logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ಆಸ್ಟ್ರೇಲಿಯಾ ಹಿಂದಿಕ್ಕಿ ಮೇಲೇರಿದ ಭಾರತ; ಫೈನಲ್ ರೇಸ್​ನಿಂದ ಇಂಗ್ಲೆಂಡ್ ಬಹುತೇಕ ಹೊರಕ್ಕೆ

WTC Points Table: ಆಸ್ಟ್ರೇಲಿಯಾ ಹಿಂದಿಕ್ಕಿ ಮೇಲೇರಿದ ಭಾರತ; ಫೈನಲ್ ರೇಸ್​ನಿಂದ ಇಂಗ್ಲೆಂಡ್ ಬಹುತೇಕ ಹೊರಕ್ಕೆ

Feb 18, 2024 09:16 PM IST

ICC World Test Championship Points Table: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯ ಗೆದ್ದ ನಂತರ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

  • ICC World Test Championship Points Table: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯ ಗೆದ್ದ ನಂತರ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 434 ರನ್​ಗಳಿಂದ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ.
(1 / 10)
ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 434 ರನ್​ಗಳಿಂದ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ.(AFP)
ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಯನ್ನು ವಶಪಡಿಸಿಕೊಂಡ ನ್ಯೂಜಿಲೆಂಡ್, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ 4 ಟೆಸ್ಟ್​ಗಳಲ್ಲಿ 3 ಗೆಲುವು, 1 ಸೋಲು ಕಂಡಿದೆ. 36 ಅಂಕ ಸಂಪಾದಿಸಿರುವ ಕಿವೀಸ್ ಗೆಲುವಿನ ಶೇಕಡವಾರು 75.00 ಹೊಂದಿದೆ.
(2 / 10)

ಇಂಗ್ಲೆಂಡ್ ಎದುರಿನ ರಾಜ್​ಕೋಟ್​ ಟೆಸ್ಟ್​ನಲ್ಲಿ ಗೆಲುವು ಸಾಧಿಸಿದ ಭಾರತ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಆಡಿದ 7 ಟೆಸ್ಟ್​​ಗಳಲ್ಲಿ 4 ಗೆಲುವು, 2 ಸೋಲು, 1 ಡ್ರಾ ಕಂಡಿದೆ. 50 ಅಂಕ ಪಡೆದಿರುವ ರೋಹಿತ್ ಪಡೆ, ಗೆಲುವಿನ ಶೇಕಡವಾರು 59.52 ಹೊಂದಿದೆ.
(3 / 10)

ಇನ್ನು ಆಸ್ಟ್ರೇಲಿಯಾ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಡಿದ 10 ಟೆಸ್ಟ್​​ಗಳಲ್ಲಿ 6 ಗೆಲುವು, 3 ಸೋಲು, 1 ಡ್ರಾ ಸಾಧಿಸಿರುವ ಆಸೀಸ್, 66 ಅಂಕಗಳೊಂದಿಗೆ ಗೆಲುವಿನ ಶೇಕಡವಾರು 55.00 ಹೊಂದಿದೆ.
(4 / 10)

ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲೇ ಇದೆ. ಆಡಿದ 2ರಲ್ಲಿ ತಲಾ ಒಂದೊಂದು ಗೆಲುವು ಸೋಲು ಕಂಡಿದೆ. ಗೆಲುವಿನ ಶೇಕಡಾವಾರು 50.00.
(5 / 10)

ಪಾಕಿಸ್ತಾನ ತಂಡ 5ನೇ ಸ್ಥಾನದಲ್ಲಿದ್ದು, 5 ಟೆಸ್ಟ್​​ಗಳಲ್ಲಿ 2 ಗೆಲುವು, 3 ಸೋಲು ಕಂಡಿದೆ. ಗೆಲುವಿನ ಪ್ರಮಾಣ 36.66.
(6 / 10)

ವೆಸ್ಟ್ ಇಂಡೀಸ್ ಆಡಿರುವ 4ರಲ್ಲಿ 1 ಗೆಲುವು, 2 ಸೋಲು, 1 ಡ್ರಾ ಸಾಧಿಸಿದೆ. ಸದ್ಯ 6ನೇ ಸ್ಥಾನದಲ್ಲಿದೆ. ಗೆಲುವಿನ ಶೇಕಡವಾರು 33.33.
(7 / 10)

ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತ ದಕ್ಷಿಣ ಆಫ್ರಿಕಾ 7ನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 4ರಲ್ಲಿ 1 ಗೆಲುವು, 3 ಸೋಲು ಕಂಡಿದೆ. ಗೆಲುವಿನ ಶೇಕಡವಾರು 25.00.
(8 / 10)

ಇನ್ನು ಭಾರತದ ವಿರುದ್ಧ ಸೋತ ಇಂಗ್ಲೆಂಡ್ ಆಡಿರುವ 8ರಲ್ಲಿ 3 ಗೆಲುವು, 4 ಸೋಲು, 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡವಾರು 21.88. 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನ ಸ್ಪರ್ಧೆಯಿಂದ ಬಹುತೇಕ ಹೊರ ಬಿದ್ದಿದೆ. ಶ್ರೀಲಂಕಾ ಆಡಿರುವ 2ರಲ್ಲೂ ಸೋತಿದ್ದು, ಖಾತೆ ತೆರೆದಿಲ್ಲ. ಎರಡೂ ತಂಡಗಳು ಕ್ರಮವಾಗಿ 8, 9ನೇ ಸ್ಥಾನದಲ್ಲಿವೆ.
(9 / 10)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(10 / 10)
ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು