸಿ ವಿರುದ್ದ ಹರ್ಭಜನ್ ಸಿಂಗ್ ದೂರಿದ್ದಾರೆ.
ಹರ್ಭಜನ್ ಸಿಂಗ್.
ಹರ್ಭಜನ್ ಸಿಂಗ್.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 26ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ 1 ವಿಕೆಟ್ ಅಂತರದಿಂದ ಸೋಲು ಅನುಭವಿಸಿತು. ಆದರೆ ಈ ಪಂದ್ಯದಲ್ಲಿ ಕೆಟ್ಟ ಅಂಪೈರಿಂಗ್ ಮತ್ತು ಡಿಆರ್​​ಎಸ್​ ನಿಯಮದಿಂದ ಪಾಕಿಸ್ತಾನ ಸೋಲು ಅನುಭವಿಸಿತು ಎಂದು ಭಾರತ ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್​ ಟೀಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ; ಸೋತು ಹೊರಬಿದ್ದ ಸಿಎಸ್​ಕೆ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅತ್ಯಂತ ಕೆಟ್ಟ ಅಂಪೈರಿಂಗ್‌, ಡಿಆರ್‌ಎಸ್​ನಿಂದ ಪಾಕಿಸ್ತಾನ ಸೋತಿದೆ ಎಂದು ಐಸಿಸಿ ವಿರುದ್ದ ಹರ್ಭಜನ್ ದೂರಿದ್ದಾರೆ. ಎಕ್ಸ್​ ಖಾತೆಯಲ್ಲಿ ಅಂಪೈರ್​ ತೀರ್ಪಿಗೆ ಸಂಬಂಧಿಸಿ ಪೋಸ್ಟ್ ಮಾಡಿದ್ದು, ಪ್ರಪಂಚಕ್ಕೆ ಏನನ್ನು ತೋರಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ದಾರೆ.

ಏನಾಗಿತ್ತು?

271 ರನ್‌ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 45.5 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 263 ರನ್‌ ಗಳಿಸಿತ್ತು. ಈ ವೇಳೆ ಪಾಕ್ ಗೆಲ್ಲಲು 1 ವಿಕೆಟ್‌ ಬೇಕಿತ್ತು. ಜೊತೆಗೆ ಸೌತ್ ಆಫ್ರಿಕಾ ಗೆಲುವಿಗೆ 7 ರನ್‌ ಅಗತ್ಯ ಇತ್ತು. ಈ ವೇಳೆ ಹ್ಯಾರಿಸ್‌ ರೌಫ್​ರ 46ನೇ ಓವರ್‌ನ ಅಂತಿಮ ಬಾಲ್​ನಲ್ಲಿ ತಬ್ರೈಜ್ ಶಂಸಿ, ಚೆಂಡನ್ನು ಪ್ಯಾಡ್‌ ಮೇಲೆ ಹಾಕಿಕೊಂಡರು.

ಪಾಕಿಸ್ತಾನ ಆಟಗಾರರು ಎಲ್‌ಬಿಡಬ್ಲ್ಯುಗೆ ಬಲವಾಗಿ ಮನವಿ ಮಾಡಿದರು. ಆದರೆ ಆನ್‌ಫೀಲ್ಡ್ ಅಂಪೈರ್‌ ನಾಟೌಟ್​ ತೀರ್ಪು ಕೊಟ್ಟರು. ಆಗ ನಾಯಕ ಬಾಬರ್ ಅಜಮ್, ಡಿಆರ್​ಎಸ್ ಮೊರೆ ಹೋದರು. ಚೆಂಡು ಸ್ಟಂಪ್ಸ್‌ಗೆ ತಗುಲಿರುವುದು ಸ್ಪಷ್ಟವಾಗಿತ್ತು. ಆದರೆ, ಆನ್‌ಫೀಲ್ಡ್ ಅಂಪೈರ್‌ ಕಾಲ್‌ ಆಗಿದ್ದ ಕಾರಣ 3ನೇ ಅಂಪೈರ್ ನಾಟೌಟ್ ನೀಡಿದರು ಔಟ್‌ ನೀಡಿದರು.

ಇದರಿಂದ ಶಂಸಿ ಎಲ್‌ಬಿಡಬ್ಲ್ಯುನಿಂದ ಔಟಾಗದೆ ಉಳಿದುಕೊಂಡರು. ಕೊನೆಗೆ ದಕ್ಷಿಣ ಆಫ್ರಿಕಾ 1 ವಿಕೆಟ್‌ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದ ಬಳಿಕ ಟರ್ಬನೇಟರ್​ ಹರ್ಭಜನ್, ಐಸಿಸಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಇಂತಹ ಕೆಟ್ಟ ಅಂಪೈರ್​​ನಿಂದ ಏನನ್ನೂ ಸಾಧಿಸಲು ಹೊರಟಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ಕಿಡಿಕಾರಿದ ಹರ್ಭಜನ್‌ ಸಿಂಗ್‌

ಅತ್ಯಂತ ಕೆಟ್ಟ ಅಂಪೈರಿಂಗ್ ಮತ್ತು ಡಿಆರ್​ಎಸ್​ ನಿಯಮಗಳಿಂದ ಪಾಕಿಸ್ತಾನ ತಂಡವು ಸೋಲಿಗೆ ಕಾರಣವಾಯಿತು. ಐಸಿಸಿ ತನ್ನ ಈ ನಿಯಮಗಳಲ್ಲಿ ಬದಲಾವಣೆ ತರುವುದು ಉತ್ತಮ. ಅಂಪೈರ್‌ ಔಟ್‌ ಕೊಡಲಿ, ಕೊಡದಿರಲಿ ಚೆಂಡು ಸ್ಟಂಪ್ಸ್‌ಗೆ ತಗುಲುತ್ತಿದ್ದರೆ, ಔಟೆಂದು ಪರಿಗಣನೆಗೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ, ಅಂತಹ ತಂತ್ರಜ್ಞಾನ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರ್ಭಜನ್ ಸಿಂಗ್​ ಪೋಸ್ಟ್ ಬೆನ್ನಲ್ಲೇ ಸೌತ್ ಆಫ್ರಿಕಾ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಪ್ರತಿಕ್ರಿಯೆ ನೀಡಿದ್ದಾರೆ. ಭಜ್ಜಿ, ಅಂಪೈರ್‌ ಕಾಲ್‌ ಬಗ್ಗೆ ನಿಮ್ಮ ರೀತಿ ನನಗೂ ಅದೇ ಅಭಿಪ್ರಾಯ ಇದೆ. ಆದರೆ, ವ್ಯಾನ್ ಡರ್‌ ಡುಸೆನ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಕ್ಕೂ ಇದೇ ಭಾವನೆ ಉಂಟಾಗಿದೆ ಅಲ್ಲವೆ? ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ಅಂಪೈರ್‌ ಅಥವಾ ತಂತ್ರಜ್ಞಾನ ಯಾವುದು ಸರಿ?

ಗ್ರೇಮ್​ ಸ್ಮಿತ್​ ಪೋಸ್ಟ್​ಗೆ ಹರ್ಭಜನ್‌ ಪ್ರತಿಕ್ರಿಯಿಸಿದ್ದು, ಇದು ಸರಿಯಲ್ಲ. ನೀವು ತಂತ್ರಜ್ಞಾನ ಬಳಸಿ ಅಥವಾ ಅಂಪೈರ್‌ಗಳ ನಿರ್ಧಾರಗಳನ್ನು ಸರಳವಾಗಿ ಅನುಸರಿಸಿ! ಈ ಪಂದ್ಯದಲ್ಲಿ 2 ಬಾರಿ ಚೆಂಡು ಸ್ಟಂಪ್ಸ್‌ಗೆ ತಗುಲಿದ್ದರೂ, ಒಂದಕ್ಕೆ ಔಟೆಂದು ಕೊಡಲಾಗಿದೆ. ಮತ್ತೊಂದನ್ನು ನಾಟೌಟ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ನಿಯಮದಿಂದಾಗಿ ಜಗತ್ತಿಗೆ ಏನನ್ನು ತೋರಿಸಲು ಹೊರಟಿದ್ದೀರಿ? ತಂತ್ರಜ್ಞಾನ ಅಥವಾ ಅಂಪೈರ್‌ ಯಾರದು ತಪ್ಪು? ಅಂಪೈರ್‌ ಅಥವಾ ತಂತ್ರಜ್ಞಾನ ಇದರಲ್ಲಿ ಯಾವುದು ಸರಿ ಎಂಬುದನ್ನು ನಿರ್ಧರಿಸುವ ಅಗತ್ಯ ಇದೆ ಎಂದು ಕಿಡಿಕಾರಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ