logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಫ್ಘನ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸ್ಫೋಟಕ ದ್ವಿಶತಕ ಸಿಡಿಸಿದ ಪಾತುಮ್ ನಿಸ್ಸಾಂಕ; ಹಲವು ದಾಖಲೆಗಳು ನಿರ್ಮಾಣ

ಅಫ್ಘನ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸ್ಫೋಟಕ ದ್ವಿಶತಕ ಸಿಡಿಸಿದ ಪಾತುಮ್ ನಿಸ್ಸಾಂಕ; ಹಲವು ದಾಖಲೆಗಳು ನಿರ್ಮಾಣ

Jayaraj HT Kannada

Feb 09, 2024 07:39 PM IST

ಅಫ್ಘನ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸ್ಫೋಟಕ ದ್ವಿಶತಕ ಸಿಡಿಸಿದ ಪಾತುಮ್ ನಿಸ್ಸಾಂಕ

    • Sri Lanka vs Afghanistan 1st ODI: ಕೇವಲ 139 ಎಸೆತಗಳಲ್ಲಿ ಅಜೇಯ 210 ರನ್ ಗಳಿಸುವ ಮೂಲಕ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಆಟಗಾರ ಎಂಬ ದಾಖಲೆಯನ್ನು ಪಾತುಮ್ ನಿಸ್ಸಾಂಕ ನಿರ್ಮಿಸಿದ್ದಾರೆ. ಈ ಹಿಂದೆ ಸನತ್ ಜಯಸೂರ್ಯ ಗರಿಷ್ಠ ರನ್‌ ಗಳಿಸಿದ್ದ ದಾಖಲೆ ಹೊಂದಿದ್ದರು.
ಅಫ್ಘನ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸ್ಫೋಟಕ ದ್ವಿಶತಕ ಸಿಡಿಸಿದ ಪಾತುಮ್ ನಿಸ್ಸಾಂಕ
ಅಫ್ಘನ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸ್ಫೋಟಕ ದ್ವಿಶತಕ ಸಿಡಿಸಿದ ಪಾತುಮ್ ನಿಸ್ಸಾಂಕ (AFP)

ಶ್ರೀಲಂಕಾ ಆಟಗಾರ ಪಾತುಮ್ ನಿಸ್ಸಾಂಕ (Pathum Nissanka) ಹೊಸ ದಾಖಲೆ ನಿರ್ಮಿಸಿದ್ದಾರೆ. ಫೆಬ್ರವರಿ 9ರ ಶುಕ್ರವಾರ ಅಫ್ಘಾನಿಸ್ತಾನ ವಿರುದ್ಧ (Sri Lanka vs Afghanistan) ಪಲ್ಲೆಕೆಲೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಿಸ್ಸಾಂಕ ಅಮೋಘ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನು ಬರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಕೇವಲ 139 ಎಸೆತಗಳಲ್ಲಿ ಅಜೇಯ 210 ರನ್ ಗಳಿಸುವ ಮೂಲಕ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊಟ್ಟಮೊದಲ ಆಟಗಾರ ಎನಿಸಿಕೊಂಡರು. ಅಲ್ಲದೆ, ಲಂಕಾ ಪರ ಅತಿ ಹೆಚ್ಚು ಮೊತ್ತ ಕಲೆಹಾಕಿದ ದಾಖಲೆ ನಿರ್ಮಿಸಿದರು.

ಇದನ್ನೂ ಓದಿ | 30 ಎಸೆತ ಎದುರಿಸಿದ ಶ್ರೇಯಸ್ ಅಯ್ಯರ್‌ಗೆ ಬೆನ್ನುನೋವು; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ಹೊರಕ್ಕೆ

2000ದಲ್ಲಿ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಮಾಜಿ ಆಟಗಾರ ಸನತ್ ಜಯಸೂರ್ಯ 189 ರನ್‌ ಗಳಿಸಿದ್ದರು. ಇದು ಲಂಕಾ ಪರ ಈವರೆಗೆ ದಾಖಲಾಗಿದ್ದ ಸಾರ್ವಕಾಲಿಕ ಗರಿಷ್ಠ ರನ್‌ ಆಗಿತ್ತು. ಬರೋಬ್ಬರಿ 24 ವರ್ಷಗಳ ಬಳಿಕ 25 ವರ್ಷ ವಯಸ್ಸಿನ ಆರಂಭಿಕ ಆಟಗಾರ ಆ ದಾಖಲೆಯನ್ನು ಮುರಿದಿದ್ದಾರೆ.

ಶ್ರೀಲಂಕಾ ಪರ ಅತಿ ಹೆಚ್ಚು ಏಕದಿನ ರನ್‌ ಗಳಿಸಿದವರು

  • ಪಾತುಮ್ ನಿಸ್ಸಾಂಕ : 210* (ಅಫ್ಘಾನಿಸ್ತಾನ ವಿರುದ್ಧ) ಪಲ್ಲೆಕೆಲೆ
  • ಸನತ್ ಜಯಸೂರ್ಯ: 189 (ಭಾರತ ವಿರುದ್ಧ) ಶಾರ್ಜಾ
  • ಉಪುಲ್ ತರಂಗ: 174* (ಭಾರತ ವಿರುದ್ಧ) ಕಿಂಗ್ಸ್ಟನ್
  • ಕುಮಾರ ಸಂಗಕ್ಕಾರ: 169 (ದಕ್ಷಿಣ ಆಫ್ರಿಕಾ ವಿರುದ್ಧ) ಕೊಲಂಬೊ
  • ತಿಲಕರತ್ನೆ ದಿಲ್ಶನ್: 161* (ಬಾಂಗ್ಲಾದೇಶ ವಿರುದ್ಧ) ಮೆಲ್ಬೋರ್ನ್‌ನಲ್ಲ

ಇದನ್ನೂ ಓದಿ | Ranji Trophy: ತಮಿಳುನಾಡು ವಿರುದ್ಧವೂ ಶತಕ ಸಿಡಿಸಿದ ದೇವದತ್ ಪಡಿಕ್ಕಲ್; 2024ರಲ್ಲಿ ನಾಲ್ಕನೇ ಸೆಂಚುರಿ

ನಿಸ್ಸಾಂಕ ಕೇವಲ 136 ಎಸೆತಗಳಲ್ಲಿ ಪಾತುಮ್ ದ್ವಿಶತಕ ಗಳಿಸಿದರು. ಆ ಮೂಲಕ ಏಕದಿನದಲ್ಲಿ ವೇಗವಾಗಿ ಡಬಲ್‌ ಸೆಂಚುರಿ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಅವರು 138 ಎಸೆತಗಳಲ್ಲಿ ದ್ವಿಶತಕ ಗಳಿಸಿದ ಕ್ರಿಸ್ ಗೇಲ್ ಮತ್ತು 140 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಿದರು.

ಇಶಾನ್‌ ಕಿಶನ್‌ ವೇಗದ ದ್ವಿಶತಕ ದಾಖಲೆ

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ದಾಖಲೆಯನ್ನು ಭಾರತದ ಇಶಾನ್ ಕಿಶನ್ ಹೊಂದಿದ್ದಾರೆ. ಕಿಶನ್ 2022ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೇವಲ 126 ಎಸೆತಗಳಲ್ಲಿ 200 ರನ್ ಸಿಡಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 128 ಎಸೆತಗಳಲ್ಲಿ ದ್ವಿಶತಕ ಗಳಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಎರಡನೇ ಸ್ಥಾನದಲ್ಲಿದ್ದಾರೆ.

ಒಟ್ಟಾರೆಯಾಗಿ ನಿಸ್ಸಾಂಕ ಏಕದಿನ ಸ್ವರೂಪದಲ್ಲಿ ದ್ವಿಶತಕ ಗಳಿಸಿದ 10ನೇ ಬ್ಯಾಟರ್ ಎನಿಸಿಕೊಂಡರು. ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಬರೋಬ್ಬರಿ ಮೂರು ದ್ವಿಶತಕಗಳನ್ನು ಗಳಿಸಿದ್ದಾರೆ. ಇದು ಮಹೋನ್ನತ ದಾಖಲೆ. ಉಳಿದಂತೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮಾರ್ಟಿನ್ ಗಪ್ಟಿಲ್, ಫಖರ್ ಜಮಾನ್, ಕ್ರಿಸ್ ಗೇಲ್, ಶುಭ್ಮನ್ ಗಿಲ್, ಇಶಾನ್ ಕಿಶನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ನಲ್ಲಿ 200 ರನ್ ಗಡಿ ದಾಟಿದ್ದಾರೆ.

ಇದನ್ನೂ ಓದಿ | ದ್ರಾವಿಡ್ ಸಲಹೆಯಂತೆ ರಣಜಿ ಆಡಲು ಒಲ್ಲದ ಇಶಾನ್ ಕಿಶನ್; ಹಾರ್ದಿಕ್, ಕೃನಾಲ್ ಜೊತೆ ಅಭ್ಯಾಸ

ನಿಸ್ಸಾಂಕ ಆಟದ ನೆರವಿಂದ ಶ್ರೀಲಂಕಾ ಮೊದಲು ಬ್ಯಾಟಿಂಗ್‌ ಮಾಡಿ 3 ವಿಕೆಟ್‌ ಕಳೆದುಕೊಂಡು 381 ರನ್‌ ಗಳಿಸಿತು.

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ