logo
ಕನ್ನಡ ಸುದ್ದಿ  /  ಕ್ರಿಕೆಟ್  /  6 ಎಸೆತಗಳಲ್ಲಿ 20 ರನ್, ರನ್ ಮಳೆ ಹರಿಸಿದ ಲ್ಯೂಕ್ ಜಾಂಗ್ವೆ; ಲಂಕಾ ವಿರುದ್ಧ ಜಿಂಬಾಬ್ವೆಗೆ ಐತಿಹಾಸಿಕ ಜಯ

6 ಎಸೆತಗಳಲ್ಲಿ 20 ರನ್, ರನ್ ಮಳೆ ಹರಿಸಿದ ಲ್ಯೂಕ್ ಜಾಂಗ್ವೆ; ಲಂಕಾ ವಿರುದ್ಧ ಜಿಂಬಾಬ್ವೆಗೆ ಐತಿಹಾಸಿಕ ಜಯ

Jayaraj HT Kannada

Jan 17, 2024 04:18 PM IST

ಏಂಜೆಲೊ ಮ್ಯಾಥ್ಯೂಸ್ ಎಸೆತ ಎದುರಿಸಿದ ಜಿಂಬಾಬ್ವೆಯ ಲ್ಯೂಕ್ ಜಾಂಗ್ವೆ

    • Sri Lanka vs Zimbabwe: ಅಂತಿಮ ಓವರ್‌ನಲ್ಲಿ ಜಿಂಬಾಬ್ವೆ ಗೆಲುವಿಗೆ 20 ರನ್‌ ಅಗತ್ಯವಿತ್ತು. ಲ್ಯೂಕ್ ಜಾಂಗ್ವೆ ಸ್ಫೋಟಕ ಆಟವಾಡಿ ಇನ್ನೂ ಒಂದು ಎಸತ ಬಾಕಿ ಇರುವಾಗಲೇ ತಂಡ ಗುರಿ ತಲುಪಿ ಗೆದ್ದು ಬೀಗಿತು.
ಏಂಜೆಲೊ ಮ್ಯಾಥ್ಯೂಸ್ ಎಸೆತ ಎದುರಿಸಿದ ಜಿಂಬಾಬ್ವೆಯ ಲ್ಯೂಕ್ ಜಾಂಗ್ವೆ
ಏಂಜೆಲೊ ಮ್ಯಾಥ್ಯೂಸ್ ಎಸೆತ ಎದುರಿಸಿದ ಜಿಂಬಾಬ್ವೆಯ ಲ್ಯೂಕ್ ಜಾಂಗ್ವೆ

ಶ್ರೀಲಂಕಾ ವಿರುದ್ಧದ ಚೊಚ್ಚಲ ಟಿ20 ಪಂದ್ಯ ಗೆದ್ದು ಜಿಂಬಾಬ್ವೆ (Sri Lanka vs Zimbabwe) ಸಂಭ್ರಮಿಸಿದೆ. ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಅಚ್ಚರಿಯ ಸೋಲು ಕಂಡಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿ ಸಮಬಲವಾಗಿದೆ.

ಟ್ರೆಂಡಿಂಗ್​ ಸುದ್ದಿ

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ಜನವರಿ 16ರ ಮಂಗಳವಾರ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 174 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ, ಕೊನೆಯ ಓವರ್‌ನಲ್ಲಿ ಗೆಲ್ಲಲು 20 ರನ್‌ಗಳ ಅವಶ್ಯಕತೆಯಿತ್ತು. ಲಂಕಾ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಕೈಗೆ ಚೆಂಡು ನೀಡಲಾಯ್ತು. ಆದರೆ ಜಿಂಬಾಬ್ವೆಯ ಲ್ಯೂಕ್ ಜಾಂಗ್ವೆ ಅವರ ಮುಂದೆ ಮ್ಯಾಥ್ಯೂಸ್‌ ಅನುಭವ ವರ್ಕೌಟ್‌ ಆಗಲಿಲ್ಲ. ಶ್ರೀಲಂಕಾದ ನಾಯಕ ಮ್ಯಾಥ್ಯೂಸ್ ಎಸೆದ ಓವರ್‌ನಲ್ಲಿ ಎರಡು ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಿಡಿಸಿದ ಲ್ಯೂಕ್ ಜಾಂಗ್ವೆ, ತಂಡವನ್ನು ಗೆಲುವಿನ ದಡ ಸೇರಿಸಿದರು. ಅಷ್ಟರಲ್ಲಿ ಜಿಂಬಾಬ್ವೆ ಡಕೌಟ್‌ನಲ್ಲಿ ಸಂಭ್ರಮಾಚರಣೆ ಆರಂಭವಾಯ್ತು.

ಇದನ್ನೂ ಓದಿ | ಬಾಬರ್ ಸತತ 3ನೇ ಅರ್ಧಶತಕ, ಪಾಕಿಸ್ತಾನಕ್ಕೆ ಸತತ 3ನೇ ಸೋಲು; ನ್ಯೂಜಿಲೆಂಡ್​ಗೆ ಹ್ಯಾಟ್ರಿಕ್ ಗೆಲುವು

12 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 25 ರನ್ ಗಳಿಸಿದ ಜಿಂಬಾಬ್ವೆಯ ಲ್ಯೂಕ್ ಜಾಂಗ್ವೆ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. ಅದಕ್ಕೂ ಮುನ್ನ ಬೌಲಿಂಗ್‌ನಲ್ಲಿ ಅವರು ಎರಡು ವಿಕೆಟ್‌ ಪಡೆದಿದ್ದರು. ಆದರೆ ಕೊನೆಯ ಓವರ್‌ನಲ್ಲಿ ಅವರ ದೊಡ್ಡ ಹೊಡೆತವು ಜಿಂಬಾಬ್ವೆ ತಂಡಕ್ಕೆ ಗೆಲುವು ತಂದುಕೊಟ್ಟಿತು.

ಕೊನೆಯ ಓವರ್‌ ಹೇಗಿತ್ತು

ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಲಾಂಗ್ ಆನ್‌ಗೆ ಬಾರಿಸಿದ ಜಾಂಗ್ವೆ ಸಿಕ್ಸರ್‌ ಗಳಿಸಿದರು. ಅದು ನೋಬಾಲ್‌ ಆಗಿತ್ತು. ಅಲ್ಲಿಗೆ ತಂಡಕ್ಕೆ ಮುಂದೆ ಆರು ಎಸೆತಗಳಲ್ಲಿ 13 ರನ್‌ ಮಾತ್ರ ಬೇಕಾಯ್ತು. ಫ್ರೀ ಹಿಟ್‌ ಎಸೆತಕ್ಕೆ ಬೌಂಡರಿ ಗಳಿಸಿದ ಜಿಂಬಾಬ್ವೆಗೆ ಮುಂದಿನ ನಾಲ್ಕು ಎಸೆತಗಳಲ್ಲಿ 9 ರನ್‌ ಮಾತ್ರ ಬೇಕಿತ್ತು. ಮುಂದಿನ ಎಸೆತ ಡಾಟ್ ಆದರೆ, ನಂತರದ ಎಸೆತದಲ್ಲಿ ಒಂದು ರನ್‌ ಓಡಿದರು. ಐದನೇ ಎಸೆತದಲ್ಲಿ ಕ್ಲೈವ್ ಮಂಡೆ ಸ್ಟ್ರೈಕ್‌ನಲ್ಲಿದ್ದರು. ಮ್ಯಾಥ್ಯೂಸ್ ಯಾರ್ಕರ್ ಪ್ರಯತ್ನ ಕೈತಪ್ಪಿತು. ಚೆಂಡನ್ನು ನೇರವಾಗಿ ಸಿಕ್ಸರ್‌ಗಟ್ಟಿದ ಮಂಡೆ ಪಂದ್ಯವನ್ನು ಗೆಲ್ಲಿಸಿದರು.

ಜೆಂಬಾಬ್ವೆ ಗೆಲುವಿನ ಸಂಭ್ರಮ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 6 ವಿಕೆಟ್‌ ಕಳೆದುಕೊಂಡು 173 ರನ್ ಗಳಿಸಿತು.‌ ಅಗ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲಾ ವಿಫಲರಾದರೂ, ಅಸಲಂಕಾ ಮತ್ತು ಮ್ಯಥ್ಯೂಸ್‌ ತಲಾ ಅರ್ಧಶತಕ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿದರು. ಮ್ಯಾಥ್ಯೂಸ್ ಹಾಗೂ ಚರಿತ್ ಅಸಲಂಕಾ ಜೊತೆಗೂಡಿ 118 ರನ್‌ಗಳ ಜೊತೆಯಾಟವಾಡಿದರು.

ಗೆಲುವಿಗೆ ಸ್ಪಾರ್ಧಾತ್ಮಕ ಗುರಿ ಪಡೆದ ಜಿಂಬಾಬ್ವೆ ಪರ ಆರಂಭಿಕ ಬ್ಯಾಟರ್‌ ಕ್ರೇಗ್ ಎರ್ವಿನ್ 54 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ ಭರ್ಜರಿ 70 ರನ್ ಗಳಿಸಿದರು. ಇದು ಎರ್ವಿನ್ ಅವರ ವೃತ್ತಿಜೀವನದ ಅತ್ಯುತ್ತಮ ಟಿ20 ಸ್ಕೋರ್. ಅಂತಿಮ ಹಂತದಲ್ಲಿ ಬ್ಯಾಟರ್‌ಗಳ ಮ್ಯಾಜಿಕ್‌ನಿಂದ ತಂಡವು ಗೆಲುವನ್ನು ಒಲಿಸಿಕೊಂಡಿತು.

ಇದನ್ನೂ ಓದಿ | ಬಾರಿಸಿದ್ದು 137 ರನ್, ಬೌಂಡರಿಗಳಿಂದ ಬಂದದ್ದೇ 116 ರನ್; ಪಾಕ್ ವಿರುದ್ಧ ಫಿನ್ ಅಲೆನ್ ದಾಖಲೆಯ ಶತಕ

ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಗೆದ್ದಿತ್ತು. ಸದ್ಯ ಸರಣಿ ಸಮಬಲಗೊಂಡಿದ್ದು, ಗುರುವಾರ ನಡೆಯಲಿರುವ ಅಂತಿಮ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ