logo
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ನಾಳೆ ಮತದಾನ, ಶಾಯಿ ಗುರುತು ತೋರಿಸಿದರೆ ಬರ್ಗರ್‌ಗೆ ಡಿಸ್ಕೌಂಟ್‌, ಬಿಯರ್, ಕಾಫಿ, ದೋಸೆ ಉಚಿತ

ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ನಾಳೆ ಮತದಾನ, ಶಾಯಿ ಗುರುತು ತೋರಿಸಿದರೆ ಬರ್ಗರ್‌ಗೆ ಡಿಸ್ಕೌಂಟ್‌, ಬಿಯರ್, ಕಾಫಿ, ದೋಸೆ ಉಚಿತ

Umesh Kumar S HT Kannada

Apr 25, 2024 03:26 PM IST

ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ನಾಳೆ ಮತದಾನ ಮಾಡಿ ಶಾಯಿ ಗುರುತು ತೋರಿಸಿದ ಮತದಾರರಿಗೆ ಬರ್ಗರ್‌ಗೆ ಡಿಸ್ಕೌಂಟ್‌ ಸಿಗಲಿದೆ. ಉಚಿತ ಬಿಯರ್‌ ಹೀಗೆ ಹತ್ತು ಹಲವು ಆಫರ್‌ಗಳು. (ಸಾಂಕೇತಿಕ ಚಿತ್ರ)

  • ಲೋಕಸಭಾ ಚುನಾವಣೆ 2024;  ಪ್ರಜಾಪ್ರಭುತ್ವದ ಹಬ್ಬ ಆಚರಿಸಲು ಬೆಂಗಳೂರು ಭರ್ಜರಿಯಾಗಿ ಸಜ್ಜಾಗುತ್ತಿದೆ. ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂಬ ಶತಾಯಗತಾಯ ಪ್ರಯತ್ನ ಶುರುವಾಗಿದೆ. ಬೆಂಗಳೂರಲ್ಲಿ ನಾಳೆ ಮತದಾನ, ಶಾಯಿ ಗುರುತು ತೋರಿಸಿದರೆ ಬರ್ಗರ್‌ಗೆ ಡಿಸ್ಕೌಂಟ್‌, ಬಿಯರ್, ಕಾಫಿ, ದೋಸೆ ಉಚಿತ ಮುಂತಾದ ಆಫರ್‌ಗಳು ಗಮನಸೆಳೆದಿವೆ. 

ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ನಾಳೆ ಮತದಾನ ಮಾಡಿ ಶಾಯಿ ಗುರುತು ತೋರಿಸಿದ ಮತದಾರರಿಗೆ ಬರ್ಗರ್‌ಗೆ ಡಿಸ್ಕೌಂಟ್‌ ಸಿಗಲಿದೆ. ಉಚಿತ ಬಿಯರ್‌ ಹೀಗೆ ಹತ್ತು ಹಲವು ಆಫರ್‌ಗಳು. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ನಾಳೆ ಮತದಾನ ಮಾಡಿ ಶಾಯಿ ಗುರುತು ತೋರಿಸಿದ ಮತದಾರರಿಗೆ ಬರ್ಗರ್‌ಗೆ ಡಿಸ್ಕೌಂಟ್‌ ಸಿಗಲಿದೆ. ಉಚಿತ ಬಿಯರ್‌ ಹೀಗೆ ಹತ್ತು ಹಲವು ಆಫರ್‌ಗಳು. (ಸಾಂಕೇತಿಕ ಚಿತ್ರ) (Pixel)

ಬೆಂಗಳೂರು: ಕರ್ನಾಟದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಿದ್ಧತೆ ಅಂತಿಮ ಹಂತಕ್ಕೆ ಬಂದಿವೆ. ಈ ಹಂತದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾರ ಜಾಗೃತಿ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಆಹಾರೋತ್ಪನ್ನಗಳ ಮೇಲೆ ವಿನಾಯಿತಿ, ಡಿಸ್ಕೌಂಟ್‌ನಲ್ಲಿ ಬರ್ಗರ್‌, ಉಚಿತ ಬಿಯರ್, ದೋಸೆ, ಕಾಫಿ, ಉಚಿತ ಸವಾರಿ ಹೀಗೆ ಹಲವು ರೀತಿಯ ಉತ್ತೇಜನ ಕ್ರಮಗಳನ್ನು ಸ್ಥಳೀಯ ವ್ಯಾಪಾರೋದ್ಯಮಿಗಳು ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು

ಲೋಕಸಭಾ ಚುನಾವಣೆ 2024; ರಾಯ್ ಬರೇಲಿಯಿಂದ ರಾಹುಲ್ ಗಾಂಧಿ, ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಕಣಕ್ಕೆ, ಕುತೂಹಲಕ್ಕೆ ತೆರೆ ಎಳೆದ ಕಾಂಗ್ರೆಸ್

ಈ ರೀತಿಯಾಗಿ, ಪ್ರಜಾಪ್ರಭುತ್ವದ ಹಬ್ಬ ಆಚರಿಸಲು ಬೆಂಗಳೂರು ಭರ್ಜರಿಯಾಗಿ ಸಜ್ಜಾಗುತ್ತಿದೆ. ಮತದಾನಕ್ಕೆ ಇನ್ನು 48 ಗಂಟೆ ಬಾಕಿ ಇರುವಾಗ ವಿವಿಧ ಸಂಸ್ಥೆಗಳು ಚುನಾವಣಾ ಆಯೋಗದ ಅನುಮತಿ ಪಡೆದು ಮತದಾನ ಹೆಚ್ಚಿಸುವುದಕ್ಕಾಗಿ ವಿವಿಧ ಆಫರ್‌ಗಳನ್ನು ಪ್ರಕಟಿಸಿವೆ. ಭಾರತೀಯ ಚುನಾವಣಾ ಆಯೋಗವು ನವೀನ ಮತ್ತು ವಿನೂತನ ಮತದಾರರ ಜಾಗೃತಿ ಅಭಿಯಾನಗಳನ್ನು ಆಯೋಜಿಸಿದ್ದರೂ, ಹೋಟೆಲ್ ಉದ್ಯಮಿಗಳು, ಕಂಪನಿಗಳು ಮತ್ತು ಇತರ ಸಂಸ್ಥೆಗಳು ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮತದಾರರನ್ನು ಓಲೈಸಲು ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ವಿಶೇಷ ಗಮನಸೆಳೆದಿದೆ.

ಬೆಂಗಳೂರು ಮತದಾರರಿಗೆ ಯಾಕೆ ಇಷ್ಟೆಲ್ಲ ವಿಶೇಷ ಆಫರ್‌ಗಳು

ವಿಶೇಷವಾಗಿ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದು ಇದರ ಉದ್ದೇಶ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ (2019) ಇಡೀ ರಾಜ್ಯದಲ್ಲೇ ಕನಿಷ್ಠ ಪ್ರಮಾಣ (ಶೇ 53.7) ಮತದಾನವಾಗಿತ್ತು. ಬೆಂಗಳೂರು ಸೆಂಟ್ರಲ್‌ನಲ್ಲಿ ಮತದಾನ ಪ್ರಮಾಣ ಸೇಕಡ 54.3, ಬೆಂಗಳೂರು ಉತ್ತರದಲ್ಲಿ ಮತದಾನ ಪ್ರಮಾಣ ಶೇಕಡ 54.7 ಇತ್ತು. ಇದೇ ವೇಳೆ ಬೆಂಗಳೂರು ಗ್ರಾಮಾಂತರದಲ್ಲಿ ಮತದಾನ ಪ್ರಮಾಣ ಶೇಕಡ 64.9 ಇತ್ತು. ಕರ್ನಾಟಕದ ಒಟ್ಟು ಮತದಾನ ಪ್ರಮಾಣ ಶೇಕಡ 68 ಇತ್ತು. ಆದ್ದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂಬ ಪ್ರಯತ್ನಗಳ ಭಾಗ ಇದು.

ಬೃಹತ್ ಬೆಂಗಳೂರು ಹೋಟೆಲಿಯರ್ಸ್ ಅಸೋಸಿಯೇಷನ್ ಉಚಿತವಾಗಿ ಅಥವಾ ವಿನಾಯಿತಿ ದರದಲ್ಲಿ ಊಟೋಪಹಾರವನ್ನು ಮತದಾನ ಮಾಡಿದ ಮತದಾರರಿಗೆ ಒದಗಿಸುವುದಕ್ಕೆ ಕರ್ನಾಟಕ ಹೈಕೋರ್ಟ್‌ ಕೂಡ ಮಂಗಳವಾರ ಒಪ್ಪಿಗೆ ನೀಡಿದೆ. ಆದರೆ ಮಾದರಿ ನೀತಿ ಸಂಹಿತೆಯ ಚೌಕಟ್ಟು ಮೀರಿದರೆ ಅಂತಹ ಹೋಟೆಲ್, ರೆಸ್ಟೋರೆಂಟ್‌ಗಳ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ ಎಂಬುದನ್ನೂ ಕೋರ್ಟ್ ನೆನಪಿಸಿದೆ.

ಎಲ್ಲೆಲ್ಲಿ ಏನೇನು ಆಫರ್‌ಗಳು

1) ಮಾರತ್ತಹಳ್ಳಿಯ ಮಿ. ಫಿಲ್ಲಿ'ಸ್ ನಲ್ಲಿ ಬರ್ಗರ್‌ಗೆ ಡಿಸ್ಕೌಂಟ್‌

ಮತದಾನ ಮಾಡಿ ಬಂದ ಗ್ರಾಹಕರಿಗೆ ಡಿಸ್ಕೌಂಟ್ ದರದಲ್ಲಿ ಬರ್ಗರ್ ನೀಡುವುದಾಗಿ ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯ ಮಿ. ಫಿಲ್ಲಿ'ಸ್ ಘೋಷಿಸಿದೆ. ಏಪ್ರಿಲ್ 26 ರಂದು ಮತದಾನ ಮಾಡಿ ಬಂದ ಮೊದಲ 100 ಗ್ರಾಹಕರಿಗೆ ಈ ರಿಯಾಯಿತಿ ಅಂದರೆ ಬರ್ಗರ್ ಮತ್ತು ಮಿಲ್ಕ್‌ಶೇಕ್ ಮೇಲೆ ಶೇಕಡ 30 ರಿಯಾಯಿತಿ ಸಿಗಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2) ಶನಿವಾರ ಉಚಿತ ಬಿಯರ್

ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿರುವ ಡೆಕ್ ಆಫ್ ಬ್ರೂಸ್‌ ಎಂಬ ಬ್ರೂಪಬ್‌ನಲ್ಲಿ ಏಪ್ರಿಲ್ 27ರಂದು ಬರುವ ಮೊದಲ 50 ಗ್ರಾಹಕರಿಗೆ (ಮತದಾನ ಮಾಡಿದವರಿಗೆ) ಒಂದು ಉಚಿತ ಬಿಯರ್ ನೀಡುವುದಾಗಿ ಪ್ರಕಟಿಸಿದೆ. ಮತದಾನ ಮಾಡಿದ್ದಕ್ಕೆ ಶಾಯಿ ಗುರುತು ತೋರಿಸಬೇಕಾದ್ದು ಕಡ್ಡಾಯ.

3) ಮುಂದಿನ ಸಲ ಊಟಕ್ಕೆ ಡಿಸ್ಕೌಂಟ್‌

ಸೋಷಿಯಲ್ ಎಂಬ ಅರ್ಬನ್ ಹ್ಯಾಂಗೌಟ್ ಸ್ಪೇಸ್‌ನಲ್ಲಿ ಮತದಾನದ ಬಳಿಕ ಈ ಸ್ಪೇಸ್‌ನಲ್ಲಿ ಊಟ ಮಾಡಿದ್ದಕ್ಕೆ ಬಿಲ್ ಪಾವತಿಸುವಾಗ ಶಾಯಿ ಗುರುತಿನ ಬೆರಳು ತೋರಿಸಿದರೆ ಬಿಲ್‌ನಲ್ಲಿ ಶೇಕಡ 20 ರಿಯಾಯಿತಿ ಸಿಗಲಿದೆ. ಆದರೆ ಈ ರಿಯಾಯಿತಿಯನ್ನು ಗ್ರಾಹಕರು ತಮ್ಮ ಮುಂದಿನ ಭೇಟಿಯಲ್ಲಿ ನಗದೀಕರಿಸಬೇಕು.

4) ಏರ್‌ ಇಂಡಿಯಾದಲ್ಲಿ ಯುವ ಮತದಾರರಿಗೆ ಡಿಸ್ಕೌಂಟ್‌

ಹುಟ್ಟೂರಲ್ಲಿ ಮೊದಲ ಬಾರಿಗೆ ಮತದಾನ ಮಾಡಿ ವಾಪಸ್‌ ಶಿಕ್ಷಣ, ಉದ್ಯೋಗಕ್ಕೆ ತೆರಳುವ ಯುವ ಮತದಾರರು (18- 22 ವರ್ಷ ವಯಸ್ಸಿನವರು) ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಟಿಕೆಟ್‌ನಲ್ಲಿ ಶೇಕಡ 19 ರಿಯಾಯಿತಿ ಪಡೆಯಬಹುದು. ವೋಟ್‌ಆಸ್‌ಯುಆರ್ ಉಪಕ್ರಮದ ಭಾಗವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇದನ್ನು ಘೋಷಿಸಿದೆ.

5) ವಂಡರ್‌ಲಾದಲ್ಲಿ ಶೇಕಡ 15 ರಿಯಾಯಿತಿ

ಮತದಾನ ಮಾಡಿ ಬಂದವರಿಗೆ ವಂಡರ್‌ಲಾ ಟಿಕೆಟ್‌ನಲ್ಲಿ ಶೇಕಡ 15 ರಿಯಾಯಿತಿ ಸಿಗಲಿದೆ. ಈ ಆಫರ್‌ ಏಪ್ರಿಲ್ 26 ರಿಂದ ಮೂರು ದಿನ ಚಾಲ್ತಿಯಲ್ಲಿರಲಿದೆ. ಈ ಆಫರ್ ಪಡೆಯಲು ಗ್ರಾಹಕರು ಮತದಾನ ಮಾಡಿದ್ದಕ್ಕೆ ಶಾಯಿ ಗುರುತು ತೋರಿಸಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ