logo
ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್​ ಪಾಂಡ್ಯ ನಾಯಕತ್ವ ಪಡೆದಿದ್ದು ಮುಂಬೈ​ಗೆ ಹೆಚ್ಚು ಲಾಭ; ರೋಹಿತ್​ ಶರ್ಮಾ ಕೈಬಿಡಲು ಕಾರಣ ತಿಳಿಸಿದ ಸುನಿಲ್ ಗವಾಸ್ಕರ್

ಹಾರ್ದಿಕ್​ ಪಾಂಡ್ಯ ನಾಯಕತ್ವ ಪಡೆದಿದ್ದು ಮುಂಬೈ​ಗೆ ಹೆಚ್ಚು ಲಾಭ; ರೋಹಿತ್​ ಶರ್ಮಾ ಕೈಬಿಡಲು ಕಾರಣ ತಿಳಿಸಿದ ಸುನಿಲ್ ಗವಾಸ್ಕರ್

Prasanna Kumar P N HT Kannada

Feb 14, 2024 02:39 PM IST

ಹಾರ್ದಿಕ್​ ಪಾಂಡ್ಯ ನಾಯಕತ್ವ ಪಡೆದಿದ್ದು ಮುಂಬೈ​ಗೆ ಹೆಚ್ಚು ಲಾಭ; ರೋಹಿತ್​ ಶರ್ಮಾ ಕೈಬಿಟ್ಟಿದ್ದೇ ಒಳ್ಳೆಯದು ಎಂದ ಸುನಿಲ್ ಗವಾಸ್ಕರ್

  • Sunil Gavaskar on MI captaincy : ರೋಹಿತ್​ ಶರ್ಮಾ ಅವರನ್ನು ನಾಯಕತ್ವದಿಂದ ಮುಕ್ತಗೊಳಿಸುವುದರಿಂದ ಆತನಿಗೂ ಮತ್ತು ಫ್ರಾಂಚೈಸಿಗೂ ಹೆಚ್ಚು ಲಾಭವಾಗಲಿದೆ ಎಂದು 74 ವರ್ಷದ ಹಿರಿಯ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್​ ಪಾಂಡ್ಯ ನಾಯಕತ್ವ ಪಡೆದಿದ್ದು ಮುಂಬೈ​ಗೆ ಹೆಚ್ಚು ಲಾಭ; ರೋಹಿತ್​ ಶರ್ಮಾ ಕೈಬಿಟ್ಟಿದ್ದೇ ಒಳ್ಳೆಯದು ಎಂದ ಸುನಿಲ್ ಗವಾಸ್ಕರ್
ಹಾರ್ದಿಕ್​ ಪಾಂಡ್ಯ ನಾಯಕತ್ವ ಪಡೆದಿದ್ದು ಮುಂಬೈ​ಗೆ ಹೆಚ್ಚು ಲಾಭ; ರೋಹಿತ್​ ಶರ್ಮಾ ಕೈಬಿಟ್ಟಿದ್ದೇ ಒಳ್ಳೆಯದು ಎಂದ ಸುನಿಲ್ ಗವಾಸ್ಕರ್

2024ರ ಐಪಿಎಲ್​ಗೂ ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ನಾಯಕತ್ವದ ಕುರಿತು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್​ (Sunil Gavaskar), ತಮ್ಮದೇ ಆದ ಅಭಿಪ್ರಾಯ ಹೊರಹಾಕಿದ್ದಾರೆ. ಫ್ರಾಂಚೈಸಿ ಯಾವಾಗಲೂ ಭವಿಷ್ಯದ ಮೇಲೆ ಕಣ್ಣಿಟ್ಟು ತಮ್ಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ರೋಹಿತ್ ಶರ್ಮಾ (Rohit Sharma) ಬದಲಿಗೆ ಹಾರ್ದಿಕ್ ಪಾಂಡ್ಯಗೆ (Hardik Pandya) ಮುಂಬೈ ನಾಯಕತ್ವ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಆರ್​ಸಿಬಿ ಆಟಗಾರರಿಗೆ ಹ್ಯಾಂಡ್​ಶೇಕ್ ಮಾಡದೆ ಮೈದಾನ ತೊರೆದ ಎಂಎಸ್ ಧೋನಿ; ಮಾಹಿ ಹುಡುಕುತ್ತಾ ಹೊರಟ ವಿರಾಟ್ ಕೊಹ್ಲಿ

ನಾಯಕತ್ವದ ಬದಲಾವಣೆ ಕುರಿತು ಗವಾಸ್ಕರ್ ಮಾತು

ಮುಂಬೈ ತಂಡದಿಂದ ರೋಹಿತ್​ರನ್ನು ಕೈಬಿಡಲು ಕಾರಣ ಏನೆಂಬುದನ್ನು ಗವಾಸ್ಕರ್ ವಿವರಿಸಿದ್ದಾರೆ. ರೋಹಿತ್ ಶರ್ಮಾಗೆ ಈಗಾಗಲೇ 36 ವರ್ಷ. ಎಲ್ಲಾ 3 ಫಾರ್ಮ್ಯಾಟ್​​ಗಳಿಗೆ ಭಾರತದ ನಾಯಕರಾಗಿ ಅಪಾರ ಒತ್ತಡ ಎದುರಿಸುತ್ತಿದ್ದಾರೆ. ಅವರ ಕೆಲಸದ ಹೊರೆ ಇಳಿಸಲು ಫ್ರಾಂಚೈಸಿ ನಿರ್ಧರಿಸಿರುವ ಕಾರಣ, ಹಾರ್ದಿಕ್ ಪಾಂಡ್ಯ ಅವರಂತಹ ಯುವ ಆಟಗಾರನಿಗೆ ಆ ಜವಾಬ್ದಾರಿ ನೀಡಲಾಗಿದೆ. ಹಾರ್ದಿಕ್​, ಗುಜರಾತ್ ಟೈಟಾನ್ಸ್ ತಂಡ ವನ್ನು ಸತತ 2 ಬಾರಿ ಫೈನಲ್​ಗೇರಿಸಿದ್ದಾರೆ. ಮುಂಬೈ ನಾಯಕತ್ವದ ಹಿಂದಿರುವ ಬದಲಾವಣೆಗೆ ಕಾರಣ ಇದೇ ಆಗಿದೆ ಎಂದಿದ್ದಾರೆ.

ರೋಹಿತ್​ ಅವರನ್ನು ನಾಯಕತ್ವದಿಂದ ಮುಕ್ತಗೊಳಿಸುವುದರಿಂದ ಆತನಿಗೂ ಮತ್ತು ಫ್ರಾಂಚೈಸಿಗೂ ಲಾಭವಾಗಲಿದೆ ಎಂದು 74 ವರ್ಷದ ಹಿರಿಯ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ. ಹಾರ್ದಿಕ್ ನಾಯಕತ್ವವನ್ನು ಹಸ್ತಾಂತರಿಸುವುದು ಮುಂಬೈಗೆ ಲಾಭದಾಯಕವಾಗಿದೆ. ಈಗ ರೋಹಿತ್ ಆರಂಭಿಕರಾಗಿ ಮುಕ್ತವಾಗಿ ಬ್ಯಾಟಿಂಗ್ ನಡೆಸಬಹುದು. ಅವರಿಗೆ ಸಂಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ್ದಾರೆ.

ತದ ನಂತರ ಹಾರ್ದಿಕ್ ನಂತರ ನಂಬರ್ 3 ಅಥವಾ ನಂಬರ್​ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು 200 ಪ್ಲಸ್ ಮೊತ್ತ ಕಲೆ ಹಾಕಲು ಸಹಾಯ ಮಾಡಲಿದ್ದಾರೆ. ನಾಯಕತ್ವದಿಂದ ಮುಕ್ತರಾಗುವ ಕಾರಣ ಆರಂಭದಲ್ಲಿ ರೋಹಿತ್​ ಒತ್ತಡದಿಂದ ಫ್ರೀ ಆಗಲಿದ್ದು, ಆರಂಭದಲ್ಲಿ ಬ್ಯಾಟ್ ಬೀಸಿ ಬೌಲರ್​​ಗಳ ಮೇಲೆ ಒತ್ತಡ ಹೇರಲಿದ್ದಾರೆ. ಇದು ಮುಂಬರುವ ಆಟಗಾರರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಹಾರ್ದಿಕ್​ 15 ಕೋಟಿಗೆ ಟ್ರೇಡ್

ಡಿಸೆಂಬರ್​ 19ರಂದು ನಡೆದ ಐಪಿಎಲ್​​ ಹರಾಜಿಗೂ ಮುನ್ನ ಟ್ರೇಡ್ ಪ್ರಕ್ರಿಯೆಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು 15 ಕೋಟಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು. ಆದರೆ, ರೋಹಿತ್​​​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಹಿಟ್​ಮ್ಯಾನ್​ ಫ್ಯಾನ್ಸ್ ಮುಂಬೈ ಇಂಡಿಯನ್ಸ್ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅನ್​ಫಾಲೋ ಮಾಡಿದ್ದಾರೆ.

ರೋಹಿತ್​ ಪತ್ನಿ ಆಕ್ರೋಶ

ಇತ್ತೀಚೆಗೆ ಮುಂಬೈ ಕೋಚ್ ಮಾರ್ಕ್ ಬೌಚರ್ ಕೂಡ ನಾಯಕತ್ವದ ಬದಲಾವಣೆಯನ್ನು ಸಂಪೂರ್ಣವಾಗಿ ಕ್ರಿಕೆಟ್ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದಿದ್ದರು. ಆದರೆ ಭಾರತದಲ್ಲಿ ಬಹಳಷ್ಟು ಜನರಿಗೆ ಅರ್ಥವಾಗುವುದಿಲ್ಲ. ಜನರು ಸಾಕಷ್ಟು ಭಾವುಕರಾಗುತ್ತಾರೆ. ಒಬ್ಬ ಆಟಗಾರನಾಗಿ ರೋಹಿತ್‌ನಿಂದ ಉತ್ತಮವಾದದ್ದನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಬೌಚರ್ ಸ್ಮ್ಯಾಶ್ ಸ್ಪೋರ್ಟ್ಸ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದರು.

ಮಾರ್ಕ್​ ಬೌಚರ್​ ಈ ವಿಡಿಯೋಗೆ ಉತ್ತರಿಸಿದ್ದ ರೋಹಿತ್​ ಪತ್ನಿ ರಿತಿಕಾ ಸಜ್ದೇಹ್, ಅವರು ಹೇಳಿದ ಅನೇಕ ವಿಷಯಗಳು ತಪ್ಪಾಗಿವೆ ಎಂದು ಬೌಚರ್ ಸಮರ್ಥನೆಯನ್ನು ತಳ್ಳಿ ಹಾಕಿದ್ದಾರೆ. ರೋಹಿತ್ ಅವರ ಪತ್ನಿ ರಿತಿಕಾಗೆ ಬೌಚರ್ ಸಮರ್ಥನೆ ಇಷ್ಟವಾಗಿಲ್ಲ. ಈ ವಿಷಯದ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಹೇಳಿದ್ದನ್ನು ಒಪ್ಪುವುದಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗವಾಗಿ ಹೇಳಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ