logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಪ್ರಾಮಾಣಿಕ ಸಂವಹನ ನಡೆಯುತ್ತಿಲ್ಲ; ಪಿಸಿಬಿ ನಿಜ ಬಣ್ಣ ಬಹಿರಂಗ ಮಾಡಿದ ಮಿಕ್ಕಿ ಆರ್ಥರ್

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಪ್ರಾಮಾಣಿಕ ಸಂವಹನ ನಡೆಯುತ್ತಿಲ್ಲ; ಪಿಸಿಬಿ ನಿಜ ಬಣ್ಣ ಬಹಿರಂಗ ಮಾಡಿದ ಮಿಕ್ಕಿ ಆರ್ಥರ್

Jayaraj HT Kannada

Jan 13, 2024 04:20 PM IST

ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಾಮ್ ಮತ್ತು ತಂಡದ ಮಾಜಿ ನಿರ್ದೇಶಕ ಮಿಕ್ಕಿ ಆರ್ಥರ್

    • Mickey Arthur: ಪಾಕಿಸ್ತಾನ ತಂಡದಲ್ಲಿ ಆಟಗಾರರಿಗೆ ಸರಿಯಾದ ಅವಕಾಶ ನೀಡದ ಕಾರಣ, ತಂಡದಲ್ಲಿ ವ್ಯವಸ್ಥೆ ಆಗಾಗ ಬದಲಾಗುತ್ತದೆ ಎಂದು ಆಟಗಾರರಿಗೆ ತಿಳಿದಿದೆ. ಪಿಸಿಬಿಯಲ್ಲಿ ಪ್ರಾಮಾಣಿಕ ಸಂವಹನ ನಡೆಯುತ್ತಿಲ್ಲ ಎನ್ನುವುದು ನಿರಾಶಾದಾಯಕ ಎಂದು ಆರ್ಥರ್‌ ಹೇಳಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಾಮ್ ಮತ್ತು ತಂಡದ ಮಾಜಿ ನಿರ್ದೇಶಕ ಮಿಕ್ಕಿ ಆರ್ಥರ್
ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಾಮ್ ಮತ್ತು ತಂಡದ ಮಾಜಿ ನಿರ್ದೇಶಕ ಮಿಕ್ಕಿ ಆರ್ಥರ್ (ANI)

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ಮಿಕ್ಕಿ ಆರ್ಥರ್ (Mickey Arthur), ಅಹಮದಾಬಾದ್‌ನಲ್ಲಿ ನಡೆದ ಭಾರತ ತಂಡದ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯವು ತನ್ನ ಅವಧಿಯಲ್ಲಿ ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ನಡೆದ ಟೂರ್ನಿಯಲ್ಲಿ ಬಾಬಾರ್‌ ಅಜಾಮ್‌ ಬಳಗವು ಸೆಮಿಫೈನಲ್‌ಗೆ ಲಗ್ಗೆ ಹಾಕಲು ವಿಫಲವಾಯ್ತು. ಆ ಬಳಿಕ ಆರ್ಥರ್ ತಮ್ಮ ಸ್ಥಾನ ಕಳೆದುಕೊಂಡರು. ಸದ್ಯ ಪಾಕ್‌ ತಂಡದ ನಿರ್ದೇಶಕರಾಗಿ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಸ್ಥಾನ ತುಂಬಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ನಿರ್ಣಾಯಕ​ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್​ಕೆ ಬೌಲಿಂಗ್ ಆಯ್ಕೆ; ಆರ್​ಸಿಬಿ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್​ ಟಿಕೆಟ್

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

“ಪಾಕಿಸ್ತಾನದ ಯಾವುದೇ ರೀತಿಯ ಬೆಂಬಲ ಇಲ್ಲದ ಕಾರಣಕ್ಕೆ ಟೂರ್ನಿಯು ಅತ್ಯಂತ ಕಠಿಣವಾಗಿತ್ತು. ಆದರೆ, ಪಂದ್ಯಾವಳಿಯ ವೇಳೆ ಪಾಕಿಸ್ತಾನ ತಂಡವು ಮುನ್ನಡೆಯಲು ಕಾರಣವಾದ ಪ್ರಮುಖ ವಿಷಯವೆಂದರೆ ಆಟಗಾರರು ಆಡುತ್ತಿದ್ದ ಮೈದಾನಗಳು ಮತ್ತು ತಂಗಿದ್ದ ಹೋಟೆಲ್‌ಗಳಲ್ಲಿ ಪಡೆದ ನಂಬಲಾಗದ ರೀತಿಯ ಬೆಂಬಲ” ಎಂದು ಆರ್ಥರ್‌ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ನಾವು ಪಂದ್ಯಗಳನ್ನು ಆಡಿರಲಿಲ್ಲ. ಹೀಗಾಗಿ ವಿಶ್ವಕಪ್‌ನಲ್ಲಿ ಆಡುವುದು ತುಂಬಾ ಕಠಿಣವಾಗಿತ್ತು" ಎಂಬುದಾಗಿ ಆರ್ಥರ್ ಹೇಳಿಕೆಯನ್ನು'ವಿಸ್ಡನ್' ಉಲ್ಲೇಖಿಸಿದೆ. ಅಹಮದಾಬಾದ್‌ನಲ್ಲಿ ಆಡುವುದು ಕಠಿಣವಾಗಿತ್ತು. ನಮ್ಮ ತಂಡಕ್ಕೆ ಪ್ರತಿಕೂಲ ವಾತಾವರಣವಿತ್ತು. ನಮ್ಮ ಆಟಗಾರರು ಎಲ್ಲಾ ಅಡೆತಡೆಗಳನ್ನು ಮೀರಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಮೈದಾನದ ಸುತ್ತ ಬೆಂಬಲ ಪಡೆಯಲು ಸಾಧ್ಯವಾಗದಿದ್ದಾಗ ಪ್ರತಿಯೊಬ್ಬರೂ ಒಂದು ರೀತಿಯ ಪ್ರೇರಣೆನ್ನು ಪಡೆದು ಆಡುತ್ತಾರೆ. ಆ ಪ್ರೇರಣೆ ಪ್ರಮುಖ ಪಾತ್ರ ವಹಿಸುತ್ತದೆ," ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | ವಿಶೇಷ ಮೈಲಿಗಲ್ಲು ತಲುಪಿದ ಬಾಬರ್; ವಿರಾಟ್, ರೋಹಿತ್ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟರ್

ಪಾಕಿಸ್ತಾನದ ವಿಶ್ವಕಪ್ ಅಭಿಯಾನವು ವಾದ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿತು. ಮೈದಾನದ ಹೊರಕ್ಕೂ ತಂಡದ ವಿಚಾರಗಳು ಸುದ್ದಿಯಾದವು. ಡ್ರೆಸ್ಸಿಂಗ್ ರೂಮ್ ವಾತಾವರಣವು ಪ್ರಕ್ಷುಬ್ದವಾಗಿ, ಆಟಗಾರರೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹೊರಬಂತು. ತಂಡದ ಆಗಿನ ನಾಯಕ ಬಾಬರ್ ಅಜಾಮ್ ಅವರ ವಾಟ್ಸಾಪ್ ಸಂಭಾಷಣೆಗಳು ಸೋರಿಕೆಯಾದವು.

ಏನೇ ಆದರೂ ಹೊರಗಿನ ಎಲ್ಲಾ ಗದ್ದಲಗಳು ತಂಡದ ಮೇಲೆ ನಿಜಕ್ಕೂ ಪರಿಣಾಮ ಬೀರಲಿಲ್ಲ ಎಂದು ಆರ್ಥರ್ ಹೇಳಿದ್ದಾರೆ. “ತಂಡದ ಕುರಿತಾಗಿ ಹೊರಗಡೆ ಆಗಿರುವ ಯಾವುದೂ ನಂಬಲರ್ಹವಲ್ಲ. ಅವುಗಳು ಸತ್ಯಕ್ಕೆ ಹತ್ತಿರವಾಗಿಲ್ಲ. ಆಟಗಾರರ ನಡುವೆ ಯಾವುದೇ ದೊಡ್ಡ ಭಿನ್ನಾಭಿಪ್ರಾಯಗಳಿಲ್ಲ,” ಎಂದು ಆರ್ಥರ್ ಹೇಳಿಕೊಂಡಿದ್ದಾರೆ.

ಪಿಸಿಬಿ ಮಾಜಿ ಅಧ್ಯಕ್ಷ ನಜಮ್ ಸೇಥಿ ಅವರೊಂದಿಗಿನ ಉತ್ತಮ ಸಂಬಂಧದಿಂದಾಗಿ ಪಾಕಿಸ್ತಾನ ಕ್ರಿಕೆಟ್‌ನೊಂದಿಗೆ ಎರಡನೇ ಬಾರಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದರು. “ನಾನು ನಜಮ್ ಸೇಥಿಯನ್ನು ಸೂಚ್ಯವಾಗಿ ನಂಬುತ್ತೇನೆ. ನಾವು ಉತ್ತಮ ಸಂಬಂಧ ಹೊಂದಿದ್ದೇವೆ. ನಾನು ಅವರಿಗೆ ಬಹಳಷ್ಟು ಋಣಿಯಾಗಿರುವ ಕಾರಣ ನಾನು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದೆ. ನಾನು ಆಸ್ಟ್ರೇಲಿಯಾದಿಂದ ವಜಾಗೊಂಡ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ನನಗೆ ಅವಕಾಶ ನೀಡಿದವರು ಅವರು.

ಇದನ್ನೂ ಓದಿ | Video: ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ದುಬಾರಿ; ಒಂದೇ ಓವರ್‌ನಲ್ಲಿ 24 ರನ್ ಹೊಡೆಸಿಕೊಂಡ ಅಫ್ರಿದಿ

ಆಟಗಾರರನ್ನು ನಂಬಿ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ನಂಬಿಕೆ ಇಡುವ ಮತ್ತು ತಂಡಕ್ಕಾಗಿ ಆಡುವ ವ್ಯವಸ್ಥೆ ನಿರ್ಮಿಸಲು ಆರ್ಥರ್ ಪಿಸಿಬಿಗೆ ಸಲಹೆ ನೀಡಿದರು. ಆಟಗಾರರಿಗೆ ಸರಿಯಾದ ಅವಕಾಶ ನೀಡದ ಕಾರಣ, ತಂಡದಲ್ಲಿ ವಿಷಯಗಳು ಆಗಾಗ ಬದಲಾಗುತ್ತವೆ ಎಂದು ಆಟಗಾರರಿಗೆ ತಿಳಿದಿದೆ. ಪಿಸಿಬಿಯಲ್ಲಿ ಯಾವುದೇ ರೀತಿಯ ಪ್ರಾಮಾಣಿಕ ಸಂವಹನ ಇಲ್ಲ ಎನ್ನುವುದು ನಿರಾಶಾದಾಯಕ, ಎಂದು ಆರ್ಥರ್‌ ಹೇಳಿದ್ದಾರೆ.

IPL, 2024

Live

RCB

31/0

3.0 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ