logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಅನ್ನು ಸೋಲಿಸುವುದು ದೊಡ್ಡ ವಿಷಯವೇ ಅಲ್ಲ: ರಾಜ್‌ಕೋಟ್ ಟೆಸ್ಟ್‌ಗೆ ಮುನ್ನ ರವೀಂದ್ರ ಜಡೇಜಾ ವಿಶ್ವಾಸ

ಇಂಗ್ಲೆಂಡ್ ಅನ್ನು ಸೋಲಿಸುವುದು ದೊಡ್ಡ ವಿಷಯವೇ ಅಲ್ಲ: ರಾಜ್‌ಕೋಟ್ ಟೆಸ್ಟ್‌ಗೆ ಮುನ್ನ ರವೀಂದ್ರ ಜಡೇಜಾ ವಿಶ್ವಾಸ

Prasanna Kumar P N HT Kannada

Feb 14, 2024 09:30 PM IST

ರಾಜ್‌ಕೋಟ್ ಟೆಸ್ಟ್‌ಗೆ ಮುನ್ನ ರವೀಂದ್ರ ಜಡೇಜಾ ವಿಶ್ವಾಸ.

    • Ravindra Jadeja : ರಾಜ್​ಕೋಟ್​​​ನಲ್ಲಿ ನಡೆಯುವ ಆಂಗ್ಲರ ಎದುರಿನ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಜಡೇಜಾ, ಇಂಗ್ಲೆಂಡ್ ತಂಡವನ್ನು ಸೋಲಿಸುವುದು ದೊಡ್ಡ ವಿಷಯವೇನೆಲ್ಲ ಎಂದಿದ್ದಾರೆ.
ರಾಜ್‌ಕೋಟ್ ಟೆಸ್ಟ್‌ಗೆ ಮುನ್ನ ರವೀಂದ್ರ ಜಡೇಜಾ ವಿಶ್ವಾಸ.
ರಾಜ್‌ಕೋಟ್ ಟೆಸ್ಟ್‌ಗೆ ಮುನ್ನ ರವೀಂದ್ರ ಜಡೇಜಾ ವಿಶ್ವಾಸ. (AP)

‘ಗಾಯದ ನಂತರ ತಂಡಕ್ಕೆ ಮರಳಿರುವ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra Jadeja) 3ನೇ ಟೆಸ್ಟ್​ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂಗ್ಲೆಂಡ್ ತಂಡದ ಬಾಜ್​ಬಾಲ್​ಗೆ ತಿರುಗೇಟು ನೀಡಿದ್ದಾರೆ. ತವರು ಮೈದಾನ ರಾಜ್​ಕೋಟ್​​​ನಲ್ಲಿ ನಡೆಯುವ 3ನೇ ಪಂದ್ಯಕ್ಕೂ (India vs England 3rd Test) ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಡೇಜಾ, ಇಂಗ್ಲೆಂಡ್ ತಂಡವನ್ನು ಸೋಲಿಸುವುದು ದೊಡ್ಡ ವಿಷಯವೇನೆಲ್ಲ ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

IPL 2024: ಅತಿ ಹೆಚ್ಚು ಸಿಕ್ಸ್ ಸೇರಿ ಆರ್‌ಸಿಬಿ-ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರ್ಮಿಸಿದ ದಾಖಲೆಗಳಿವು

ಸತತ 6 ಸೋಲಿನಿಂದ ಸತತ 6 ಗೆಲುವಿನ ತನಕ; ಅಸಾಧ್ಯವನ್ನೂ ಸಾಧಿಸಿದ ಆರ್‌ಸಿಬಿ ಪ್ಲೇಆಫ್ ಹಾದಿಯೇ ರೋಚಕ

ತವರು ಮೈದಾನ ರಾಜ್‌ಕೋಟ್‌ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಸ್‌ಸಿಎ) ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಗಾಯದ ವಿರಾಮದ ನಂತರ ಭಾರತ ತಂಡಕ್ಕೆ ಹಿಂದಿರುಗುವ ಮುನ್ನ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್‌ 'ಬಾಜ್‌ಬಾಲ್' ಆಟದ ಶೈಲಿಯ ಬಗ್ಗೆ ಮಾತನಾಡಿದ್ದಾರೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇದು 3ನೇ ಪಂದ್ಯವಾಗಿದ್ದು, ಉಭಯ ತಂಡಗಳಿಗೆ ಗೆಲುವು ಅಗತ್ಯ.

ಮೂರನೇ ಪಂದ್ಯದ ಗೆಲುವಿಗೆ ಸಿದ್ಧತೆ

ಹೈದರಾಬಾದ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 28 ರನ್​​ಗಳಿಂದ ಸೋಲು ಕಂಡಿದ್ದ ಭಾರತ ತಂಡ, ವಿಶಾಖಪಟ್ಟಣದಲ್ಲಿ ಜರುಗಿದ 2ನೇ ಟೆಸ್ಟ್​ ಪಂದ್ಯದಲ್ಲಿ 106 ರನ್​​​​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದರಿಂದ ಸರಣಿ 1-1ರಲ್ಲಿ ಸಮಬಲ ಸಾಧಿಸಿತು. ಇದೀಗ ಸರಣಿ ಮೇಲೆ ಹಿಡಿತ ಸಾಧಿಸಲು ಟೀಮ್ ಇಂಡಿಯಾ, ಮೂರನೇ ಪಂದ್ಯದಲ್ಲೂ ಜಯದ ನಗೆ ಬೀರಲು ಸಜ್ಜಾಗಿದೆ.

‘ಇಂಗ್ಲೆಂಡ್ ಸೋಲಿಸುವುದು ದೊಡ್ಡ ವಿಷಯವಲ್ಲ’

ಬೆನ್ ಸ್ಟೋಕ್ಸ್ ಅವರು ನಾಯಕನಾಗಿ ಮತ್ತು ಬ್ರೆಂಡನ್ ಮೆಕಲಮ್ ಅವರು ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಇಂಗ್ಲೆಂಡ್ ಟೆಸ್ಟ್ ತಂಡವು ಬ್ಯಾಟ್‌ನೊಂದಿಗೆ ತಮ್ಮ ಆಕ್ರಮಣಕಾರಿ ಆಟದ ಶೈಲಿಯಿಂದ ವಿಶ್ವದ ಗಮನ ಸೆಳೆದಿದೆ. ಇಂಗ್ಲೆಂಡ್‌ನ ಆಟದ ಶೈಲಿಯೇ ವಿಭಿನ್ನವಾಗಿದೆ ಎಂದು ಜಡೇಜಾ ಒಪ್ಪಿಕೊಂಡಿದ್ದು, ಅದಕ್ಕೆ ತಕ್ಕಂತೆ ಭಾರತ ಯೋಜನೆ ರೂಪಿಸಬೇಕಿದೆ. ಆದರೆ ಅವರದ್ದು ಕಠಿಣ ತಂಡವಲ್ಲ ಎಂದಿದ್ದಾರೆ.

ಇಂಗ್ಲೆಂಡ್ ತಂಡವನ್ನು ಸೋಲಿಸುವುದು ಕಷ್ಟವೇನಲ್ಲ. ಅವರು ಕ್ರಿಕೆಟ್ ಅನ್ನು ವಿಭಿನ್ನವಾಗಿ ಆಡುತ್ತಾರೆ. ಸ್ವಲ್ಪ ಹೆಚ್ಚು ಆಕ್ರಮಣಕಾರಿ. ಆದ್ದರಿಂದ ಅದಕ್ಕೆ ಒಗ್ಗಿಕೊಳ್ಳುವುದು ಮತ್ತು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುತ್ತೇವೆ. ಮೂರನೇ ಟೆಸ್ಟ್​ ಪಂದ್ಯದಲ್ಲೂ ಗೆಲುವು ದಾಖಲಿಸುತ್ತೇವೆ ಎಂದು ಜಡೇಜಾ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗಾಯದಿಂದ ಮರಳಿದ ಜಡೇಜಾ

ಜಡೇಜಾ ಮಂಡಿರಜ್ಜು ಗಾಯದಿಂದಾಗಿ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡರು. ಅವರು ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಪೂರ್ಣಗೊಳಿಸಲು ಯತ್ನಿಸಿ ಗಾಯಗೊಂಡು ರನೌಟ್ ಆದರು. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ 3 ವಿಕೆಟ್‌ಗಳ ಜೊತೆಗೆ 87 ರನ್‌ ಗಳಿಸಿದರು. ಆ ಮೂಲಕ ಭಾರತ ತಂಡದ ಪರ ಅತಿ ಹೆಚ್ಚು ಸ್ಕೋರರ್ ಆದರು. 2ನೇ ಇನ್ನಿಂಗ್ಸ್‌ನಲ್ಲಿ 34 ಓವರ್​ ಬೌಲಿಂಗ್ ಮಾಡಿ 131 ರನ್‌ ಬಿಟ್ಟುಕೊಟ್ಟರು. ಬ್ಯಾಟಿಂಗ್​ನಲ್ಲಿ ಕೇವಲ 2 ರನ್‌ ಗಳಿಸಿದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ