logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ-ರೋಹಿತ್ ಎಲೈಟ್​ ಪಟ್ಟಿಗೆ ಸೇರಿದ ಬಾಬರ್ ಅಜಮ್; ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಆಟಗಾರ

ಕೊಹ್ಲಿ-ರೋಹಿತ್ ಎಲೈಟ್​ ಪಟ್ಟಿಗೆ ಸೇರಿದ ಬಾಬರ್ ಅಜಮ್; ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಆಟಗಾರ

Prasanna Kumar P N HT Kannada

Jan 12, 2024 04:55 PM IST

ಬಾಬರ್ ಅಜಮ್.

    • Babar Azam: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 3500 ರನ್​ಗಳ ಕ್ಲಬ್​ ಸೇರಿದ್ದಾರೆ.
ಬಾಬರ್ ಅಜಮ್.
ಬಾಬರ್ ಅಜಮ್. (AFP)

ಶುಕ್ರವಾರ (ಜನವರಿ 12) ಆಕ್ಲೆಂಡ್‌ನ ಐಕಾನಿಕ್ ಈಡನ್ ಪಾರ್ಕ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ (Pakistan vs New Zealand 1st T20) ನಡುವಿನ ಮೊದಲನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ (Babar Azam) ಇತಿಹಾಸ ಸೃಷ್ಟಿಸಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರಿರುವ ಗಣ್ಯರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಾಧನೆಗೈದ ವಿಶ್ವದ ನಾಲ್ಕನೇ ಆಟಗಾರ ಎನಿಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ನಿರ್ಣಾಯಕ​ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್​ಕೆ ಬೌಲಿಂಗ್ ಆಯ್ಕೆ; ಆರ್​ಸಿಬಿ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್​ ಟಿಕೆಟ್

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್​, ಕೇನ್ ವಿಲಿಯಮ್ಸನ್ (57) ಮತ್ತು ಡ್ಯಾರಿಲ್ ಮಿಚೆಲ್ (61) ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 226 ರನ್ ಗಳಿಸಿತು. ಆದರೆ, ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 18 ಓವರ್​ಗಳಲ್ಲಿ 180 ರನ್ ಗಳಿಸಿ ಆಲೌಟ್ ಆಯಿತು. 46 ರನ್​​ಗಳಿಂದ ಶರಣಾಯಿತು.

ಬಾಬರ್ ದಾಖಲೆ ಅರ್ಧಶತಕ

ಪಾಕಿಸ್ತಾನ ತಂಡದ ಪರ ಬಾಬರ್ ಅಜಮ್ ದಾಖಲೆಯ ಅರ್ಧಶತಕ ಸಿಡಿಸಿದರು. 35 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 57 ರನ್ ಕಲೆ ಹಾಕಿ ಬೆನ್ ಸಿಯರ್ಸ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದು ಟಿ20 ಕ್ರಿಕೆಟ್​ನಲ್ಲಿ ಬಾಬರ್ ಅಜಮ್ ಅವರ 31ನೇ ಅರ್ಧಶತಕವಾಗಿದೆ. ಈಗಾಗಲೇ ಮೂರು ಶತಕಗಳನ್ನೂ ಸಿಡಿಸಿದ್ದಾರೆ. ಒಟ್ಟಾರೆ 34 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದು, ರೋಹಿತ್​ ಶರ್ಮಾ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಹೆಚ್ಚು ಸಲ 50+ ಸ್ಕೋರ್​ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ (38) ಅಗ್ರಸ್ಥಾನದಲ್ಲಿದ್ದಾರೆ.

ಇತಿಹಾಸ ಸೃಷ್ಟಿಸಿದ ಬಾಬರ್

ಈ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಬಾಬರ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 3500 ರನ್​ಗಳ ಕ್ಲಬ್​ ಸೇರಿದ್ದಾರೆ. ಭಾರತೀಯ ಕ್ರಿಕೆಟ್ ಸ್ಟಾರ್​​ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತು ನ್ಯೂಜಿಲೆಂಡ್ ಅನುಭವಿ ಮಾರ್ಟಿನ್ ಗಪ್ಟಿಲ್ ನಂತರ ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ 4ನೇ ಆಟಗಾರ ಎನಿಸಿದ್ದಾರೆ. ಬಾಬರ್ ಟಿ20ಯಲ್ಲಿ 3ನೇ ಅತಿ ಹೆಚ್ಚು ರನ್ ಗಳಿಸಿದ ಎಂಬ ದಾಖಲೆ ಬರೆದಿದ್ದಾರೆ. ಗುಪ್ಟಿಲ್ ಅವರನ್ನು ಹಿಂದಿಕ್ಕಿದ್ದಾರೆ.

ಟಿ20ಐನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರು

ವಿರಾಟ್ ಕೊಹ್ಲಿ (ಭಾರತ) - 4008

ರೋಹಿತ್ ಶರ್ಮಾ (ಭಾರತ) - 3853

ಬಾಬರ್ ಅಜಮ್ (ಪಾಕಿಸ್ತಾನ) - 3538

ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) - 3531

ಪೌಲ್ ಸ್ಟರ್ಲಿಂಗ್ (ಐರ್ಲೆಂಡ್) - 3438

ಬಾಬರ್ ಅವರು ಕೇವಲ 105 ಪಂದ್ಯಗಳಲ್ಲಿ 42.11 ಸರಾಸರಿಯಲ್ಲಿ 3 ಶತಕ, 31 ಅರ್ಧಶತಕಗಳ ಸಹಿತ 3538 ರನ್‌ ಗಳಿಸಿದ್ದಾರೆ. ಬಾಬರ್ ಅಜಮ್ ನಾಯಕತ್ವದಿಂದ ಕೆಳಗಿಳಿದ ನಂತರ ಪಾಕಿಸ್ತಾನ ತಂಡಕ್ಕೆ ಇದು ಮೊದಲ ವೈಟ್​ಬಾಲ್ ಕ್ರಿಕೆಟ್ ಪಂದ್ಯ. ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಶಾಹೀನ್​ ಅಫ್ರಿದಿ ಸೋಲಿನ ರುಚಿ ಅನುಭವಿಸಿದ್ದಾರೆ. ಎರಡನೇ ಟಿ20 ಪಂದ್ಯ ಜನವರಿ 14ರಂದು ನಡೆಯಲಿದೆ.

IPL, 2024

Live

RCB

31/0

3.0 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ