logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಮತ್ತು ರೋಹಿತ್ ಇಬ್ಬರೂ..: ಹಿರಿಯ ಆಟಗಾರರ ಟಿ20 ಭವಿಷ್ಯ ನುಡಿದ ಹರ್ಭಜನ್ ಸಿಂಗ್

ವಿರಾಟ್ ಮತ್ತು ರೋಹಿತ್ ಇಬ್ಬರೂ..: ಹಿರಿಯ ಆಟಗಾರರ ಟಿ20 ಭವಿಷ್ಯ ನುಡಿದ ಹರ್ಭಜನ್ ಸಿಂಗ್

Prasanna Kumar P N HT Kannada

Dec 19, 2023 12:19 PM IST

ರೋಹಿತ್ ಮತ್ತು ಕೊಹ್ಲಿ ಟಿ20 ಭವಿಷ್ಯ ನುಡಿದ ಹರ್ಭಜನ್ ಸಿಂಗ್.

    • Virat Kohli Rohit Sharma: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಿಸಬೇಕೇ ಬೇಡವೇ ಎಂಬುದರ ಕುರಿತು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ (Harbhajan Singh) ಭವಿಷ್ಯದ ಬಗ್ಗೆ ನುಡಿದಿದ್ದಾರೆ.
ರೋಹಿತ್ ಮತ್ತು ಕೊಹ್ಲಿ ಟಿ20 ಭವಿಷ್ಯ ನುಡಿದ ಹರ್ಭಜನ್ ಸಿಂಗ್.
ರೋಹಿತ್ ಮತ್ತು ಕೊಹ್ಲಿ ಟಿ20 ಭವಿಷ್ಯ ನುಡಿದ ಹರ್ಭಜನ್ ಸಿಂಗ್.

2024ರಲ್ಲಿ ಜರುಗಲಿರುವ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಟೀಮ್ ಇಂಡಿಯಾ (Team India) ಭರ್ಜರಿ ಸಿದ್ಧತೆ ನಡೆಸುತ್ತಿದೆ. 2023ರ ಏಕದಿನ‌ ವಿಶ್ವಕಪ್ (ODI World Cup 2023) ಹೃದಯ ವಿದ್ರಾವಕ ಸೋಲಿನ ನಂತರ ಭಾರತದ ಆಟಗಾರರ‌ ಕಣ್ಣು ಮುಂಬರುವ ಟಿ20 ವಿಶ್ವಕಪ್ ಮೇಲೆ‌ ನೆಟ್ಟಿದೆ. ಭಾರತದ ಐಸಿಸಿ ಟ್ರೋಫಿ ಬರ‌ ನೀಗಬೇಕೆಂದು ಅಭಿಮಾನಿಗಳ ಸಹ ಆಶಿಸುತ್ತಿದ್ದಾರೆ. ಲೀಗ್‌ನಲ್ಲಿ ಅಬ್ಬರಿಸುವ ಭಾರತ 2013ರ‌ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಂತರ ಇದುವರೆಗೂ ಐಸಿಸಿ ಟ್ರೋಫಿ ಗೆದ್ದಿಲ್ಲ.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಇದರ ನಡುವೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli and Rohit Sharma) ಅವರು ಕಣಕ್ಕಿಳಿಯುವುದಿಲ್ಲ ಎಂದು ವರದಿಗಳಾಗುತ್ತಿವೆ. ಅವರನ್ನು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ‌ ‌ಮುಂದುವರಿಸಲು ಬಿಸಿಸಿಐ (BCCI) ಮತ್ತು ಆಯ್ಕೆ‌ ಸಮಿತಿ ನಿರ್ಧರಿಸಿದೆ ಎಂದು ಈ ಬಗ್ಗೆ ವರದಿಯಾಗಿದೆ. ಟಿ20 ಕ್ರಿಕೆಟ್‌ ಭವಿಷ್ಯದ ಬಗ್ಗೆ ಅನುಮಾನ ಇರುವುದರ ನಡುವೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಹಿರಿಯ ಆಟಗಾರರ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ರೋಹಿತ್​-ಕೊಹ್ಲಿ ವಿಶ್ವಕಪ್ ಆಡಬೇಕು’

ಟೈಮ್ಸ್ ನೌ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿರುವ ಹರ್ಭಜನ್ ಸಿಂಗ್, ವಿರಾಟ್ ಮತ್ತು ರೋಹಿತ್ ಇಬ್ಬರೂ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಒಲವು ವ್ಯಕ್ತಪಡಿಸಿದ್ದಾರೆ. ಕೊಹ್ಲಿ‌ ಮತ್ತು ರೋಹಿತ್ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಬೇಕು. ಆದರೆ ಅವರನ್ನು ಆಡಿಸದೆ ಇರಲು ಬಿಸಿಸಿಐ ಚಿಂತನೆ ನಡೆಸುತ್ತಿದ್ದರೆ ಅದರ‌ ನಿರ್ಧಾರದಿಂದ ಹೊರ ಬಂದರೆ ಉತ್ತಮ. ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಬಿಸಿಸಿಐಗೆ ಭಜ್ಜಿ ಸಲಹೆ ನೀಡಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಗೆ ಯಾರನ್ನು ನಾಯಕನಾಗಿ ಪರಿಗಣಿಸಬೇಕು ಎಂಬುದರ ಬಗ್ಗೆಯೂ ಭಜ್ಜಿ ಸಲಹೆ ಕೊಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಅಥವಾ ಸೂರ್ಯಕುಮಾರ್ ಯಾದವ್ ಅವರ ಟಿ20 ತಂಡವನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ. ಅನುಭವಿ ಆಟಗಾರರು ತಂಡದಲ್ಲಿರಬೇಕು. ತಂಡಕ್ಕೀಗ ಕೊಹ್ಲಿ ಮತ್ತು ರೋಹಿತ್ ಅವಶ್ಯಕತೆ ಇದೆ. ಈ ವಿಶ್ವಕಪ್ ಬಳಿಕ ಎರಡು ವರ್ಷಗಳ ಅಷ್ಟೊತ್ತಿಗೆ ಯುವ ಆಟಗಾರರು ಭರ್ಜರಿ ತಯಾರಿ ನಡೆಸಿಕೊಂಡು, ಆ ವಿಶ್ವಕಪ್​ಗೆ ಸಿದ್ಧರಾಗುತ್ತಾರೆ. ಆದರೀಗ ಏಕಾಏಕಿ ಯುವ ಆಟಗಾರರನ್ನು ದೊಡ್ಡ ಟೂರ್ನಿಗೆ ಆಡಲು ಅವಕಾಶ ನೀಡಿದರೆ ಕಷ್ಟವಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

‘2022ರ ಟಿ20 ವಿಶ್ವಕಪ್​ನಿಂದಲೇ ಆಡಿಯೇ ಇಲ್ಲ’

ವಿರಾಟ್ ಮತ್ತು ರೋಹಿತ್ ಇಬ್ಬರೂ 2022ರ ಟಿ20 ವಿಶ್ವಕಪ್ ನಂತರ ಚುಟುಕು ಸರಣಿಯ ಭಾಗವಾಗಿಲ್ಲ. ಅಂದಿನಿಂದ ಏಕದಿನ - ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಇದೀಗ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಅವರ ಟಿ20 ಭವಿಷ್ಯದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್​ಬಾಲ್ ಸರಣಿಯಿಂದಲೂ ದೂರ ಉಳಿದಿದ್ದಾರೆ. ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮರಳಲಿದ್ದಾರೆ.‌ ಮುಂದಿನ ದಿನಗಳಲ್ಲಿ ವೈಟ್ ಬಾಲ್ ಕ್ರಿಕೆಟ್‌ನಿಂದಲೇ ಸಂಪೂರ್ಣ ದೂರವಿಟ್ಟು ಯುವ ಆಟಗಾರರಿಗೆ ಅವಕಾಶ‌ ನೀಡಲು ಬಿಸಿಸಿಐ ಯೋಜನೆ ರೂಪಿಸಿದೆ.

ಅಫ್ಘನ್ ಟಿ20ಗೆ ಮರಳುವ ಸಾಧ್ಯತೆ!

ಹಾರ್ದಿಕ್ 2022ರ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್‌ ಟಿ20 ತಂಡವನ್ನು ಭಾರತವನ್ನು ಮುನ್ನಡೆಸಿದ್ದಾರೆ. ಅವರು 2023 ರ ವಿಶ್ವಕಪ್ ಸಮಯದಲ್ಲಿ ಗಾಯಗೊಂಡು ಸೌತ್ ಆಫ್ರಿಕಾ‌ ಸರಣಿಯನ್ನು ಕಳೆದುಕೊಂಡಿದ್ದಾರೆ. ಸ್ಟಾರ್ ಆಲ್ ರೌಂಡರ್ ಜನವರಿಯಲ್ಲಿ ಪ್ರಾರಂಭವಾಗುವ ಅಫ್ಘಾನಿಸ್ತಾನ ಸರಣಿಗೆ ನಾಯಕನಾಗಿ ಮರಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರೋಹಿತ್ ತಂಡಕ್ಕೆ‌ ಮರಳಿದರೆ‌ ರೋಹಿತ್ ತಂಡದ ಜವಾಬ್ದಾರಿ‌ ಹೊರಲಿದ್ದಾರೆ. ಅಫ್ಘಾನಿಸ್ತಾನ ‌ಸರಣಿಗೆ ಭಾರತ ತಂಡ ಪ್ರಕಟಿಸುವಾಗ ಕೊಹ್ಲಿ‌-ರೋಹಿತ್ ಭವಿಷ್ಯ ಸ್ಪಷ್ಟವಾಗಿ ತಿಳಿಯಲಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ