logo
ಕನ್ನಡ ಸುದ್ದಿ  /  ಮನರಂಜನೆ  /  95th Academy Awards: ಯಾರಿಗೆ, ಯಾವ ವಿಭಾಗದಲ್ಲಿ ಪ್ರಶಸ್ತಿ... ಈ ಬಾರಿ ಆಸ್ಕರ್‌ ಪಡೆದವರ ಸಂಪೂರ್ಣ ಲಿಸ್ಟ್‌ ಇಲ್ಲಿದೆ!

95th Academy Awards: ಯಾರಿಗೆ, ಯಾವ ವಿಭಾಗದಲ್ಲಿ ಪ್ರಶಸ್ತಿ... ಈ ಬಾರಿ ಆಸ್ಕರ್‌ ಪಡೆದವರ ಸಂಪೂರ್ಣ ಲಿಸ್ಟ್‌ ಇಲ್ಲಿದೆ!

HT Kannada Desk HT Kannada

Mar 13, 2023 11:54 AM IST

ಈ ಬಾರಿ ಆಸ್ಕರ್‌ ಪಡೆದವರ ಸಂಪೂರ್ಣ ಲಿಸ್ಟ್

    • ಇಡೀ ವಿಶ್ವವೇ ಎದುರು ನೋಡುತ್ತಿದ್ದ ದಿನ ಎದುರಾಗಿದೆ. 95ನೇ ಅಕಾಡೆಮಿ ಅವಾರ್ಡ್‌ ಘೋಷಣೆ ಆಗಿದೆ. ಅಮೆರಿಕದ ಲಾಸ್‌ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಮಾರ್ಚ್‌ 12 ರಂದು ( ಭಾರತೀಯ ಕಾಲಮಾನ ಮಾರ್ಚ್‌ 13 ಬೆಳಗ್ಗೆ 5.30 ) ನಡೆದ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಬಾರಿ ಭಾರತಕ್ಕೆ ಎರಡು ಆಸ್ಕರ್‌ ಒಲಿದು ಬಂದಿದೆ.
ಈ ಬಾರಿ ಆಸ್ಕರ್‌ ಪಡೆದವರ ಸಂಪೂರ್ಣ ಲಿಸ್ಟ್
ಈ ಬಾರಿ ಆಸ್ಕರ್‌ ಪಡೆದವರ ಸಂಪೂರ್ಣ ಲಿಸ್ಟ್ (PC: Twitter)

ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶನದ 'ದಿ ಎಲಿಫೆಂಟ್​ ವಿಸ್ಪರರ್ಸ್​' ಸಾಕ್ಷ್ಯಚಿತ್ರಕ್ಕೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಈ ಬಾರಿ ಮೊದಲ ಆಸ್ಕರ್‌ ಬಂದಿದೆ. ಆನೆ-ಮನುಷ್ಯನ ನಡುವಿನ ಬಾಂಧವ್ಯದ ಕಥೆ ಹೇಳುವ ಈ ಡಾಕ್ಯುಮೆಂಟರಿಯನ್ನು ಸಿಖ್ಯ ಎಂಟರ್ನೈನ್ಮೆಂಟ್‌ ಬ್ಯಾನರ್‌ ಅಡಿ ಡೊಗ್ಲಾಸ್ ಬ್ಲಶ್ , ಕಾರ್ತಿಕಿ ಗೊನ್ಸಾಲ್ವಿಸ್ , ಗುನೀತ್ ಮೊಂಗಾ ಹಾಗೂ ಅಚಿನ್ ಜೈನ್ ನಿರ್ಮಿಸಿದ್ದು ಪ್ರಿಸ್ಸಿಲ್ಲಾ ಗೊನ್ಸಾಲ್ವಿಸ್ ಕಥೆ ಬರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

Grey Games Trailer: ‘ಗ್ರೇ ಗೇಮ್ಸ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ವಿಜಯ್‌ ರಾಘವೇಂದ್ರ ಅಕ್ಕನ ಮಗ ಜೈ ಎಂಟ್ರಿ

ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?

'ಆರ್‌ಆರ್‌ಆರ್‌' ಚಿತ್ರದ ನಾಟು ನಾಟು.. ಹಾಡಿಗೆ ಬೆಸ್ಟ್‌ ಒರಿಜಿನಲ್‌ ಸ್ಕೋರ್‌ ವಿಭಾಗದಲ್ಲಿ ಆಸ್ಕರ್‌ ದೊರೆತಿದೆ. ಚಂದ್ರಬೋಸ್ ಸಾಹಿತ್ಯ ಬರೆದಿರುವ ಹಾಡಿಗೆ ಎಂ. ಕೀರವಾಣಿ ಸಂಗೀತ ನೀಡಿದ್ಧಾರೆ. ಕಾಲ ಭೈರವ ಹಾಗೂ ರಾಹುಲ್ ಸಿಪ್ಲಿಗಿಜ್ ಹಾಡಿರುವ ಹಾಡಿಗೆ ಪ್ರೇಮ್ ರಕ್ಷಿತ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಎಸ್‌.ಎಸ್.‌ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ ಚರಣ್‌ ಹಾಗೂ ಜ್ಯೂ. ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಬಾರಿ ಆಸ್ಕರ್‌ ಪಡೆದವರ ಸಂಪೂರ್ಣ ಲಿಸ್ಟ್‌ ಇಲ್ಲಿದೆ

ಅತ್ಯುತ್ತಮ ಸಿನಿಮಾ - 'ಎವೆರಿಥಿಂಗ್‌​ ಎವೆರಿವೇರ್‌​ ಆಲ್​ ಅಟ್​ ಒನ್ಸ್​ '

ಅತ್ಯುತ್ತಮ ನಿರ್ದೇಶನ - ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ ( ಎವೆರಿಥಿಂಗ್‌​ ಎವೆರಿವೇರ್‌​ ಆಲ್​ ಅಟ್​ ಒನ್ಸ್)

ಅತ್ಯುತ್ತಮ ನಟ - ಬ್ರೆಂಡನ್ ಫ್ರೆಸರ್ (ದಿ ವೇಲ್​)

ಅತ್ಯುತ್ತಮ ನಟಿ - ಮಿಶೆಲ್ ಯೋ (ಎವೆರಿಥಿಂಗ್‌​ ಎವೆರಿವೇರ್‌​ ಆಲ್​ ಅಟ್​ ಒನ್ಸ್)

ಅತ್ಯುತ್ತಮ ಪೋಷಕ ನಟ - ಕಿ ಹು ಕ್ವಾನ್ (ಎವೆರಿಥಿಂಗ್‌​ ಎವೆರಿವೇರ್‌​ ಆಲ್​ ಅಟ್​ ಒನ್ಸ್)

ಅತ್ಯುತ್ತಮ ಪೋಷಕ ನಟಿ - ಜೇಮಿ ಲೀ ಕರ್ಟಿಸ್ ( ಎವೆರಿಥಿಂಗ್‌​ ಎವೆರಿವೇರ್‌​ ಆಲ್​ ಅಟ್​ ಒನ್ಸ್)

ಅತ್ಯುತ್ತಮ ಛಾಯಾಗ್ರಹಣ - ಜೇಮ್ಸ್ ಫ್ರೆಂಡ್ (ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್​)

ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್‌ ಫಿಲ್ಮ್‌ - ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್

ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ಫಿಲ್ಮ್‌ - ನವಾಲ್ನಿ

ಬೆಸ್ಟ್‌ ಡಾಕ್ಯುಮೆಂಟರ್‌ ಶಾರ್ಟ್‌ ಫಿಲ್ಮ್‌ - ದಿ ಎಲಿಫೆಂಟ್‌ ವಿಸ್ಪರರ್ಸ್‌

ಅತ್ಯುತ್ತಮ ಮೂಲ ಗೀತೆ - ನಾಟು ನಾಟು (ಆರ್‌ಆರ್‌ಆರ್‌)

ಅತ್ಯುತ್ತಮ ಸಂಕಲನ - ಪೌಲ್ ರೋಜರ್ಸ್​ (ಎವೆರಿಥಿಂಗ್‌​ ಎವೆರಿವೇರ್‌​ ಆಲ್​ ಅಟ್​ ಒನ್ಸ್)

ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್ - ಅವತಾರ್: ದಿ ವೇ ಆಫ್ ವಾಟರ್

ಅತ್ಯುತ್ತಮ ವಸ್ತ್ರವಿನ್ಯಾಸ - ರುತ್ ಕಾರ್ಟರ್​ (ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್)

ಅತ್ಯುತ್ತಮ ಅನಿಮೇಷನ್‌ ಫೀಚರ್‌ ಫಿಲ್ಮ್‌ - ಪಿನೋಚ್ಚಿಯೋ

ಬೆಸ್ಟ್‌ ಮೇಕಪ್‌ ಹಾಗೂ ಹೇರ್‌ ಸ್ಟೈಲ್‌ - ದಿ ವೇಲ್ ( ಆಡ್ರಿಯನ್ ಮೊರೊಟ್, ಜೂಡಿ ಚಿನ್ ಮತ್ತು ಅನ್ನೆಮರಿ ಬ್ರಾಡ್ಲಿ)

ಅತ್ಯುತ್ತಮ ಮೂಲ ಸಂಗೀತ - ಆಲ್‌ ಕ್ವಾಟ್‌ ಆನ್‌ ದಿನ ವೆಸ್ಟರ್ನ್‌ ಫ್ರಂಟ್‌

ಬೆಸ್ಟ್‌ ಪ್ರೊಡಕ್ಷನ್‌ ಡಿಸೈನ್‌ - ಆಲ್‌ ಕ್ವಾಟ್‌ ಆನ್‌ ದಿನ ವೆಸ್ಟರ್ನ್‌ ಫ್ರಂಟ್‌ (ಕ್ರಿಶ್ಚಿಯನ್ ಎಂ. ಗೋಲ್ಡ್‌ಬೆಕ್ , ಅರ್ನೆಸ್ಟೈನ್ ಹಿಪ್ಪರ್)

ಬೆಸ್ಟ್‌ ಅನಿಮೇಟೆಡ್‌ ಶಾರ್ಟ್‌ ಫಿಲ್ಮ್‌ - ದಿ ಬಾಯ್‌, ದಿ ಮೋಲ್‌ ದಿ ಫಾಕ್ಸ್‌ ಅಂಡ್‌ ದಿ ಹಾರ್ಸ್‌ ( ಚಾರ್ಲಿ ಮ್ಯಾಕೆಸಿ ಮತ್ತು ಮ್ಯಾಥ್ಯೂ ಫ್ರಾಯ್ಡ್)

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು