logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇವರಿಗೆ ಕ್ರಿಕೆಟ್ ಬಗ್ಗೆ ಏನ್ ಗೊತ್ತು ಅಂತ ಮ್ಯಾಚ್​ ನೋಡ್ತಾರೆ; ಅನುಷ್ಕಾ-ಅಥಿಯಾ ಬಗ್ಗೆ ಹರ್ಭಜನ್ ಸ್ತ್ರೀದ್ವೇಷದ ಟೀಕೆ

ಇವರಿಗೆ ಕ್ರಿಕೆಟ್ ಬಗ್ಗೆ ಏನ್ ಗೊತ್ತು ಅಂತ ಮ್ಯಾಚ್​ ನೋಡ್ತಾರೆ; ಅನುಷ್ಕಾ-ಅಥಿಯಾ ಬಗ್ಗೆ ಹರ್ಭಜನ್ ಸ್ತ್ರೀದ್ವೇಷದ ಟೀಕೆ

Prasanna Kumar P N HT Kannada

Nov 20, 2023 07:00 AM IST

ಅನುಷ್ಕಾ-ಅಥಿಯಾ ಬಗ್ಗೆ ಹರ್ಭಜನ್ ಸ್ತ್ರೀದ್ವೇಷದ ಟೀಕೆ.

    • Harbhajan Singh: ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ವೇಳೆ ಕಾಮೆಂಟೇಟರ್​ ಆಗಿದ್ದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಅನುಷ್ಕಾ ಶರ್ಮಾ ಮತ್ತು ಅಥಿಯಾ ಶೆಟ್ಟಿ ಕುರಿತು ಸ್ತ್ರಿ ದ್ವೇಷದ ಟೀಕೆ ಮಾಡಿದ್ದಾರೆ.
ಅನುಷ್ಕಾ-ಅಥಿಯಾ ಬಗ್ಗೆ ಹರ್ಭಜನ್ ಸ್ತ್ರೀದ್ವೇಷದ ಟೀಕೆ.
ಅನುಷ್ಕಾ-ಅಥಿಯಾ ಬಗ್ಗೆ ಹರ್ಭಜನ್ ಸ್ತ್ರೀದ್ವೇಷದ ಟೀಕೆ.

ಭಾರತದ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ (Anushka Sharma) ಮತ್ತು ವಿಕೆಟ್ ಕೀಪರ್​ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ (Athiya Shetty) ಅವರ ಕುರಿತು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​ (Harbhajan Singh) ಸ್ತ್ರೀ ದ್ವೇಷದ ಟೀಕೆ ಮಾಡಿದ್ದು, ವಿವಾದಕ್ಕೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿದೆ.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಾಮೆಂಟೇಂಟರ್​​ ಆಗಿದ್ದರು. ಈ ವೇಳೆ ಇವರಿಗೆ ಕ್ರಿಕೆಟ್ ಬಗ್ಗೆ ಏನು ಅರ್ಥ ಆಗುತ್ತದೆ ಎಂದು ಪಂದ್ಯ ನೋಡುತ್ತಾರೆಂದು ಅನುಷ್ಕಾ ಮತ್ತು ಅಥಿಯಾ ಬಗ್ಗೆ ಹರ್ಭಜನ್ ವ್ಯಂಗ್ಯವಾಡಿದ್ದಾರೆ.

ಭಾರತದ ಇನ್ನಿಂಗ್ಸ್​​ನಲ್ಲಿ ವಿರಾಟ್ ಮತ್ತು ರಾಹುಲ್ ಅದ್ಭುತ ಜೊತೆಯಾಟ ಕಟ್ಟುತ್ತಿದ್ದ ವೇಳೆ ಸ್ಟ್ಯಾಂಡ್‌ನಲ್ಲಿ ಒಟ್ಟಿಗೆ ಕುಳಿತಿದ್ದ ಅನುಷ್ಕಾ-ಅಥಿಯಾ ಜೋಡಿಯತ್ತ ಕ್ಯಾಮೆರಾಗಳು ತೋರಿಸುತ್ತಿದ್ದವು. ಈ ವೇಳೆ​ ಇಬ್ಬರ ಕ್ರಿಕೆಟ್ ಜ್ಞಾನವನ್ನು ಪ್ರಶ್ನಿಸಿದ ಹರ್ಭಜನ್, ಅನಗತ್ಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ಭಾರತೀಯ ಬ್ಯಾಟಿಂಗ್‌ನ 18ನೇ ಓವರ್‌ನಲ್ಲಿ, ಹಿಂದಿ ವೀಕ್ಷಕ ವಿವರಣೆಗಾರ ಜತಿನ್ ಸಪ್ರು, ಅನುಷ್ಕಾ ಮತ್ತು ಅಥಿಯಾ ಅವರು ಕ್ರಿಕೆಟ್​ ಬಗ್ಗೆಯೇ ಯೋಚಿಸುತ್ತಿದ್ದಾರಾ? ಗಂಡಂದಿರು ಕ್ರೀಸ್‌ನಲ್ಲಿ ಉಳಿಯುವವರೆಗೂ ಒಟ್ಟಿಗೆ ಇರುತ್ತೇವೆ ಎಂದು ಯೋಚಿಸುತ್ತಿರಬಹುದಾ ಎಂದು ಜತಿನ್ ಸಪ್ರು, ಕ್ಯಾಮೆರಾ ಅವರತ್ತ ತೋರಿಸಿದಾಗ ಹರ್ಭಜನ್‌ಗೆ ಕೇಳಿದರು.

‘ಅವರಿಗೆ ಕ್ರಿಕೆಟ್​ ಬಗ್ಗೆ ಗೊತ್ತಿಲ್ಲ’

ಇದಕ್ಕೆ ಉತ್ತರಿಸಿದ ಹರ್ಭಜನ್, ಅನುಷ್ಕಾ-ಅಥಿಯಾ ನಡುವಿನ ಚರ್ಚೆ ವಿಷಯ ಏನಾಗಿರಬಹುದು ಎಂದು ನಾನು ಯೋಚಿಸುತ್ತಿದ್ದೇನೆ ಎಂದು ಹೇಳಿದರು. ಬಾಲಿವುಡ್ ನಟಿಯರಿಬ್ಬರೂ ಚಲನಚಿತ್ರಗಳ ಬಗ್ಗೆ ಚರ್ಚಿಸುತ್ತಿರಬಹುದು ಎಂದು ಭಜ್ಜಿ ವಾದಿಸಿದರು. ಅವರಿಗೆ ಕ್ರಿಕೆಟ್​​ ಬಗ್ಗೆ ಹೆಚ್ಚು ಗೊತ್ತೇ ಇಲ್ಲ. ಕ್ರಿಕೆಟ್ ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ ಎಂದು ಹರ್ಭಜನ್ ಕಾಮೆಂಟ್ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನೆಟ್ಟಿಗರು ಗರಂ

ಅನುಷ್ಕಾ ಮತ್ತು ಅಥಿಯಾಗೆ ಕ್ರಿಕೆಟ್​ ಜ್ಞಾನವೇ ಇಲ್ಲ ಎನ್ನುವಂತೆ ಹೇಳಿಕೆ ನೀಡಿದ ಹರ್ಭಜನ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೆಲ ಅಭಿಮಾನಿಗಳು ನೀವು ಹೀಗೆ ಮಾತನಾಡುತ್ತೀರಿ ಎಂದು ಊಹಿಸಿರಲಿಲ್ಲ. ನಿಮ್ಮ ಮಾತಿನ ಮೇಲೆ ಹಿಡಿತ ಇರಬೇಕು ಎಂದು ಕಿಡಿ ಕಾರಿದ್ದಾರೆ. ಸ್ತ್ರೀಯರ ವಿರುದ್ಧ ಹೀಗೆ ಹೇಳಿಕೆ ನೀಡುವುದು ಎಷ್ಟು ಸರಿ. ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್​​

ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, 240 ರನ್‌ಗಳಿಗೆ ಆಲೌಟ್​ ಆಯಿತು. ಕೆಎಲ್ ರಾಹುಲ್ 66, ವಿರಾಟ್ ಕೊಹ್ಲಿ 54, ರೋಹಿತ್ ಶರ್ಮಾ 47 ರನ್ ಗಳಿಸಿದರು. 241 ರನ್​​ಗಳ ಗುರಿ ಬೆನ್ನಟ್ಟಿದ ಆಸೀಸ್​​, 43 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು. ಟ್ರಾವಿಸ್ ಹೆಡ್ 137 ರನ್​ ಸಿಡಿಸಿ ಆಸೀಸ್​ ಗೆಲುವಿನ ರೂವಾರಿಯಾದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ