logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅತ್ಯಾಚಾರ ಆರೋಪ ಸಾಬೀತು; ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆ 8 ವರ್ಷ ಜೈಲುಪಾಲು

ಅತ್ಯಾಚಾರ ಆರೋಪ ಸಾಬೀತು; ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆ 8 ವರ್ಷ ಜೈಲುಪಾಲು

Prasanna Kumar P N HT Kannada

Jan 10, 2024 10:10 PM IST

ಸಂದೀಪ್ ಲಮಿಚಾನೆ.

    • Sandeep Lamichhane: ಅತ್ಯಾಚಾರ ಪ್ರಕರಣ ಸಾಬೀತಾದ ಹಿನ್ನೆಲೆ ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ 8 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದಾರೆ.
ಸಂದೀಪ್ ಲಮಿಚಾನೆ.
ಸಂದೀಪ್ ಲಮಿಚಾನೆ.

ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆ (Sandeep Lamichhane) ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಾಬೀತಾಗಿದ್ದು, 8 ವರ್ಷಗಳ ಜೈಲು ಶಿಕ್ಷಗೆ ಗುರಿಯಾಗಿದ್ದಾರೆ. 24 ವರ್ಷದ ಸ್ಪಿನ್ನರ್‌, ನೇಪಾಳ ಕ್ರಿಕೆಟ್‌ ತಂಡದ ನಾಯಕನೂ ಆಗಿದ್ದರು. 17 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ 2023ರ ಅಕ್ಟೋಬರ್‌ನಲ್ಲಿ ಬಂಧಿತರಾಗಿದ್ದರು.

ಟ್ರೆಂಡಿಂಗ್​ ಸುದ್ದಿ

ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಇದೀಗ ಇದೇ ಪ್ರಕರಣ ಸಾಬೀತಾದ ಹಿನ್ನೆಲೆ 2024ರ ಜನವರಿ 10ರಂದು ಕಾಟ್ಮಂಡು ಜಿಲ್ಲಾ ನ್ಯಾಯಾಲಯ 8 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. 2022ರ ಆಗಸ್ಟ್​​ನಲ್ಲಿ ಈ ಘಟನೆ ನಡೆದಿತ್ತು. ಕಾಠ್ಮುಂಡುವಿನ ಹೋಟೆಲ್​ವೊಂದರಲ್ಲಿ ತಮ್ಮನ್ನು ಅತ್ಯಾಚಾರ ಮಾಡಿದ್ದಾರೆ ಎಂದು 17 ವರ್ಷ ಯುವತಿ, ಸಂದೀಪ್ ಲಮಿಚಾನೆ ವಿರುದ್ಧ ದೂರು ದಾಖಲಿಸಿದ್ದರು. ತದನಂತರ ಬಂಧಿತಕ್ಕೂ ಒಳಗಾಗಿದ್ದರು.

ಜಾಮೀನು ಪಡೆದಿದ್ದ ಸಂದೀಪ್ 

ಬಂಧನದ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು. 2023ರಲ್ಲಿ ಹೊರ ಬಂದಿದ್ದ ಸಂದೀಪ್, ಆರೋಪಗಳ ಹೊರತಾಗಿಯೂ, ಜಾಮೀನಿನ ಮೇಲೆ ತಮ್ಮ ದೇಶಕ್ಕಾಗಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದ್ದರು. ನವೆಂಬರ್‌ನಲ್ಲಿ ನಡೆದ ಟಿ20 ಏಷ್ಯಾ ಫೈನಲ್​​ನಲ್ಲಿ ಒಮಾನ್ ವಿರುದ್ಧ ನೇಪಾಳ ಪರ ಕೊನೆ ಬಾರಿಗೆ ಕಾಣಿಸಿಕೊಂಡಿದ್ದರು. ಇದೀಗ 2023ರ ಡಿಸೆಂಬರ್​​ನಲ್ಲಿ ಆರೋಪ ಸಾಬೀತಾಗಿದ್ದು, ಶಿಕ್ಷೆಗೂ ಗುರಿಯಾಗಿದ್ದಾರೆ.

ಆರೋಪ ಸಾಬೀತಾದ ಹಿನ್ನೆಲೆ ಲಮಿಚಾನೆ ಕ್ರಿಕೆಟ್‌ ಕರಿಯರ್​​​ಗೆ ದೊಡ್ಡ ಬ್ರೇಕ್​ ಬಿದ್ದಿದೆ. ಪ್ರಕರಣದಲ್ಲಿ ಕಾಠ್ಮಂಡು ಜಿಲ್ಲಾ ಸರ್ಕಾರಿ ವಕೀಲರ ಕಚೇರಿಯು ಆರೋಪಿ ಲಮಿಚಾನೆಗೆ 12 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ಆಗಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ನಂತರ ನ್ಯಾಯಾಧೀಶ ಶಿಶಿರ್‌ ರಾಜ್‌ ಢಂಕಾಲ್‌, ಎಂಟು ವರ್ಷ ಶಿಕ್ಷೆಯನ್ನು ವಿಧಿಸಿದ್ದಾರೆ.

ನೇಪಾಳದಲ್ಲಿ ಕ್ರಿಕೆಟ್​ ಬೆಳೆಸಿದ ಕೀರ್ತಿ

ನೇಪಾಳದಲ್ಲಿ ಕ್ರಿಕೆಟ್​ ಬೆಳವಣಿಗೆ ಮತ್ತು ದೇಶದ ಕೀರ್ತಿ ಹೆಚ್ಚಿಸಿದ್ದ ಸಂದೀಪ್ ಲಮಿಚಾನೆ, ಇದೀಗ ತನ್ನದೇ ತಪ್ಪಿನಿಂದ ಜೈಲುಪಾಲಾಗಿದ್ದಾರೆ. ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ತಮ್ಮ ದೇಶದ ಪರ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿದ್ದಾರೆ. ಬಿಗ್​ಬ್ಯಾಷ್, ಐಪಿಎಲ್​ (ಡೆಲ್ಲಿ ಕ್ಯಾಪಿಟಲ್ಸ್​ ಪರ) ನಲ್ಲೂ ಆಡಿದ ಅನುಭವ ಆತನಿಗೆ ಇದೆ. ಆದರೆ ಲಮಿಚಾನೆ ಸುದ್ದಿ ನೇಪಾಳದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಐಪಿಎಲ್​ನಲ್ಲಿ ಇದುವರೆಗೆ 9 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸಂದೀಪ್‌, 13 ವಿಕೆಟ್‌ ಉರುಳಿಸಿದ್ದಾರೆ. ಪಂದ್ಯವೊಂದರಲ್ಲಿ 36 ರನ್ ಬಿಟ್ಟುಕೊಟ್ಟು 3 ವಿಕೆಟ್​ ಪಡೆದಿದ್ದೇ ಅವರ ಉತ್ತಮ ಬೌಲಿಂಗ್ ಆಗಿದೆ. ಏಕದಿನ ಕ್ರಿಕೆಟ್​ನಲ್ಲಿ 112 ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 98 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟಾರೆ ಅವರು ಜೈಲುಪಾಲು ಆಗುವುದರೊಂದಿಗೆ ತನ್ನ ಕ್ರಿಕೆಟ್​ ಕರಿಯರ್​ ಇಲ್ಲಿಗೆ ಅಂತ್ಯಗೊಂಡಂತಾಗಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ