logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆತನನ್ನು ಈಗಿನಿಂದಲೇ ಟೆಸ್ಟ್ ಕ್ರಿಕೆಟ್‌ಗೆ ಸಿದ್ಧಪಡಿಸಿ; ಭಾರತ ತಂಡಕ್ಕೆ ಉತ್ತಮ ಸಲಹೆ ನೀಡಿದ ರವಿ ಶಾಸ್ತ್ರಿ

ಆತನನ್ನು ಈಗಿನಿಂದಲೇ ಟೆಸ್ಟ್ ಕ್ರಿಕೆಟ್‌ಗೆ ಸಿದ್ಧಪಡಿಸಿ; ಭಾರತ ತಂಡಕ್ಕೆ ಉತ್ತಮ ಸಲಹೆ ನೀಡಿದ ರವಿ ಶಾಸ್ತ್ರಿ

Prasanna Kumar P N HT Kannada

Dec 30, 2023 06:08 AM IST

ರವಿ ಶಾಸ್ತ್ರಿ.

    • Ravi Shastri: ಸೌತ್ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಭಾರತ ನೀಡಿದ ಕಳಪೆ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ ರವಿ ಶಾಸ್ತ್ರಿ, ತಂಡದಲ್ಲಿ ಮೂರನೇ ಬೌಲರ್ ಕುರಿತು ಮಾತನಾಡಿದ್ದಾರೆ. ಸೋತ ಭಾರತದ ಬೌಲಿಂಗ್ ವಿಭಾಗವನ್ನು ಟೀಕಿಸಿದ್ದಾರೆ.
ರವಿ ಶಾಸ್ತ್ರಿ.
ರವಿ ಶಾಸ್ತ್ರಿ.

ದಕ್ಷಿಣ ಆಫ್ರಿಕಾ ವಿರುದ್ಧ‌ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ (India vs South Africa) ಪರಾಭವಗೊಂಡ ಬೆನ್ನಲ್ಲೇ ಮಾಜಿ ಹೆಡ್​ಕೋಚ್ ರವಿ ಶಾಸ್ತ್ರಿ (Ravi Shastri) ಅವರು ವೇಗಿ ಆರ್ಷದೀಪ್ ‌ಸಿಂಗ್ ಅವರನ್ನು (Arshdeep Singh) ಟೆಸ್ಟ್ ಕ್ರಿಕೆಟ್‌ಗೆ ಸಿದ್ಧಪಡಿಸಿ ಎಂದು ಸಲಹೆ ನೀಡಿದ್ದಾರೆ. ಮುಂಬರುವ ಟೆಸ್ಟ್‌ ಸರಣಿಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆರ್ಷದೀಪ್​ರನ್ನು ಆಯ್ಕೆ ಮಾಡಲು ಈಗಿನಿಂದಲೇ ಸಜ್ಜುಗೊಳಿಸಿ ಎಂದು ಸೂಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ-ಸಿಎಸ್‌ಕೆ ಪಂದ್ಯ ನೋಡೋಕೆ ಬೈಕ್‌ನಲ್ಲಿ ಹೋಗ್ತಿದ್ದಾರಾ; ತಲೆಗೆ ಹೆಲ್ಮೆಟ್ ಮರೆಯಬೇಡಿ, ಬೆಂಗಳೂರು ಟ್ರಾಫಿಕ್ ಪೊಲೀಸರ ಸಂದೇಶ

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

Rajat Patidar: ಸ್ಫೋಟಕ ಬ್ಯಾಟಿಂಗ್ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟ ಆರ್‌ಬಿಸಿ ಬ್ಯಾಟರ್ ರಜತ್ ಪಾಟಿದಾರ್

ಅದಕ್ಕೆ ಅವರು ಅರ್ಹರು ಎಂದ ಶಾಸ್ತ್ರಿ

ಸೌತ್ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಭಾರತ ನೀಡಿದ ಕಳಪೆ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ ರವಿ ಶಾಸ್ತ್ರಿ, ತಂಡದಲ್ಲಿ ಮೂರನೇ ಬೌಲರ್ ಕುರಿತು ಮಾತನಾಡಿದ್ದಾರೆ. ಸೋತ ಭಾರತದ ಬೌಲಿಂಗ್ ವಿಭಾಗವನ್ನು ಟೀಕಿಸಿದ್ದಾರೆ. ಆಫ್ರಿಕಾ ಪಿಚ್‌ಗೆ ಆರ್ಷದೀಪ್ ಸೂಕ್ತವಾಗಲಿದ್ದಾರೆ. ಭವಿಷ್ಯದಲ್ಲಿ ಅವರು ಭಾರತ ಟೆಸ್ಟ್ ತಂಡಕ್ಕೆ ಆಡಬೇಕು. ಅದಕ್ಕೆ ಅವರು ಅರ್ಹರು ಎಂದು ಬೆಂಬಲಿಸಿದ್ದಾರೆ.

ಚೆಂಡನ್ನು ಹೆಚ್ಚು ಸ್ವಿಂಗ್ ಮಾಡುವ ಆರ್ಷದೀಪ್ ಸಾಮರ್ಥ್ಯ ‌ಗಮನಾರ್ಹವಾಗಿದೆ. ಸೌತ್ ಆಫ್ರಿಕಾ ವಿರುದ್ಧವೇ ನಡೆದ ಏಕದಿನ ಸರಣಿಯಲ್ಲಿ ಇದನ್ನು ನಾವು ನೋಡಿದ್ದೇವೆ. ತಮ್ಮದೇ ಪಿಚ್‌ನಲ್ಲಿ ದ. ಆಫ್ರಿಕಾ ಬ್ಯಾಟರ್​​ಗಳನ್ನು ಸುಲಭವಾಗಿ ಔಟ್ ಮಾಡಿದರು. ಸ್ವಿಂಗ್ ಮೂಲಕ‌ ತಡಬಡಾಯಿಸುಂತೆ ಮಾಡಿದರು. ಈ ಸಾಮರ್ಥ್ಯದ‌ ಬೌಲರ್ ತಂಡಕ್ಕೆ ಬೇಕಿದೆ ಎಂದು ಅಗತ್ಯ ಸಲಹೆಯನ್ನು ಕೊಟ್ಟಿದ್ದಾರೆ.

‘ಆರ್ಷದೀಪ್​ರನ್ನು ಪಳಗಿಸಬೇಕಿದೆ’

ಆದರೆ‌ ಅವರು‌ ಟೆಸ್ಟ್‌ನಲ್ಲಿ ‌ಇನ್ನೂ ಪಳಗಬೇಕಿದೆ. ರಣಜಿ ಟ್ರೋಫಿ ಮತ್ತು ಕೌಂಟಿ ಚಾಂಪಿಯನ್ ಶಿಪ್ ಗೆ ಅವರ ಪ್ರಥಮ‌‌‌ ದರ್ಜೆ ಕ್ರಿಕೆಟ್ ಅನುಭವ ಸೀಮಿತಗೊಂಡಿದೆ. ಹಾಗಾಗಿ ಈ ಟೂರ್ನಿಗಳಲ್ಲಿ ಆತ ಇನ್ನಷ್ಟು ಪಳಗುವಂತೆ ಮಾಡಬೇಕು. ಇದು ಭಾರತದ ಭವಿಷ್ಯದ ಟೆಸ್ಟ್ ಸಿರೀಸ್​ಗೆ ಆಯ್ಕೆ ಮಾಡಲು ಮತ್ತು ಕಣಕ್ಕಿಳಿಸಲು ನೆರವಾಗುತ್ತದೆ ಎಂದಿದ್ದಾರೆ. ತಂಡ ಕೂಡ ಬಲಿಷ್ಠವಾಗಿ ಮಾರ್ಪಡಲಿದೆ ಎಂದು ತಿಳಿಸಿದ್ದಾರೆ.

ಭಾರತವನ್ನು ಎಚ್ಚರಿಸಿದ ರವಿ ಶಾಸ್ತ್ರಿ

ಮೊದಲ‌ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರು‌ ಅನುಭವಿಗಳಿದ್ದರು. ಮೊಹಮ್ಮದ್ ‌ಶಮಿ ಗಾಯಗೊಂಡಿದ್ದಾರೆ. ಶಾರ್ದೂಲ್ ಠಾಕೂರ್ ಸಹ ತಂಡದಲ್ಲಿದ್ದ ಅನುಭವಿ ವೇಗಿ. ಆದರೆ ತಮ್ಮ‌ ಕೌಶಲ ತೋರಿಸಲಿಲ್ಲ. ಅವರೇನು ಮಗು ಅಲ್ಲ. ಆತ ಸಹ ತಂಡದ ಮೂರನೇ ವೇಗಿ. ಸಾಗರೋತ್ತರ ಪರಿಸ್ಥಿತಿಗಳಲ್ಲಿ ತಂಡಕ್ಕೆ ಸರಿಯಾದ ಮೂರನೇ ವೇಗಿ ಅತ್ಯಗತ್ಯ ಎಂದು ಭಾರತ ತಂಡಕ್ಕೆ ಎಚ್ಚರಿಸಿದ್ದಾರೆ.

ಆರ್ಷದೀಪ್​ ಸಾಮರ್ಥ್ಯ ತಿಳಿಸಿದ ಮಾಜಿ ಕೋಚ್

ಅನುಭವಿ ವೇಗಿಗಳು ಅಲಭ್ಯರಾದಾಗ ಒಬ್ಬ ವೇಗಿಯನ್ನು ಸಿದ್ಧಪಡಿಸಿಕೊಳ್ಳಬೇಕೆಂದು ತಿಳಿಸಿದ ರವಿ ಶಾಸ್ತ್ರಿ, ಆರ್ಷದೀಪ್ ಅವರ ಆಯ್ಕೆಗೆ ಹೆಚ್ಚು ಬೆಂಬಲ‌ ತೋರಿದ್ದಾರೆ. ದೀರ್ಫ ಸ್ಪೆಲ್​​ಗಳನ್ನು ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ಗೆ ಮುಖ್ಯವಾಗಿದೆ.‌‌ ಅವರು ಈಗಾಗಲೇ ಸಾಕಷ್ಟು ದೀರ್ಘ ಸ್ಪೆಲ‌್ ಮಾಡಿದ್ದಾರೆ. ಸಾಕಷ್ಟು ರಣಜಿ ಆಡಿದ್ದಾರೆ. ಎಲ್ಲಾ ದಾಖಲೆಗಳು ಅದ್ಬುತವಾಗಿವೆ ಎಂದು ತಿಳಿಸಿದ್ದಾರೆ.

ಹಾಗಾಗಿ ಅವರನ್ನು ಇನ್ನಷ್ಟು ಪಳಗಿಸಬೇಕು. ಹೆಚ್ಚೆಚ್ಚು ರಣಜಿ ಆಡಲು ಅವಕಾಶ ನೀಡಬೇಕು. ಅವರು ಕೇವಲ 12 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಆದರೆ 38 ವಿಕೆಟ್ ಪಡೆದಿದ್ದಾರೆ‌. ಕೇವಲ 3.12ರ ಎಕಾನಮಿಯಲ್ಲಿ ಸ್ಪೆಲ್ ಮಾಡಿದ್ದಾರೆ. ಭಾರತದ ಭವಿಷ್ಯದ ಟೆಸ್ಟ್ ತಂಡದಲ್ಲಿ ಮೂರನೇ ವೇಗಿಯಾಗಿ ಕಾಣಿಸಿಕೊಳ್ಳಲು ಹೆಚ್ಚಿನ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

IPL, 2024

Live

RCB

0/0

0.0 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ