logo
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಕರ್ನಾಟಕದ 1ನೇ ಹಂತದಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳು, ಆಂಬುಲೆನ್ಸ್‌ ಸ್ಟ್ರೆಚರ್‌ನಲ್ಲಿದ್ದುಕೊಂಡೇ ಮತದಾನ

ಲೋಕಸಭಾ ಚುನಾವಣೆ; ಕರ್ನಾಟಕದ 1ನೇ ಹಂತದಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳು, ಆಂಬುಲೆನ್ಸ್‌ ಸ್ಟ್ರೆಚರ್‌ನಲ್ಲಿದ್ದುಕೊಂಡೇ ಮತದಾನ

Umesh Kumar S HT Kannada

Apr 27, 2024 08:12 AM IST

ಲೋಕಸಭಾ ಚುನಾವಣೆ ಭಾಗವಾಗಿ ಕರ್ನಾಟಕದಲ್ಲಿ ನಡೆದ ಮೊದಲ ಹಂತದಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳ ಫೋಟೋಗಳಿವು. ಆಸ್ಪತ್ರೆಯಿಂದ ಆಂಬುಲೆನ್ಸ್‌ಗಳಲ್ಲಿ ಬಂದು ಮತದಾನ ಮಾಡಿದರು. ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಮತದಾನ ಮಾಡಿದ ವೃದ್ದೆ ಗಮನಸೆಳೆದರು.

  • ಲೋಕಸಭಾ ಚುನಾವಣೆ 2024ರ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಎರಡನೇ ಹಂತ ನಿನ್ನೆ (ಏಪ್ರಿಲ್ 26) ಮುಕ್ತಾಯವಾಗಿದೆ. ಬೆಂಗಳೂರಿನ ಮತಗಟ್ಟೆಗಳಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳ ಪೈಕಿ, ಆಂಬುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿದವರು, ಸ್ಟ್ರೆಚರ್‌ನಲ್ಲಿದ್ದುಕೊಂಡೇ ಮತದಾನ ಮಾಡಿದವರು ಗಮನಸೆಳೆದರು. ಇಲ್ಲಿದೆ ಈ ಕುರಿತು ಕಿರುನೋಟ. (ವರದಿ- ಎಚ್. ಮಾರುತಿ, ಬೆಂಗಳೂರು)

ಲೋಕಸಭಾ ಚುನಾವಣೆ ಭಾಗವಾಗಿ ಕರ್ನಾಟಕದಲ್ಲಿ ನಡೆದ ಮೊದಲ ಹಂತದಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳ ಫೋಟೋಗಳಿವು. ಆಸ್ಪತ್ರೆಯಿಂದ ಆಂಬುಲೆನ್ಸ್‌ಗಳಲ್ಲಿ ಬಂದು ಮತದಾನ ಮಾಡಿದರು. ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಮತದಾನ ಮಾಡಿದ ವೃದ್ದೆ ಗಮನಸೆಳೆದರು.
ಲೋಕಸಭಾ ಚುನಾವಣೆ ಭಾಗವಾಗಿ ಕರ್ನಾಟಕದಲ್ಲಿ ನಡೆದ ಮೊದಲ ಹಂತದಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳ ಫೋಟೋಗಳಿವು. ಆಸ್ಪತ್ರೆಯಿಂದ ಆಂಬುಲೆನ್ಸ್‌ಗಳಲ್ಲಿ ಬಂದು ಮತದಾನ ಮಾಡಿದರು. ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಮತದಾನ ಮಾಡಿದ ವೃದ್ದೆ ಗಮನಸೆಳೆದರು.

ಬೆಂಗಳೂರು: ಇವರು ಸಾಮಾನ್ಯರಲ್ಲಿ ಅಸಮಾನ್ಯರು. ಆಯುರಾರೋಗ್ಯ ಭಾಗ್ಯ ಕೇಳಿಕೊಂಡು ಬಂದವರಿಗೆ ಇವರು ನಿಜಕ್ಕೂ ಮಾದರಿ. ಅವರೇ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು. ಇವರು ಮತದಾನ ಮಾಡಲೇಬೇಕೆಂಬ ಅದಮ್ಯ ಆಸೆಯಿಂದ ಆಸ್ಪತ್ರೆ ಗಳಿಂದ ಆಂಬುಲೆನ್ಸ್‌ಗಳಲ್ಲಿ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಬಂದಿದ್ದಾರೆ. ಇವರ ಅಮಿತೋತ್ಸಾಹ ಇಂದು ಹಕ್ಕು ಚಲಾಯಿಸದ ಶೇ. 50ರಷ್ಟು ಬೆಂಗಳೂರು ನಿವಾಸಿಗಳು ತಲೆ ತಗ್ಗಿಸುವ ವಿಷಯವೇ ಸರಿ.

ಟ್ರೆಂಡಿಂಗ್​ ಸುದ್ದಿ

ಆಂಧ್ರ ಪ್ರದೇಶ ಚುನಾವಣೆ 2024; 175 ವಿಧಾನಸಭಾ ಸ್ಥಾನಗಳಿಗೆ ಮೇ 13ಕ್ಕೆ ಮತದಾನ, ಚುನಾವಣಾ ಟ್ರೆಂಡ್ ಅರ್ಥಮಾಡಿಕೊಳ್ಳಲು ಈ 10 ಅಂಶ

ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು

ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ನೋವಿನಲ್ಲೂ ಖುಷಿ ಕಂಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಮೂತ್ರಪಿಂಡ ವೈಫಲ್ಯ, ಕ್ಯಾನ್ಸರ್, ಡಯಾಲಿಸಿಸ್‌, ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ, ಮೂತ್ರನಾಳ ಸೋಂಕು ಮೊದಲಾದ ರೋಗಗಳಿಂದ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅನೇಕ ಮಂದಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮಣಿಪಾಲ್‌ ಆಸ್ಪತ್ರೆಯ ಒಳರೋಗಿಗಳೂ ಮತದಾನ ಮಾಡಿದ್ರು

ಮಣಿಪಾಲ್ ಆಸ್ಪತ್ರೆಯು ಬಿಬಿಎಂಪಿ ಸಹಯೋಗದಲ್ಲಿ ತನ್ನ ಒಳರೋಗಿಗಳಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿತ್ತು. 50 ಒಳರೋಗಿಗಳು ಮತ ಚಲಾಯಿಸಿದರು ಎಂದು ಮಣಿಪಾಲ್ ಆಸ್ಪತ್ರೆ ತಿಳಿಸಿದೆ. ಇವರನ್ನು ವಿವಿಧ ಮತಗಟ್ಟೆಗಳಿಗೆ ಆಂಬುಲೆನ್ಸ್‌ಗಳ ಮೂಲಕ ಕರೆದೊಯ್ಯಲು ಹಸಿರು ಕಾರಿಡಾರ್‌ ವ್ಯವಸ್ಥೆ ಮಾಡಲಾಗಿತ್ತು. ಆಂಬುಲೆನ್ಸ್‌ ನಲ್ಲಿ ರೋಗಿಗಳೊಂದಿಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇರುವಂತೆ ವ್ಯವಸ್ಥೆ ಮಾಡಲಾಗಿತ್ತು.

ಮೂತ್ರಪಿಂಡ ವೈಫಲ್ಯಕ್ಕೆ ಒಳಗಾದವರು, ಡಯಾಲಿಸಿಸ್‌ ಪಡೆಯುತ್ತಿರುವವರು, ಕರುಳು ಕ್ಯಾನ್ಸರ್‌ ಗೆ ಚಿಕಿತ್ಸೆ ಪಡೆಯುತ್ತಿರುವವರು, ರಕ್ತದೊತ್ತಡ ಸಮಸ್ಯೆ ಮತ್ತು ಮಂಡಿ ಕೀಲು ಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾದವರು ಮತ ಚಲಾಯಿಸಿದರು ಎಂದು ವೈದ್ಯರು ತಿಳಿಸಿದ್ದಾರೆ.

ಜಯನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನ್ಯೂಮೋನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದ 78 ವರ್ಷದ ಮಹಿಳೆಯೊಬ್ಬರನ್ನು ಆಕ್ಸಿಜನ್ ಮಾಸ್ಕ್ ಸಹಿತ ಸ್ಟ್ರೆಚರ್ ಮೇಲೆ ಮಲಗಿಸಿ ಕರೆ ತಂದು ಮತ ಚಲಾಯಿಸಲು ನೆರವು ಕಲ್ಪಿಸಲಾಗಿತ್ತು. ಸ್ಪರ್ಶ್ ಆಸ್ಪತ್ರೆಯೂ ಒಳರೋಗಿಗಳಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಅಗತ್ಯ ಇರುವವರಿಗೆ ಗಾಲಿ ಕುರ್ಚಿ ಹಾಗೂ ಆಂಬುಲೆನ್ಸ್ ನೆರವನ್ನು ಒದಗಿಸಲಾಗಿತ್ತು.

ವಿವಿದ ಆಸ್ಪತ್ರೆಗಳಲ್ಲಿರುವ ಒಳರೋಗಿಗಳಿಂದ ಮತದಾನ

ಹಲವು ದಿನಗಳಿಂದ ಅನೇಕ ರೋಗಿಗಳು ಮತ ಚಲಾಯಿಸಲು ಅವಕಾಶ ಕಲ್ಪಿಸಲು ಕೇಳಿಕೊಳ್ಳುತ್ತಿದ್ದರು. ನಾವೂ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಅವಕಾಶ ನೀಡಿದ್ದೇವೆ. ಬಿಬಿಎಂಪಿ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು ಹೇಳಿದ್ದಾರೆ.

ಹೂಡಿ, ಅಂಬೇಡ್ಕರ್ ನಗರ, ಮಹದೇವಪುರ, ಹಳೆ ಬೈಯಪ್ಪನಹಳ್ಳಿ, ಸಿದ್ಧಗಂಗಾ ಪಬ್ಲಿಕ್ ಸ್ಕೂಲ್, ಬಿಪಿ ಇಂಡಿಯನ್ ಹೈಸ್ಕೂಲ್, ಕೇಂಬ್ರಿಡ್ಜ್ ಲೇಔಟ್, ಎಇಸಿಎಸ್ ಲೇಔಟ್, ಹಂಪಿನಗರ, ಮಹಾಲಕ್ಷ್ಮೀಪುರ, ಸಂಜಯನಗರ, ಆರ್‌ ಟಿ ನಗರ, ಎಚ್‌ಎಸ್‌ಆರ್ 6ನೇ ವಲಯ, ಜೆ.ಪಿ.ನಗರ, ಜಯನಗರ, ಚನ್ನಸಂದ್ರ, ಹೊಸಕೋಟೆ, ಬಾಣಸವಾಡಿ, ಬಿನ್ನಿಮಿಲ್ ರಸ್ತೆ, ಮತ್ತು ದಾಸರಹಳ್ಳಿ ಸೇರಿದಂತೆ ವಿವಿಧ ಪ್ರದೇಶದಲ್ಲಿರುವ ಮತಗಟ್ಟೆಗಳಿಗೆ ರೋಗಿಗಳನ್ನು ಕರೆತರಲಾಗಿತ್ತು. ಕಳೆದ ವರ್ಷ ನಡೆದ ವಿಧಾನಸಭಾ ಚನಾವಣೆಯಲ್ಲೂ ರೋಗಿಗಳಿಗೆ ತಮ್ಮ ಹಕ್ಕು ಚಲಾಯಿಸಲು ಕೆಲವು ಆಸ್ಪತ್ರೆಗಳು ಇದೇ ರೀತಿ ಅವಕಾಶ ಕಲ್ಪಿಸಿದ್ದವು.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ