logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ, ಜಡೇಜಾ, ಫಿಲಿಪ್ಸ್, ಮ್ಯಾಕ್ಸಿ ಅಲ್ಲ; ವಿಶ್ವಕಪ್​​ನಲ್ಲಿ ಬೆಸ್ಟ್​ ಫೀಲ್ಡರ್ ಹೆಸರಿಸಿದ ಸುರೇಶ್ ರೈನಾ

ಕೊಹ್ಲಿ, ಜಡೇಜಾ, ಫಿಲಿಪ್ಸ್, ಮ್ಯಾಕ್ಸಿ ಅಲ್ಲ; ವಿಶ್ವಕಪ್​​ನಲ್ಲಿ ಬೆಸ್ಟ್​ ಫೀಲ್ಡರ್ ಹೆಸರಿಸಿದ ಸುರೇಶ್ ರೈನಾ

Prasanna Kumar P N HT Kannada

Nov 02, 2023 04:04 PM IST

ವಿಶ್ವಕಪ್​​ನಲ್ಲಿ ಬೆಸ್ಟ್​ ಫೀಲ್ಡರ್ ಯಾರೆಂದು ಬಹಿರಂಗಪಡಿಸಿದ ಸುರೇಶ್ ರೈನಾ.

    • ICC ODI World Cup 2023: ಐಸಿಸಿ ಏಕದಿನ ವಿಶ್ವಕಪ್​​ ಟೂರ್ನಿಯಲ್ಲಿ ಅತ್ಯುತ್ತಮ ಫೀಲ್ಡರ್​ ಯಾರು ಎಂಬುದನ್ನು ಭಾರತದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ (Suresh Raina) ಬಹಿರಂಗಪಡಿಸಿದ್ದಾರೆ.
ವಿಶ್ವಕಪ್​​ನಲ್ಲಿ ಬೆಸ್ಟ್​ ಫೀಲ್ಡರ್ ಯಾರೆಂದು ಬಹಿರಂಗಪಡಿಸಿದ ಸುರೇಶ್ ರೈನಾ.
ವಿಶ್ವಕಪ್​​ನಲ್ಲಿ ಬೆಸ್ಟ್​ ಫೀಲ್ಡರ್ ಯಾರೆಂದು ಬಹಿರಂಗಪಡಿಸಿದ ಸುರೇಶ್ ರೈನಾ.

ಪ್ರಸಕ್ತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಅತ್ಯುತ್ತಮ ಫೀಲ್ಡರ್​ (Best Fielder) ಯಾರು ಎಂಬುದನ್ನು 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಸುರೇಶ್​ ರೈನಾ (Suresh Raina) ಬಹಿರಂಗಪಡಿಸಿದ್ದಾರೆ. ಆದರೆ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli), ರವೀಂದ್ರ ಜಡೇಜಾ (Ravindra Jadeja), ಗ್ಲೆನ್ ಫಿಲಿಪ್ಸ್ (Glenn Phillips), ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಸೇರಿದಂತೆ ಅತ್ಯುತ್ತಮ ಫೀಲ್ಡರ್​​ ಎಂಬುದನ್ನು ಪರಿಗಣಿಸದೆ ಇರುವುದು ಅಚ್ಚರಿಯ ಸಂಗತಿ.

ಟ್ರೆಂಡಿಂಗ್​ ಸುದ್ದಿ

Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

ಕುಲ್ದೀಪ್ ಬೆಸ್ಟ್ ಫೀಲ್ಡರ್​

ಕೊಹ್ಲಿ, ಜಡೇಜಾ, ಫಿಲಿಪ್ಸ್, ಮ್ಯಾಕ್ಸ್​ವೆಲ್​ ಹೆಸರನ್ನು ಪ್ರಸ್ತಾಪಿಸಿದರೂ, ಈ 28 ವರ್ಷದ ಭಾರತೀಯ ಸ್ಟಾರ್ ಆಟಗಾರ ಇವರಿಗಿಂತ ಉತ್ತಮ ಫೀಲ್ಡರ್ ಎಂದು ಉಲ್ಲೇಖಿಸಿದ್ದಾರೆ. ಐಸಿಸಿ ಅಧಿಕೃತ ಇನ್​ಸ್ಟಾಗ್ರಾಂ ಹ್ಯಾಂಡಲ್​​ನಲ್ಲಿ ಅಪ್​ಲೋಡ್ ಮಾಡಲಾಗಿರುವ ವಿಡಿಯೋದಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಪ್ರಸ್ತುತ ವಿಶ್ವಕಪ್​​ನಲ್ಲಿ ಕುಲ್ದೀಪ್​ ಯಾದವ್ ಬೆಸ್ಟ್​​ ಫೀಲ್ಡರ್ ಎಂದು ಹೇಳಿದ್ದಾರೆ.

ಕ್ಯಾಚ್​ ಪಡೆಯುವುದೇ ಬೆಸ್ಟ್ ಫೀಲ್ಡಿಂಗ್ ಅಲ್ಲ

ಕುಲ್ದೀಪ್ ಯಾದವ್ ಅವರ ಫೀಲ್ಡಿಂಗ್ ಅನ್ನು ಶ್ಲಾಘಿಸಿದ ರೈನಾ, ಮೈದಾನದಲ್ಲಿ ಅವರ ಕ್ಷೇತ್ರ ರಕ್ಷಣೆ ಅದ್ಭುತವಾಗಿದೆ. ಒಬ್ಬ ಬೌಲರ್​​​ ಆಗಿಯೂ ಫೀಲ್ಡಿಂಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡುವುದು ಅಷ್ಟು ಸುಲಭವಲ್ಲ. ಫೀಲ್ಡಿಂಗ್​ ಅನ್ನು ಕುಲ್ದೀಪ್ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೇವಲ ಉತ್ತಮ ಕ್ಯಾಚ್​ ಪಡೆಯುವುದು, ರನೌಟ್ ಮಾಡುವುದೇ ಅತ್ಯುತ್ತಮ ಫೀಲ್ಡಿಂಗ್ ಅಲ್ಲ ಎಂದು ಹೇಳಿದ್ದಾರೆ.

ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್​, ಗ್ಲೆನ್ ಫಿಲಿಪ್ಸ್​ ಅವರು ಸಾಕಷ್ಟು ಉತ್ತಮ ಕ್ಯಾಚ್​​​ಗಳನ್ನು ಪಡೆದಿದ್ದಾರೆ. ಉತ್ತಮವಾದ ರನೌಟ್​​ಗಳನ್ನು ಮಾಡುತ್ತಿದ್ದಾರೆ. ಆದರೂ, ಕುಲ್ದೀಪ್​ ಉತ್ತಮ ಫೀಲ್ಡರ್​. ಬೌಂಡರಿ ಗೆರೆಯಲ್ಲಿ ಅದ್ಭುತ ಡೈವ್​ಗಳ ಮೂಲಕ ರನ್​ಗಳನ್ನು ರಕ್ಷಿಸಿದ್ದಾರೆ. ಅನೇಕ ಬೌಂಡರಿಗಳನ್ನು ನಿಲ್ಲಿಸಿದ್ದಾರೆ. ಚುರುಕಿನ ಫೀಲ್ಡಿಂಗ್​ ಮೂಲಕ ಗಮನ ಸೆಳೆದಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.

ಫೀಲ್ಡಿಂಗ್​​ನಿಂದಲೂ ಕುಲ್ದೀಪ್ ಪಂದ್ಯ ಗೆಲ್ಸಿದ್ದಾರೆ!

ಅದ್ಭುತ ಫೀಲ್ಡಿಂಗ್​ ನಡೆಸಿ ಅನೇಕ ರನ್​ಗಳನ್ನು ಕಾಪಾಡಿದ ಕುಲ್ದೀಪ್​, ಪಂದ್ಯದ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ಕೇವಲ ಬೌಲಿಂಗ್​ನಿಂದ ಮಾತ್ರವಲ್ಲ, ಫೀಲ್ಡಿಂಗ್​​ನಿಂದಲೂ ಪಂದ್ಯವನ್ನು ಗೆಲ್ಲಿಸಿಕೊಡಲು ನೆರವಾಗಿದ್ದಾರೆ. ಫೀಲ್ಡಿಂಗ್​ ಅನ್ನು ಸಾಕಷ್ಟು ಎಂಜಾಯ್ ಮಾಡುತ್ತಿರುವ ಕುಲ್ದೀಪ್, ಪ್ರಸಕ್ತ ಆವೃತ್ತಿಯ ವಿಶ್ವಕಪ್​​ನಲ್ಲಿ ಅತ್ಯುತ್ತಮ ಫೀಲ್ಡರ್ ಎಂದು ನಾನು ಭಾವಿಸುತ್ತೇನೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್​ನಲ್ಲಿ ಕುಲ್ದೀಪ್ ಪ್ರದರ್ಶನ

ಪ್ರಸಕ್ತ ಸಾಲಿನಲ್ಲಿ ಚೈನಾಮೆನ್ ಕುಲ್ದೀಪ್ ಯಾದವ್ ಅವರು, ಆಡಿರುವ 6 ಪಂದ್ಯಗಳಲ್ಲಿ 10 ವಿಕೆಟ್ ಉರುಳಿಸಿದ್ದಾರೆ. ಕೇವಲ 4.50ರ ಬೌಲಿಂಗ್​ ಎಕಾನಮಿ ಹೊಂದಿದ್ದಾರೆ. ಅಲ್ಲದೆ, 26.10ರ ಬೌಲಿಂಗ್ ಸರಾಸರಿ ಹೊಂದಿದ್ದಾರೆ. ಆ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 2 ರನ್ ನೀಡಿ 24 ರನ್ ಬಿಟ್ಟುಕೊಟ್ಟಿರುವುದೇ ಈ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಆಗಿದೆ. ಅಲ್ಲದೆ, 6 ಪಂದ್ಯಗಳಿಂದ ಒಟ್ಟು 58 ಓವರ್​ ಬೌಲಿಂಗ್ ಮಾಡಿದ್ದು, 348 ರನ್​ ನೀಡಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ