logo
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದೂ ಏಕದಿನ ವಿಶ್ವಕಪ್ ಗೆಲ್ಲದೆ 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಟಾಪ್-5 ಆಟಗಾರರು!

ಒಂದೂ ಏಕದಿನ ವಿಶ್ವಕಪ್ ಗೆಲ್ಲದೆ 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಟಾಪ್-5 ಆಟಗಾರರು!

Prasanna Kumar P N HT Kannada

Sep 30, 2023 07:00 AM IST

ಭಾರತ ತಂಡವು 2011ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸಂದರ್ಭ.

    • Most ODIs without winning the ICC World Cup: 300 ಮತ್ತು 400ಕ್ಕೂ ಅಧಿಕ ಏಕದಿನ ಪಂದ್ಯಗಳನ್ನು ಆಡಿದ್ದರೂ ಒಂದೇ ಒಂದು ವಿಶ್ವಕಪ್ ಗೆಲ್ಲಲು ಸಾಧ್ಯವಾಗದ ಪ್ರಮುಖ ಆಟಗಾರರ ಕುರಿತು ಈ ಮುಂದೆ ತಿಳಿಯೋಣ.
ಭಾರತ ತಂಡವು 2011ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸಂದರ್ಭ.
ಭಾರತ ತಂಡವು 2011ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸಂದರ್ಭ.

ಏಕದಿನ ವಿಶ್ವಕಪ್ (ODI World Cup) ಗೆಲ್ಲುವುದು ಪ್ರತಿಯೊಬ್ಬ ಆಟಗಾರನ ಕನಸು. ಒಂದು ವಿಶ್ವಕಪ್ ಗೆದ್ದರೆ, ಅದೊಂದು ಸಾರ್ಥಕ ಜೀವನ ಎನ್ನುವುದು ಪ್ರತಿಯೊಬ್ಬ ಆಟಗಾರ ಮಾತು. ಆದರೆ, ಈ ಕನಸು ನನಸಾಗಿರುವುದು ಕೆಲವೇ ಕೆಲವರಿಗೆ ಮಾತ್ರ. 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದರೂ ಕೆಲವರಿಗೆ ಟ್ರೋಫಿ ಎನ್ನುವುದು ಮರೀಚಿಕೆಯಾಗಿದೆ. ಅಂತಹ ಟಾಪ್-5 ಆಟಗಾರರನ್ನು ಈ ಮುಂದೆ ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

1. ಮಹೇಲಾ ಜಯವರ್ಧನೆ

ಮಹೇಲಾ ಜಯವರ್ಧನೆ (Mahela Jayawardene) ಶ್ರೀಲಂಕಾದ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ. ಒಬ್ಬ ನತದೃಷ್ಠ ಆಟಗಾರ. ಏಕದಿನ ಕ್ರಿಕೆಟ್‌ನಲ್ಲಿ ಎದುರಾಳಿ ಬೌಲರ್‌ಗಳಿಗೆ ದುಸ್ವಪ್ನವಾಗಿದ್ದ ಜಯವರ್ಧನೆ, ಒಂದೇ ಒಂದು ವಿಶ್ವಕಪ್ ಗೆಲ್ಲಲು ಅವರಿಂದ ಆಗಲಿಲ್ಲ. ಅವರ ನಾಯಕತ್ವದಲ್ಲೇ ಶ್ರೀಲಂಕಾ 2007ರ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿ, ಮರೀಚಿಕೆಯಾಯಿತು. ಜಯವರ್ಧನೆ 17 ವರ್ಷಗಳ ವೃತ್ತಿಜೀವನದಲ್ಲಿ 448 ಏಕದಿನ ಪಂದ್ಯಗಳನ್ನಾಡಿದ್ದು, 19 ಶತಕ ಮತ್ತು 39 ಅರ್ಧಶತಕ ಸಹಿತ 12650 ರನ್ ಗಳಿಸಿದ್ದಾರೆ. ಇಷ್ಟು ಸಾಧನೆ ಮಾಡಿರುವ ಮಹೇಲಾ, ವಿಶ್ವಕಪ್ ಟ್ರೋಫಿ ಇಲ್ಲದೆ ಕ್ರಿಕೆಟ್‌ ವೃತ್ತಿಜೀವನ ಮುಗಿಸಿದ್ದಾರೆ.

2. ಕುಮಾರ್ ಸಂಗಕ್ಕಾರ

ಶ್ರೀಲಂಕಾದ ಮಾಜಿ ನಾಯಕ, ವಿಕೆಟ್ ಕೀಪರ್ ಕುಮಾರ್ (Kumar Sangakkara) ಸಂಗಕ್ಕಾರ ಅವರು ಏಕದಿನ ಕ್ರಿಕೆಟ್‌ನಲ್ಲಿ ಮಹೋನ್ನತ ದಾಖಲೆಗಳನ್ನು‌ ಹೊಂದಿದ್ದಾರೆ. ಏಕದಿನದಲ್ಲಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ನಂತರ ಎರಡನೇ ಸ್ಥಾನ ಪಡೆದ ಸಂಗಾಕ್ಕಾರ, ಒಟ್ಟು, 404 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 25 ಶತಕ, 93 ಅರ್ಧಶತಕ ಸಹಿತ 14234 ರನ್ ಗಳಿಸಿದ್ದಾರೆ. ಇವರ ನಾಯಕತ್ವದಲ್ಲಿ ಶ್ರೀಲಂಕಾ ತಂಡವು 2011ರ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಭಾರತ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2007ರಲ್ಲೂ ಶ್ರೀಲಂಕಾ ಫೈನಲ್‌ ಪ್ರವೇಶಿಸಿತ್ತು. ಆದರೆ ಆಗ ಆಸ್ಟ್ರೇಲಿಯಾಗೆ ಮುತ್ತಕ್ಕಿತ್ತು.

3. ಶಾಹೀದ್ ಅಫ್ರಿದಿ

ಪಾಕಿಸ್ತಾನದ ಗ್ರೇಟ್ ಆಲ್​ರೌಂಡರ್ ಶಾಹೀದ್ ಅಫ್ರಿದಿ (Shahid Afridi) ಕೂಡ ಒಂದೇ ಒಂದು ವಿಶ್ವಕಪ್ ಗೆಲ್ಲದೆ ಕ್ರಿಕೆಟ್ ವೃತ್ತಿಜೀವನ ಮುಗಿಸಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕನಾಗಿಯೂ ಪಾಕ್ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿರುವ ಅಫ್ರಿದಿ, 1996ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಒಟ್ಟು ನಾಲ್ಕು ವಿಶ್ವಕಪ್ ಆಡಿರುವ ಶಾಹೀದ್ ಅಫ್ರಿದಿ, 398 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 6 ಶತಕ, 39 ಅರ್ಧಶತಕಗಳ ಸಹಿತ 8064 ರನ್ ಗಳಿಸಿದ್ದಾರೆ. ಅಲ್ಲದೆ 395 ವಿಕೆಟ್ ಉರುಳಿಸಿದ್ದಾರೆ.

4. ರಾಹುಲ್ ದ್ರಾವಿಡ್

ಭಾರತೀಯ ಕ್ರಿಕೆಟ್‌ನ ಜೆಂಟಲ್ ಮನ್ ಕ್ರಿಕೆಟರ್ ಎಂದೇ ಕರೆಸಿಕೊಳ್ಳುವ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ (Rahul Dravid), 300ಕ್ಕೂ ಅಧಿಕ ಪಂದ್ಯಗಳನ್ನಾಡಿ ಏಕದಿನ ವಿಶ್ವಕಪ್ ಗೆಲ್ಲದ ಆಟಗಾರರ ಪಟ್ಟಿಯಲ್ಲಿ ತಾನೂ ಸ್ಥಾನ ಪಡೆದಿದ್ದಾರೆ. ತಮ್ಮ ನಾಯಕತ್ವದಲ್ಲಿ 2007 ಭಾರತ ವಿಶ್ವಕಪ್ ಆಡದಿದ್ದರೂ ಲೀಗ್ ಹಂತದಲ್ಲೇ ಸೋತು ಹೊರಬಿದ್ದಿತ್ತು. 1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ದಿ ವಾಲ್, ಒಟ್ಟು 344 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. 12 ಶತಕ, 83 ಅರ್ಧಶತಕ ಸಹಿತ 10889 ರನ್ ಗಳಿಸಿದ್ದಾರೆ. ಒಟ್ಟು ಮೂರು ವಿಶ್ವಕಪ್ ಆಡಿದ್ದರೂ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂದು ನಾಯಕ, ಆಟಗಾರನಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗದ ದ್ರಾವಿಡ್, ಇಂದು ಕೋಚ್ ಆಗಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿದ್ದಾರೆ.

5. ಮೊಹಮ್ಮದ್ ಅಜರುದ್ದೀನ್

ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ (Mohammad Azharuddin), ಸಹ 300ಕ್ಕೂ ಅಧಿಕ ಪಂದ್ಯಗಳಲ್ಲಿ ಕಣಕ್ಕಿಳಿದು ವಿಶ್ವಕಪ್ ಗೆಲ್ಲದ ನತದೃಷ್ಟ ಆಟಗಾರ ಎನಿಸಿದ್ದಾರೆ. ನಾಯಕನಾಗಿ 1999ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅಜರುದ್ದೀನ್, ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. 344 ಏಕದಿನ ಪಂದ್ಯಗಳನ್ನಾಡಿದ್ದು, 7 ಶತಕ, 58 ಅರ್ಧಶತಕ ಸಹಿತ 9378 ರನ್ ಗಳಿಸಿದ್ದಾರೆ. ಇವರಷ್ಟೇ ಅಲ್ಲ, ಅನೇಕರು 300ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದರೂ, ಏಕದಿನ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಲು ಸಾಧ್ಯವಾಗಿಲ್ಲ.

ಇಲ್ಲಿದೆ ಇನ್ನಷ್ಟು ಪಟ್ಟಿ!

ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ (330 ಪಂದ್ಯ), ಸೌತ್ ಆಫ್ರಿಕಾದ ಜಾಕ್ ಕಾಲೀಸ್ (328), ಭಾರತದ ಸೌರವ್ ಗಂಗೂಲಿ (311 ಪಂದ್ಯ), ಸೌತ್ ಆಫ್ರಿಕಾದ ಶಾನ್ ಪೊಲಾಕ್ (303), ವೆಸ್ಟ್ ಇಂಡೀಸ್ (301) ಕೂಡ ಏಕದಿನ ವಿಶ್ವಕಪ್​​​​ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಇವರೆಲ್ಲರೂ 300 ಅಧಿಕ ಪಂದ್ಯಗಳನ್ನಾಡಿದ್ದಾರೆ.  ಪ್ರಸಕ್ತ ಸಕ್ರೀಯ ಆಟಗಾರರ ಪೈಕಿ ರೋಹಿತ್​ ಶರ್ಮಾ 250 ಪಂದ್ಯಗಳನ್ನಾಡಿದ್ದು, ಮೊದಲ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಹಾಗೆಯೇ ಬಾಂಗ್ಲಾದೇಶದ ವಿಕೆಟ್ ಕೀಪರ್​ ಮುಷ್ಫಿಕರ್ ರಹೀಮ್, 256 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅದೇ ತಂಡದ ನಾಯಕ ಶಕೀಬ್ ಅಲ್ ಹಸನ್ 240 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ಈವರೆಗೂ ಏಕದಿನ ವಿಶ್ವಕಪ್​ ಟ್ರೋಫಿಯನ್ನು ಒಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವರ್ಷವಾದರೂ ಅವರ ಟ್ರೋಫಿ ಬರಕ್ಕೆ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ