logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅವನ್ನೆಲ್ಲ ಬಹಿರಂಗಪಡಿಸಲು ಆಗಲ್ಲ, ಆದರೆ ನನಗೆ ತುಂಬಾ ನೆರವಾಯ್ತು; ವಿರಾಟ್ ಕೊಹ್ಲಿ ಸಲಹೆ ಕುರಿತು ಬಾಬರ್ ಅಜಮ್ ಮಾತು

ಅವನ್ನೆಲ್ಲ ಬಹಿರಂಗಪಡಿಸಲು ಆಗಲ್ಲ, ಆದರೆ ನನಗೆ ತುಂಬಾ ನೆರವಾಯ್ತು; ವಿರಾಟ್ ಕೊಹ್ಲಿ ಸಲಹೆ ಕುರಿತು ಬಾಬರ್ ಅಜಮ್ ಮಾತು

Jayaraj HT Kannada

Apr 09, 2024 04:08 PM IST

ವಿರಾಟ್ ಕೊಹ್ಲಿ ಸಲಹೆ ಕುರಿತು ಬಾಬರ್ ಅಜಮ್ ಮಾತು

    • Babar Azam: ಪಾಕಿಸ್ತಾನ ನಾಯಕ ಬಾಬರ್ ಅಜಮ್, ಟೀಮ್‌ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ನಡೆಸಿದ ಮಾತುಕತೆ ಕುರಿತು ಮಾತನಾಡಿದ್ದಾರೆ. ಭಾರತದ ಸ್ಟಾರ್‌ ಆಟಗಾರ ಹಂಚಿಕೊಂಡ ಒಳನೋಟಗಳು ತಮಗೆ ನೆರವಾಯ್ತು ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಸಲಹೆ ಕುರಿತು ಬಾಬರ್ ಅಜಮ್ ಮಾತು
ವಿರಾಟ್ ಕೊಹ್ಲಿ ಸಲಹೆ ಕುರಿತು ಬಾಬರ್ ಅಜಮ್ ಮಾತು (ICC)

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Babar Azam) ಅವರನ್ನು ಆಗಾಗ ವಿರಾಟ್ ಕೊಹ್ಲಿಗೆ ಹೋಲಿಸುವುದನ್ನು ಕೇಳಿದ್ದೇವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಬಾಬರ್, ವಿಶ್ವ ಕ್ರಿಕೆಟ್‌ನ ರನ್‌ ಮಷಿನ್‌ ವಿರಾಟ್ ಕೊಹ್ಲಿ ಅವರೊಂದಿಗಿನ ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಟೀಮ್‌ ಇಂಡಿಯಾ ಮಾಜಿ ನಾಯಕನನ್ನು ಭೇಟಿಯಾದಾಗ ಅವರಿಂದ ಅಮೂಲ್ಯ ಸಲಹೆಗಳನ್ನು ಪಡೆದಿರುವುದಾಗಿ ಬಾಬರ್‌ ತಿಳಿಸಿದ್ದಾರೆ. ಅಲ್ಲದೆ ಆ ಸಲಹೆಗಳು ತಮಗೆ ಸಾಕಷ್ಟು ಸಹಾಯ ಮಾಡಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಯ್ಯರ್ ಜೋಡಿ ಆರ್ಭಟ; ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್

ಬಟ್ಲರ್ ಅಲಭ್ಯ, ಶಿಮ್ರಾನ್ ಹೆಟ್ಮೆಯರ್ ಇನ್; ಆರ್‌ಸಿಬಿ ವಿರುದ್ಧದ ಎಲಿಮನೇಟರ್‌ ಕದನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ

ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್

ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

ಕೊಹ್ಲಿ ಮತ್ತು ಬಾಬರ್ ಈ ಹಿಂದೆ ಆಗಾಗ ಪರಸ್ಪರರ ಬಗ್ಗೆ ಮಾತನಾಡಿದ್ದಾರೆ. 2022ರಲ್ಲಿ ವಿರಾಟ್‌ ಫಾರ್ಮ್‌ ಕಳೆದುಕೊಂಡಿದ್ದಾಗ ಕೂಡಾ, ಹಲವರು ಅವರನ್ನು ಟೀಕಿಸಿದ್ದರು. ಆಗ ವಿರಾಟ್‌ ಬೆಂಬಲಕ್ಕೆ ಪಾಕಿಸ್ತಾನ ನಾಯಕ ನಿಂತಿದ್ದರು.

2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ ಬಂದಿಳಿಯಿತು. ಟೂರ್ನಿಯಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳನ್ನು ಭಾರತ ಸೋಲಿಸಿತ್ತು. ಪಂದ್ಯದ ನಂತರ ಬಾಬರ್ ಕೊಹ್ಲಿಯೊಂದಿಗೆ ಮಾತನಾಡಿದ್ದರು. ಇದೇ ವೇಳೆ ಕೊಹ್ಲಿ ತಾವು ಸಹಿ ಮಾಡಿದ ಟೀಮ್ ಇಂಡಿಯಾ ಜೆರ್ಸಿಯನ್ನು ಬಾಬರ್‌ಗೆ ಉಡುಗೊರೆಯಾಗಿ ನೀಡಿದ್ದರು.‌

ಇದನ್ನೂ ಓದಿ | ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಕಳಪೆ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್; ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ರೆಕಾರ್ಡ್

ಕೊಹ್ಲಿಯೊಂದಿಗೆ ಏನೆಲ್ಲಾ ಮಾತುಕತೆ ನಡೆಯಿತು ಎಂಬ ಕುರಿತು ಬಾಬರ್‌ ಬಹಿರಂಗಪಡಿಸಲಿಲ್ಲ. ಆದರೆ ಭಾರತದ ಮಾಜಿ ನಾಯಕ ಹಂಚಿಕೊಂಡ ಅಮೂಲ್ಯ ಸಲಹೆಗಳು ತಮ್ಮ ಕ್ರಿಕೆಟ್‌ ಜೀವನದಲ್ಲಿ ತುಂಬಾ ನೆರವಾಗಿದೆ ಎಂದು ಹೇಳಿದ್ದಾರೆ.

“ನಾವು ಪರಸ್ಪರ ಎದುರಾಗಿ ಆಡಿದಾಗಲೆಲ್ಲಾ ನಾನು ಪ್ರತಿಬಾರಿಯೂ ವಿರಾಟ್ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇನೆ. ನಾನು ಆಗ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಅವರು ನನಗೆ ಸಹಾಯ ಮಾಡುತ್ತಾರೆ. ವಿರಾಟ್‌ ಮಾತ್ರವಲ್ಲ, ನಾನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಆಡುವಾಗ ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅವರೊಂದಿಗೆ ಕೂಡಾ ಸಾಕಷ್ಟು ಮಾತನಾಡುತ್ತೇನೆ. ವಿರಾಟ್ ಕೊಹ್ಲಿಯೊಂದಿಗೆ ಉತ್ತಮ ಸಂಭಾಷಣೆ ಮಾಡಿದ್ದೇನೆ. ನಾವು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ಅದನ್ನೆಲ್ಲಾ ನಾನು ಬಹಿರಂಗವಾಗಿ ಹಂಚಿಕೊಳ್ಳಲು ಆಗುವುದಿಲ್ಲ. ಆದರೆ ಅದು ತುಂಬಾ ಫಲಪ್ರದವಾಗಿದೆ ” ಎಂದು ಬಾಬರ್ ಝಲ್ಮಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಸಿಕ್ಕ ಬೆಂಬಲಕ್ಕೆ ಮನಸೋತ ಬಾಬರ್

ಪಾಕಿಸ್ತಾನ ತಂಡವು ಭಾರತದಲ್ಲಿ ಪಂದ್ಯವಾಡಿದಾಗ, ಪಾಕ್‌ ಕ್ರಿಕೆಟಿಗರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. “ಅದು ವಿಭಿನ್ನ ರೀತಿಯ ಕಂಪನ. ಸಂಪೂರ್ಣ ಕ್ರೀಡಾಂಗಣ ನೀಲಿ ಬಣ್ಣಕ್ಕೆ ತಿರುಗಿತ್ತು. ಭಾರತದಲ್ಲಿ ಆಡುವಾಗ ಸಹಜವಾಗಿ ಅದನ್ನು ನಿರೀಕ್ಷಿಸಬಹುದು. ಆದರೆ ಇತರ ಸ್ಥಳಗಳಲ್ಲಿ ನಮಗೆ ಅಸಾಧಾರಣ ಬೆಂಬಲ ಸಿಕ್ಕಿತು,” ಎಂದು 29 ವರ್ಷದ ಆಟಗಾರ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತದಲ್ಲಿ ಇಂಥಾ ಬೆಂಬಲ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಬಾಬರ್ ಹೇಳಿದ್ದಾರೆ. “ನಾನು ಭಾರತದಲ್ಲಿ ಈ ಮಟ್ಟದ ಬೆಂಬಲ ನಿರೀಕ್ಷಿಸಿರಲಿಲ್ಲ. ಭಾರತಕ್ಕೆ ಮೊದಲ ಬಾರಿ ಬಂದಿದ್ದರಿಂದ ದೇಶದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅದೊಂದು ವಿಭಿನ್ನ ಅನುಭವವಾಗಿತ್ತು. ಭಾರತೀಯರು ನಮಗೆ ತುಂಬಾ ಪ್ರೀತಿ ನೀಡಿದರು. ಅವರು ನಮ್ಮ ಕ್ರಿಕೆಟ್ ಅನ್ನು ಮೆಚ್ಚಿಕೊಂಡರು,” ಎಂದು ಬಾಬರ್‌ ಖುಷಿಪಟ್ಟಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ