logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕನ್ನಡತಿ ಸೇರಿ ಪ್ರಮುಖರನ್ನೇ ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟಿದ ಆರ್​​ಸಿಬಿ; ನೂತನ ತಂಡ ಇಲ್ಲಿದೆ

ಕನ್ನಡತಿ ಸೇರಿ ಪ್ರಮುಖರನ್ನೇ ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟಿದ ಆರ್​​ಸಿಬಿ; ನೂತನ ತಂಡ ಇಲ್ಲಿದೆ

Prasanna Kumar P N HT Kannada

Dec 09, 2023 08:38 PM IST

ಕನ್ನಡತಿ ಸೇರಿ ಪ್ರಮುಖರನ್ನೇ ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟಿದ ಆರ್​​ಸಿಬಿ.

    • Royal Challengers Bangalore: ಮಹಿಳಾ ಪ್ರೀಮಿಯರ್ ಲೀಗ್​ನ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾರನ್ನು ಖರೀದಿಸಿದೆ, ಎಷ್ಟು ಮೊತ್ತ ಕೊಟ್ಟಿದೆ ಎಂಬುದನ್ನು ಈ ಮುಂದೆ ನೋಡೋಣ.
ಕನ್ನಡತಿ ಸೇರಿ ಪ್ರಮುಖರನ್ನೇ ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟಿದ ಆರ್​​ಸಿಬಿ.
ಕನ್ನಡತಿ ಸೇರಿ ಪ್ರಮುಖರನ್ನೇ ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟಿದ ಆರ್​​ಸಿಬಿ.

ಉದ್ಘಾಟನಾ ಆವೃತ್ತಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (Royal Challengers Bangalore) ಈ ಬಾರಿ ಪ್ರಮುಖ ಆಟಗಾರ್ತಿಯರನ್ನೇ ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟಿದೆ. ಮುಂಬೈನಲ್ಲಿ ಇಂದು (ಡಿಸೆಂಬರ್​ 9 ಶನಿವಾರ) ನಡೆದ ಮಿನಿ ಹರಾಜಿನಲ್ಲಿ (WPL Auction 2024) ಬಲಿಷ್ಠ ಆಟಗಾರ್ತಿಯರನ್ನೇ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

2ನೇ ಆವೃತ್ತಿಗೆ ಘಟಾನುಘಟಿ ಆಟಗಾರ್ತಿಯರನ್ನೇ ಉಳಿಸಿಕೊಂಡಿದ್ದ ರೆಡ್ ಆರ್ಮಿ, ಹರಾಜಿನಲ್ಲೂ ಪ್ರಮುಖರಿಗೆ ಮಣೆ ಹಾಕಿದೆ. ತನ್ನ ಪರ್ಸ್​​ನಲ್ಲಿದ್ದ 3.35 ಕೋಟಿ ಬಜೆಟ್​ನಲ್ಲಿ ಮೂವರು ವಿದೇಶಿ ಸೇರಿ ಒಟ್ಟು 7 ಆಟಗಾರ್ತಿಯರನ್ನು ಖರೀದಿಸಿದ್ದು, ತಂಡದ ಗಾತ್ರ 18 ಆಗಿದೆ. ಇದರಲ್ಲಿ 6 ವಿದೇಶಿ ಆಟಗಾರ್ತಿಯರು ಇದ್ದಾರೆ. ಹರಾಜಿನಲ್ಲಿ 7 ಮಂದಿಯನ್ನು ಖರೀದಿಸಿದರೂ ಪರ್ಸ್​​ನಲ್ಲಿ ಇನ್ನೂ 1.05 ಕೋಟಿ ಬಾಕಿ ಇದೆ.

ಈ ಹರಾಜಿನಲ್ಲಿ ಆರ್​​ಸಿಬಿ ಖರೀದಿಸಿದ ಆಟಗಾರ್ತಿಯರ ಪಟ್ಟಿ

ಏಕ್ತಾ ಬಿಷ್ಟ್ (ಭಾರತ) - 60 ಲಕ್ಷ, ಬೌಲರ್

ಜಾರ್ಜಿಯಾ ವೇರ್ಹ್ಯಾಮ್ (ಆಸ್ಟ್ರೇಲಿಯಾ) - 40 ಲಕ್ಷ, ಆಲ್​ರೌಂಡರ್

ಕೇಟ್ ಕ್ರಾಸ್ (ಇಂಗ್ಲೆಂಡ್) - 30 ಲಕ್ಷ, ಆಲ್​ರೌಂಡರ್​

ಸಬ್ಬಿನೇನಿ ಮೇಘನಾ (ಭಾರತ) - 30 ಲಕ್ಷ, ಆಲ್​ರೌಂಡರ್​

ಸೋಫಿ ಮೊಲಿನಿಕ್ಸ್ (ಆಸ್ಟ್ರೇಲಿಯಾ) - 30 ಲಕ್ಷ, ಆಲ್​ರೌಂಡರ್

ಸಿಮ್ರಾನ್ ಬಹದ್ದೂರ್ (ಭಾರತ) - 30 ಲಕ್ಷ, ಬೌಲರ್​

ಶುಭಾ ಸತೀಶ್ (ಭಾರತ, ಕರ್ನಾಟಕ) - 10 ಲಕ್ಷ, ಆಲ್​ರೌಂಡರ್

ಆರ್​ಸಿಬಿ ಪೂರ್ಣ ತಂಡ

ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್, ಏಕ್ತಾ ಬಿಷ್ಟ್, ಕೇಟ್ ಕ್ರಾಸ್, ಜಾರ್ಜಿಯಾ ವೇರ್ಹ್ಯಾಮ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್, ಶುಭಾ ಸತೀಶ್.

ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ

ತಂಡದಲ್ಲಿ ಸ್ಟಾರ್​ ಆಟಗಾರ್ತಿಯರೇ ಇದ್ದರೂ ಚೊಚ್ಚಲ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಸ್ಟಾರ್​ ಪ್ಲೇಯರ್​ಗಳಾದ ಸ್ಮೃತಿ ಮಂಧಾನ, ರಿಚಾ ಘೋಷ್​, ರೇಣುಕಾ, ಎಲ್ಲಿಸ್​ ಪೆರಿ, ಹೀದರ್ ನೈಟ್, ಸೋಫಿ ಡಿವೈನ್​ ಸೇರಿದಂತೆ ಪ್ರಮುಖರೇ ತಂಡದಲ್ಲಿದ್ದರು. ಆದರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯದಲ್ಲಿ ಜಯ ಸಾಧಿಸಿತ್ತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ