logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಸ್ಲಾಂಗೆ ಮತಾಂತರವಾಗಲು ಅಫ್ರಿದಿ ಒತ್ತಾಯ ಮಾಡಿದ್ರು, ನನಗೆ ಸನಾತನ ಧರ್ಮವೇ ಶ್ರೇಷ್ಠ; ಪಾಕ್ ಮಾಜಿ ಸ್ಪಿನ್ನರ್ ದಾನಿಶ್​ ಕನೇರಿಯಾ

ಇಸ್ಲಾಂಗೆ ಮತಾಂತರವಾಗಲು ಅಫ್ರಿದಿ ಒತ್ತಾಯ ಮಾಡಿದ್ರು, ನನಗೆ ಸನಾತನ ಧರ್ಮವೇ ಶ್ರೇಷ್ಠ; ಪಾಕ್ ಮಾಜಿ ಸ್ಪಿನ್ನರ್ ದಾನಿಶ್​ ಕನೇರಿಯಾ

Prasanna Kumar P N HT Kannada

Oct 28, 2023 09:02 AM IST

ಶಾಹಿದ್ ಅಫ್ರಿದಿ - ದಾನಿಶ್​ ಕನೇರಿಯಾ

    • Danish Kaneria: ಶಾಹಿದ್ ಅಫ್ರಿದಿ ಅವರು ನನ್ನನ್ನು ಇಸ್ಲಾಂ ಧರ್ಮವನ್ನು (Islam Religion) ಸ್ವೀಕರಿಸುವಂತೆ ಒತ್ತಾಯಿಸಿದ್ದರು ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್​ ಕನೇರಿಯಾ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ.
ಶಾಹಿದ್ ಅಫ್ರಿದಿ - ದಾನಿಶ್​ ಕನೇರಿಯಾ
ಶಾಹಿದ್ ಅಫ್ರಿದಿ - ದಾನಿಶ್​ ಕನೇರಿಯಾ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria), ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಕುರಿತು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅಫ್ರಿದಿ ಅವರು ನನ್ನನ್ನು ಇಸ್ಲಾಂ ಧರ್ಮವನ್ನು (Islam Religion) ಸ್ವೀಕರಿಸುವಂತೆ ಒತ್ತಾಯಿಸಿದ್ದರು ಎಂದು ಕನೇರಿಯಾ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಫ್ರಿದಿ ಅವರು ನನಗೆ ತುಂಬಾ ತೊಂದರೆ ಕೊಟ್ಟರು. ಪಿಸಿಬಿಯಿಂದಲೂ ಉತ್ತಮವಾದ ನೆರವು ಸಿಗಲಿಲ್ಲ ಎಂದು ಹಲವು ಅಂಶಗಳನ್ನು ವಿವರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದು ಧೋನಿಯ ಕೊನೆಯ ಐಪಿಎಲ್ ಎಂದು ಭಾವಿಸಬೇಡಿ; ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

ದಾನಿಶ್ ಕನೇರಿಯಾ ಅವರು ಪಾಕಿಸ್ತಾನ ತಂಡದ (Pakistan Cricket Team) ಪ್ರಮುಖ ಸ್ಪಿನ್ನರ್ ಆಗಿದ್ದರು. ಅವರ ಸೋದರ ಸಂಬಂಧಿ ಅನಿಲ್ ದಲ್ಪತ್ ನಂತರ ಪಾಕಿಸ್ತಾನ ತಂಡಕ್ಕೆ ಆಡಿದ 2ನೇ ಹಿಂದೂ ಆಟಗಾರ. ಪಾಕಿಸ್ತಾನ ಪರ ಅದ್ಭುತ ಪ್ರದರ್ಶನ ನೀಡಿರುವ ಕನೇರಿಯಾ, 61 ಟೆಸ್ಟ್​ ಪಂದ್ಯಗಳಲ್ಲಿ 261 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 18 ಪಂದ್ಯಗಳನ್ನಾಡಿದ್ದು, 15 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ 261 ವಿಕೆಟ್​ಗಳೊಂದಿಗೆ ಪಾಕ್ ಪರ ಅತಿ ಹೆಚ್ಚು ವಿಕೆಟ್ ಪಡೆದ 4ನೇ ಬೌಲರ್​ ಎನಿಸಿದ್ದಾರೆ.

ಹಲವು ವಿಷಯಗಳನ್ನು ಬಿಚ್ಚಿಟ್ಟ ಕನೇರಿಯಾ

ತಂಡದಲ್ಲಿ ತನಗೆ ಸಿಗುತ್ತಿದ್ದ ಬೆಂಬಲದ ಕುರಿತು ಮಾತನಾಡಿದ 42 ವರ್ಷದ ಆಟಗಾರ ಕನೇರಿಯಾ, ಇಂಜಮಾಮ್ ಉಲ್ ಹಕ್ ಮತ್ತು ಶೋಯೆಬ್ ಅಖ್ತರ್ ಅವರು ನನಗೆ ತುಂಬಾ ಬೆಂಬಲ ನೀಡುತ್ತಿದ್ದರು ಎಂದರು. ಇಂಗ್ಲೆಂಡ್​​ನಲ್ಲಿ ಸ್ಪಾಟ್ ಫಿಕ್ಸಿಂಗ್​ ಆರೋಪದ ಕಾರಣ ಆಟದಿಂದ ತನಗೆ ನೀಡಿದ ಅಜೀವ ನಿಷೇಧದ ಕುರಿತು ತುಟಿ ಬಿಚ್ಚಿದ ಕನೇರಿಯಾ, ಆರೋಪಗಳನ್ನು ಒಪ್ಪುವಂತೆ ಒತ್ತಾಯಿಸಲಾಯಿತು ಎಂದು ಪಿಸಿಬಿ ನೀಡಿದ ಕಿರುಕುಳದ ಕುರಿತು ವಿವರಿಸಿದ್ದಾರೆ.

‘ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದರು’

ನನ್ನ ವೃತ್ತಿಜೀವನ ನಿಜವಾಗಿತೂ ಉತ್ತಮವಾಗಿ ಸಾಗುತ್ತಿತ್ತು. ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​​ನಲ್ಲೂ ಆಡುತ್ತಿದ್ದೆ. ತಂಡದಲ್ಲಿ ಇಂಜಮಾಮ್ ಉಲ್ ಹಕ್ ಮತ್ತು ಶೋಯೆಬ್ ಅಖ್ತರ್ ಮಾತ್ರ ನನ್ನನ್ನು ಬೆಂಬಲಿಸುತ್ತಿದ್ದರು. ಆದರೆ ಶಾಹಿದ್ ಅಫ್ರಿದಿ ನನಗೆ ತುಂಬಾ ತೊಂದರೆ ಕೊಟ್ಟರು. ಅಫ್ರಿದಿ ಸೇರಿ ಇತರೆ ಆಟಗಾರರು ನನ್ನೊಂದಿಗೆ ಊಟ ಮಾಡುತ್ತಿರಲಿಲ್ಲ. ಈ ವೇಳೆ ಅಫ್ರಿದಿ ನನ್ನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಬಲವಂತ ಮಾಡುತ್ತಿದ್ದರು. ತುಂಬಾ ಪ್ರಯತ್ನಿಸಿದರು ಎಂದು ವಿವರಿಸಿದ್ದಾರೆ.

‘ಪಿಸಿಬಿ ನನಗೆ ನೆರವು ಕೊಡಲಿಲ್ಲ’

ನನ್ನ ಕೌಂಟಿ ಅವಧಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಹೊರಿಸಲಾಯಿತು. ನಾನು ಬುಕ್ಕಿಯನ್ನು ಮಾತ್ರ ಭೇಟಿಯಾಗಿದ್ದೆ ಎಂದು ಒಪ್ಪಿಕೊಂಡೆ ಆದರೆ, ಆರೋಪಗಳನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದರು. ನಾನು ಹಿಂದೂ ಎಂಬ ಕಾರಣಕ್ಕೆ ಪಿಸಿಬಿ ನನಗೆ ಬೆಂಬಲ ನೀಡಲಿಲ್ಲ. ನಾನು ಆಟ ಮುಂದುವರೆಸಿದರೆ ದಾಖಲೆಗಳನ್ನು ಪಾಕ್​ ಆಟಗಾರರ ದಾಖಲೆಗಳನ್ನು ಮುರಿಯುತ್ತೇನೆ ಎಂದು ಪಿಸಿಬಿ ಹೆದರುತ್ತಿತ್ತು ಎಂದು ಕನೇರಿಯಾ ಹೇಳಿದ್ದಾರೆ.

‘ಸನಾತನ ಧರ್ಮವೇ ಮುಖ್ಯ’

ನನಗೆ ಸನಾತನ ಧರ್ಮವೇ ಎಲ್ಲಕ್ಕಿಂತ ಮಿಗಿಲು ಎಂದು ಹೇಳಿರುವ ಕನೇರಿಯಾ, ಹಿಂದೂ ಸಮುದಾಯದ ವಿರುದ್ಧದ ತಪ್ಪುಗಳ ಎದುರು ಧ್ವನಿ ಎತ್ತಿದ್ದಾರೆ. ನನಗೆ ನನ್ನ ಸನಾತನ ಧರ್ಮವೇ ಎಲ್ಲಕ್ಕಿಂತ ಮಿಗಿಲಾದದ್ದು. ನನ್ನ ಧರ್ಮದ ವಿರುದ್ಧ ತಪ್ಪು ಮಾಹಿತಿ ಹಬ್ಬಿಸಿದರೆ, ನಾನು ಧ್ವನಿ ಎತ್ತುತ್ತೇನೆ. ಪಾಕಿಸ್ತಾನದಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ನನ್ನ ಹಿಂದೂ ಸಮುದಾಯಕ್ಕಾಗಿ ನಾನು ಯಾವಾಗಲೂ ಹೋರಾಡುತ್ತೇನೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ