logo
ಕನ್ನಡ ಸುದ್ದಿ  /  ಕ್ರೀಡೆ  /  1900ರ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಅಧಿಕೃತ​ ಸೇರ್ಪಡೆ; ಬರೋಬ್ಬರಿ 123 ವರ್ಷಗಳ ನಂತರ ಅವಕಾಶ

1900ರ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಅಧಿಕೃತ​ ಸೇರ್ಪಡೆ; ಬರೋಬ್ಬರಿ 123 ವರ್ಷಗಳ ನಂತರ ಅವಕಾಶ

Prasanna Kumar P N HT Kannada

Oct 16, 2023 07:11 PM IST

1900ರ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಅಧಿಕೃತ​ ಸೇರ್ಪಡೆ.

    • International Olympic Committee: 2028ರ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಕ್ರಿಕೆಟ್​ ಜೊತೆಗೆ ಫ್ಲ್ಯಾಗ್​ ಫುಟ್ಬಾಲ್, ಬೇಸ್​​ ಬಾಲ್, ಸಾಫ್ಟ್​​ ಬಾಲ್, ಸ್ಕ್ವಾಷ್ ಮತ್ತು ಲೂಕ್ರಾಸ್​​ ಕ್ರೀಡೆಗಳನ್ನೂ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ.
1900ರ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಅಧಿಕೃತ​ ಸೇರ್ಪಡೆ.
1900ರ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಅಧಿಕೃತ​ ಸೇರ್ಪಡೆ.

ಜಗತ್ತಿನ ಅತಿದೊಡ್ಡ ಕ್ರೀಡಾಕೂಟ ಎನಿಸಿರುವ ಒಲಿಂಪಿಕ್ಸ್​​ಗೆ ಕ್ರಿಕೆಟ್​ ಅನ್ನು ಅಧಿಕೃತವಾಗಿ (International Olympic Committee) ಸೇರ್ಪಡೆ ಮಾಡಲಾಗಿದೆ. 1990ರ ಬಳಿಕ ಅಂದರೆ 123 ವರ್ಷಗಳ ನಂತರ ಒಲಿಂಪಿಕ್ಸ್​​ನಲ್ಲಿ ಪಾಲ್ಗೊಳ್ಳುವ ಅವಕಾಶ ಕ್ರಿಕೆಟ್​ಗೆ ಸಿಕ್ಕಿದೆ. ಅದರಂತೆ 2028ರಲ್ಲಿ ಅಮೆರಿಕದ ಲಾಸ್​ ಏಂಜಲೀಸ್​​ನಲ್ಲಿ (Los Angeles 2028 Olympics) ನಡೆಯಲಿರುವ ಒಲಿಂಪಿಕ್ಸ್​​​ಗೆ ಕ್ರಿಕೆಟ್​ ಸೇರ್ಪಡೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಕ್ರಿಕೆಟ್​ ಜೊತೆಗೆ ಫ್ಲ್ಯಾಗ್​ ಫುಟ್ಬಾಲ್, ಬೇಸ್​​ ಬಾಲ್, ಸಾಫ್ಟ್​​ ಬಾಲ್, ಸ್ಕ್ವಾಷ್ ಮತ್ತು ಲೂಕ್ರಾಸ್​​ ಕ್ರೀಡೆಗಳನ್ನೂ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ. ಅಕ್ಟೋಬರ್​ 16ರ ಸೋಮವಾರ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಭೆ ನಡೆಯಿತು. ಇದೇ ಅಕ್ಟೋಬರ್​ 10ರಂದು ಈ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ಸೇರ್ಪಡೆ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಆದರೆ ಅಧಿಕೃತವಾಗಿರಲಿಲ್ಲ.

97 ದೇಶಗಳು ಸಮ್ಮತಿ

ಐದು ಕ್ರೀಡೆಗಳನ್ನು 2028ರ ಲಾಸ್​ ಏಂಜಲೀಸ್ ಒಲಿಂಪಿಕ್ಸ್​ಗೆ ಸೇರಿಸುವ ಕುರಿತ ಪ್ರಸ್ತಾಪಕ್ಕೆ 99 ದೇಶಗಳ ಪೈಕಿ 2 ಮಾತ್ರ ಒಪ್ಪಿಗೆ ಸೂಚಿಸಿರಲಿಲ್ಲ. ವೋಟಿಂಗ್ ಮೂಲಕ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಟಿ20 ಓವರ್​​ಗಳ ಆಧಾರದಲ್ಲಿ ಕ್ರಿಕೆಟ್​ ನಡೆಸಲಾಗುತ್ತದೆ. ಅಲ್ಲದೆ, ಒಲಿಂಪಿಕ್ಸ್​ಗೆ ಕೇವಲ 6 ತಂಡಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ. ಆರು ತಂಡಗಳ ಕ್ರಿಕೆಟ್ ನಡೆಸುವಂತೆ ಶಿಫಾರಸ್ಸು ಮಾಡಲಾಗಿದೆ.

ತಲಾ ಆರು ತಂಡಗಳು

2023ರ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ 6 ತಂಡಗಳ ಟಿ20 ಕೂಟವನ್ನು ನಡೆಸಲು ಶಿಫಾರಸ್ಸು ಮಾಡಿತ್ತು. ವೇಳಾಪಟ್ಟಿ ಕೂಡ ಸಿದ್ದಪಡಿಸಿ ಒಲಿಂಪಿಕ್ಸ್​​ ಸಮಿತಿಗೆ ಶಿಫಾರಸು ಮಾಡಿತ್ತು. ಆದರೆ, ಯಾವ ತಂಡ, ಯಾವ ಆಧಾರದಲ್ಲಿ ಆರು ತಂಡಗಳು ಆಯ್ಕೆಯಾಗಲಿವೆ ಎಂಬುದೇ ತೀವ್ರ ಕುತೂಹಲ ಮೂಡಿಸಿದೆ.

1900ರಲ್ಲಿ ಮಾತ್ರ ಕ್ರಿಕೆಟ್ ಸೇರಿತ್ತು!

1896ರಿಂದ ಈವರೆಗೂ ಒಲಿಂಪಿಕ್ಸ್​ ಇತಿಹಾಸದಲ್ಲಿ ಒಂದು ಬಾರಿ ಮಾತ್ರ ಕ್ರಿಕೆಟ್ ಸ್ಪರ್ಧೆ ನಡೆದಿತ್ತು. 1896ರ ಉದ್ಘಾಟನಾ ಏಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ವಿಫಲವಾಗಿತ್ತು. ಅಂದು ಹೆಚ್ಚಿನ ತಂಡಗಳು ಇರದ ಕಾರಣ ನಿರ್ಧಾರವನ್ನು ರದ್ದು ಮಾಡಲಾಗಿತ್ತು. ನಂತರ 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ಮೊದಲ ಬಾರಿ ಜರುಗಿತ್ತು. ಗ್ರೇಟ್‌ ಬ್ರಿಟನ್‌ ಮತ್ತು ಆತಿಥೇಯ ಫ್ರಾನ್ಸ್‌ ಮಾತ್ರ ಸ್ಪರ್ಧಿಸಿದ್ದವು. ಅಂದು ಬ್ರಿಟನ್‌ ಚಿನ್ನ ಜಯಿಸಿತ್ತು. ಆದರೆ ಬಳಿಕ ಕ್ರಿಕೆಟ್​ ಸೇರ್ಪಡೆಗೆ ಸಿದ್ಧ ನಡೆಯಿತಾದರೂ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ