logo
ಕನ್ನಡ ಸುದ್ದಿ  /  ಮನರಂಜನೆ  /  Ott Movie Review: ವಿಠಲ ಮಲೆಕುಡಿಯನ ನೈಜ ಬದುಕಿನ ಚಿತ್ರಣ; 19. 20. 21 ಸಿನಿಮಾದಲ್ಲಿ ಕಾಡುವ ಕಾಡು ಮಕ್ಕಳ ಕಥೆ

OTT Movie Review: ವಿಠಲ ಮಲೆಕುಡಿಯನ ನೈಜ ಬದುಕಿನ ಚಿತ್ರಣ; 19. 20. 21 ಸಿನಿಮಾದಲ್ಲಿ ಕಾಡುವ ಕಾಡು ಮಕ್ಕಳ ಕಥೆ

Suma Gaonkar HT Kannada

Nov 19, 2024 04:54 PM IST

google News

19. 20. 21 ನೈಜ ಬದುಕಿನ ನೋವಿನ ಕಥೆ

    • 19.20.21 Movie OTT: ನಕ್ಸಲರ ಜತೆಗಿನ ಒಡನಾಟದ ಆರೋಪದಲ್ಲಿ ಬಂಧಿತನಾದ ವಿಠಲ ಎಂಬುವವನು ಅರಣ್ಯ ಭಾಗದಲ್ಲಿ ವಾಸ ಮಾಡುವ ಒಂದು ಮಲೆಕುಡಿಯ ಸಮುದಾಯದ ಹುಡುಗನಾಗಿರುತ್ತಾನೆ. ಆದರೆ ಆತ ದೇಶದ್ರೋಹದ ಕೇಸ್‌ನಲ್ಲಿ ಬಂಧಿಯಾಗುತ್ತಾನೆ.
19. 20. 21 ನೈಜ ಬದುಕಿನ ನೋವಿನ ಕಥೆ
19. 20. 21 ನೈಜ ಬದುಕಿನ ನೋವಿನ ಕಥೆ

19.20.21 Movie OTT: ಕಾನೂನೂ ಏನು ಮಾಡಬಲ್ಲದು? ಪೊಲೀಸರು ಏನು ಮಾಡಬಲ್ಲರು? ನಿಜವಾದ ಅಪರಾಧಿ ಯಾರು? ಅಮಾಯಕನೊಬ್ಬ ಸಿಕ್ಕರೆ ಅವನನ್ನು ಎಷ್ಟು ವರ್ಷಗಳ ಕಾಲ ಅಪರಾಧಿ ಎಂದೇ ಸಾಭೀತು ಪಡಿಸುವ ತಾಕತ್ತಿದೆ ಎಂಬೆಲ್ಲ ಸತ್ಯವನ್ನು ಕಣ್ಣಿಗೆ ಕಟ್ಟುವ ಹಾಗೆ ನಿರೂಪಿಸಿದ ಸಿನಿಮಾ 19, 20, 21. ಈ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ನಿಮಗೆ ಲಭ್ಯವಿದೆ. 20 ರಿಂದ 30ರ ನಡುವಿನ ವಯಸ್ಸು ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ಹಂತವಾಗಿದೆ. ವ್ಯಕ್ತಿಯ ಸಂಪೂರ್ಣ ಜೀವನವನ್ನು ವ್ಯಾಖ್ಯಾನಿಸುವ ಹಂತ ಅದು. ಆ ಹಂತದಲ್ಲಿ ಒಬ್ಬ ವ್ಯಕ್ತಿ ದೇಶದ್ರೋಹಿಯಾದರೆ?

ಒಂದು ಹುಡುಗ ಅಥವಾ ಹುಡುಗಿ ದೇಶದ್ರೋಹಿ ಎಂದು ಸಾಬೀತಾದರೆ ಬಿಡುಗಡೆಯಾಗುವ ಅವಕಾಶವಿಲ್ಲವೇ? ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸಲ್ಪಟ್ಟರೆ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ನೀವು ಈ ಸಿನಿಮಾದಲ್ಲಿ ವೀಕ್ಷಿಸಬಹುದು. ವಿದ್ಯಾರ್ಥಿಯೊಬ್ಬನ ನೈಜ ಘಟನೆಗಳಿಂದ ಪ್ರೇರಿತವಾದ ನಿಜ ಜೀವನವನ್ನು ಕಥೆಯಾಗಿ ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ.

ಏನಿದೆ ಕಥೆ?

ನಕ್ಸಲರ ಜತೆಗಿನ ಒಡನಾಟದ ಆರೋಪದಲ್ಲಿ ಬಂಧಿತನಾದ ವಿಠಲ ಎಂಬುವವನು ಅರಣ್ಯ ಭಾಗದಲ್ಲಿ ವಾಸ ಮಾಡುವ ಒಂದು ಮಲೆಕುಡಿಯ ಸಮುದಾಯದ ಹುಡುಗನಾಗಿರುತ್ತಾನೆ. ಆದರೆ ಆತ ದೇಶದ್ರೋಹದ ಕೇಸ್‌ನಲ್ಲಿ ಬಂಧಿಯಾಗುತ್ತಾನೆ. ಮಾಡದ ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳುವ ರೀತಿ ಪೊಲೀಸರು ಮಾಡುತ್ತಾರೆ. ನಿರ್ದೇಶಕ ಮನ್ಸೋರೆ ಅವರು ಈ ಸಿನಿಮಾದಲ್ಲಿ ಕಟ್ಟಿಕೊಟ್ಟ ನೈಜತೆ ಇನ್ನೆಲ್ಲೂ ಸಿಗದು ಆ ರೀತಿಯಾಗಿ ಸಿನಿಮಾ ಮೂಡಿ ಬಂದಿದೆ. ಪೊಲೀಸರು ನೀಡುವ ಮಾನಸಿಕ ಮತ್ತು ದೈಹಿಕ ನೋವನ್ನು ತಡೆದುಕೊಳ್ಳಲಾರದ ವಿಠಲ ತಾನು ತಪ್ಪು ಮಾಡದೇ ಇದ್ದರೂ ತಾನೇ ಮಾಡಿದ್ದು ಎಂದು ಒಪ್ಪಿಕೊಳ್ಳುವಂತೆ ಮಾಡುತ್ತಾರೆ.

ಅಲ್ಲಿ ನಡಯದೇ ಇರುವ ಕೆಲ ಸನ್ನಿವೇಷಗಳನ್ನು ತಾವೇ ಸಾಕ್ಷ್ಯವಾಗಿ ಮರುಸೃಷ್ಟಿ ಮಾಡುತ್ತಾರೆ. ಆದರೆ ತಾನು ಕಲಿಯಬೇಕು ಎಂಬ ಕಡು ಹಂಬಲ ಇರುವ ವಿದ್ಯಾರ್ಥಿ ಅವನಾಗಿದ್ದರಿಂದ ಲಾಯರ್ ಅವನಿಗೆ ಸಹಾಯ ಮಾಡುತ್ತಾರೆ. ಅದರಲ್ಲೂ ಕೈಕೋಳ ಹಾಕಿಕೊಂಡು ಪರೀಕ್ಷೆ ಬರೆಯುವ ದೃಶ್ಯ ಮನಕಲಕುವಂತಿದೆ. ನೂರಾರು ವರ್ಷಗಳಿಂದ ಕಾಡಿನಲ್ಲಿ ವಾಸಿಸುವ ಜನರ ಜೀವನವನ್ನು ಪೊಲೀಸರು ಮತ್ತು ನಕ್ಸಲ್ ವಿರೋಧಿ ಪಡೆಗಳು ತಮಗೆ ಬೇಕಾದಂತೆ ಬಳಿಸಿಕೊಳ್ಳುತ್ತವೆ.

ಚಿತ್ರ: ‘19.20.21’

ನಿರ್ಮಾಣ: ದೇವರಾಜ್ ಆರ್​.

ನಿರ್ದೇಶನ: ಮಂಸೋರೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ