logo
ಕನ್ನಡ ಸುದ್ದಿ  /  ಮನರಂಜನೆ  /  Upendra Birthday: 'Ui' ತಂಡದಿಂದ ಹೊಸ ಅನೌನ್ಸ್‌ಮೆಂಟ್‌; ಸಿನಿಮಾ ಚಿಂತಕನ ಬರ್ತ್‌ಡೇಗೆ ವಿಶೇಷ ವಿಡಿಯೋ..

Upendra Birthday: 'UI' ತಂಡದಿಂದ ಹೊಸ ಅನೌನ್ಸ್‌ಮೆಂಟ್‌; ಸಿನಿಮಾ ಚಿಂತಕನ ಬರ್ತ್‌ಡೇಗೆ ವಿಶೇಷ ವಿಡಿಯೋ..

Sep 17, 2022 11:49 AM IST

'UI' ತಂಡದಿಂದ ಹೊಸ ಅನೌನ್ಸ್‌ಮೆಂಟ್‌; ಸಿನಿಮಾ ಚಿಂತಕನ ಬರ್ತ್‌ಡೇಗೆ ವಿಶೇಷ ವಿಡಿಯೋ..

    • "UI" ಸಿನಿಮಾ ತಂಡ, ಇದೀಗ ತನ್ನ ಕಥಾನಾಯಕನ ಜನ್ಮದಿನವನ್ನ ಮತ್ತಷ್ಟು ವಿಶೇಷಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಿಸಿಕೊಂಡಿದೆ.
'UI' ತಂಡದಿಂದ ಹೊಸ ಅನೌನ್ಸ್‌ಮೆಂಟ್‌; ಸಿನಿಮಾ ಚಿಂತಕನ ಬರ್ತ್‌ಡೇಗೆ ವಿಶೇಷ ವಿಡಿಯೋ..
'UI' ತಂಡದಿಂದ ಹೊಸ ಅನೌನ್ಸ್‌ಮೆಂಟ್‌; ಸಿನಿಮಾ ಚಿಂತಕನ ಬರ್ತ್‌ಡೇಗೆ ವಿಶೇಷ ವಿಡಿಯೋ.. (Twitter/ Upendra)

ಬೆಂಗಳೂರು: ಇನ್ನೇನು ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಬರ್ತ್‌ಡೇಗೆ ಒಂದೇ ದಿನ ಬಾಕಿ. ಹತ್ತು ಹಲವು ವಿಶೇಷತೆಗಳಿಂದ ಕೂಡಿರುವ ಈ ಹುಟ್ಟುಹಬ್ಬ, ಉಪೇಂದ್ರ ಅವರಿಗಿಂತ ಅವರ ಅಭಿಮಾನಿಗಳಿಗೆ ಇನ್ನೂ ಸ್ಪೇಷಲ್.‌ ಅದಕ್ಕೆ ಕಾರಣ; ಉಪ್ಪಿ ಅವರ ಸಿನಿಮಾ ಅಪ್‌ಡೇಟ್‌ಗಳು. ಹೌದು, ಬಹುನಿರೀಕ್ಷಿತ ಕಬ್ಜ ಚಿತ್ರದ ಟೀಸರ್‌ ಇಂದು (ಸೆ. 17) ಬಿಡುಗಡೆ ಆಗುತ್ತಿದ್ದರೆ, 18ರಂದು "ಯು ಐ" ಸಿನಿಮಾದಿಂದಲೂ ವಿಶೇಷ ವಿಡಿಯೋವೊಂದು ಹೊರಬರಲಿದೆ.

ಟ್ರೆಂಡಿಂಗ್​ ಸುದ್ದಿ

ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ

ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ

Manjummel Boys: ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ, ಅದ್ಭುತ ಅಂದ್ರು ಒಟಿಟಿ ಪ್ರೇಕ್ಷಕರು

"UI" ಸಿನಿಮಾ ತಂಡ, ಇದೀಗ ತನ್ನ ಕಥಾನಾಯಕನ ಜನ್ಮದಿನವನ್ನ ಮತ್ತಷ್ಟು ವಿಶೇಷಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಿಸಿಕೊಂಡಿದೆ. ಉಪೇಂದ್ರ ಅವರನ್ನು ವಿಶ್ವ ಸಿನಿಮಾದ ಚಿಂತಕ ಎಂದು ಕರೆಯುವ ಮೂಲಕ ಅಭಿಮಾನಿಗಳಿಗೂ ಸರ್ಪ್ರೈಸ್‌ ನೀಡಲು ನಿರ್ಧರಿಸಿದೆ. ಹಾಗಾದರೆ ಏನದು? ಆ ಬಗ್ಗೆ ಇನ್ನೊಂದು ದಿನ ಕಾಯಲೇಬೇಕು. ಸೆ. 18ರಂದು ಬೆಳಗ್ಗೆ 9ಕ್ಕೆ ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೋ ಬಿಡುಗಡೆ ಆಗಲಿದೆ.

ಅಂದಹಾಗೆ, "UI" ಚಿತ್ರವನ್ನು "ಟಗರು" ಸಿನಿಮಾ ಖ್ಯಾತಿಯ ಕೆ.ಪಿ ಶ್ರೀಕಾಂತ್‌ ಮತ್ತು ನವೀನ್‌ ಮನೋಹರನ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಉಪೇಂದ್ರ ವಹಿಸಿಕೊಂಡಿದ್ದಾರೆ.

ಹುಟ್ಟುಹಬ್ಬಕ್ಕೆ ವಿಶೇಷ ಬರಹ ತನ್ನಿ..

ಇನ್ನೇನು ಇದೇ 18ರಂದು ಉಪೇಂದ್ರ ಬರ್ತ್‌ಡೇ. ಆವತ್ತು ವಿಶೇಷ ಬರಹಗಳನ್ನು ಅಭಿಮಾನಿಗಳಿಂದ ಆಹ್ವಾನಿಸಿದ್ದಾರೆ ಉಪ್ಪಿ. ಅದೇನೆಂದರೆ, ಆ ದಿನ ಅವರ ಮನೆ ಬಳಿ ಹೂವು, ಕೇಕ್‌ ಇತ್ಯಾದಿಗಳನ್ನು ಹಿಡಿದು ಬರದೇ, ಅದರ ಬದಲು 18 ಸುವಿಚಾರಗಳನ್ನು, 18 ಪದಗಳ ಮಿತಿ ಮೀರದಂತೆ ಅವರಿಗೆ ನೀಡಬೇಕಂತೆ. ಆ ಪೈಕಿ ಅದರಲ್ಲಿ ಅತ್ಯುತ್ತಮ 18 ವಿಚಾರಗಳಿಗೆ ಉಪೇಂದ್ರ ಬಹುಮಾನವನ್ನೂ ನೀಡಲಿದ್ದಾರೆ. "ವಿಚಾರವಂತರಾಗೋಣಾ? ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ ಗಿಫ್ಟ್ ಎಲ್ಲಾ ಬಿಟ್ಟು... ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ" ಎಂದು ಉಪೇಂದ್ರ ಟ್ವಿಟ್‌ ಮಾಡಿದ್ದಾರೆ.

ಟಾಲಿವುಡ್‌ನಲ್ಲಿ ರಾಣಾ ದಗ್ಗುಬಾಟಿಯಿಂದ ಕಬ್ಜ ಟೀಸರ್ ಬಿಡುಗಡೆ..

ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಇದೀಗ ಕಬ್ಜ ಚಿತ್ರದ ತೆಲುಗು ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಆರ್‌. ಚಂದ್ರು ರಿವೀಲ್‌ ಮಾಡಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕನ್ನಡಿಗರ ಹೆಮ್ಮೆಯ 'ಕೆಜಿಎಫ್ 2' ಸಿನಿಮಾ ಈಗಾಗಲೇ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಿದೆ‌. ಕನ್ನಡಿಗರ ಮತ್ತೊಂದು ಹೆಮ್ಮೆಯ 'ಕಬ್ಜ' ಚಿತ್ರ ಕೂಡಾ ಇದೇ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬುದು ಕನ್ನಡಿಗರ ಆಸೆ. ಆದ್ದರಿಂದ ಈ ಚಿತ್ರ ಹೇಗೆ ಇರಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಆರ್.‌ ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾ ಬಹುತೇಕ ಮುಕ್ತಾಯವಾಗಿದೆ. ಈ ಸಿನಿಮಾ ಸುಮಾರು 7 ಭಾಷೆಗಳಲ್ಲಿ ತೆರೆ ಕಾಣುತ್ತಿರುವುದರಿಂದ ಕೊಂಚ ತಡವಾಗುತ್ತಿದೆ. ಸೆಪ್ಟೆಂಬರ್‌ 17 ರಂದು ಟೀಸರ್‌ ಬಿಡುಗಡೆ ಮಾಡಿ, ಶೀಘ್ರದಲ್ಲೇ ಸಿನಿಮಾ ರಿಲೀಸ್‌ ದಿನಾಂಕವನ್ನು ಕೂಡಾ ಘೋಷಿಸುವುದಾಗಿ ನಿರ್ದೇಶಕ-ನಿರ್ಮಾಪಕ ಆರ್‌. ಚಂದ್ರು ಮಾಹಿತಿ ನೀಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು