logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ ಫ್ಯಾನ್ಸ್​ಗೆ ಮಿಡಲ್ ಫಿಂಗರ್ ತೋರಿಸಿ ವಿವಾದ; ದೇಶ ವಿರೋಧಿಗಳಿಗೆ ಈ ಸನ್ನೆ ಎಂದ ಗಂಭೀರ್

ಕೊಹ್ಲಿ ಫ್ಯಾನ್ಸ್​ಗೆ ಮಿಡಲ್ ಫಿಂಗರ್ ತೋರಿಸಿ ವಿವಾದ; ದೇಶ ವಿರೋಧಿಗಳಿಗೆ ಈ ಸನ್ನೆ ಎಂದ ಗಂಭೀರ್

Prasanna Kumar P N HT Kannada

Sep 05, 2023 08:00 AM IST

ದೇಶ ವಿರೋಧಿಗಳಿಗೆ ಈ ಸನ್ನೆ ಎಂದ ಗಂಭೀರ್.

    • Gautam Gambhir: ಏಷ್ಯಾಕಪ್ 2023ರಲ್ಲಿ ಭಾರತ ಮತ್ತು ನೇಪಾಳ ಪಂದ್ಯದ ವೇಳೆ  ಗೌತಮ್, ಕೊಹ್ಲಿ ಅಭಿಮಾನಿಗಳ ಮೇಲೆ ಸಿಟ್ಟಾಗಿ ಅನುಚಿತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೇಶ ವಿರೋಧಿಗಳಿಗೆ ಈ ಸನ್ನೆ ಎಂದ ಗಂಭೀರ್.
ದೇಶ ವಿರೋಧಿಗಳಿಗೆ ಈ ಸನ್ನೆ ಎಂದ ಗಂಭೀರ್.

ಭಾರತ-ನೇಪಾಳ ಪಂದ್ಯ (India vs Nepal) ನಡೆದ ಪಲ್ಲೆಕೆಲೆ ಮೈದಾನದಲ್ಲಿ ಕೊಹ್ಲಿ, ಕೊಹ್ಲಿ ಎಂದು ಕೂಗಿದ ವಿರಾಟ್ ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir), ಆ ಘಟನೆ ಕುರಿತು ಮೌನ ಮುರಿದಿದ್ದಾರೆ. ವಿರಾಟ್ ಕೊಹ್ಲಿ (Virat Kohl) ಅಭಿಮಾನಿಗಳಿಗೆ ಮಧ್ಯದ ಬೆರಳನ್ನು ತೋರಿಸುತ್ತಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಮೌನ ಮುರಿದ ಗೌತಮ್ ಗಂಭೀರ್

ಪಂದ್ಯದಲ್ಲಿ ಮಳೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೈದಾನ ತೊರೆದು ಪ್ಯಾನಲ್​​ನತ್ತ ಗಂಭೀರ್ ಹೋಗುತ್ತಿದ್ದ ವೇಳೆ ಸ್ಟ್ಯಾಂಡ್​​ನಲ್ಲಿದ್ದ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಜೋರಾಗಿ ಕೂಗಿದ್ದಾರೆ. ಇದರಿಂದ ಕುಪಿತಗೊಂಡ ಗಂಭೀರ್​, ಸಹನೆ ಕಳೆದುಕೊಂಡು ಫ್ಯಾನ್ಸ್​​ಗೆ ಮಧ್ಯದ ಬೆರಳು ತೋರಿಸಿದರು. ಹಾಗೆ ಮಧ್ಯದ ಬೆರಳು ತೋರಿಸಿದ್ದರ ಬಗ್ಗೆ ಗಂಭೀರ್ ಮೌನ ಮುರಿದಿದ್ದಾರೆ. ದೇಶ ವಿರೋಧಿಗಳಿಗೆ ಈ ಸನ್ನೆ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ದೇಶ ವಿರೋಧಿಗಳಿದ್ದರು!

ಮೈದಾನದಲ್ಲಿ ಹಾಜರಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಗಂಭೀರ್, ಹಾಗೆ ಕೂಗಿದವರ ಗುಂಪಿನಲ್ಲಿ ಪ್ರಧಾನವಾಗಿ ಪಾಕಿಸ್ತಾನಿ ಅಭಿಮಾನಿಗಳು ಇದ್ದರು ಎಂದು ಸ್ಪಷ್ಟಪಡಿಸಿದರು. ಈ ಅಭಿಮಾನಿಗಳು ಕೊಹ್ಲಿ ಪರ ಘೋಷಣೆಗಳನ್ನು ಕೂಗುವುದು ಮಾತ್ರವಲ್ಲದೆ, ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ಕಾಶ್ಮೀರದ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ನೋಡುವುದೇ ಸತ್ಯವಲ್ಲ!

ತನ್ನ ವಿವರಣೆಯಲ್ಲಿ, ಗಂಭೀರ್ ಭಾರತೀಯನಾಗಿ ತನ್ನ ಆಳವಾದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ದೇಶ ವಿರೋಧಿ ಘೋಷಣೆ ಕೂಗುತ್ತಿದ್ದರು. ಆದರೆ, ನಾನು ಭಾರತೀಯನಾಗಿ ನನ್ನಿಂದ ಅದನ್ನು ಸಹಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಹಾಗೆ ಪ್ರತಿಕ್ರಿಯಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡುವ ಇಂತಹ ವಿಡಿಯೋಸ್ ನೈಜ ಘಟನೆ ಏನೆಂಬುದನ್ನು ವಿವರಿಸಲು ಸಾಧ್ಯವಿಲ್ಲ ಎಂದು ಮಧ್ಯದ ಬೆರಳು ತೋರಿಸಿದ ವಿಡಿಯೋ ವೈರಲ್​ ಕುರಿತು ಹೇಳಿದ್ದಾರೆ.

ನಮ್ಮಿಬ್ಬರ ಮಧ್ಯೆ ಏನಿಲ್ಲ!

ಗಂಭೀರ್ ಮತ್ತು ಕೊಹ್ಲಿ ಇಬ್ಬರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ ಕುರಿತು ಸಂಸದ ಮಾತನಾಡಿದ್ದಾರೆ. ಇದೇ ವೇಳೆ ತಮ್ಮ ಮತ್ತು ಕೊಹ್ಲಿ ನಡುವೆ ವೈಯಕ್ತಿಕವಾಗಿ ಏನೂ ಎಂದು ಸ್ಪಷ್ಟಪಡಿಸಿದ್ದಾರೆ. . ಮೈದಾನದಲ್ಲಿ ಪ್ರದರ್ಶಿಸಲಾದ ಯಾವುದೇ ತೀವ್ರತೆಯು ಆಟದ ಮೇಲಿನ ಉತ್ಸಾಹದ ಫಲಿತಾಂಶವಾಗಿದೆ.ಮತ್ತು ವೈಯಕ್ತಿಕವಾಗಿ ಏನೂ ಇಲ್ಲ ಎಂದು ಅವರು ನಿರಂತರವಾಗಿ ಸಮರ್ಥಿಸಿಕೊಂಡಿದ್ದಾರೆ.

ಯಾವುದೇ ಭಾರತೀಯ ಸುಮ್ಮನಿರಲಾರ!

ಪಾಕಿಸ್ತಾನದ ಅಭಿಮಾನಿಗಳಿಂದ ಕೂಡಿದ ಗುಂಪು ಅದಾಗಿತ್ತು. ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿತ್ತು. ಕಾಶ್ಮೀರದ ಕುರಿತು ಕಾಮೆಂಟ್​ಗಳನ್ನು ರವಾನಿಸುತ್ತಿತ್ತು. ಇದನ್ನು ಕೇಳಿಸಿಕೊಂಡ ಯಾವುದೇ ಭಾರತೀಯ ಸುಮ್ಮನೆ ಇರಲಾರ ಎಂದು ಹೇಳಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಆ ರೀತಿ ಪ್ರತಿಕ್ರಿಯಿಸಿದೆ ಎಂದು ಗಂಭೀರ್ ಪಲ್ಲೆಕೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ