logo
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ; ಟಿಎಂಸಿ ಸ್ಥಾನದಲ್ಲಿ ಭಾರಿ ಕುಸಿತವಾಗಲಿದೆ ಎಂದ ಎಕ್ಸಿಟ್‌ ಪೋಲ್

Exit poll: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ; ಟಿಎಂಸಿ ಸ್ಥಾನದಲ್ಲಿ ಭಾರಿ ಕುಸಿತವಾಗಲಿದೆ ಎಂದ ಎಕ್ಸಿಟ್‌ ಪೋಲ್

Jayaraj HT Kannada

Jun 01, 2024 08:53 PM IST

google News

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ; ಟಿಎಂಸಿ ಸ್ಥಾನದಲ್ಲಿ ಭಾರಿ ಕುಸಿತವಾಗಲಿದೆ ಎಂದ ಎಕ್ಸಿಟ್‌ ಪೋಲ್

    • ಟಿಎಂಸಿ ಹಾಗೂ ಎಡಪಕ್ಷಗಳ ಪ್ರಾಬಲ್ಯವಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿಯೂ ಲೋಕಸಭಾ ಚುನಾವಣೆ ರೋಚಕತೆ ಮೂಡಿಸಿದೆ. ಜೂನ್‌ 1ರ ಶನಿವಾರ ಅಂತಿಮ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದೆ.‌ ಪ್ರಬಾರಿ ದೇಶದ ಗಮನಸೆಳೆಯುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತಿದೆ ಎಂಬುದನ್ನು ನೋಡೋಣ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ; ಟಿಎಂಸಿ ಸ್ಥಾನದಲ್ಲಿ ಭಾರಿ ಕುಸಿತವಾಗಲಿದೆ ಎಂದ ಎಕ್ಸಿಟ್‌ ಪೋಲ್
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ; ಟಿಎಂಸಿ ಸ್ಥಾನದಲ್ಲಿ ಭಾರಿ ಕುಸಿತವಾಗಲಿದೆ ಎಂದ ಎಕ್ಸಿಟ್‌ ಪೋಲ್

ಬಹುನಿರೀಕ್ಷಿತ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ, ಈ ಬಾರಿಯೂ ತೃಣಮೂಲ ಕಾಂಗ್ರೆಸ್‌ ಪಕ್ಷವೇ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದನ್ನು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ವರದಿಗಳು ತಿಳಿಸಿವೆ. ಆಕ್ಸಿಸ್‌ ಮೈ ಇಂಡಿಯಾ, ಸಿ ವೋಟರ್‌, ಇಂಡಿಯಾ ಟುಡೇ ಆಕ್ಸಿಸ್‌, ಎಬಿಪಿ ನ್ಯೂಸ್‌-ಸಿವೋಟರ್‌, ಟೈಮ್ಸ್‌ ನೌ, ನ್ಯೂಸ್‌ 18 ಐಬಿಎಸ್‌ಒಎಸ್‌, ರಿಪಬ್ಲಿಕ್‌ ಟಿವಿ ಜನ್‌ ಕೀ ಬಾತ್‌, ಟುಡೇಸ್‌ ಚಾಣಾಕ್ಯ ಚುನಾವಣಾ ಸಮೀಕ್ಷೆಗಳು ಏನು ಹೇಳಿವೆ ಎಂಬ ವರದಿ ಇಲ್ಲಿವೆ.

ಈ ಬಾರಿ ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆಯ ಚಿತ್ರಣ ಬದಲಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಟಿಎಂಸಿ ಭದ್ರಕೋಟೆಯಲ್ಲಿ ಈ ಬಾರಿ ಕಮಲ ಅರಳಲಿದೆ ಎಂದು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ವರದಿಗಳು ಹೇಳುತ್ತಿವೆ.

ಜನ್ ಕಿ ಬಾತ್‌ನ ಸಮೀಕ್ಷೆಯ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು 21 ರಿಂದ 26 ಸ್ಥಾನಗಳಲ್ಲಿ ಗೆಲ್ಲಲಿದೆ. ಕಳೆದ ಬಾರಿ ಬಿಜೆಪಿ 18 ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು. ಇತ್ತ ರಾಜ್ಯದ ಪ್ರಮುಖ ಪಕ್ಷ ತೃಣಮೂಲ ಕಾಂಗ್ರೆಸ್ ಕೇವಲ 16-18 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್‌ ಸಮೀಕ್ಷೆ ಪ್ರಕಾರ ಬಿಜೆಪಿಯು 21 ಸ್ಥಾನ ಗೆದ್ದರೆ, ಟಿಎಂಸಿ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲಿದೆ.

ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಪ್ರಕಾರ ಬಿಜೆಪಿ 21ರಿಂದ 25 ಸ್ಥಾನ ಗೆದ್ದರೆ, ಮಮತಾ ಬ್ಯಾನರ್ಜಿ ಅವರ ಪಕ್ಷವು 16ರಿಂದ 20 ಸ್ಥಾನಗಳಿಗೆ ಕುಸಿಯಲಿದೆ ಎಂದು ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ P-MARQ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ, ಬಿಜೆಪಿ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ. ಇದೇ ವೇಳೆ ಟಿಎಂಸಿ 20 ಸ್ಥಾನಗಳಲ್ಲಿ ಗೆಲ್ಲಲಿದೆ. ಇದೇ ವೇಳೆ ಕಾಂಗ್ರೆಸ್, ಸಿಪಿಎಂ ಅಥವಾ ಇತರ ಪಕ್ಷಗಳು ಖಾತೆಎ ತೆರೆಯುವಲ್ಲಿ ವಿಫಲವಾಗಲಿದೆ.

ಪಶ್ಚಿಮ ಬಂಗಾಳ: ಜನ್ ಕಿ ಬಾತ್‌ನ ಸಮೀಕ್ಷೆ

  • ಟಿಎಂಸಿ (ಮಮತಾ ಬ್ಯಾನರ್ಜಿ): 16-18
  • ಬಿಜೆಪಿ (ಸುಕಾಂತ ಮಜುಂದಾರ್): 21-26

ಇದನ್ನೂ ಓದಿ | Exit poll: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ; ಟಿಎಂಸಿ ಸ್ಥಾನದಲ್ಲಿ ಭಾರಿ ಕುಸಿತವಾಗಲಿದೆ ಎಂದ ಎಕ್ಸಿಟ್‌ ಪೋಲ್

ಪಶ್ಚಿಮ ಬಂಗಾಳ: ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್‌ ಸಮೀಕ್ಷೆ

  • ಟಿಎಂಸಿ (ಮಮತಾ ಬ್ಯಾನರ್ಜಿ): 19
  • ಬಿಜೆಪಿ (ಸುಕಾಂತ ಮಜುಂದಾರ್): 21

 

ಪಶ್ಚಿಮ ಬಂಗಾಳ: ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಸಮೀಕ್ಷೆ

  • ಟಿಎಂಸಿ (ಮಮತಾ ಬ್ಯಾನರ್ಜಿ): 16-20
  • ಬಿಜೆಪಿ (ಸುಕಾಂತ ಮಜುಂದಾರ್): 21-25

2019ರ ಚುನಾವಣೆಯಲ್ಲಿ ಟಿಎಂಸಿಗೆ ಹೆಚ್ಚು ಸ್ಥಾನ

ದೇಶದಲ್ಲಿ ಹಿಂದುತ್ವ ಹಾಗೂ ನರೇಂದ್ರ ಮೋದಿ ಜಪದ ನಡುವೆಯೂ 2019ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ 22 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ, 2014ರ ಚುನಾವಣೆಯಲ್ಲಿ ಗೆದ್ದಿದ್ದ 12 ಕ್ಷೇತ್ರಗಳನ್ನು ಕಳೆದುಕೊಂಡಿತ್ತು. ಅತ್ತ ಏಕಾಏಕಿ 16 ಕ್ಷೇತ್ರಗಳನ್ನು ಹೆಚ್ಚಿಸಿಕೊಂಡ ಬಿಜೆಪಿ 18ರಲ್ಲಿ ಗೆದ್ದಿತು. ಕಾಂಗ್ರೆಸ್‌ ಕೇವಲ 2 ಸ್ಥಾನ ಮಾತ್ರ ಪಡೆಯಿತು.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ