logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು, ನಂಬರ್ 1 ಸ್ಥಾನದಲ್ಲಿ ಆಂಧ್ರದ ಪೆಮ್ಮಸಾನಿ

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು, ನಂಬರ್ 1 ಸ್ಥಾನದಲ್ಲಿ ಆಂಧ್ರದ ಪೆಮ್ಮಸಾನಿ

May 31, 2024 07:20 AM IST

ಲೋಕಸಭಾ ಚುನಾವಣೆ 2024 ಅಂತಿಮ ಘಟ್ಟ ತಲುಪಿದ್ದು, ಜೂನ್ 4ಕ್ಕೆ ಫಲಿತಾಂಶದ ದಿನಗಣನೆ ಶುರುವಾಗಿದೆ. ಜೂನ್ 1ಕ್ಕೆ ಅಂತಿಮ ಹಂತದ ಮತದಾನ ಅದಾಗಿ, ಎಕ್ಸಿಟ್‌ ಪೋಲ್ (Exit Poll) ಪ್ರಕಟವಾಗಲಿದೆ. ಇದೇ ನೆಪವಾಗಿ, ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು ಇರುವುದು ಕಂಡುಬಂದಿದೆ. ನಂ1 ಸ್ಥಾನದಲ್ಲಿ ಆಂಧ್ರದ ಪೆಮ್ಮಸಾನಿ ಇದ್ದಾರೆ. ವಿವರ ಹೀಗಿದೆ. 

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು. ಇಬ್ಬರೂ ಕಾಂಗ್ರೆಸಿಗರಾಗಿದ್ದು, ಸ್ಟಾರ್ ಚಂದ್ರು (ಎಡಚಿತ್ರ) ಮಂಡ್ಯ ಲೋಕಸಭಾ ಕ್ಷೇತ್ರದಿಂದ, ಡಿಕೆ ಸುರೇಶ್ (ಬಲಚಿತ್ರ) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ವಿವರ ಗಮನಿಸೋಣ.
(1 / 11)

ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಡಾ.ಚಂದ್ರಶೇಖರ ಪೆಮ್ಮಸಾನಿ (48) ಅತಿಶ್ರೀಮಂತ ಅಭ್ಯರ್ಥಿ. ಎಡಿಆರ್ ಪ್ರಕಾರ, ಅವರ ಸಂಪತ್ತಿನ ಮೌಲ್ಯ  5705 ಕೋಟಿ ರೂಪಾಯಿಗೂ ಅಧಿಕ. 
(2 / 11)

ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಡ ವಿಶ್ವೇಶ್ವರ ರೆಡ್ಡಿ (64) ಎರಡನೇ ಅತಿಶ್ರೀಮಂತ ಅಭ್ಯರ್ಥಿ. ಎಡಿಆರ್ ಪ್ರಕಾರ ಅವರ ಸಂಪತ್ತಿನ ಮೌಲ್ಯ 4568 ಕೋಟಿ ರೂಪಾಯಿಗೂ ಅಧಿಕ.
(3 / 11)

ಗೋವಾದ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಲ್ಲವಿ ಶ್ರೀನಿವಾಸ ಡೆಂಪೋ (49) ಅವರು ಮೂರನೇ ಅತಿಶ್ರೀಮಂತ ಅಭ್ಯರ್ಥಿ. ಎಡಿಆರ್ ಪ್ರಕಾರ ಅವರ ಸಂಪತ್ತು 1361 ಕೋಟಿ ರೂಪಾಯಿಗೂ ಹೆಚ್ಚು.
(4 / 11)

ಹರಿಯಾಣ ರಾಜ್ಯದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವೀನ್ ಜಿಂದಾಲ್ (54) ಅವರು ನಾಲ್ಕನೇ ಅತಿಶ್ರೀಮಂತ ಅಭ್ಯರ್ಥಿ. ಎಡಿಆರ್‌ ಪ್ರಕಾರ ನವೀನ್ ಅವರ ಸಂಪತ್ತು 1241 ಕೋಟಿ ರೂಪಾಯಿಗೂ ಹೆಚ್ಚು. 
(5 / 11)

ಮಧ್ಯಪ್ರದೇಶದ ಛಿಂದ್ವಾರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಕುಲ್ ನಾಥ್ (49) ಅವರು 5ನೇ ಅತಿ ಶ್ರೀಮಂತ ಅಭ್ಯರ್ಥಿ. ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ ಕಮಲನಾಥ್ ಅವರ ಪುತ್ರ. ಎಡಿಆರ್ ಪ್ರಕಾರ ಅವರ ಸಂಪತ್ತಿನ ಮೌಲ್ಯ 716 ಕೋಟಿ ರೂಪಾಯಿಗೂ ಅಧಿಕ. 
(6 / 11)

ಆಂಧ್ರಪ್ರದೇಶದ ನೆಲ್ಲೂರು ಲೋಕಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಪ್ರಭಾಕರ ರೆಡ್ಡಿ ವೇಮಿರೆಡ್ಡಿ (68) ಅವರು 6ನೇ ಅತಿ ಶ್ರೀಮಂತ ಅಭ್ಯರ್ಥಿ. ಎಡಿಅರ್‌ ಪ್ರಕಾರ ಅವರ ಸಂಪತ್ತಿನ ಮೌಲ್ಯ 716 ಕೋಟಿ ರೂಪಾಯಿಗೂ ಹೆಚ್ಚು. 
(7 / 11)

ತಮಿಳುನಾಡಿನ ಈರೋಡ್ ಲೋಕಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಅಶೋಕ್ ಕುಮಾರ್ ಅವರು 7ನೇ ಅತಿಶ್ರೀಮಂತ ಅಭ್ಯರ್ಥಿಯಾಗಿದ್ದು, ಎಡಿಆರ್ ಪ್ರಕಾರ ಅವರ ಸಂಪತ್ತು 662 ಕೋಟಿ ರೂಪಾಯಿಗೂ ಅಧಿಕ. 
(8 / 11)

ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ ಅವರು 8ನೇ ಅತಿಶ್ರೀಮಂತ ಅಭ್ಯರ್ಥಿ. ಸ್ಟಾರ್ ಚಂದ್ರು ಎಂದೇ ಜನಪ್ರಿಯರಾಗಿರುವ ಅವರ ಸಂಪತ್ತು ಎಡಿಆರ್ ಪ್ರಕಾರ 622 ಕೋಟಿ ರೂಪಾಯಿಗೂ ಹೆಚ್ಚು.
(9 / 11)

ಕರ್ನಾಟಕದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್‌ ಅವರು 9ನೇ ಅತಿಶ್ರೀಮಂತ ಅಭ್ಯರ್ಥಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಹೋದರರಾಗಿರುವ ಅವರ ಸಂಪತ್ತು 592 ಕೋಟಿ ರೂಪಾಯಿಗೂ ಹೆಚ್ಚು ಎಂದು ಎಡಿಆರ್ ವರದಿ ಹೇಳಿದೆ. 
(10 / 11)

ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತಾ ರಾಯ್‌ 10ನೇ ಅತಿಶ್ರೀಮಂತ ಅಭ್ಯರ್ಥಿಯಾಗಿದ್ದು, ಎಡಿಆರ್ ಪ್ರಕಾರ ಅವರ ಸಂಪತ್ತು 554 ಕೋಟಿ ರೂಪಾಯಿಗೂ ಹೆಚ್ಚು.
(11 / 11)

    ಹಂಚಿಕೊಳ್ಳಲು ಲೇಖನಗಳು